22nd November 2024
Share

TUMAKURU:SHAKTHIPEETA FOUNDATION

108 SHAKTHIPEETA GIS MAP

ನನ್ನ ಹುಟ್ಟೂರಿನ ಗಡಿಯಲ್ಲಿ ಹೆಚ್..ಎಲ್ ಘಟಕ ಲೋಕಾರ್ಪಣೆ.

ನಾನೊಬ್ಬ ರೈತ, ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ನಿಟ್ಟೂರು ಹೋಬಳಿ, ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದರನಹಳ್ಳಿ ಗ್ರಾಮದ ರೈತ ಕುಟುಂಬದಿಂದ ಬಂದವನು. ಈಗಲೂ ನನ್ನ ಜೀವನ ಕೃಷಿ ಆದಾಯ ಮೂಲದಿಂದ ನಡೆಯುತ್ತಿದೆ.

‘ರಜಾ ದಿನಗಳಲ್ಲಿ, ಬಿದರೆಹಳ್ಳ ಕಾವಲ್ನಲ್ಲಿ ಎಮ್ಮೆ ಕಾಯುವಾಗ, ಹುಚ್ಚು ಕನಸು ಕಂಡ’, ಬಿದರೆಹಳ್ಳ ಕಾವಲ್‍ನಲ್ಲಿ ಇದ್ದ, ಸುಮಾರು 757 ಜನಕ್ಕೂ ಹೆಚ್ಚು ಜನ ಉಳುಮೆ ಮಾಡುತ್ತಿದ್ದ, 930 ಎಕರೆ ಸರ್ಕಾರಿ ಜಮೀನಿನನಲ್ಲಿ ಯಾವುದಾದರೂ ಬೃಹತ್ ಸರ್ಕಾರಿ ಉದ್ದಿಮೆ ಸ್ಥಾಪನೆ ಮಾಡಲು ಶಕ್ತಿಕೊಡು ತಾಯಿ, ನಿನ್ನ ದೇವಾಲಯ ಮಾಡಿಸುತ್ತೇನೆ, ಎಂದು ದಿನಾಂಕ:01.08.1988 ರಲ್ಲಿ ನನ್ನ ಹುಟ್ಟೂರು ಕುಂದರನಹಳ್ಳಿಯ ಗಂಗಮಲ್ಲಮ್ಮನ ದೇವಿಯ ಮುಂದೆ ಪ್ರಾರ್ಥನೆ ಮಾಡಿದ್ದೆ. ಸುಮಾರು 35 ವರ್ಷಗಳು ಕಳೆದಿವೆ.

ನಿರಂತರ ಪರಿಶ್ರಮದಿಂದ ಹಲವಾರು ಜನರ ಸಹಕಾರದಿಂದ, ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಅಧೀನದಲ್ಲಿರುವ ಹೆಚ್.ಎ.ಎಲ್ ವತಿಯಿಂದ ರೂ 6400 ಕೋಟಿ ವೆಚ್ಚದ ಯುದ್ಧ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಲೋಕಾರ್ಪಣೆಗೆ ಸಿದ್ಧವಾಗಿದೆ. ಗಂಗಮಲ್ಲಮ್ಮ ದೇವಾಲಯದ ಕಾಮಗಾರಿಗಳು ಆರಂಭವಾಗಿವೆ. ಆದರೇ ಸ್ಥಳೀಯ ಜನರಿಗೆ ಉದ್ಯೋಗದ ಕನಸು ನನಸಾಗಿಯೇ’ ಇದೆ.

ದಿನಾಂಕ:03.01.2016 ರಂದು ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಶಂಕುಸ್ಥಾಪನೆ ಮಾಡುವ ಮೂಲಕ ಘಟಕಕ್ಕೆ ಚಾಲನೆ ನೀಡಿದ್ದಾರೆ, ಬಹುತೇಕ ದಿನಾಂಕ:13.02.2023 ರಂದು ಅವರೇ ಲೋಕಾರ್ಪಣೆ ಮಾಡಲಿದ್ದಾರೆ. ಈ ಸಮಾವೇಶದಲ್ಲಿ ಸ್ಥಳೀಯರಿಗೆ ಉದ್ಯೋಗದ ಭರವಸೆ ಪಡೆಯಲೇ ಬೇಕಿದೆ ಹಾಗೂ ಹೆಚ್.ಎ.ಎಲ್ ಘಟಕಕ್ಕೆ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಲೇ ಬೇಕಿದೆ.

ಅಭಿವೃದ್ಧಿ ಪೀಠ:

ದಿನಾಂಕ:18.07.1991 ರಂದು ಅಫಿಕ್ಸ್ ತರಬೇತಿ ಕೇಂದ್ರ ಸ್ಥಾಪಿಸಿ, ನನ್ನ ಹುಟ್ಟೂರು ಕುಂದರನಹಳ್ಳಿಯಲ್ಲಿಯೇ ತುಮಕೂರು ಲೋಕಸಭಾ ಕ್ಷೇತ್ರದ ಕಾರ್ಯಾಗಾರ ಕಟ್ಟಡ ನಿರ್ಮಾಣ ಮಾಡಿ, ಹೋರಾಟ ಆರಂಭಿಸಲಾಯಿತು. ಈ ಕಟ್ಟಡ ಈಗಲೂ ವಿವಾದಲ್ಲಿಯೇ ಇದೆ. 

