22nd December 2024
Share

TUMAKURU:SHAKTHI PEETA FOUNDATI0N

ಸ್ವಾತಂತ್ರ್ಯದ 75 ವರ್ಷಗಳನ್ನು ಕಳೆದೆವು, ವಿಶ್ವದಲ್ಲಿ  ತಲೆ ಎತ್ತಿ ನಿಲ್ಲುವ ಹೆಮ್ಮೆ ಭಾರತಕ್ಕಿದ್ದರೆ, ಕರ್ನಾಟಕದ ರಾಜಧಾನಿ ಬೆಂಗಳೂರು ಐಟಿ-ಬಿಟಿಯಲ್ಲಿ ವಿಶ್ವ ವಿಖ್ಯಾತಿ ಪಡೆದಿದೆ. ಇನ್ನೂ 100 ನೇ ಸ್ವಾಂತಂತ್ರ್ಯ ವರ್ಷದ 2047 ರ ಅಭಿವೃದ್ಧಿ ಜಪ.

ಮಾಜಿ ಪ್ರಧಾನಿ ದಿ.ಲಾಲ್ ಬಹುದ್ದೂರ್ ಶಾಸ್ತ್ರಿಯವರು ಜೈ ಜವಾನ್- ಜೈ ಕಿಸಾನ್’ ಎಂದು ಘೋಷಣೆ ಮಾಡಿದರೆ, ಮಾಜಿ ಪ್ರಧಾನಿಯವರಾದ ದಿ.ಅಟಲ್ ಬಿಹಾರಿ ವಾಜಿಪೇಯಿರವರು ಜೊತೆಗೆ ಜೈ ವಿಜ್ಞಾನ್’ ಎಂದು ಘೋಷಣೆ ಮಾಡಿದರೆ, ಪ್ರಧಾನಿ ಶ್ರೀ ನರೇಂದ್ರಮೋದಿಯವರು ಜೈ ಅನುಸಂಧಾನ್’ ಎಂದು ಸೇರ್ಪಡೆ ಮಾಡಿದರು.

ಒಬ್ಬ ವ್ಯಕ್ತಿ, ಒಂದು ಕುಟುಂಬ, ಒಂದು ಗ್ರಾಮ, ಒಂದು ಬಡಾವಾಣೆ ಹಂತದಿಂದ ಆರಂಭಿಸಿ,  ದೇಶದವರಿಗೂ ಜೈ ಜವಾನ್- ಜೈ ಕಿಸಾನ್- ಜೈ ವಿಜ್ಞಾನ್- ಜೈ ಅನುಸಂಧಾನ್’ ಘೋóಷಣೆಯ ಅರ್ಥವನ್ನು ಮನನ ಮಾಡಿಸಬೇಕು.

ಜೀವನ, ಮನೆ, ಸಂಸಾರ ಎಂಬ ಜಂಜಾಟ ಇದ್ದೆ ಇರುತ್ತದೆ. ಇದರ ಮಧ್ಯೆಯೂ ಸಮಾಜಕ್ಕೆ ನಾನೇನು ಮಾಡಲು ಸಾಧ್ಯಾ ಎಂದು ಯಾರೊಬ್ಬರೂ ಕೊರಗ ಬಾರದು. ನನ್ನಿಂದ ಈ ಸಮಾಜಕ್ಕೆ ಏನುಕೊಡುಗೆ ನೀಡಬೇಕು ಎಂದು ಪ್ರತಿಯೊಬ್ಬರೂ ಚಿಂತನೆ ಮಾಡಬೇಕು.

ನೀವು ಏನು ಮಾಡದಿದ್ದರೂ ಟೀಕೆ, ಏನನ್ನದಾರೂ ಮಾಡಿದರೂ ಟೀಕೆ ಮಾಡುವುದು ಈ ಸಮಾಜದ ಗುಣ. ನಡೆಯುವವನು ಎಡವುತ್ತಾನೆ, ಪರಿಸ್ಥಿತಿ ಒತ್ತಡಗಳಿಗೆ, ಪ್ರತಿಷ್ಟೆಗೆ ಒಳಗಾಗಿ ತಪ್ಪು ಮಾಡುವುದು ಮಾನವನ ಗುಣ. ಆ ತಪ್ಪನ್ನು ಬೇಗ ಅರ್ಥಮಾಡಿಕೊಂಡು ತಿದ್ದಿಕೊಳ್ಳುವುದು ಒಂದು ದೊಡ್ಡತನ.

