22nd December 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ ದಿಶಾ ಸಮಿತಿ ಅಧ್ಯಕ್ಷರಾಗಿದ್ದ ಶ್ರೀ ಜಿ.ಎಸ್.ಬಸವರಾಜ್  ಅದ್ಯಕ್ಷತೆಯಲ್ಲಿ ನಡೆದ ದಿಶಾ ಸಮಿತಿ ನಿರ್ಣಯದ ಮೇರೆಗೆ, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿರವರಾದ ಶ್ರೀ ರಾಕೇಶ್ ಸಿಂಗ್ ರವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಮಾನ್ಯ ಮಾಜಿ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆ ಹಾಗೂ ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರ ಆದೇಶದೊಂದಿಗೆ.

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನು ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಗೆ ಪೂರಕವಾಗಿ, ರಾಜ್ಯದ ನದಿ ಜೋಡಣೆ ಪ್ರಸ್ತಾವನೆ ಸಿದ್ಧಪಡಿಸಲು ನೋಡೆಲ್ ಆಫೀಸರ್ ಆಗಿ ನೇಮಕ ಮಾಡಿದ್ದು ಇತಿಹಾಸ.

ಈಗಾಗಲೇ ಯೋಜನೆ ರೂಪಿಸಿರುವ ಸುಮಾರು 1246 ಟಿ.ಎಂ.ಸಿ ಅಡಿ ನೀರಿನ 224 ವಿಧಾನಸಭಾ ಕ್ಷೇತ್ರವಾರು ಮೌಲ್ಯಮಾಪನ. ಸುಮಾರು 600 ಟಿ.ಎಂ.ಸಿ ಅಡಿ ನೀರಿನ ಬಳಕೆಯ ಬಗ್ಗೆ ಅಧ್ಯಯನ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ನದಿ ನೀರಿನ ಅಲೋಕೇಷನ್ ಮಾಡುವ ಸಾಧಕ-ಬಾಧಕಗಳ ಅವಲೋಕನ ಪ್ರಮುಖ ಉದ್ದೇಶವಾಗಿದೆ.

ಅದೇಕೋ ಏನೋ ಯೋಜನೆ ಹಳ್ಳ ಹಿಡಿದಿದೆ ಎಂದರೆ ತಪ್ಪಾಗಲಾರದು. ನೀರಾವರಿ ತಜ್ಞರಾದ ಶ್ರೀ ಬಸವರಾಜ್ ಬೊಮ್ಮಾಯಿರವರು, ಈ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ, ಮುಖ್ಯ ಮಂತ್ರಿಯಾಗಿದ್ದರೂ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ನೀಡಲು ಒಂದು ಸಂಶೋಧನಾ/ಮೌಲ್ಯಮಾಪನ ಜಲಗ್ರಂಥ ಸಿದ್ಧಪಡಿಸಲು ಸಮರೋಪಾದಿಯಲ್ಲಿ ಚಾಲನೆ ನೀಡಲಿಲ್ಲ ಎಂದರೆ ಇದೊಂದು ನಮ್ಮ ದೌರ್ಭಾಗ್ಯ..

ಈ ಬಗ್ಗೆ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಶಂಕರೇಗೌಡರವರು, ಜಲಸಂಪನ್ಮೂಲ ಕಾರ್ಯದರ್ಶಿಯವರಾದ ಶ್ರೀ ಕುಲಕರ್ಣಿರವರೊಂದಿಗೆ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ಸಮಾಲೋಚನೆ ನಡೆಸಿದ್ದೇವೆ.

ಅವರಿಬ್ಬರೂ ಸಹ ಸಕರಾತ್ಮಕವಾಗಿ ಸ್ಪಂಧಿಸಿದ್ದಾರೆ. ಇನ್ನೂ ಮೂರು ತಿಂಗಳಲ್ಲಿ ಪ್ರಸ್ತಾವನೆ ಕರಡು ಪ್ರತಿಯನ್ನು ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಹಾಗೂ ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದಕಾರಜೋಳ ರವರ ಸಮ್ಮುಖದಲ್ಲಿಯೇ ಬಿಡುಗಡೆ ಮಾಡಲು ಮನವಿ ಮಾಡಲಾಗಿದೆ.

ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದಕಾರಜೋಳ ರವರವರನ್ನು ಭೇಟಿಯಾಗಲೂ ಸಾದ್ಯಾವಾಗಲಿಲ್ಲ, ಅವರ ಓಎಸ್‍ಡಿ ರವರಾದ ಶ್ರೀ ಪಾಟೀಲ್ ರವರೊಂದಿಗೂ ಚರ್ಚೆ ಮಾಡಲಾಗಿದೆ.

ಮುಖ್ಯ ಮಂತ್ರಿಯವರ ಆಪ್ತಕಾರ್ಯದರ್ಶಿ ಹಾಗೂ ನೀರಾವರಿ ಇಲಾಖೆಯ ಮಾಜಿ ಕಾರ್ಯದರ್ಶಿರವರಾದ ಶ್ರೀ ಅನಿಲ್‍ಕುಮಾರ್ ರವರನ್ನು, ಜಲಸಂಪನ್ಮೂ;ಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿರವರಾದ ಶ್ರೀ ರಾಕೇಶ್ ಸಿಂಗ್ ರವರನ್ನು ಭೇಟಿ ಮಾಡಲು ಇಂದು ಸಾಧ್ಯಾವಾಗಲಿಲ್ಲ.

ದಿನಾಂಕ:05.12.2022 ರಂದು ಕಾವೇರಿ ನೀರಾವರಿ ನಿಗಮದ ಬೋರ್ಡ್ ಮೀಟಿಂಗ್ ಇರುವುದರಿಂದ, ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಯವರ ಗಮನ ಸೆಳೆಯಲು ಚಿಂತನೆ ನಡೆಸಲಾಗಿದೆ.