ದಿನಾಂಕ:04.05.2001 gಂದು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ರಚಿಸಿಕೊಂಡು, ಚಿಂತನಾಕಾರ್ಯಾಗಾರಅನುಷ್ಠಾನ ಘೋಷಣೆಯಡಿ, ತುಮಕೂರು ನಗರದ ಸಮಗ್ರ ಅಭಿವೃದ್ಧಿ, ತುಮಕೂರು ಜಿಲ್ಲೆ ಸಮಗ್ರ ಅಭಿವೃದ್ಧಿಗಾಗಿ ಹಲವಾರು ಸಂಘ ಸಂಸ್ಥೆಗಳ ಮೂಲಕ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ನೇತೃತ್ವದಲ್ಲಿ ಶ್ರಮಿಸಲಾಗುತ್ತಿದೆ. ಸಾಕಷ್ಟು ಪ್ರಗತಿ ಕಾಣಲಾಗಿದೆ. ಇನ್ನೂ ಬಹಳಷ್ಟು ಪ್ರಗತಿ ಕಾಣಬೇಕಿದೆ.

‘ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಜೈ ಅನುಸಂಧಾನ್ ಘೋಷಣೆ ಹಾಗೂ ನವ ಭಾರತ 2047 ಗೆ ಅನುಗುಣವಾಗಿ, ತುಮಕೂರು ವಿಷನ್ ಡಾಕ್ಯುಮೆಂಟ್– 2047 ಭರದ ಸಿದ್ಧತೆಯಿಂದ ಆರಂಭವಾಗಿದೆ.

ಜಲಪೀಠ

ದಿನಾಂಕ:07.01.1997 ರಂದು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಅಧ್ಯಕ್ಷತೆಯಲ್ಲಿ ಅಭಾವಪೀಡಿತ ಪ್ರದೇಶಗಳ ನೀರಾವರಿ ಅಭಿವೃದ್ಧಿ ಸಲಹಾ ಸಮಿತಿ (APPNASS) ರಚಿಸಿಕೊಂಡು, ಕರ್ನಾಟಕ ರಾಜ್ಯದ ಸಮಗ್ರ ನೀರಾವರಿ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ಇಂದಿಗೆ (07.02.2023) 26 ವರ್ಷ ತುಂಬಿದೆ.

ರಾಜ್ಯದ ನದಿ ಜೋಡಣೆ ಹಾಗೂ ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆಯ ನೋಡೆಲ್ ಆಫೀಸರ್ ಆಗಿ ಕಾವೇರಿ ನೀರಾವರಿ ನಿಗಮದ ವ್ಯಾವಸ್ಥಾಪಕ ನಿರ್ದೇಶಕರು ನೇಮಕವಾಗಿದ್ದಾರೆ. ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂಪ್ಪನವರು ಆದೇಶ ಮಾಡಿ ವರ್ಷಗಳೇ ಕಳೆದಿವೆ. ಇನ್ನೂ ಪರಿಕಲ್ಪನಾ ವರದಿ ನೀಡದೇ ಇರುವುದು ವಿಷಾದಕರ.

ಶಕ್ತಿಪೀಠ

ವಿಶ್ವದ 7 ದೇಶಗಳಲ್ಲಿನ, 108 ಶಕ್ತಿಪೀಠಗಳ ಸಂಶೋಧನೆ ಮತ್ತು ಅಧ್ಯಯನಕ್ಕಾಗಿ, ದಿನಾಂಕ:16.08.2019 ರಂದು ಶಕ್ತಿಪೀಠ ಫೌಂಡೇಷನ್ ಸ್ಥಾಪನೆಯಾಗಿದೆ. 108 ಶಕ್ತಿಪೀಠಗಳು, 12 ಜ್ಯೋತಿರ್ಲಿಂಗಗಳು, ಬ್ರಹ್ಮ, ಮತ್ತು ವಿಷ್ಣು ಸೇರಿ 122 ದೇವರುಗಳ ಬಗ್ಗೆ ಮಾಹಿತಿಗಳ ಸಂಗ್ರಹ ಆರಂಭವಾಗಿದೆ. ನಿಖರವಾದ ಮಾಹಿತಿ ಸಂಗ್ರಹಕ್ಕಾಗಿ, ಶಕ್ತಿಪೀಠ ಫೌಂಡೇಷನ್ ಸಿಇಓ ಕೆ.ಆರ್.ಸೋಹನ್ ರವರು ಶಕ್ತಿಪೀಠಗಳ ಯಾತ್ರೆ ಮಾಡುತ್ತಿದ್ದಾರೆ.

