24th April 2024
Share

TUMAKURU: SHAKTHIPEETA FOUNDATION

ದಿನಾಂಕ:05.12.2022 ರಂದು ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಅಂತರ ರಾಷ್ಟ್ರೀಯ ಸ್ವಯಂ ಸೇವಕರ ದಿನ (INTERNATIONAL VOLUNTEER DAY FOR  ECONOMIC AND SOCIAL DEVELOPMENT)  ದ ಅಂಗವಾಗಿ ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿನ ರೀಡಿಂಗ್ ರೂಂನಲ್ಲಿ ರಾತ್ರಿ 8 ರಿಂದ 9 ಗಂಟೆವರೆಗೆ ಸಭೆ ನಡೆಯಲಿದೆ.

ತುಮಕೂರಿನ ಶಕ್ತಿಪೀಠ ಫೌಂಡೇಷನ್ ವಿಶ್ವದ 108 ಶಕ್ತಿಪೀಠಗಳ ಹಾಗೂ ನೀರು ಮತ್ತು ಗಂಗಾಮಾತೆಗೆ ಇರುವ ಸಂಭಂದಗಳ ಸಂಶೋಧನೆ ಮತ್ತು ಅಧ್ಯಯನ ನಡೆಸುತ್ತಿರುವ ಹಿನ್ನಲೆಯಲ್ಲಿ, ಪಿಜೆಸಿಯಲ್ಲಿ 3571 ಅಪಾರ್ಟ್‍ಮೆಂಟ್‍ಗಳಿದ್ದು, ವಿಶ್ವದ ವಿವಿಧ ದೇಶಗಳ, ಭಾರತ ದೇಶದ ವಿವಿಧ ರಾಜ್ಯಗಳ, ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಜನ ಇಲ್ಲಿ ವಾಸ ಮಾಡುತ್ತಿದ್ದಾರೆ.

ಇಲ್ಲಿನ ನಿವಾಸಿಗಳ ಮೂಲಕ ಆಯಾ ದೇಶದ, ಆಯಾ ರಾಜ್ಯದ ಹಾಗೂ ಆಯಾ ಜಿಲ್ಲೆಯಲ್ಲಿರುವ ಶಕ್ತಿಪೀಠಗಳ ಮತ್ತು ಶಕ್ತಿಪೀಠಗಳು ಇರುವ ನದಿ ಪಾತ್ರಗಳ ಕರಾರು ವಕ್ಕಾದ ಮಾಹಿತಿ ಸಂಗ್ರಹ, ಜೊತೆಗೆ ಎಲ್ಲಾ ಶಕ್ತಿಪೀಠಗಳ ಸ್ಥಳ ಭೇಟಿ ಮಾಡುತ್ತಿರುವದರಿಂದ ಇಲ್ಲಿನ ನಿವಾಸಿಗಳ ಸಹಕಾರ ಪಡೆಯುವ ಉದ್ದೇಶವಿದೆ.

ಕರ್ನಾಟಕ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ಪಡೆಯಲು ಸ್ಟ್ರಾಟಜಿ, ನವ ಕರ್ನಾಟಕದ 2047 ರ ವಿಷನ್ ಡಾಕ್ಯುಮೆಂಟ್ ಮತ್ತು ಜಲಗ್ರಂಥ ರಚಿಸುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ನೌಕರರಿಂದÀ ಇಲಾಖಾವಾರು ಯೋಜನೆಗಳ ಮಾಹಿತಿ ಹಾಗೂ ಪರಿಣಿತರ  ಮಾಹಿತಿ ಸಂಗ್ರಹ ಮಾಡುವುದು ನಮ್ಮ ಉದ್ದೇಶವಾಗಿದೆ.

ದೇಶವನ್ನಾಳಿದ ಪ್ರಧಾನ ಮಂತ್ರಿಗಳ ಹಾಗೂ ರಾಜ್ಯವನ್ನಾಳಿದ ಮುಖ್ಯ ಮಂತ್ರಿಗಳ ಕಾಲದಲ್ಲಿನ ವಿವಿಧ ಯೋಜನೆಗಳ ಮಾಹಿತಿ ಸಂಗ್ರಹ ಮಾಡುತ್ತಿರುವುದರಿಂದ, ದೇಶದ ಪ್ರಧಾನ ಮಂತ್ರಿಗಳ ಹಾಗೂ ಮುಖ್ಯ ಮಂತ್ರಿಯವರ ಕುಟುಂಬಗಳನ್ನು ಭೇಟಿ ಮಾಡಲು ಇಲ್ಲಿನ ನಿವಾಸಿಗಳ ಅಥವಾ ಅವರ ಪರಿಚಯಸ್ಥರ ಮೂಲಕ ಸಹಕಾರ ಪಡೆಯುವ ಉದ್ದೇಶವಿದೆ.

