22nd December 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿ ಕೈಗೊಳ್ಳಲು ಸುಮಾರು 734 ಕೋಟಿ ರೂ ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಇದರ ಜೋತೆಗೆ ಇನ್ನೂ ಅಗತ್ಯವಿರುವ ಯೋಜನೆಗಳೊಂದಿಗೆ ಪರಿಷ್ಟøತ ವರದಿ ಸಿದ್ಧಪಡಿಸಲು, ತುಮಕೂರು ಲೋಕಸಭಾ ಸದಸ್ಯ ಹಾಗೂ ತುಮಕೂರು ಜಿಲ್ಲಾ ವಿದ್ಯುತ್ಚಕ್ತಿ ಸಮಿತಿಯ ಅಧ್ಯಕ್ಷರು ಆದ ಶ್ರೀ ಜಿ.ಎಸ್.ಬಸವರಾಜ್ ರವರು ಅಧಿಕಾರಿಗಳಿಗೆ ಸೂಚಿಸಿದರು

ದಿನಾಂಕ:03.12.2022 ರಂದು, ಬೆಸ್ಕಾಂ ಕಚೇರಿಯಲ್ಲಿ ನಡೆದ ತುಮಕೂರು ಜಿಲ್ಲಾ ವಿದ್ಯುತ್ಚಕ್ತಿ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೇಂದ್ರ ಸರ್ಕಾರ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಲೋಕಸಭಾ ಸದಸ್ಯರ ಅದ್ಯಕ್ಷತೆಯಲ್ಲಿ ಸಮಿತಿ ರಚಿಸಿದೆ.

ಬೆಸ್ಕಾಂ, ಕೆಪಿಟಿಸಿಎಲ್, ನವೀಕರಿಸಬಹುದಾದ ಇಂಧನ ಇಲಾಖೆ, ಪವರ್ ಗ್ರಿಡ್ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಕೈಗೊಂಡಿರುವ ಹಾಗೂ ಕೈಗೊಳ್ಳಲಿರುವ ಎಲ್ಲಾ ಯೋಜನೆಗಳ ನೀಲಿ ನಕ್ಷೆ ಸಿದ್ಧಪಡಿಸಿ, ತುಮಕೂರು ಜಿಲ್ಲೆ ಕೈಗಾರಿಕೆ ಹಾಗೂ ಕೃಷಿ ಮತ್ತು ತೋಟಗಾರಿಕೆಗೆ ಪ್ರಸಿದ್ಧಿಯಾಗಿರುವ ಜಿಲ್ಲೆಯಾಗಿದೆ.

ಇಲ್ಲಿನ ರೈತರು ವಾಣಿಜ್ಯ ಬೆಳೆಗೆ ಒತ್ತು ನೀಡಿದ್ದಾರೆ, ಹೇಮಾವತಿ, ಭಧ್ರಾಮೇಲ್ದಂಡೆ, ಎತ್ತಿನಹೊಳೆ ಸೇರಿದಂತೆ ವಿವಿದ ನದಿ ನೀರಿನಿಂದ ಅಂತರ್ಜಲ ಅಭಿವೃದ್ಧಿ ಆಗಲಿದೆ. ಸಾಮಾನ್ಯ ಬಡ ರೈತರು ಕನಿಷ್ಟ ಒಂದು ಬೋರ್‍ವೆಲ್ ಕೊರೆಸುವ ಸಾಹಸ ಮಾಡಿದ್ದಾರೆ. ಹೂಡಿಕೆಗಾಗಿ ದೇಶ ವಿದೇಶಗಳಲ್ಲಿ ಸುತ್ತುವ ನಮ್ಮ ಸರ್ಕಾರಗಳು, ಮನೆ ಬಾಗಿಲಲ್ಲಿ ಹೂಡಿಕೆ ಮಾಡುವ ರೈತರಿಗೂ ವಿಶೇಷ ಆಧ್ಯತೆ ನೀಡಲೇ ಬೇಕಿದೆ ಎಂದು ಪ್ರತಿಪಾದಿಸಿದರು.