ಡಾ.ಅಂಬೇಡ್ಕರ್‍ರವರು ರಾಜಕೀಯದಲ್ಲಿ, ಶಿಕ್ಷಣದಲ್ಲಿ ಮಾತ್ರ ಸಾಮಾಜಿಕ ನ್ಯಾಯ ಪ್ರತಿಪಾದಿಸಿಲ್ಲ, ಅಭಿವೃದ್ಧಿಯಲ್ಲೂ ಸಾಮಾಜಿಕ ನ್ಯಾಯ ಇರಲೇ ಬೇಕು ಎಂದು ಪ್ರತಿಪಾದಿಸಿದ್ದಾರೆ. ಬಗ್ಗೆ ವ್ಯಾಪಕ ಚರ್ಚೆ ಅಗತ್ಯ.’

ಎಲ್ಲರ ಮನಸ್ಸಿನ ಭಾವನೆಗಳನ್ನು ಕೇಳುವ ವ್ಯವಧಾನ ನಮ್ಮ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಇರುವುದಿಲ್ಲ. ಆದರೂ ಪರಿಣಿತ ತಜ್ಞರ ಹಲವಾರು ಪ್ಲಾಟ್ ಫಾರಂಗಳು ನಿರಂತರವಾಗಿ ಶ್ರಮಿಸುತ್ತಿವೆ. ಇವುಗಳ ಡಾಟಾ ಸಂಗ್ರಹ ಆರಂಭವಾಗಿದೆ. 

ನಮ್ಮ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಇನ್ನೂ ಮುಂದೆ ಜ್ಞಾನಯುಗ ಜ್ಞಾನವಿದ್ದವರ ಕಾಲ ಎಂದು ಪದೇ, ಪದೇ ಹೇಳುತ್ತಾರೆ. 2047 ರ ನವಕರ್ನಾಟಕ ವಿಷನ್ ಡಾಕ್ಯುಮೆಂಟ್‍ನ ಮಾದರಿ ಯೋಜನೆಯಾಗಿ ತುಮಕೂರು 2047 ವಿಷನ್‍ನಲ್ಲಿ, ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿಗಳ, 11 ನಗರ ಸ್ಥಳೀಯ ಸಂಸ್ಥೆಗಳ, ತುಮಕೂರು ನಗರದ 326 ಬಡಾವಣೆಗಳ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆಯತ್ತ ಗಮನಹರಿಸುವುದು ಪ್ರಮುಖವಾಗಿದೆ.

11 ವಿಧಾನಸಭಾ ಕ್ಷೇತ್ರಗಳ ಪ್ರತಿಯೊಂದು ಗ್ರಾಮಗಳ ಸ್ಥಿತಿ ಗತಿ ಬಗ್ಗೆಯೂ ಗಮನ ಹರಿಸವುದು ಅಗತ್ಯವಾಗಿದೆ. ನಂತರ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಕಡೆ ಗಮನ ಹರಿಸಲು ಸಿದ್ಧತೆ ನಡೆಸಲಾಗಿದೆ.

ಈ ಹಿನ್ನಲೆಯಲ್ಲಿ, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ, ತುಮಕೂರಿನ ಶಕ್ತಿಪೀಠ ಫೌಂಡೇಷನ್ ಹಾಗೂ ಅಭಿವೃದ್ಧಿ ರೆವೂಲ್ಯೂಷನ್ ಫೋರಂ  ಸಂಸ್ಥಾಪಕರಾಗಿ, ರಾಜ್ಯದ ಸರ್ವಪಕ್ಷಗಳ ನಾಯಕರ ಅಭಿಪ್ರಾಯ ಸಂಗ್ರಹಿಸಲು ಆಂದೋಲನ ಆರಂಭಿಸಲು ಚಿಂತನೆ ನಡೆಸಲಾಗಿದೆ.

ಮೊದಲನೇ ಹಂತದಲ್ಲಿ, ನಮ್ಮ ರಾಜ್ಯದವರೇ ಆದ ಮಾಜಿ ಪ್ರಧಾನ ಮಂತ್ರಿಯವರಾದ ಶ್ರೀ ಹೆಚ್.ಡಿ.ದೇವೇಗೌಡರವರಿಂದ ಆರಂಭಿಸಿ, ರಾಜ್ಯದ ಎಲ್ಲಾ ಮಾಜಿ ಮುಖ್ಯಮಂತ್ರಿಯವರ ಹಾಗೂ ಸರ್ವಪಕ್ಷಗಳ ರಾಜ್ಯಾದ್ಯಕ್ಷರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಆಸಕ್ತರು ಸಂಪರ್ಕಿಸಲು ಬಹಿರಂಗ ಮನವಿ ಮಾಡಲಾಗಿದೆ.