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಮೌಲ್ಯಮಾಪನಕ್ಕಾಗಿ, ವಿಧಾನಸಭಾ ಕ್ಷೇತ್ರವಾರು ಮಾಹಿತಿಯ ಅಗತ್ಯವಿರುವುದರಿಂದ ಪಿಜೆಸಿಯಲ್ಲಿÀ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಅಂತರ ರಾಷ್ಟ್ರೀಯ ಸ್ವಯಂ ಸೇವಕರ ದಿನದಂದು, ಆಸಕ್ತ ಸ್ವಯಂ ಸೇವಕರ ಮಾಹಿತಿ ಸಂಗ್ರಹ ಮಾಡಲು ಚಾಲನೇ ನೀಡಲಾಗುವುದು.

ಈಗಾಗಲೇ ಪಿಜಿಸಿ ನಿವಾಸಿ ಶ್ರೀ ಸಿದ್ದಲಿಂಗಪ್ಪನವರು ಮತ್ತು ಅವರ ಸ್ನೇಹಿತರು ಸೇರಿ, ರಾಜ್ಯದ 28 ಜಿಲ್ಲೆಗಳ ಜನರ ಪಟ್ಟಿ ಮಾಡಿದ್ದಾರೆ. ನಾನು ಸಹ ಈಗಾಗಲೇ ದೆಹಲಿ, ಜಮ್ಮು ಮತ್ತು ಕಾಶ್ಮೀರ, ಲಡಾಕ್, ಬಿಹಾರ, ತಮಿಳುನಾಡು, ಆಂದ್ರ, ತೆಲಂಗಾಣ, ಕೇರಳ, ಗುಜರಾತ್, ಮಧ್ಯಪ್ರದೇಶ, ಅಸ್ಸಾಂ, ಜಾಖರ್Àಂಡ್, ಉತ್ತರಖಂಡ್, ನೇಪಾಳ, ಪಾಕಿಸ್ಥಾನ ಹೀಗೆ ಹಲವಾರು ಜನರೊಂದಿಗೆ ಸಮಾಲೋಚನೆ ನಡೆಸಿದ್ದೇನೆ.

ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳ ಜನರ ಜೊತೆಗೂ ಸಮಾಲೋಚನೆ ನಡೆಸುತ್ತಿದ್ದೇನೆ. ಹುಬ್ಬಳ್ಳಿ ಮತ್ತು ಧಾರವಾಡ ಜಿಲ್ಲೆಯ ಶ್ರೀ ಕುಲಕರ್ಣಿರವರು ಒಂದು ಉತ್ತಮವಾದ ಸಲಹೆ ನೀಡಿ, ಪಿಜೆಸಿಯಲ್ಲಿನ 3571 ಜನರ ಡೈರಕ್ಟರಿ ಸಿದ್ಧಪಡಿಸಿದರೆ ನಿಮ್ಮ ಅಧ್ಯಯನಕ್ಕೆ ಬಹಳ ಅನೂಕೂಲವಾಲಿದೆ ಎಂದು ಸಲಹೆ ನೀಡಿದ್ದಾರೆ.