ಇದಕ್ಕಾಗಿಯೇ ಮಾನ್ಯ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ದೇಶದ ಪ್ರತಿ ಜಿಲ್ಲೆಯಲ್ಲಿಯೂ ಸಮಿತಿ ರಚಿಸಿ, ಶ್ರಮಿಸಲು ಮುಂದಾಗಿದ್ದಾರೆ. ಇದೊಂದು ವರದಾನವಾಗಲಿದೆ. ನಮ್ಮ ಪ್ರಸ್ತಾವನೆ ಉತ್ತಮ ರೀತಿಯಲ್ಲಿ ಇರಲೇ ಬೇಕಿದೆ. ಜಿಲ್ಲೆಯ 330 ಗ್ರಾಮಪಂಚಾಯಿತಿಗಳು ಹಾಗೂ 11 ನಗರ ಸ್ಥಳೀಯ ಸಂಸ್ಥೆವಾರು ಸಮಸ್ಯೆ ಗುರುತಿಸಿ, ಪರಿಹಾರಕ್ಕಾಗಿ ಸೂಕ್ತ ಯೋಜನೆಗೆ ಆಧ್ಯತೆ ನೀಡಲು ಸೂಚಿಸಿದರು.

ತುಮಕೂರು ಜಿಲ್ಲೆ ದೇಶದ ಭೂಪಟದಲ್ಲಿಯೇ ಕೃಷಿ ಹಾಗೂ ತೋಟಗಾರಿಕೆಯಲ್ಲಿ ಪ್ರಸಿದ್ಧಿಯತ್ತ ದಾಪುಗಾಲು ಹಾಕುತ್ತಿರುವುದರಿಂದ ರೈತರಿಗೆ ಗುಣಮಟ್ಟದ ವಿದ್ಯುತ್ ಹಾಗೂ ಬೋರ್ ವೆಲ್ ಕೊರೆಸಿದ ತಕ್ಷಣ ವಿದ್ಯುತ್ ಸರಬರಾಜು ಮಾಡುವ ವ್ಯವಸ್ಥೆಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಲು ಸೂಚಿಸಿದರು.

ಜಿಲ್ಲೆಯ ಅಧಿಕೃತ ಹಾಗೂ ಅನಧಿಕೃತ ಬೋರ್‍ವೆಲ್ ಗಳಿಗಾಗಿ ರೈತರು ಎಷ್ಟು ಹೂಡಿಕೆ ಮಾಡಿದ್ದಾರೆ, ಇವರಿಗೆ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಎಷ್ಟು ವೆಚ್ಚ ಮಾಡಬೇಕಿದೆ. ಇದರಿಂದ ಎಷ್ಟು ಜನರಿಗೆ ಉದ್ಯೋಗ ದೊರೆಯಲಿದೆ. ಎಷ್ಟು ಉತ್ಪಾದನೆ ಆಗಲಿದೆ ಎಂಬ ಬಗ್ಗೆ ಒಂದು ವರದಿ ಸಿದ್ಧಪಡಿಸಿ, ರೈತರನ್ನು ಲೋಕಲ್ ಇನ್ವೆಸ್ಟರ್ ಎಂದು ಪರಿಗಣಿಸಿ, ಕೇಂದ್ರ ಸರ್ಕಾರಕ್ಕೆ ವಿಶೇಷ ಆಧ್ಯತೆ ನೀಡಲು ಮನವಿ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಗ್ರೇಟರ್ ನೋಯಿಡಾ ಬಿಟ್ಟರೆ, ತುಮಕೂರು ಜಿಲ್ಲೆ ಕೈಗಾರಿಕೆಯಲ್ಲೂ ಕ್ರಾಂತಿ ಮಾಡಲಿದೆ. ಕೈಗಾರಿಕೆಗಳು ಉತ್ತಮ ಗುಣಮಟ್ಟದ ವಿದ್ಯುತ್ ನೀಡಲು ಅಗತ್ಯವಿರುವ ಎಲ್ಲಾ ಯೋಜನೆಗಳನ್ನು ಪರಿಷ್ಕøತ ಯೋಜನೆ ರೂಪಿಸಿ.

