21st December 2024
Share

TUMAKURU:SHAKTHIPEETA FOUNDATION

ತುಮಕೂರು ನಗರದಲ್ಲಿ ಉದ್ಯಾನವನಗಳು, ಕೆರೆ-ಕಟ್ಟೆಗಳ, ಕರಾಬು ಹಳ್ಳಗಳ ಸಮೀಕ್ಷೆ ನಡೆಯುತ್ತಿದೆ. ಸುಮಾರು 939 ಉದ್ಯಾನವನಗಳನ್ನು ದತ್ತು ನೀಡಲು ಆಂದೋಲನ ಆರಂಭವಾಗಿದೆ, ದಾಖಲೆಗಳ ಪ್ರಕಾರ ಇನ್ನೂ 64 ಉಧ್ಯಾನವನಗಳು ಸಿಕ್ಕಿಲ್ಲ, ಅವುಗಳನ್ನು ಹಡುಕಿ ಜಿ.ಐ.ಎಸ್ ಲೇಯರ್ ಮಾಡಿದರೆ, ನಗರದ ಎಲ್ಲಾ ಉದ್ಯಾನವನಗಳು, ಕೆರೆ-ಕಟ್ಟೆಗಳು, ಕರಾಬುಹಳ್ಳಗಳ ಪಕ್ಕಾ ಜಿಐಎಸ್ ಮಾಡಿದ ಕೀರ್ತಿ ನಮ್ಮ ಪಾಲಿಕೆ ಮುಡಿಗೆ ದೊರೆಯಲಿದೆ.

ಒತ್ತುವರಿ ತೆರವು ಪಾಲಿಕೆಗೆ ಬಿಟ್ಟಿದ್ದು, ಆದರೇ ಪಕ್ಕಾ ಗುರುತಿಸಲು ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ಕಟಿಬದ್ಧವಾಗಿದೆ. ಈ ಬಗ್ಗೆ ಟೂಡಾ ಆಯುಕ್ತರಾದ ಶ್ರೀ ಗೋಪಾಲ್ ಜಾದವ್ ರವರೊಂದಿಗೆ ಸಮಾಲೋಚನೆ ನಡೆಸಿ, ಪಾಲಿಕೆ ಹಾಗೂ ತಾವೂ ಜಂಟಿ ಸಮೀಕ್ಷೆ ನಡೆಸಲು ಸಲಹೆ ನೀಡಲಾಯಿತು.

ಜೊತೆಯಲ್ಲಿ ಟೂಡಾ ಜೆಡಿ ಶ್ರೀ ನಾಗರಾಜ್ ರವರು ಹಾಗೂ ಹಿರಿಯ ಬಿಜೆಪಿ ಧುರೀಣರಾದ ಶ್ರೀ ಶಿವಪ್ರಸಾದ್ ರವರು ಇದ್ದರು.

ಟೂಡಾ ಅದ್ಯಕ್ಷರಾದ ಶ್ರೀ ಚಂದ್ರಶೇಖರ್ ರವರಿಗೂ ನನಗೂ ಇದೂವರೆಗೂ ಭೇಟಿಯಾಗಲು ಸಾಧ್ಯವೇ ಆಗಿಲ್ಲ, ನಾನು ಕರೆ ಮಾಡಿದಾಗ ಅವರು ಬೇರೆ ಕಡೆ ಇರುತ್ತಾರೆ, ಅವರು ಕರೆ ಮಾಡಿದಾಗ ನಾನು ಬೇರೆ ಕಡೆ ಇರುತ್ತೇನೆ.