21st November 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳ, ಹೆರಿಟೇಜ್ ಸ್ಥಳಗಳ, ವೀರಗಲ್ಲುಗಳ, ಪ್ರಮುಖ ಪುಣ್ಯ ಸ್ಥಳಗಳ ಸಕ್ಯೂಟ್ ಮಾಡಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಪ್ರವಾಸೋಧ್ಯಮ ಸಹಾಯಕ ಅಧಿಕಾರಿ ಶ್ರೀಮತಿ ಮಂಗಳಾ ಭಟ್ ರವರಿಗೆ ಸೂಚಿಸಿದರು.

ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಇನ್ನೂ ಯಾವ ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಘೋಷಣೆ ಮಾಡ ಬಹುದು ಎಂಬ ಬಗ್ಗೆ, ಆಯಾ ಶಾಸಕರ ಅಭಿಪ್ರಾಯವನ್ನು ಪಡೆದು, ಜಿಲ್ಲಾಧಿಕಾರಿಗಳ ಮೂಲಕ, ಸರ್ಕಾರಕ್ಕೆ ಪಟ್ಟಿ ಸಲ್ಲಿಸಲು ತಿಳಿಸಿದರು.

ಡಿಎಫ್‍ಓ ಶ್ರೀಮತಿ ಅನುಪಮ ರವರಿಗೆ ಎಲ್ಲಾ ಪ್ರವಾಸಿ ತಾಣಗಳಲ್ಲಿ ಅಳಿಸಿ ಹೋಗಿರುವ ಗಿಡಗಳನ್ನು ಸಂರಕ್ಷಣೆ ಮಾಡಲು ಹಾಗೂ ಪವಿತ್ರವನಗಳನ್ನು ನಿರ್ಮಾಣ ಮಾಡಲು, ಜಮೀನು ಮಾಲೀಕತ್ವದ ಮಾಹಿತಿ ಸಂಗ್ರಹಿಸಿ, ಗಿಡ ಬೆಳೆಸಲು ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು.

ತುಮಕೂರು ಜಿಲ್ಲೆಯ ಅನಿವಾಸಿಗಳಾದ, ಬೆಂಗಳೂರಿನ ಪುರವಿ ಹೋಮ್ಸ್‍ನ ಶ್ರೀ ನಾರಾಯಣಗೌಡರು ಮತ್ತು ತಂಡ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ ಒಂದು ಮಾಸ್ಟರ್ ಪ್ಲಾನ್ ಮಾಡಲು, ಮುಂದೆ ಬಂದಿರುವ ಹಿನ್ನಲೆಯಲ್ಲಿ, ಪ್ರವಾಸಿ ತಾಣಗಳ ಸಕ್ರ್ಯೂಟ್ ಮಾಡಿದ ನಂತರ ಜಿಲ್ಲಾಧಿಕಾರಿಗಳ ಜೊತೆ ಸಮಾಲೋಚನೆ ಮಾಡಲು ಸೂಚಿಸಿದರು.

ತುಮಕೂರು ಜಿಲ್ಲೆಯ ಅನಿವಾಸಿಗಳು, ಪ್ರವಾಸಿ ತಾಣಗಳಲ್ಲಿ ಗಿಡ ಬೆಳೆಸುವ ವಿನೂತ ಯೋಜನೆಯ ಪರಿಕಲ್ಪನೆಗೆ ಚಾಲನೆ ನೀಡಲು ಹಾಗೂ ಅನಿವಾಸಿಗಳಿಗೆ ಸಹಕರಿಸಲು, ಶಕ್ತಿಪೀಠ ಫೌಂಡೇಷನ್ ಮುಂದಾಗಿದೆ.

ಪ್ರವಾಸೋಧ್ಯಮ ಇಲಾಖೆಯ ಕಚೇರಿಗೆ, ತುಮಕೂರು ನಗರದಲ್ಲಿ  ಸರ್ಕಾರಿ ಜಮೀನು ಅಥವಾ ಸರ್ಕಾರಿ ಕಟ್ಟಡ ಹುಡುಕಲು ಅಧಿಕಾರಿಗೆ ಸೂಚಿಸಿದರು.

ಪ್ರವಾಸಿ ತಾಣಗಳ ಮತ್ತು ಹೆರಿಟೇಜ್ ಆಸಕ್ತರ ವಿಷನ್ ಗ್ರೂಪ್ ರಚಿಸಿಕೊಂಡು ಜಿಲ್ಲಾಧಿಕಾರಿಗಳಿಗೆ ಸಹಕಾರ ನೀಡಲು ಆಸಕ್ತಿ ಇರುವವರು ಸಂಪರ್ಕಿಸಬಹುದಾಗಿದೆ.