ಕೇಂದ್ರ ಸರ್ಕಾರದ ಯೋಜನೆಗಳನ್ನು ಅಳವಡಿಸಿಕೊಂಡು ಜಿಲ್ಲೆಯಲ್ಲಿಯೇ ಸೌರವಿದ್ಯುತ್ ಉತ್ಪಾದನೆ ಮಾಡಲು, ಸಾಧ್ಯತೆ ಇರುವ ಎಲ್ಲಾ ಸ್ಥಾವರಗಳ ಹಂತದಲ್ಲಿಯೇ ಯೋಜನೆ ಕೈಗೊಳ್ಳಲು ರೈತರ ಜಮೀನು ಅಥವಾ ಸರ್ಕಾರಿ ಜಮೀನು ಅಗತ್ಯವಿದ್ದಲ್ಲಿ ಕಂದಾಯ ಇಲಾಖೆ ಸಹಕಾರ ನೀಡುತ್ತದೆ. ಸೂಕ್ತ ಪ್ರಸ್ತಾವನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿದ್ಯುತ್ಚಕ್ತಿ ಸಮಿತಿಯ ಸದಸ್ಯ ಕಾರ್ಯದರ್ಶಿಯವರು ಆದ ಶ್ರೀ ವೈ.ಎಸ್.ಪಾಟೀಲ್ ಸೂಚಿಸಿದರು.

ಎಂ.ಯು.ಎಸ್.ಎಸ್ ಹಾಗೂ ರಿಸೀವಿಂಗ್ ಸ್ಟೇಷನ್‍ಗಳಿಗೆ ಅಗತ್ಯವಿರುವ ಭೂಮಿಯನ್ನು ಗುರುತಿಸಿ, ಪ್ರತಿ ಸೋಮವಾರ ನಡೆಯುವ ಸರ್ಕಾರಿ ಯೋಜನೆಗಳಿಗೆ ಸರ್ಕಾರಿ ಜಮೀನು ಸಭೆಯಲ್ಲಿ ಹಾಜರಾಗಿ ಪ್ರಸ್ತಾವನೆ ತನ್ನಿ ಎಂದು ಸೂಚಿಸಿದರು. ಪತ್ರ ಬರೆದು ಕೂರುವ ಬದಲು ಮುಕ್ತವಾಗಿ ಬಂದು ಚರ್ಚಿಸಿದರೆ, ಜಮೀನು ಸಮಸ್ಯೆ ಆಗಲಾರದು ಎಂದು ಕಿವಿಮಾತು ಹೇಳಿದರು.

ಪ್ರತಿಯೊಂದು ಯೋಜನೆಗಳ ಬಗ್ಗೆಯೂ ಸಮಗ್ರ ಚರ್ಚೆ ನಡೆಯಿತು. ಸಭೆಯಲ್ಲಿ ರಾಜ್ಯ ದಿಶಾ ಸಮಿತಿ ಸದಸ್ಯ ಕುಂದರನಹಳ್ಳಿ ರಮೇಶ್, ಜಿಲ್ಲಾ ವಿದ್ಯುತ್ಚಕ್ತಿ ಸಂಚಾಲಕರು ಹಾಗೂ ಬೆಸ್ಕಾಂ ಎಸ್.ಇ ಶ್ರೀ ಲೋಕೇಶ್ ಸೇರಿದಂತೆ ವಿವಿದ ಹಂತದ ಅಧಿಕಾರಿಗಳು ಭಾಗವಹಿಸಿದ್ದರು.