11th December 2024
Share

TUMAKURU:SHAKTHIPEETA FOUNDATION

HAL INSPECTION

 ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ದಿನಾಂಕ:03.01.2016 ರಂದು ತುಮಕೂರು ಜಿಲ್ಲೆ, ಗುಬ್ಬಿ ಹೆಚ್.ಎ.ಎಲ್ ಘಟಕ ಶಂಕುಸ್ಥಾಪನೆ ಮಾಡಿ, 2018 ಕ್ಕೆ ಲೋಕಾರ್ಪಣೆ ಮಾಡಿ, ಇಲ್ಲಿನ ರೈತರ ಮಕ್ಕಳಿಗೆ ಉದ್ಯೋಗ ನೀಡುವುದಾಗಿ ಘೋಷಣೆ ಮಾಡಿದ್ದು ಇತಿಹಾಸ.

 ಅಂದಿನ ಸಭೆಯಲ್ಲಿ ಆಗಿನ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರು ಭಾಗವಹಿಸಿದ್ದರು, ಅಂದಿನಿಂದ ಇಲ್ಲಿಯವರೆಗೂ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಆನೇಕ ಪತ್ರ ವ್ಯವಹಾರ ನಡೆಸಿದ್ದರೂ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ದಿಶಾ ಸಮಿತಿ ಸ್ಥಳೀಯರಿಗೆ ಉದ್ಯೋಗ ಮತ್ತು ಇತರೆ ಸೌಕರ್ಯ ನೀಡಲು ನಿರ್ಣಯ ಮಾಡಿದ್ದರೂ, ಗುಬ್ಬಿ ಸಿಐಟಿ ಇಂಜಿನಿಯರಿಂಗ್ ಕಾಲೇಜಿನಿಂದ ಸಂತ್ರಸ್ಥರ ಸಮೀಕ್ಷೆ ಮಾಡಿ ವರದಿ ಸಲ್ಲಿಸಿದ್ದರೂ, ಇದೂವರೆಗೂ ಯಾವುದೇ ಪ್ರಯೋಜನವಾಗಿಲ್ಲ.

PRESS MEET

ದಿನಾಂಕ:13.02.2023 ರಂದು ಹೆಚ್.ಎ.ಎಲ್ ಘಟಕ ಲೋಕಾರ್ಪಣೆ ಮಾಡಲು ಪ್ರಧಾನಿಯವರು ಬರುತ್ತಿರುವುzರಿಂದ, ಪ್ರಧಾನಿಯವರ ಹಾಗೂ ರಾಜ್ಯದ ಮುಖ್ಯಮಂತ್ರಿಯವರ ಗಮನ ಸೆಳೆಯಲು, ದಿನಾಂಕ:10.01.2023 ರಂದು ಬೆಳಿಗ್ಗೆ 10 ಘಂಟೆಗೆ, ಗುಬ್ಬಿ ತಹಶೀಲ್ಧಾರ್ ಮೂಲಕ ಪ್ರಧಾನಿಯವರಿಗೆ ಪಕ್ಷಾತೀತವಾಗಿ, ಎಲ್ಲಾ ರಾಜಕೀಯ ಪಕ್ಷಗಳ, ಸಂಘಸಂಸ್ಥೆಗಳ ಮತ್ತು ಭೂ ಸಂತ್ರಸ್ಥರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗುವುದು. ಆದ್ದರಿಂದ ಆಸಕ್ತರು ಗುಬ್ಬಿ ಪ್ರವಾಸಿ ಮಂದಿgದÀ ಬಳಿ ಆಗಮಿಸಲು ಈ ಮೂಲಕ ಕೋರಿದೆ.

