3rd December 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ಅನಿವಾಸಿಗಳು ತುಮಕೂರು-2047 ವಿಷನ್ ಡಾಕ್ಯುಮೆಂಟ್’ ಹಾಗೂ ನವಕರ್ನಟಕ-2047 ವಿಷನ್ ಡಾಕ್ಯುಮೆಂಟ್’ ಗೆ ಸಹಕಾರ ನೀಡಲು ಆಸಕ್ತ ಅನಿವಾಸಿ ತುಮಕೂರು ಜನರನ್ನು ಸಂಘಟನೆ ಮಾಡಲಾಗುವುದು ಎಂದು ಬೆಂಗಳೂರಿನ ಪುರವಿ ಹೋಮ್ಸ್‍ನ  ಶ್ರೀ ಜಿ. ನಾರಾಯಣಗೌಡರು ತಿಳಿಸಿದರು.

ಆರಂಭದಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ,À ಒಂದೊಂದು ಕಡೆ ಪವಿತ್ರವನ’ ವನ್ನು ಅನಿವಾಸಿಗಳು ಪಿಪಿಪಿ ಯೋಜನೆ ಅಥವಾ ದತ್ತು ಯೋಜನೆಯಡಿ ರೂಪಿಸುವುದರ ಮೂಲಕ ಚಾಲನೆ ನೀಡಲು ಚಿಂತನೆ ನಡೆಸಿದ್ದಾರೆ, ಪ್ರವಾಸಿ ಕೇಂದ್ರಗಳ ಹುಡುಕಾಟ ಆರಂಭಿಸಿದ್ದಾರೆ. ಅವರಿಗೆ ಶಕ್ತಿಪೀಠ ಫೌಂಡೇಷನ್ ಸಂಪೂರ್ಣ ಸಹಕಾರ ನೀಡಲಿದೆ.

ಅವರು ಶಕ್ತಿಪೀಠ ಮ್ಯೂಸಿಯಂ ಕಟ್ಟಡ ಕಾಮಗಾರಿ ವೀಕ್ಷಣೆ ಮಾಡಿ ವಿಷಯ ಹಂಚಿಕೊಂಡರು. ಅವರು ಬೆಂಗಳೂರಿನ ಪಿಜೆಸಿಯ ನಿವಾಸಿಗಳಾಗಿದ್ದು,  ಪಿಜೆಸಿಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಹಾಗೂ ದೇಶದ ಎಲ್ಲಾ ರಾಜ್ಯಗಳ ಜನರು ನಿವಾಸಿಗಳಿದ್ದಾರೆ.

ತುಮಕೂರು ಜಿಲ್ಲೆಯ ವಿಷನ್ ಡಾಕ್ಯುಮೆಂಟ್ ಅನ್ನು, ಮಾದರಿಯಾಗಿ ರೂಪಿಸಿ ನಂತರ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಲು ಸಲಹೆ ನೀಡಿದರು. ಪಿಜೆಸಿಯಲ್ಲಿನ ವಿವಿಧ ಜಿಲ್ಲೆಗಳ ಹಾಗೂ ವಿವಿಧ ರಾಜ್ಯಗಳ ಹಾಗೂ ವಿವಿಧ ದೇಶಗಳ ಜನರೊಂದಿಗೆ, ಶಕ್ತಿಪೀಠ ಫೌಂಡೇಷನ್ ವತಿಯಿಂದ, ಈಗಾಗಲೇ ಸಮಾಲೋಚನೆ ನಡೆಸಲಾಗುತ್ತಿದೆ.