22nd December 2024
Share

TUMAKURU:SHAKTHIPEETA FOUNDATION

ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಭಿನಂದನಾ ಗ್ರಂಥವನ್ನು ಸಾಹಿತಿ ಶ್ರೀ ಕವಿತಾಕೃಷ್ಣರವರ ತಂಡ ಸಿದ್ಧಪಡಿಸುತ್ತಿದೆ.

ಜಿಎಸ್‍ಬಿ ರವರ ಮಹಾದಾಸೆ, ಅವರ ರಾಜಕೀಯ ಜೀವನದ 6 ದಶಕಗಳ ಕಾಲ, ಹಲವಾರು ಮುಖ್ಯ ಮಂತ್ರಿಯವರ ಕಾಲದಲ್ಲಿ ಮಂಜೂರು ಮಾಡಿಸಿದ ಯೋಜನೆಗಳು, ಪ್ರಯತ್ನ ಮಾಡಿದ ಯೋಜನೆಗಳು, ನನೆಗುದಿಗೆ ಬಿದ್ದಿರುವ ಯೋಜನೆಗಳು, ಮಂಜೂರಾಗದೇ ಇರುವ ಯೋಜನೆಗಳ ಮಾಹಿತಿಯನ್ನು, ಮತದಾರರ ಮುಂದೆ ಇಡುವುದಾಗಿದೆ ಹಾಗೂ ಅವರ ಅಭಿವೃದ್ಧಿ ನಾಯಕತ್ವವನ್ನು, ಅವರೇ ‘ಆತ್ಮಾವಲೋಕನ ಮಾಡಿಕೊಳ್ಳುವುದಾಗಿದೆ.

ಜೊತೆಗೆ ಮುಂದಿನ ಒಂದು ವರ್ಷದ ಅವರ ಸಂಸದರ ಅವಧಿಯಲ್ಲಿ, ಮುಂದಿನ 2047 ನೇ ಇಸವಿವರೆಗೆ, ತುಮಕೂರು ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಯೋಜನೆಗಳ ಮಂಜೂರಾತಿಗೆ ಪತ್ರವ್ಯಹಾರದ ಜೊತೆಗೆ, ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿದೆ. ‘ಆಡು ಮುಟ್ಟದ ಸೊಪ್ಪಿಲ್ಲಜಿಎಸ್ಬಿ ಕೈ ಹಾಕದ ಯೋಜನೆಗಳಿಲ್ಲ ಎಂಬ ವಾಕ್ಯ ರಾಜ್ಯದ ಚುನಾಯಿತ ಜನಪ್ರತಿನಿಧಿಗಳಿಗೆ ಸ್ಪೂರ್ತಿಯಾಗ ಬೇಕಲ್ಲವೇ?

ತುಮಕೂರು ವಿಷನ್ ಡಾಕ್ಯುಮೆಂಟ್-2047 ಅನುಷ್ಠಾನ ಜಾಗೃತಿಗಾಗಿ, 365 ತಂಡಗಳನ್ನು ರಚಿಸಲು ಭರದ ಸಿದ್ಧತೆ ನಡೆದಿದೆ. ಮುಂದಿನ 25 ವರ್ಷಗಳ ಕಾಲ, ವರ್ಷದ ಪ್ರತಿಯೊಂದು ದಿವಸವೂ ಅಭಿವೃದ್ಧಿ ಚರ್ಚೆ ನಡೆಸುವಂತೆ, 365 ಯೋಜನೆಗಳ ಗ್ರೂಪ್ ಮಾಡಲು ಆರಂಭಿಸಲಾಗಿದೆ.

ಅವರ ಜೀವನ ಚರೀತ್ರೆ ಹಾಗೂ ಅವರ ಅಭಿವೃದ್ದಿ ಅನುಭವಗ¼/ಮಜಲುಗಳÀ ಆಧಾರದ ಮೇಲೆ ಸಿದ್ಧಗೊಳ್ಳುತ್ತಿರುವ ತುಮಕೂರು ವಿಷನ್ ಡಾಕ್ಯುಮೆಂಟ್-2047 ರೂಪುರೇಷೆ ನಿರ್ಧರಿಸಲು, ಜನವರಿ 11 ಮತ್ತು 12 ರಂದು ರಹಸ್ಯ ಸ್ಥಳದಲ್ಲಿ, ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ, ಎಲ್ಲರ ಮೊಬೈಲ್‍ಗಳನ್ನು ಅಫ್ ಮಾಡಿಕೊಂಡು, ಅಲ್ಲಿಯೇ ಊಟ, ತಿಂಡಿ ತಿಂದುಕೊಂಡು, ಜಿಎಸ್‍ಬಿರವರ ಅನುಭವ ಹಾಗೂ ಅವರ ಅಭಿವೃದ್ಧಿ ಅಭಿಮಾನಿಗಳ ಅನುಭವಗಳ ಡಿಜಿಟಲ್ ದಾಖಲೆ ಮಾಡಲು ಚಿಂತನೆ ನಡೆಸಲಾಗಿದೆ.

