TUMAKURU:SHAKTHIPEETA FOUNDATION
ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು 75 ನೇ ಅಮೃತ ಸ್ವಾತಂತ್ರ್ಯ ದಿವಸ ಜೈ ಜವಾನ್-ಜೈ ಕಿಸಾನ್- ಜೈ ವಿಜ್ಞಾನ್ ಜೊತೆಗೆ ಜೈ ಅನುಸಂಧಾನ್ ಘೋಷಣೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ‘ನವ ಕರ್ನಾಟಕ-2047 ವಿಷನ್ ಡಾಕ್ಯುಮೆಂಟ್’ ಸಿದ್ಧಪಡಿಸಲು ಶಕ್ತಿಪೀಠ ಫೌಂಡೇಷನ್ ಹಾಗೂ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಭರದ ಸಿದ್ಧತೆ ನಡೆದಿದೆ.
ನಮ್ಮ ರಾಜ್ಯದವರೇ ಆದ ಶ್ರೀ ಎಂ.ಮಲ್ಲಿಕಾರ್ಜುನ್ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ.ದೇವೇಗೌಡರವರು ಸಹ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಜೊತೆಗೆ ಬಿಜೆಪಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ನಂತರ ಪ್ರಮುಖ ಸ್ಥಾನವಾದ ಸಂಘಟನಾ ಕಾರ್ಯದರ್ಶಿಯಾಗಿ ಕರ್ನಾಟಕದ ಶ್ರೀ ಬಿ.ಎಲ್.ಸಂತೋಷ್ ರವರು ಇದ್ದಾರೆ.
ಮೂರು ರಾಷ್ಟ್ರೀಯ ಪಕ್ಷಗಳ ಪ್ರಮುಖ ಸ್ಥಾನದಲ್ಲಿ ಕರ್ನಾಟಕದವರೇ ಇರುವಾಗ ಹಾಗೂ ನಮ್ಮ ರಾಜ್ಯದವರೇ ಕೇಂದ್ರ ಸರ್ಕಾರದ ಸಂಸದೀಯ ಸಚಿವರಾಗಿ ಶ್ರೀ ಪ್ರಹ್ಲಾದ್ ಜೋಷಿಯವರು ಇರುವಾಗ, ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ತರದೇ ಇದ್ದರೆ ಇದಕ್ಕಿಂತ ನಾಚಿಕೆಗೇಡು ಇನ್ನೊಂದಿಲ್ಲ.
ಈ ಸಂಬಂದ ಒಂದು ವಾರಗಳ ಕಾಲ ದೆಹಲಿ ಪ್ರವಾಸದಲ್ಲಿ
- ಪಾರ್ಲಿಮೆಂಟ್ ಗ್ರಂಥಾಲಯ.
- ಪಾರ್ಲಿಮೆಂಟ್ ಮ್ಯೂಸಿಯಂ.
- ಪ್ರಧಾನ ಮಂತ್ರಿಗಳ ಮ್ಯೂಸಿಯಂ.
- ಇಂದಿರಾ ಗಾಂಧಿ ರಾಷ್ಟ್ರೀಯ ಕಲ್ಚರ್ ಅಂಡ್ ಆಟ್ರ್ಸ್ ಗ್ರಂಥಾಲಯ.
- ಕೇಂದ್ರ ಸರ್ಕಾರದ ನ್ಯಾಷನಲ್ ಮಿಷನ್ ಫಾರ್ ಮ್ಯಾನ್ಸ್ಕ್ರಿಪ್ಟ್
ಗಳಿಗೆ ಭೇಟಿ ನೀಡಿ ವಿವಿಧ ಮಾಹಿತಿ ಸಂಗ್ರಹಿಸಿದೆ. ಜೊತೆಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ನೇತೃತ್ವದಲ್ಲಿ, ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಲಾಯಿತು.
ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ 2047 ರೊಳಗೆ, ‘ಒಂದು ಲಕ್ಷ ಕೋಟಿ’ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲು, ನೀಲಿ ನಕ್ಷೆ ಸಿದ್ಧಪಡಿಸುವ ಸಂಬಂದ ವಿವಿಧ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಯಿತು.
- ಡಿಫೆನ್ಸ್ ಕಾರಿಡಾರ್.
- ಏರೋಸ್ಪೇಸ್ ಕಾರಿಡಾರ್.
- ಸೈನಿಕ್ ಸ್ಕೂಲ್.
- ಡಿಫೆನ್ಸ್ ಹಬ್.
- ಏರೋಸ್ಪೇಸ್ ಹಬ್.
- ಗುಬ್ಬಿ ಹೆಚ್.ಎ.ಎಲ್ ವಿಸ್ತರಣಾ ಘಟಕ.
ಇನ್ನೂ ಮುಂತಾದ ಯೋಜನೆಗಳ ಬಗ್ಗೆ ಆಸಕ್ತರು ಪರಿಕಲ್ಪನಾ ವgದಿ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಲು, ಸಲಹೆ ಮಾರ್ಗದರ್ಶನ ನೀಡಲು ಬಹಿರಂಗ ಮನವಿ ಮಾಡಲಾಗಿದೆ.