TUMAKURU:SHAKTHIPEETA FOUNDATION
ದಿನಾಂಕ:04.05.2001 ರಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಸ್ಥಾಪಿಸಿ, ಅಂದಿನಿಂದ ಇಲ್ಲಿಯವರೆಗೂ ನಿರಂತರವಾಗಿ ಶ್ರಮಿಸಿ, ಸುಮಾರು 21 ವರ್ಷಗಳ ನಂತರ 2022 ಮುಗಿಯುವ ವೇಳೆಗೆ, ತುಮಕೂರು ನಗರದ ಎಲ್ಲಾ
- ಉಧ್ಯಾನವನಗಳ ಜಿಐಎಸ್ ಲೇಯರ್,
- ಕೆರೆ–ಕಟ್ಟೆಗಳ ಜಿಐಎಸ್ ಲೇಯರ್.
- ಕರಾಬು ಹಳ್ಳಗಳು ಹಾಗೂ ರಾಜಕಾಲುವೆಗಳ ಜಿಐಎಸ್ ಲೇಯರ್.
ಗುರುತಿಸುವ ಮಹತ್ವದ ಕೆಲಸ ಪೂರ್ಣಗೊಂಡಿರುವುದರಿಂದ 2023 ವರ್ಷವನ್ನು ಬಯೋಡೈವರ್ಸಿಟಿ ವರ್ಷವಾಗಿ ಆಚರಿಸಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಘೋಷಣೆ ಮಾಡಲು ಸಜ್ಜಾಗಿದ್ದಾರೆ.
ದಿನಾಂಕ:27.12.2022 ರಂದು ತುಮಕೂರು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ Àರವರೊಂದಿಗೆ ಜಿ.ಎಸ್.ಬಸವರಾಜ್ ರವರು ಹಾಗೂ ನಗರದ ಸಂಘ ಸಂಸ್ಥೆಗಳ ನಿಯೋಗಕ್ಕೆ ದಿನಾಂಕ:31.12.2022 ರೊಳಗೆ, ಜಿಐಎಸ್ ಬೇಸ್ ಮ್ಯಾಪ್ನಲ್ಲಿ ತುಮಕೂರು ಮಹಾನಗರ ಪಾಲಿಕೆ, ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ತುಮಕೂರು ಸ್ಮಾರ್ಟ್ ಸಿಟಿ ಸಹಭಾಗಿತ್ವದಲ್ಲಿ ಪೂರ್ಣಗೊಳ್ಳಲಿದೆ ಎಂಬ ಖಚಿತ ಭರವಸೆಯನ್ನು ನೀಡಿದ್ದಾರೆ.
ಶೀಘ್ರವಾಗಿ ಕೆಳಕಂಡ ಜಿಐಎಸ್ ಲೇಯರ್ ಆರಂಭಿಸಿ, 2023 ರೋಳಗೆ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ‘ಬಯೋಡೈವರ್ಸಿಟಿ ಮೌಲ್ಯ ಮಾಪನ’ ಮಾಡಲು ಆಂದೋಲನ ಕೈಗೊಳ್ಳಲಾಗುವುದು.
- ಬಡಾವಾಣಿಗಳ ಜಿಐಎಸ್ ಲೇಯರ್
- ಹಸಿರು– ತುಮಕೂರು ಜಿಯೋಫೆನ್ಸ್.
ದೇಶದ ಯಾವುದೇ ನಗರ ಇಷ್ಟು ಕರಾರುವಕ್ಕಾಗಿ ಮಾಡಲು ಸಾಧ್ಯಾವಿಲ್ಲ. ದೇಶಾದ್ಯಾಂತ ಪ್ರತಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳು ಅಸ್ಥಿತ್ವದಲ್ಲಿ ಇದ್ದರೂ, ಸತ್ತು ಹೋಗಿವೆ ಎಂದರೆ ತಪ್ಪಾಗಲಾರದು.
ಆದರೇ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ, ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ಮಾರ್ಗದರ್ಶನದ ಮೇರೆಗೆ, ಕಳೆದ ಹಲವಾರು ತಿಂಗಳಿನಿಂದ ಚುರುಕಾಗಿದ್ದರಿಂದ 21 ವರ್ಷಗಳ ನಿರಂತರ ಹೋರಾಟಕ್ಕೆ ಫಲನೀಡಿದೆ.
