27th July 2024
Share

TUMAKURU:SHAKTHIPEETA FOUNDATION

ರಾಜಕೀಯ ಬದಿಗೊತ್ತಿ, ರಾಜ್ಯದ ಸಮಗ್ರ ಅಭಿವೃದ್ಧಿಗೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಪ್ರತಿಪಾದಿಸಲು, ರಾಜ್ಯದಲ್ಲಿ  ನವ ಕರ್ನಾಟಕ ವಿಷನ್-2047 ಟಾಸ್ಕ್ ಪೋರ್ಸ್ ರಚಿಸಲು ಅಭಿವೃದ್ಧಿ ಆಸಕ್ತರು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಕೆಳಕಂಡವರ ಅಭಿಪ್ರಾಯ ಸಂಗ್ರಹಿಸಲು ಆಂದೋಲನ ಹಮ್ಮಿಕೊಳ್ಳಲಾಗುವುದು.

  1. ಮಹಾಪೋಷಕರು: ರಾಜ್ಯದವರೇ ಆದ ಮಾಜಿ ಪ್ರಧಾನ ಮಂತ್ರಿ ಅಥವಾ ಪ್ರತಿನಿದಿ,ü ರಾಷ್ಟ್ರೀಯ ಪಕ್ಷಗಳ ರಾಜ್ಯದ ಪ್ರತಿನಿಧಿಗಳು ಅಥವಾ ಪ್ರತಿನಿದಿ ಹಾಗೂ ಕೇಂದ್ರವನ್ನು ಪ್ರತಿನಿಧಿಸುವ ರಾಜ್ಯದ ಸಚಿವರುಗಳು.
  2. ಪೋಷಕರು: ರಾಜ್ಯದ ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಅಥವಾ ಪ್ರತಿನಿಧಿ
  3. ಅಧ್ಯಕ್ಷರು: ಮುಖ್ಯ ಮಂತ್ರಿ
  4. ಕಾರ್ಯಾಧ್ಯಕ್ಷರು: ವಿರೋಧಪಕ್ಷದ ನಾಯಕರು ಅಥವಾ ಪ್ರತಿನಿಧಿ
  5. ಉಪಾಧ್ಯಕ್ಷರು: ಎಲ್ಲಾ ಪಕ್ಷಗಳ ಶಾಸಕಾಂಗ ಪಕ್ಷದ ನಾಯಕರುಗಳು ಅಥವಾ ಪ್ರತಿನಿಧಿ
  6. ಸಂಚಾಲಕರು: ದೆಹಲಿ ಪ್ರತಿನಿಧಿ ಅಥವಾ ಪ್ರತಿನಿಧಿ
  7. ಸದಸ್ಯರು:ಎಲ್ಲಾ ಪಕ್ಷಗಳ ರಾಜ್ಯಾಧ್ಯಾಕ್ಷರು ಅಥವಾ ಚುನವಾಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರು ಅಥವಾ ಅವರ ಪ್ರತಿನಿಧಿ
  8. ವಿಶೇಷ ಆಹ್ವಾನಿತರು: ರಾಜ್ಯ ಮಟ್ಟದ ದಿಶಾ ಸಮಿತಿ ಹಾಲಿ ಮತ್ತು ಮಾಜಿ ಸದಸ್ಯರು.
  9. ಆಹ್ವಾನಿತರು:ರಾಜ್ಯದ ಹಾಲಿ ಮತ್ತು ಮಾಜಿ ಲೋಕಸಭಾ ಸದಸ್ಯರು.ರಾಜ್ಯಸಭಾ ಸದಸ್ಯರು, ವಿಧಾನಸಭೆ ಸದಸ್ಯರು, ವಿಧಾನಪರಿಷತ್ ಸದಸ್ಯರು ಅಥವಾ ಪ್ರತಿನಿಧಿ

ಕೋರಂ: ಸಭೆಗಳಿಗೆ ಯಾವುದೇ ಕೋರಂ ಇರುವುದಿಲ್ಲಾ. ವೈಯಕ್ತಿಕ ಲಿಖಿತ ಅಥವಾ ವಿಡಿಯೋ ಅಭಿಪ್ರಾಯಗಳ ಸಂಗ್ರಹಣೆಗೂ ಅವಕಾಶ.

2047 ಅಜೆಂಡಾ

  1. ಎಲ್ಲಾ ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳು.
  2. ರಾಜ್ಯ ಸರ್ಕಾರದ ಆಯವ್ಯಯ.
  3. ಕೇಂದ್ರ ಸರ್ಕಾರದ ಆಯವ್ಯಯ
  4. ರಾಜ್ಯದ ಪ್ರತಿಯೊಂದು ಗ್ರಾಮಗಳ ಹಾಗೂ ಬಡಾವಣೆಗಳ ಸಮಿತಿಗಳು, ವ್ಯಕ್ತಿಗಳು ನೀಡುವ ಯೋಜನೆಗಳು.
  5. ವಿವಿಧ ಸಂಘ ಸಂಸ್ಥೆಗಳು ನೀಡುವ ಅಧ್ಯಯನ ವರದಿಗಳು.
  6. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು.
  7. ಸ್ಥಳೀಯ ಗ್ರಾಮಪಂಚಾಯಿತಿ ಹಾಗೂ ನಗರ ಸ್ಥಳಿಯ ಸಂಸ್ಥೆಗಳ ನೀಡುವ ಅಂಶಗಳು.
  8. ವಿವಿಧ ನಿಗಮ, ಕಾರ್ಪೋರೇಷನ್, ಬೋರ್ಡ್‍ಗಳು ನೀಡುವ ಯೋಜನೆಗಳು.
  9. 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಸಾಮಾಜಿಕ ಅಸಮತೋಲನ ನಿವಾರಣೆ.

ಸಮಿತಿಯ ರೂಪುರೇಷೆಗಳಿಗೆ ಬಹಿರಂಗ ಮನವಿ.