21st November 2024
Share

TUMAKURU:SHAKTHIPEETA FOUNDATION

 ಕರ್ನಾಟಕ ರಾಜ್ಯದ ಪ್ರತಿಗ್ರಾಮಗಳ ಕಲೆ,ಸಾಹಿತ್ಯ, ಸಂಸ್ಕøತಿ, ಅಭಿವೃದ್ಧಿ ಬಗ್ಗೆ ನವ ಕರ್ನಾಟಕ ವಿಷನ್-2047 ರವರೆಗೆ ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ, ಬೆಂಗಳೂರು ಪ್ರಾದೇಶಿಕ ಕೇಂದ್ರದ ರೀಜಿನಲ್ ಡೈರಕ್ಟರ್ ಶ್ರೀ ಮಹೇಂದ್ರರವರೊಂದಿಗೆ ಸಮಾಲೋಚನೆ ನಡೆಸಲಾಯಿತು.

ನವದೆಹಲಿಯಲ್ಲಿರುವ ಕೇಂದ್ರ ಕಚೇರಿಗೆ ಭೇಟಿ ನೀಡಿ ಸಮಾಲೋಚನೆ ನಡೆಸಿದ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಕೆಡಿಪಿ ಸಭೆಯಲ್ಲಿ, 28 ಲೋಕಸಭಾ ಕ್ಷೇತ್ರಗಳ ಹಾಗೂ 31 ಜಿಲ್ಲಾ ಮಟ್ಟದ ದಿಶಾ ಸಭೆಗಳಲ್ಲಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ವಿಷಯ ಮಂಡಿಸಿ, ಚರ್ಚೆ ನಡೆಸಲು ಸೂಕ್ತ ಪರಿಕಲ್ಪನಾ ವರದಿ/ಪ್ರಸ್ತಾವನೆಯನ್ನು ರಾಜ್ಯದ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿಯವರಿಗೆ ಸಲ್ಲಿಸುವ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಕೇಂದ್ರ ಸಂಸ್ಕøತಿ ಇಲಾಖೆಯಿಂದ ಕರ್ನಾಟಕ ರಾಜ್ಯಕ್ಕೆ ಪಡೆಯಬಹುದಾದ ಯೋಜನೆಗಳ ಬಗ್ಗೆ, ರಾಜ್ಯ ಸರ್ಕಾರದ ಸಂಭಂಧಿಸಿದ ಇಲಾಖೆಗಳ ಮತ್ತು 31 ಜಿಲ್ಲೆಗಳ ಪರಿಣಿತರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸುವ ಬಗ್ಗೆಯೂ ಚರ್ಚೆ ನಡೆಸಲಾಯಿತು.

ಜೊತೆಯಲ್ಲಿ ‘ಪಶ್ಚಿಮಘಟ್ಟಗಳ ಫೌಂಡೇಷನ್’ ಅಧ್ಯಕ್ಷÀ ಶ್ರೀ ವೇದಾನಂದಮೂರ್ತಿ, ಸಿಇಓ ಇದ್ದರು.