22nd November 2024
Share

TUMAKURU:SHAKTHIPEETA FOUNDATION

  ತುಮಕೂರು ನಗರದ ಜಯನಗರ ಪೂರ್ವದ ಮೊದಲನೇ ಮುಖ್ಯ ರಸ್ತೆಯಲ್ಲಿರುವ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ನಗರದ ಮತ್ತು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಳೆದ 21 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದೆ.

  ಈ ಕಚೇರಿಯ ಹಿಂಭಾಗದಲ್ಲಿರುವ ಎಡಕಲ್ಲುದ ಗುಡ್ಡ ಪಾರ್ಕ್ ತುಮಕೂರು ನಗರದ ಹಾಗೂ ಜಿಲ್ಲೆಯ ಅಭಿವೃದ್ಧಿ ಮೌಲ್ಯಮಾಪನ ಕೇಂದ್ರವಾಗಲಿ ಎಂದು ವಿದ್ಯಾವಾಚಸ್ಪತಿ ಶ್ರೀ ಡಾ.ಕವಿತಾಕೃಷ್ಣ  ಸಲಹೆ ನೀಡಿದರು.

ಅವರು ದಿನಾಂಕ:09.12.2022 ರಂದು ಶಕ್ತಿಪೀಠ ಮ್ಯೂಸಿಯಂ ಕಟ್ಟಡದ ಕಾಮಗಾರಿ ವೀಕ್ಷಣೆ ಹಾಗೂ ಎಡಕಲ್ಲುದ ಗುಡ್ಡದ ಪಾರ್ಕ್ ಸ್ಥಳ ಪರಿಶೀಲನೆ ಮಾಡಿ, ಸುಮಾರು 10000 ಚದುರ ಅಡಿ ವಿಸ್ತೀರ್ಣವಿರುವ, ಈ ಉದ್ಯಾನವನವನ್ನು ನಗರದ ಇಂಜಿನಿಯರ್ಸ್ ಅಸೋಸಿಯೇಷನ್ ನವರು ದತ್ತು ಪಡೆಯಲು ಮುಂದೆ ಬಂದಿದ್ದಾರೆ.

ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಸೂಚನೆ ಮೇರೆಗೆ ತುಮಕೂರು ನಗರದ ಎಲ್ಲಾ ಬಡಾವಣೆಗಳ ನಕ್ಷೆ ಸಹಿತ ಅಧಿಕೃತ ಘೋಷಣೆ ಮಾಡಲು ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶ್ರೀ ಯೋಗಾನಂದ್‍ರವರು ಕಾರ್ಯಪ್ರವೃತ್ತರಾಗಿದ್ದಾರೆ.

ತುಮಕೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ, ಶ್ರೀ ರಂಗಸ್ವಾಮಿರವರು ಈ ಉದ್ಯಾನವನದ ಅಭಿವೃದ್ಧಿಗೆ ಪೂರಕವಾಗಿ ತುಮಕೂರು ಸ್ಮಾರ್ಟ್ ಸಿಟಿ ಇಂಟಿಗ್ರೇಟೆಡ್ ಕಮ್ಯಾಂಡ್À ಕಂಟ್ರೋಲ್ ಸೆಂಟರ್‍ನ ಸಂಪರ್ಕದಿಂದ, ಡಿಜಿಟಲ್ ಡಾಟಾ ದೊಂದಿಗೆ ಮೌಲ್ಯಮಾಪನ ನಡೆಸಲು ಯಾವ ರೀತಿ ಸಹಕಾರ ನೀಡಬಹುದು ಎಂಬ ಬಗ್ಗೆ ಪರೀಶಿಲನೆ ನಡೆಸಲು ಶ್ರೀ ಅಶ್ವಿನ್ ರವರಿಗೆ ಸೂಚಿಸಿದ ಹಿನ್ನಲೆಯಲ್ಲಿ ಅವರು ಸಹ ಸ್ಥಳಕ್ಕೆ ಬಂದು ವೀಕ್ಷಣೆ ಮಾಡಿದರು.

ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನವರು 14 ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆಸುವ, ತುಮಕೂರು ಜಿಲ್ಲೆಯ ಅಭಿವೃದ್ಧಿ ಆಯಾಮಗಳ ಸಂವಾದದಲ್ಲಿ ಮೂಡಿ ಬರುವ ಯೋಜನೆಗಳನ್ನೂ ಸೇರ್ಪಡೆ ಮಾಡಿಕೊಂಡು, ತುಮಕೂರು ನಗರ ಹಾಗೂ ತುಮಕೂರು ಜಿಲ್ಲಾ -2047 ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಿ, ಈ ಉದ್ಯಾನವನದಲ್ಲಿಯೇ ಮೌಲ್ಯಮಾಪನ ಮಾಡುವ ಚಿಂತನೆ ಇದೆ.

ತುಮಕೂರು ನಗರ ಹಾಗೂ ತುಮಕೂರು ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳ, ಪರಿಣಿತ ತಜ್ಞರ ಅಭಿವೃದ್ಧಿ ಚಿಂತನೆಗಳ ತವರು ಈ ಉದ್ಯಾನವಾಗಲಿದೆ. ನಗರದ ಎಲ್ಲಾ ನಾಗರೀಕ ಹಿತರಕ್ಷಣಾ ಸಮಿತಿಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಭೆ ಕರೆದು ರೂಪುರೇಷೆ ನಿರ್ಧರಿಸಲಾಗುವುದು.

ತುಮಕೂರು ಸ್ಮಾರ್ಟ್ ಸಿಟಿ, ತುಮಕೂರು ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತದ ಸಹಕಾರದೊಂದಿಗೆ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದೊಂದಿಗೆ ಪಿಪಿಪಿ ಯೋಜನೆಯಡಿಯಲ್ಲಿ ಶಕ್ತಿಪೀಠ ಫೌಂಡೇಷನ್ ವಿವಿಧ ಕಾರ್ಯಕ್ರಮಗಳನ್ನು, ಹಲವಾರು ಸಂಘ ಸಂಸ್ಥೆಗಳ ಮೂಲಕ ಜಾರಿಗೊಳಿಸಲು ಆಲೋಚನೆ ನಡೆಸುತ್ತಿದೆ.

ಇಂಜಿನಿಯರ್ಸ್ ಅಸೋಶಿಯೇಷನ್ ನ ಶ್ರೀ ಸತ್ಯಾನಂದ್ ಇದ್ದರು.

ಆಸಕ್ತರು ಸಲಹೆ ನೀಡಬಹುದಾಗಿದೆ.