ಶ್ರೀ ಎಸ್.ಆರ್.ಉಮಾಶಂಕರ್ ಜಿಲ್ಲಾಧಿಕಾರಿ ಹಾಗೂ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ಆಡಳಿತಾಧಿಕಾರಿ ಆಗಿದ್ದ ಅವಧಿಯಲ್ಲಿ ಉದ್ಯಾನವನಗಳ ಸಮೀಕ್ಷೆಗೆ ರೂ 75000 ನೀಡುವ ಮೂಲಕ ಚಾಲನೆ ನೀಡಲಾಗಿತ್ತು.
ಇಲ್ಲಿಯವರೆಗೂ ಸಹಕರಿಸಿದ ಎಲ್ಲಾವರ್ಗಕ್ಕೂ ಅಭಿನಂದನೆ ಸಲ್ಲಿಸಬೇಕಿದೆ. ನಾಗರೀಕ ಸನ್ಮಾನ ಮಾಡಬೇಕಿದೆ. ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಂದ ‘ ‘ತುಮಕೂರು ಮಹಾನಗರ ಪಾಲಿಕೆ ಬಯೋಡೈವರ್ಸಿಟಿ ವರ್ಷ-2023’ ಘೋಶಿಸಲು ಚಿಂತನೆ ನಡೆಸಲಾಗಿದೆ.
ಶೀಘ್ರದಲ್ಲಿ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿ ಹಾಗೂ ತುಮಕೂರು ಮಹಾನಗರ ಪಾಲಿಕೆ ವಿಶೇಷ ಸಭೆ ನಡೆಸಿ, ಜಿಐಎಸ್ ಲೇಯರ್ ಅನುಮೋದನೆ ಪಡೆದು, ಜಿಲ್ಲಾಧಿಕಾರಿಗಳಿಂದ ಅಧಿಕೃತವಾಗಿ ಘೋಷಣೆ ಮಾಡಿಸುವ ಜೊತೆಗೆ, ಮುಂದಿನ ವರ್ಷ ಮೌಲ್ಯಮಾಪನ ಮಾಡಬೇಕಿದೆ.
ಮುಂದಿನ ಮೂರು ವರ್ಷಗಳಲ್ಲಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ‘ಗ್ರೀನ್ ತುಮಕೂರು–ಕೂಲ್ ತುಮಕೂರು’ ರಾರಾಜಿಸಲಿದೆ.
ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಶಕ್ತಿಪೀಠ ಫೌಂಡೇಷನ್ ಹಾಗೂ ನಗರದ ನೂರಾರು ಸಂಘ ಸಂಸ್ಥೆಗಳ ನೇತೃತ್ವದಲ್ಲಿ, ಭಧ್ರ ಅಡಿಪಾಯ ಹಾಕಿದ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್‍ರವರು ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರಿಗೂ ನಾಗರೀಕ ಸನ್ಮಾನ ಮಾಡಲೇ ಬೇಕಿದೆ.
ಪ್ರಧಾನಿ ಶ್ರೀ ನರೇಂದ್ರಮೋದಿಯವರ ‘MANN KI BAAT’ ಕಾರ್ಯಕ್ರಮಕ್ಕೆ, ಈ ಯೋಜನೆಯನ್ನು, ರಾಜ್ಯದ ಬಿಜೆಪಿ ಹಿರಿಯ ನಾಯಕರೊಬ್ಬರು ಕಳುಹಿಸುವುದಾಗಿ ತಿಳಿಸಿದ್ದಾರೆ.
ಸಭೆಯಲ್ಲಿ ದಿಶಾ ಸಮಿತಿ ಸದಸ್ಯರಾದ ಶ್ರೀ ಟಿ.ಆರ್.ರಘೋತ್ತಮರಾವ್, ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗಯ್ಯ, ಇತಿಹಾಸ ತಜ್ಞ ಶ್ರೀ ಡಾ.ಯೋಗೀಶ್, ಶ್ರೀ ಉಮಾಶಂಕರ್, ಶ್ರೀ ರಕ್ಷಿತ್, ಎಡಿ ಡಿಸಿ ಶ್ರೀ ಚನ್ನಬಸಪ್ಪನವರು ಇದ್ದಾರೆ.