ಅಭಿವೃದ್ಧಿ ಆಸಕ್ತರು, ಸಂಸದರ ಕಚೇರಿಯಲ್ಲಿ ನೊಂದಾಯಿಸಿಕೊಂಡು, ಎರಡು ದಿವಸದ ಸಭೆಗೆ ಬರಲು ಬಹಿರಂಗ ಆಹ್ವಾನ ನೀಡಲಾಗಿದೆ. ನಮ್ಮನ್ನು ಕರೆಯಲಿಲ್ಲ ಎಂಬ ಕುಟುಕು ಬೇಡ, ಇದು ಡಿಜಿಟಲ್ ಯುಗ, ಈ ಆಹ್ವಾನವೇ ವೈಯಕ್ತಿಕ ಆಮಂತ್ರಣ ಎಂದು ಭಾವಿಸಿ ಆಸಕ್ತರು ಭಾಗವಹಿಸ ಬಹುದಾಗಿದೆ. ಇಲ್ಲಿ ಪಕ್ಷ ಇಲ್ಲ, ಜಾತಿ ಇಲ್ಲ, ಅಭಿವೃದ್ಧಿ ತಪಸ್ಸು ಅಷ್ಟೆ.

ಸಂಸದರ ಕಚೇರಿ ಸಿಬ್ಬಂದಿ ಒಗ್ಗಟ್ಟಾಗಿ ಎಲ್ಲರನ್ನೂ ಜೊತೆಗೂಡಿಸಲು, ಒಂದೇ ಅಭಿವೃದ್ಧಿ ವೇದಿಕೆಗೆ ಕರೆ ತರಲು ಪ್ರಯತ್ನ ಮಾಡುವುದು ಅಗತ್ಯವಾಗಿದೆ.  ಒಬ್ಬರ ಮೇಲೆ ಒಬ್ಬರು ತೋರುವ ಪ್ರವೃತ್ತಿಗೆ ಇತಿಶ್ರೀಹಾಡಿ. ಗುಂಪುಗಾರಿಕೆ ಬಿಡಿ.

ತುಮಕೂರು ಜಿಲ್ಲೆಯ 330 ಗ್ರಾಮಪಂಚಾಯಿತಿ, 11 ನಗರ ಸ್ಥಳೀಯ ಸಂಸ್ಥೆಗಳು ಹಾಗೂ ತುಮಕೂರು ನಗರದ 326 ಬಡಾವಣೆಗಳ ಅಭಿವೃದ್ಧಿ ಆಸಕ್ತರ ತಂಡದ ಅಗತ್ಯವಿದೆ. 365 ಅಭಿವೃದ್ಧಿ ತಂಡಗಳು ಅವರ ಮಟ್ಟದಲ್ಲಿ ನಡೆಸುವ ಸಭೆಯಲ್ಲಿ ಭಾಗವಹಿಸದ್ದವರ ಗ್ರೂಪ್ ಫೋಟೋವನ್ನು, ತುಮಕೂರು ವಿಷನ್ ಡಾಕ್ಯುಮೆಂಟ್-2047 ನಲ್ಲಿ ಪ್ರಕಟಿಸಬೇಕಿದೆ.

ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರ ಅಧ್ಯಕ್ಷತೆಯಲ್ಲಿ, ಈ ಗ್ರಂಥಗಳು, ಸರ್ವಪಕ್ಷಗಳ ನಾಯಕರುಗಳ ಸಮ್ಮುಖದಲ್ಲಿ ಬಿಡುಗಡೆ ಆಗುವುದರ ಜೊತೆಗೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿಗೆ ಮಾದರಿಯಾಗಬೇಕಿದೆ.

ಆದ್ದರಿಂದ ಈ ಎರಡು ದಿವಸ ಒಂದೇ ಕಡೆ, ಪ್ರತ್ಯೇಕವಾಗಿ ಎರಡು ಗುಂಪು ಚೆರ್ಚೆ ನಡೆಯಲಿದೆ. ಜಿಎಸ್‍ಬಿ.ರವರು ಎರಡು ದಿವಸವೂ ಭಾಗವಹಿಸಲಿದ್ದಾರೆ.