TUMAKURU IB DISCUSSION

ಮನವಿಯ ಪ್ರಮುಖ ಅಂಶಗಳು

  1. ತುಮಕೂರು ಜಿಲ್ಲೆ, ಗುಬ್ಬಿ ಹೆಚ್.ಎ.ಎಲ್ ಘಟಕ ಸೇರಿದಂತೆ, ದೇಶದ ಯಾವುದೇ ಭಾಗದಲ್ಲಿ, ಕೇಂದ್ರ ಸರ್ಕಾರದಿಂದ  ಬೃಹತ್ ಕೈಗಾರಿಕೆ ಸ್ಥಾಪನೆ ಮಾಡಿದರೆ, ಸ್ಥಳೀಯರಿಗೆ, ಭೂ ಸಂತ್ರಸ್ಥರಿಗೆ, ಹೆಚ್.ಟಿ.ಲೈನ್ ಸಂತ್ರಸ್ತರಿಗೆ ಉದ್ಯೋಗ ನೀಡಲು ಡಾ.ಸರೋಜಿನಿ ಮಹಿಷಿ ಮಾದರಿಯಲ್ಲಿ, ಕಾನೂನು ಮತ್ತು ನಿಯಮ ರೂಪಿಸುವುದು.
  2. ತುಮಕೂರು ಜಿಲ್ಲೆ, ಗುಬ್ಬಿ ಹೆಚ್.ಎ.ಎಲ್ ಘಟಕ ಸೇರಿದಂತೆ, ದೇಶದ ಯಾವುದೇ ಭಾಗದಲ್ಲಿ, ಕೇಂದ್ರ ಸರ್ಕಾರದಿಂದ  ಬೃಹತ್ ಕೈಗಾರಿಕೆ ಸ್ಥಾಪನೆ ಮಾಡಿದರೆ, ಸುತ್ತ ಮುತ್ತ 2.5 ಕೀಮೀ. ನಿಂದ 10 ಕೀಮೀ ವ್ಯಾಪ್ತಿಯವರೆಗೆ ಸ್ಮಾರ್ಟ್ ವಿಲೇಜ್/ರುರ್ಬನ್  ಮಾದರಿಯಲ್ಲಿ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವುದು.
  3. ತುಮಕೂರು ಜಿಲ್ಲೆ, ಗುಬ್ಬಿ ಹೆಚ್.ಎ.ಎಲ್ ಘಟಕದ ಭೂ ಹಾಗೂ ಹೆಚ್.ಟಿ.ಲೈನ್ ಸಂತ್ರಸ್ತರಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ನೀಡಿದ ಭರವಸೆಯಂತೆ, ನಿವೇಶನ ಮತ್ತು ಮನೆ ಯನ್ನು ನೀಡುವುದು.
  4. ತುಮಕೂರು ಜಿಲ್ಲೆ, ಗುಬ್ಬಿ ಹೆಚ್.ಎ.ಎಲ್ ಘಟಕ ಸುತ್ತ ಮುತ್ತ 2.5 ಕೀಮೀ. ನಿಂದ 10 ಕೀಮೀ ವ್ಯಾಪ್ತಿಯವರೆಗೆ ಹೇಮಾವತಿ ನದಿ ನೀರಿನಿಂದ ಮೈಕ್ರೋ ಇರ್ರಿಗೇಷನ್ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವುದು.
  5. ತುಮಕೂರು ಜಿಲ್ಲೆ, ಗುಬ್ಬಿ ಹೆಚ್.ಎ.ಎಲ್ ವಿಸ್ತರಣಾ ಘಟಕ ಸೇರಿದಂತೆ, ಎರೋಸ್ಪೇಸ್ ಹಬ್, ಡಿಫೆನ್ಸ್ ಹಬ್, ಎರೋಸ್ಪೇಸ್ ಕಾರಿಡಾರ್ ಮತ್ತು ಡಿಫೆನ್ಸ್ ಕಾರಿಡಾರ್ ಯೋಜನೆಗಳಿಗೆ 2047 ರವೆಗೆ ಕರ್ನಾಟಕ ರಾಜ್ಯದಲ್ಲಿ ರೂ 5 ಲಕ್ಷಕೋಟಿ ಹೂಡಿಕೆ ಮಾಡಲು ಘೋಷಣೆ ಮಾಡುವುದು.
  6. ತುಮಕೂರು ಜಿಲ್ಲೆ, ಗುಬ್ಬಿ ಹೆಚ್.ಎ.ಎಲ್ ವಿಸ್ತರಣಾ ಘಟಕಕ್ಕೆ ಎಫ್,ಸಿ ಆಕ್ಟ್ ಪ್ರಕಾರ, ಹೆಚ್.ಎ.ಎಲ್ ಕೇಳಿರುವ ಅಂದಾಜು 1300 ಎಕರೆ ಅರಣ್ಯ ಜಮೀನಿನ್ನು, ಕರ್ನಾಟಕ ರಾಜ್ಯ ಸರ್ಕಾರ ಮಂಜೂರು ಮಾಡುವ ಹಾಗೂ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಕೈಗೊಳ್ಳುವ ಯೋಜನೆ ಬಗ್ಗೆ ಘೋಷಣೆ ಮಾಡುವುದು.
