27th July 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾದ್ಯಾಂತ ಅನಾಥವಾಗಿ ಬಿದ್ದಿರುವ ಶಾಸನಗಳ ವೀರಕಲ್ಲುಗಳು, ಮಾಸ್ತಿಕಲ್ಲುಗಳು ಇನ್ನೂ ಮುಂತಾದ ಸ್ಮಾರಕಗಳ ಸಂಗ್ರಹಣೆ ಮಾಡಲು ತುಮಕೂರು ಅಮಾನಿಕೆರೆಯಲ್ಲಿ ಸ್ಥಳ ನಿಗದಿ ಮಾಡಲಾಗುವುದು ಎಂದು ತುಮಕೂರು ಜಿಲ್ಲಾಧಿಕಾರಿ ಶ್ರೀ ವೈ.ಎಸ್.ಪಾಟೀಲ್ ಹೇಳಿದರು.

ತುಮಕೂರು ಅಮಾನಿಕೆರೆ ಸುತ್ತಲೂ ಸುಮಾರು 8-10 ಕೀಮೀ ಸುತ್ತಳತೆ ಇದೆ ಹಾಗೂ ಒಂದು ಎಕರೆ ಸ್ಥಳವನ್ನು ಈಗಾಗಲೇ ಗುರುತಿಸಲಾಗಿದೆ. ನಮ್ಮಲ್ಲಿ ಇತಿಹಾಸ ಗೊತ್ತಿರುವ ಪರಿಣಿತರು, ಸಂಘ ಸಂಸ್ಥೆಗಳು, ಈ ಬಗ್ಗೆ ಆಸಕ್ತಿ ಇರುವವರು ಮುಂದೆ ಬನ್ನಿ ಎಂದು ಹೇಳಿದÀ ಪ್ರಸಂಗ ನಡೆಯಿತು.

ಕೆಲವು ಶಾಸನಗಳನ್ನು ಸ್ಥಳಾಂತರ ಮಾಡಲು ಆಗುವುದಿಲ್ಲಾ, ಅಂತಹ ಶಾಸನಗಳು ಇರುವ ಜಮೀನು ಯಾರ ಮಾಲೀಕತ್ವದಲ್ಲಿದೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದರೆ, ಅವುಗಳ ಸಂರಕ್ಷಣೆ ಹೇಗೆ ಮಾಡಬೇಕು ಎಂದು ಆಲೋಚನೆ ಮಾಡೋಣ ಎಂಬ ಸಲಹೆಯನ್ನು ನೀಡಿದ್ದಾರೆ.

ಬರೀ ವಾಟ್ಸ್ ಅಪ್‍ಗಳಲ್ಲಿ ಅಲ್ಲಿ ಹೀಗೆ ಮಾಡಿದ್ದಾರೆ, ಇಲ್ಲಿ ಹೀಗೆ ಮಾಡಿದ್ದಾರೆ, ಎನ್ನುವ ಬದಲು ತಾವುಗಳು ಸಹ ಜಿಲ್ಲಾಡಳಿತದೊಂದಿಗೆ ಸಹಕರಿಸಿದರೆ ಉತ್ತಮ ಎಂದು ನಯವಾಗಿ ಪ್ರೀತಿಯ ಬುದ್ದಿ ಹೇಳಿದರು. 

ಈ ಬಗ್ಗೆ ತುಮಕೂರು ಸ್ಮಾರ್ಟ್ ಸಿಟಿ ವತಿಯಿಂದ ಒಂದು ಸಂವಾದ ಏರ್ಪಡಿಸಲಾಗಿತ್ತು. ನಾನು ಅಂದೇ ಹೇಳಿದ್ದೆ, ಯಾರಾದರೂ ಮುಂದೆ ಬನ್ನಿ ತುಮಕೂರು ಜಿಲ್ಲೆಯ ಸ್ಮಾರಕಗಳ ಮತ್ತು ಹೆರಿಟೇಜ್ ಕಟ್ಟಡಗಳ, ಸ್ಥಳಗಳ, ಜಿ.ಐ.ಎಸ್.ಲೇಯರ್ ಮಾಡಿ, ಅವುಗಳ ಸಂರಕ್ಷಣೆಗೆ ಏನೇನು ಮಾಡಬೇಕು ಎಂಬ ವರದಿಯನ್ನು ಸಿದ್ಧಪಡಿಸಿ, ನಂತರ ಜಿಲ್ಲಾಧಿಕಾರಿಗಳ ಬಳಿ ಸಮಾಲೋಚನೆ ನಡೆಸೋಣ ಎಂದಿದ್ದರೂ ಯಾರೊಬ್ಬರೂ ಮುಂದೆ ಬರಲಿಲ್ಲ.

