3rd December 2024
Share

TUMAKURU:SHAKTHIPEETA FOUNDATION

 ತುಮಕೂರು ಮಹಾನಗರ ಪಾಲಿಕೆ, ಪಾಲಿಕೆ ವ್ಯಾಪ್ತಿಯ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಯು ನಿರ್ಣಯದಂತೆ, ಪಾಲಿಕೆ ವ್ಯಾಪ್ತಿಯ ಎಲ್ಲಾ 326 ಬಡಾವಣೆಗಳ ಜಿಯೋ ಫೆನ್ಸ್ ಮಾಡಲು ಮಹತ್ವದ ನಿರ್ಧಾರ ಕೈಗೊಳ್ಳಲು ಸಜ್ಜಾಗಿದೆ. 35 ವಾರ್ಡ್‍ಗಳಲ್ಲಿ ಬರುವ ಎಲ್ಲಾ ಚಾಲ್ತಿಯಲ್ಲಿರುವ ಬಡಾವಣೆಗಳ ನಕ್ಷೆಯ ಜಿಐಎಸ್ ಲೇಯರ್ ಮಾಡಲು ಚಿಂತನೆ ನಡೆಸಿದೆ.

ಈ ಬಡಾವಣೆಗಳ ಜಿಯೋಫೆನ್ಸ್ ರಚನೆಯಿಂದ ಡಾಟಾ ಬ್ಯಾಂಕ್, ಸ್ಮಾರ್ಟ್ ಮತದಾನ ಮತ್ತು ಯಶಸ್ವಿ ಹಸಿರು ತುಮಕೂರು, ಮೂರು ಮಹತ್ವದ ಯೋಜನೆಯನ್ನು ಕರಾರುವಕ್ಕಾಗಿ ಮಾಡುವ ಮೂಲಕ ದೇಶದಲ್ಲಿಯೇ ಮಾದರಿಯಾಗಲು ಯೋಚಿಸಿದೆ.

ತುಮಕೂರು ಮಹಾನಗರ ಪಾಲಿಕೆ, ತುಮಕೂರು ಸ್ಮಾರ್ಟ್ ಸಿಟಿ ಮತ್ತು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರವೂ ಸಹಭಾಗಿತ್ವ ವಹಿಸ ಬೇಕಿದೆ ತುಮಕೂರು ಸ್ಮಾರ್ಟ್ ಸಿಟಿ ನಿರ್ಮಾಣ ಮಾಡಿರುವ ಇಂಟಿಗ್ರೇಟೆಡ್ ಕಮ್ಯಾಂಡ್ ಸೆಂಟರ್ ನಲ್ಲಿ ನಿರ್ವಹಣೆ ಮಾqಲಾಗುವುದು. ಆಯಾ ಬಡಾವಣೆಯಲ್ಲಿನ ನಾಗರೀಕ ಸಮಿತಿ ಅಥವಾ ಆಸಕ್ತ ವ್ಯಕ್ತಿ, ಕುಟುಂಬಗಳನ್ನು ಬಾಡವಾಣಿ ಮಿತ್ರರನ್ನಾಗಿ ನೇಮಿಸುವ ಆಲೋಚನೆಯೂ ಇದೆ.

ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‍ರವರು ಹಾಗೂ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರ ಸಲಹೆ ಮೇರೆಗೆ ದೇಶಕ್ಕೆ ವಿನೂತನವಾದ ಪ್ರಸ್ತಾವನೆಯನ್ನು ಸಿದ್ಧಪಡಿಸಿ, ಸರ್ಕಾರಗಳಿಗೆ ಸಲ್ಲಿಸಲಾಗುವುದು. ಈಗಾಗಲೇ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ.

ಪಾಲಿಕೆ ಮೇಯರ್, ಉಪಮೇಯರ್, ಕಾರ್ಪೋರೇಟರ್‍ಗಳು ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಮೂಲಕ ಚಾಲನೆ ನೀಡುವುದು ಮಾತ್ರ ಬಾಕಿ ಇದೆ.

ಬಡಾವಣೆಗಳ ನಾಗರೀಕ ಸಮಿತಿ ಅಥವಾ ಬಡಾವಣೆ ಮಿತ್ರರ ಪಾತ್ರ.