ತುಮಕೂರಿನಲ್ಲಿ ಶಕ್ತಿಪೀಠ ಮ್ಯೂಸಿಯಂ ಕಟ್ಟಡ ಆರಂಭವಾಗಿದೆ. ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕು ಬಗ್ಗನಡು ಕಾವಲ್‍ನಲ್ಲಿ,  ಅಭಿವೃದ್ಧಿಗಾಗಿಯೇ ಶಕ್ತಿಪೀಠ ಕ್ಯಾಂಪಸ್ ಪರಿಕಲ್ಪನೆಗೆ   ಚಾಲನೆ ನೀಡಲಾಗಿದೆ.

35 ವರ್ಷಗಳ ಸಮಾಜ ಸೇವೆ ನಂತರ, ಇನ್ನೂ ಮುಂದೆ, ಪ್ರತಿ ವರ್ಷವೂ, ಶಕ್ತಿಪೀಠ, ಜಲಪೀಠ ಮತ್ತು ಅಭಿವೃದ್ಧಿ ಪೀಠಗಳ ಸಮಾವೇಶ ನಡೆಸಲು ಆಲೋಚನೆ ಮಾಡಲಾಗಿದೆ. ಈ ವರ್ಷ ಪ್ರಥಮ ಸಮಾವೇಶವನ್ನು ಶ್ರೀ ಜಿ.ಎಸ್.ಬಸವರಾಜ್ ರವರ ಅಧ್ಯಕ್ಷತೆಯಲ್ಲಿ

  1. ನನ್ನ ಹುಟ್ಟೂರು ಕುಂದರನಹಳ್ಳಿಯಲ್ಲಿ ಅಥವಾ
  2. ಬೆಂಗಳೂರಿನ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಅಥವಾ
  3. ತುಮಕೂರಿ ಜಯನಗರ ಪೂರ್ವದಲ್ಲಿ  ಅಥವಾ
  4. ಹಿರಿಯೂರು ತಾಲ್ಲೋಕು ಬಗ್ಗನಡು ಕಾವಲ್‍ನಲ್ಲಿ ಅಥವಾ
  5. ಹಾಸನ ಜಿಲ್ಲೆಯ ಮೂಕಾನಾನ ರೆಸಾರ್ಟ್‍ನಲ್ಲಿ ಅಥವಾ
  6. ದೆಹಲಿಯಲ್ಲಿ

ನಡೆಸಲು ಚರ್ಚೆ ಆರಂಭವಾಗಿದೆ. ಮೇಲ್ಕಂಡ 122  ದೇವರುಗಳ ತಂಡದ ಸಂಚಾಲಕರು ಭಾಗವಹಿಸಲಿದ್ದಾರೆ.

ನಾನೂ ಹುಟ್ಟುವುದಕ್ಕೆ ಮೊದಲು ರಾಜಕಾರಣ ಪ್ರವೇಶಿಸಿದ ಶ್ರೀ ಜಿ.ಎಸ್.ಬಸವರಾಜ್ ರವರು 6 ದಶಕಗಳಿಗೂ ಹೆಚ್ಚಿಗೆ ರಾಜಕಾರಣ ಮಾಡಿದ್ದಾರೆ. ನಾನೂ ಸಹ 35 ವರ್ಷಗಳ ಕಾಲ ನಿರಂತರವಾಗಿ ಅವರ ಜೊತೆ ರಾಜಕಾರಣ ಹಾಗೂ ಸಮಾಜ ಸೇವೆ ಮಾಡುತ್ತಾ ಬಂದಿದ್ದೇನೆ.

ಅವರು ಬಹತೇಕ ಚುನಾವಣಾ ರಾಜಕೀಯ ಯಾತ್ರೆಗೆ ಅಂಕಿತ ಹಾಕಲು ಯೋಚಿಸಿದ್ದಾರೆ. ನಾನು 1992 ರಿಂದ 2008 ರವರೆಗೆ 16 ವರ್ಷಗಳ ಕಾಲ ಕಾಂಗ್ರೇಸ್ ಪಕ್ಷದಲ್ಲಿ ರಾಜಕಾರಣ ಮಾಡಿ, ರಾಜಕೀಯ ಬೇಡ ಎಂದು ನಿರ್ಧಾರ ಮಾಡಿದ್ದೆ.

ಈಗ ಶ್ರೀ ಜಿ.ಎಸ್.ಬಸವರಾಜ್ ರವರು ಚುನಾವಣಾ ರಾಜಕೀಯ ನಿವೃತ್ತಿ ನಂತರ, ನಾನು ಏನು ಮಾಡಬೇಕು ಎಂಬ ಬಗ್ಗೆ ಚಿಂತನೆ ಕಾಡುತ್ತಿದೆ. ನಮ್ಮ ಪರಿಕಲ್ಪನೆ ಜಾರಿಗಾಗಿ ಗಟ್ಟಿ ನಾಯಕತ್ವದ ಹುಡುಕಾಟ ಆರಂಭವಾಗಿದೆ. ಎಲ್ಲದರ ಬಗ್ಗೆಯೂ ಸಮಾವೇಶದಲ್ಲಿ ಸೂಕ್ತ ನಿರ್ಧಾರ  ಘೋಷಣೆ ಮಾಡಲಾಗುವುದು.