ಭಾಷಣ ಮಾಡಿ ಹೋದರೆ ಆಗುವುದಿಲ್ಲಾ, ಕಾರ್ಯರೂಪಕ್ಕೆ ತರಲು ಸರ್ಕಾರದೊಂದಿಗೆ ಸಹಕರಿಸೋಣ ಎಂದು ಮನವಿ ಮಾಡಿದ್ದೆ, ನಂತರವೂ ಹಲವಾರು ಭಾರಿ ಇತಿಹಾಸ ತಜ್ಞರಿಗೆ ಹೇಳಿದ್ದೆ. ಕೋಲಾರದಲ್ಲಿನ ಪತ್ರಿಕಾ ವರದಿಯನ್ನು ನನಗೆ ತಮಿಳುನಾಡಿನ ಶ್ರೀ ಸ್ವಾಮಿನಾಥನ್ ರವಾನಿಸಿದ್ದರು.ನಾನು ಜಿಲ್ಲಾಧಿಕಾರಿಗಳಿಗೆ ಅದನ್ನು ಕಳುಹಿಸಿದ್ದೆ.

ಇದು ನಮ್ಮ ಜಿಲ್ಲಾಧಿಕಾರಿಯವರಿಗೆ ಪ್ರೀತಿಯ ಸಿಟ್ಟು ಬಂದಿರಬಹುದು, ನಾನು ಈಗಾಗಲೇ ಒಂದು ಎಕರೆ ಸ್ಥಳ ನೀಡಿದ್ದರೂ, ಅಗತ್ಯವಿದ್ದಲ್ಲಿ, ಶಾಸನಗಳ ಸಂಗ್ರಹಣೆಗೆ ಯಾವುದಾದರೂ ಮೂಲದಲ್ಲಿ ಆರ್ಥಿಕ ಸಹಾಯ ಮಾಡಬಹುದು. ಆಸಕ್ತರನ್ನು ಜೊತೆಗೂಡಿಸಿಕೊಂಡು ಶಾಸನಗಳ ಸಂಗ್ರಹ ಮಾಡುವ ಬದಲು ಹೀಗಾದರೆ ಹೇಗೆ ಎಂಬ ಅಭಿಪ್ರಾಯ ಬಂದಿರಬಹುದು.

ಸಭೆಯಲ್ಲಿ ಇದ್ದ ಇತಿಹಾಸ ತಜ್ಞ ಶ್ರೀ ಡಾ.ಯೋಗೀಶ್ವರಪ್ಪನವರು ಹಾಗೂ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗಪ್ಪನವರು ಸಭೆಯಿಂದ ಹೊರಗಡೆ ಬಂದ ನಂತರ, ಕಾರ್ಯಪ್ರವೃತ್ತರಾಗುವ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಪಲಿತಾಂಶ ಕಾದು ನೋಡೋಣ?

ನೋಡಿ ನಮ್ಮ ಜಿಲ್ಲಾಧಿಕಾರಿಗಳ ಗಮನಕ್ಕೆ ಯಾವುದಾದರೂ ಒಂದು ವಿಷಯವನ್ನು ಸಭೆಗಳಲ್ಲಿ ಅಥವಾ ಖಾಸಗಿಯಾಗಿ ಅಥವಾ ಸೋಶಿಯಲ್ ಮೀಡಿಯಾ ಮೂಲಕ ತಂದರೆ, ತಕ್ಷಣ ಜಾರಿಗೊಳಿಸುವ ಚಾಕಚಕ್ಯತೆ ನಿಜಕ್ಕೂ ಅಭಿನಂದಾರ್ಹ!