  1. ಬಡಾವಣೆಯ ಗಡಿಗಳನ್ನು ಗುರುತಿಸುವುದು.
  2. ಬಡಾವಣೆವಾರು ಮನೆ ನಂಬರ್, ಸೈಟ್ ನಂಬರ್ ಹಾಕಿಸಲು ಸಹಕರಿಸುವುದು.
  3. ಪ್ರತಿಯೊಬ್ಬ ಮತದಾರರು ಚುನಾವಣೆ ಸಮಯದಲ್ಲಿ ಮತದಾನದಿಂದ ವಂಚಿತರಾಗದಂತೆ, ಬಡಾವಣೆವಾರು, ರಸ್ತೆವಾರು, ಮನೆವಾರು ಒಂದೇ ಬೂತ್‍ನಲ್ಲಿ ಮತದಾರರ ಪಟ್ಟಿ ಇರುವುದನ್ನು ಖಾತರಿ ಪಡಿಸಿಕೊಳ್ಳುವುದು.
  4. ಬಡಾವಣೆವಾರು ಹಾಲಿ ಇರುವ ಗಿಡಗಳ ಸಮೀಕ್ಷೆ ಮಾಡುವುದು, ಹೊಸದಾಗಿ ಎಲ್ಲಿ, ಯಾವ ಜಾತಿಯ ಎಷ್ಟು ಗಿಡಗಳನ್ನು ಹಾಕಬೇಕು ಎಂಬ ಬಗ್ಗೆ ಸರ್ವೇ ಮಾಡುವುದು.
  5. ಬಡಾವಣೆವಾರು ಗಿಡಗಳನ್ನು ಸಂರಕ್ಷಣೆ ಮಾಡಲು, ಉಧ್ಯಾನವನ ದತ್ತು ಪಡೆಯುವುದು.
  6. ಮತದಾರರ ಪಟ್ಟಿಯಂತೆ, ಪ್ರತಿ ಕುಟುಂಬದ ಎಲ್ಲಾ ಸದಸ್ಯರು ಕಡೇ ಪಕ್ಷ ಒಂದು ಗಿಡವನ್ನಾದರೂ ದತ್ತು ತೆಗೆದುಕೊಳ್ಳಲು ಮನವೊಲಿಸುವುದು.
  7. ನಾಗರೀಕ ಸಮಿತಿಗಳಿಗೆ ನೇರ ನಗದು ರೀತಿಯಲ್ಲಿ, ಅನುದಾನ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಪ್ರಸ್ತಾವನೆ ಸಲ್ಲಿಸಲು ಅಗತ್ಯ ದಾಖಲೆ ನೀಡುವುದು.
  8. ನಾಗರೀಕ ಸಮಿತಿಗಳು, ಆಯಾ ಬಡಾವಣೆ ವ್ಯಾಪ್ತಿಯ ಡಾಟಾ ಬ್ಯಾಂಕ್ ಗಳಂತೆ ಕಾರ್ಯ ನಿರ್ವಹಿಸುವುದು.
  9. ಬಡಾವಣೆಗಳ ಲೇಔಟ್ ಬೋರ್ಡ್‍ಗಳನ್ನು ಸಂರಕ್ಷಣೆ ಮಾಡುವುದು.

ತುಮಕೂರು ನಗರದ ಅನಿವಾಸಿಗಳು, ಅಂದರೆ ನಗರದ ಜನರು, ಬೆಂಗಳೂರು ಅಥವಾ ಬೇರೆ ನಗರದಲ್ಲಿರುವ ಸುಮಾರು 326 ಜನರು ಅಥವಾ ಕೈಗಾರಿಕೆಗಳು ಅಥವಾ ಕಂಪನಿಗಳು, ನಗರದಲ್ಲಿರುವ ಶಾಲಾ ಕಾಲೇಜುಗಳ ವಿಧ್ಯಾರ್ಥಿಗಳ ಮೂಲಕ, ಈ ಬಡಾವಣೆಗಳ ದತ್ತು ಪಡೆದು, ಸಂಪೂರ್ಣ ಹಸೀರಿಕರಣ ಮಾಡಲು, ನಾಗರೀಕ ಸಮಿತಿಗಳಿಗೆ, ಬಡಾವಾಣಿ ಮಿತ್ರರಿಗೆ ಪಿಪಿಪಿ ಮಾದರಿಯಲ್ಲಿ ಯೋಜನೆ ರೂಪಿಸಲು ಮುಂದೆ ಬಂದಿವೆ.