  7. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯದ ಮೇರೆಗೆ, ಕರ್ನಾಟಕ ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಾದ ಶ್ರೀ ರಾಕೇಶ್ ಸಿಂಗ್  ಅಧ್ಯಕ್ಷತೆಯಲ್ಲಿ ನಡೆದ ಸಭೆ,  ಆಗಿನ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳೆರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಮೇರೆಗೆ, ಆಗಿನ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ತಮಗೆ ಬರೆದ ಮನವಿ ಮೇರೆಗೆ, ಕರ್ನಾಟಕ ರಾಜ್ಯದ ನದಿ ಜೋಡಣೆ ಮಾಡಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ, ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನೆ ರೂಪಿಸಿ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ನೀಡಲು ವಿಶೇಷ ಯೋಜನೆ ರೂಪಿಸುವುದು.
  8. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರ ಅಧ್ಯಕ್ಷತೆಯ ತುಮಕೂರು ಜಿಲ್ಲಾ ದಿಶಾ ಸಮಿತಿ ನಿರ್ಣಯದ ಮೇರೆಗೆ, ತುಮಕೂರು ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಿದ್ದು, ದೇಶದಲ್ಲಿಯೇ ಮಾದರಿ ಯೋಜನೆಗೆ, ಸ್ಪೆಷಲ್ ಪ್ಯಾಕೇಜ್  ಮಂಜೂರು ಮಾಡುವುದು.
  9. ವಿಶ್ವದ 108 ಶಕ್ತಿಪೀಠಗಳ ಹಾಗೂ ದೇಶದ 12 ಜ್ಯೋತಿರ್ಲಿಂಗಗಳ ಡಿಜಿಟಲ್  ದಾಖಲೆ, ಮ್ಯಾನ್ ಸ್ಕ್ರಿಪ್ಟ್ ಮತ್ತು ಮ್ಯೂಸಿಯಂ ಮಾಡಲು ಹಾಗೂ ನದಿ ನೀರು ಮತ್ತು ಶಕ್ತಿಪೀಠಗಳ ಸಂಬಂದದ ಬಗ್ಗೆ ಅಧ್ಯಯನ ಮಾಡಿ, ದೇಶದ ಎಲ್ಲಾ ಜಲಸಂಗ್ರಹಾಗಾರಗಳನ್ನು ಗಂಗಾಮಾತೆ ದೇವಾಲಯ ಎಂದು ಘೋಷಣೆ ಮಾಡಲು, ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯ ಅಡಿಯಲ್ಲಿನ ಇಂದಿರಾ ಗಾಂದಿ ರಾಷ್ಟ್ರೀಯ ಕಲಾ ಕೇಂದ್ರಕ್ಕೆ ಆದೇಶ ನೀಡುವುದು.

ತಮ್ಮ ಸಲಹೆಗಾಗಿ ಬಹಿರಂಗ ಮನವಿ.

ಕುಂದರನಹಳ್ಳಿ ರಮೇಶ್, ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.