ರಿಸರ್ವ್ ಬ್ಯಾಂಕ್ ಇಂಡಿಯಾದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ  ಬಿಹಾರದ ಶ್ರೀ ಸುಭೋದ್ ಯಾದವ್ ರವರು ಸಹ ಇಲ್ಲಿ ಬಹುತೇಕ ಎಲ್ಲಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುವ ಪ್ರಭುದ್ಧರು ಇರುವುದರಿಂದ ನಿಮಗೆ ಇಲಾಖಾವಾರು, ಯೋಜನವಾರು, ಉತ್ತಮವಾದ ಮಾಹಿತಿ ಸಂಗ್ರಹವಾಗಲಿದೆ ಇದೊಂದು ಒಳ್ಳೆಯ ಜನಪರ ಆಲೋಚನೆ ಆರಂಭಿಸಿ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಶ್ರೀ ಅಭಿಯವರು ನಿಮ್ಮ ಚಿಂತನೆಗಳೇ ನಮಗೆ ಸ್ಪೂರ್ತಿ ತಂದಿವೆ, ನಾವೂ ನಿಮ್ಮೊಂದಿಗೆ ಇರುತ್ತೇವೆ  ಎಂದು ಬೆನ್ನು ತಟ್ಟಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೋಕಿನ ಶ್ರೀ ಸಿದ್ದಲಿಂಗಪ್ಪವರು, ಶಿರಾ ತಾಲ್ಲೋಕಿನÀ ಶ್ರೀ ವಿಶ್ವನಾಥ್ ರವರು, ತುಮಕೂರು ನಗರದ ಶ್ರೀ ಕೊಪ್ಪಳ್ ನಾಗರಾಜುರವರು, ಶ್ರೀ ಜಗದೀಶ್ ರವರು,  ತುರುವೇಕೆರೆಯ ಶ್ರೀ ಜಯಪ್ರಕಾಶ್‍ರವರು, ತುಮಕೂರು ಗ್ರಾಮಾಂತರದ ಶ್ರೀ ನಾರಾಯಣಗೌಡರವರು, ಶ್ರೀ ಈಶ್ವರಪ್ಪನವರು, ಪಾವಗಡ ತಾಲ್ಲೋಕಿನ  ಶ್ರೀ ನಾರಾಯಣ ರೆಡ್ಡಿರವರು, ಕೊರಟಗೆರೆ ತಾಲ್ಲೋಕಿನ ಶ್ರೀ ನಾಗರಾಜ್ ರವರು ಸೇರಿದಂತೆ, ತುಮಕೂರು ಜಿಲ್ಲೆಯವರೇ ಸುಮಾರು 300 ಅಪಾರ್ಟ್‍ಮೆಂಟ್ ಕೊಂಡು ಕೊಂಡಿದ್ದಾರೆ. ನಾವು ಸಹ ನಿಮ್ಮ ಆಲೋಚನೆಗಳಿಗೆ ಸಹಕಾರ ನೀಡುತ್ತೇವೆ ಎಂಬ ಭರವಸೆ ನೀಡಿದ್ದಾರೆ.

ಜೊತೆಗೆ ಇಂದಿನ ಸಭೆಯನ್ನು ಸಹ ಇವರೆಲ್ಲರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಆದ್ದರಿಂದ ದಯವಿಟ್ಟು, ಈ ದಿನ ನಡೆಯುವ ಸಭೆಗೆ ಹಾಜರಾಗಿ ಸಲಹೆ, ಸೂಚನೆ ನೀಡಲು ಮನವಿ ಮಾಡಲಾಗಿದೆ.

ಈ ಎಲ್ಲಾ ಮೇಲ್ಕಂಡ ಮಾಹಿತಿ ಸಂಗ್ರಹಕ್ಕಾಗಿ ವಿವಿಧ ದೇಶಗಳವಾರು, ವಿವಿಧ ರಾಜ್ಯವಾರು, ವಿವಿಧ ಜಿಲ್ಲಾವಾರು, ವಿವಿಧ ವಿಧಾನಸಭಾ ವಿಧಾನಸಭಾ ಕ್ಷೇತ್ರವಾರು, ವಿವಿಧ ಇಲಾಖಾವಾರು, ಸ್ವಯಂ ಸೇವಕರ ಒಂದು ತಂಡದ ಅಗತ್ಯವಿದೆ. ತಾವೂ ಭಾಗವಹಿಸಿ ಸಲಹೆ ನೀಡಲು ಕೋರಿದೆ. 3571 ಅಪಾರ್ಟ್‍ಮೆಂಟ್ ನಿವಾಸಿಗಳ ಡೈರಕ್ಟರಿಯನ್ನು ಸಿದ್ಧಪಡಿಸಲು ಆಸಕ್ತಿ ಇರುವವರಿಗೂ ಆಹ್ವಾನ ನೀಡಲಾಗಿದೆ. ಮಾನವ ಗ್ರಂಥಾಲಯದ ರೂಪುರೇಷೆ ಸಿದ್ದಪಡಿಸುವ ಪ್ರಥಮ ಸಭೆ ಇದಾಗಲಿದೆ. ಈ ದಿನದ ಮಹತ್ವದ ಬಗ್ಗೆ ಮಾತನಾಡುವವರಿಗೂ ಬಹಿರಂಗ ಆಹ್ವಾನ ನೀಡಲಾಗಿದೆ.