22nd December 2024
Share

TUMAKURU:SHAKTHIPEETA FOUNDATION

ರಾಜ್ಯದ ಮಾಜಿ ಪ್ರಧಾನಿಯವರು, ಮಾಜಿ ಮುಖ್ಯಂತ್ರಿಯವರು ಹಾಗೂ ರಾಜಕೀಯ ಪಕ್ಷಗಳ ಅಧ್ಯಕ್ಷರುಗಳನ್ನು ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಅವರ ಮತ್ತು ಅವರ ಪಕ್ಷದ ನಿಲುವುಗಳು, ಅಭಿಪ್ರಾಯಗಳು ಮತ್ತು ಕನಸಿನ  ಪರಿಕಲ್ಪನೆಗಳ ಮಾಹಿತಿ ಸಂಗ್ರಹ ಮಾಡಲು ಚಾಲನೆ ನೀಡಲಾಯಿತು.

ಆರಂಭದಲ್ಲಿ ನಮ್ಮವರೇ ಆದ ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ.ದೇವೇಗೌಡರನ್ನು ಬೇಟಿಯಾಗುವ ಮೂಲಕ ಚಾಲನೆ ನೀಡುವುದಾಗಿ ಮೊದಲೇ ಘೋಷಣೆ ಮಾಡಲಾಗಿತ್ತು.  ಅವರ ಮನೆಯವರಿಗೂ ಹೋದ ನಂತರ, ನನಗೆ ಐಡಿಯಾ ಹೊಳೆದಿದ್ದು, ಅವರುಗಳನ್ನು ಭೇಟಿಯಾಗುವ ಮೊದಲು, ಅವರ ನೀರಾವರಿ ಸಲಹಾಗಾರರನ್ನೂ, ಅಭಿವೃದ್ಧಿ ಸಲಹಾಗಾರರನ್ನು ಭೇಟಿಯಾಗಿ ಸಮಾಲೋಚನೆ ಮಾಡುವುದಾಗಿತ್ತು.  

ಅಲ್ಲಿಂದಲೇ ವಿಧಾನಪರಿಷತ್ ಸದಸ್ಯರಾದ ಹಾಗೂ ಅಭಿವೃದ್ಧಿ ತಜ್ಞರಾದ ಶ್ರೀ ತಿಪ್ಪೆಸ್ವಾಮಿಯವರಿಗೆ ಮಾತನಾಡಿ ಸಮಯ ನಿಗದಿ ಮಾಡಿಕೊಳ್ಳಲಾಯಿತು. ಅವರೊಟ್ಟಿಗೆ ವಿವರವಾಗಿ ಸಮಾಲೋಚನೆ ನಡೆಸಲಾಯಿತು.

ನಂತರ ಪ್ರಧಾನಿಯವರ ಹಾಗೂ ಶ್ರೀ ಹೆಚ್.ಡಿ.ಕುಮಾರಸ್ವಾಮಿಯವರ ನೀರಾವರಿ ಸಲಹಾಗಾರರು ಹಾಗೂ ನೀರಾವರಿ ತಜ್ಞರಾದ ಶ್ರೀ ವೆಂಟಟರಾವ್‍ರವರÀ ಸಮಯ ನಿಗದಿ ಮಾಡಿಕೊಂಡು, ಅವರೊಂದಿಗೂ ವಿವರವಾಗಿ ಚರ್ಚೆ ನಡೆಸಲಾಯಿತು.

ಶ್ರೀ ದೇವೇಗೌಡರವರು ಮಾಡಿರುವ ಬಹಳಷ್ಟು ಅಧ್ಯಯನ ಮತ್ತು ಸಂಶೋಧನಾ ವರದಿ ಮತ್ತು ಪ್ರಧಾನಿಯವರಿಗೆ, ರಾಷ್ಟ್ರಪತಿಯವರಿಗೆ ಬರೆದಿರುವ ಪತ್ರಗಳ ಪ್ರತಿಗಳನ್ನೂ ನೀಡಿದ್ದಾರೆ. ಪ್ರತಿಯೊಂದು ಯೋಜನೆಯ ಬಗ್ಗೆ, ಓದಿದ ನಂತರ ಇನ್ನೂ ಬಹಳಷ್ಟು ಚರ್ಚೆ ನಡೆಸಬೇಕಾಗಿದೆ. ನಿಜಕ್ಕೂ ಚರ್ಚೆ ಅರ್ಥಪೂರ್ಣವಾಗಿತ್ತು. ಜೊತೆಯಲ್ಲಿ ಶ್ರೀ ವೇದಾನಂದಮೂರ್ತಿಯವರು ಇದ್ದರು.

ಶಕ್ತಿಪೀಠ ಫೌಂಡೇಷನ್ ಮಾಡಲು ಉದ್ದೇಶಿರುವ ಪ್ರಧಾನ ಮಂತ್ರಿಯವರು ಹಾಗೂ ಮುಖ್ಯ ಮಂತ್ರಿಯವರ ಯೋಜನೆಗಳ ಮ್ಯೂಸಿಯಂನಲ್ಲಿ ಮೊದಲು ಆರಂಭಿಸಿರುವುದು, ಶ್ರೀ ಹೆಚ್.ಡಿ.ದೇವೇಗೌಡರವರ ಖಾತೆ.

ಜಲಗ್ರಂಥದಲ್ಲಿ ಎಲ್ಲಾ ಮಾಜಿ ಮುಖ್ಯಮಂತ್ರಿಯವರ ಹಾಗೂ ರಾಜಕೀಯ ಪಕ್ಷಗಳ ನಿಲವು ಬಗ್ಗೆ ಬೆಳಕು ಚೆಲ್ಲಿ, ನಂತರ ಸರ್ವಪಕ್ಷಗಳ ಒಮ್ಮತದ ನಿರ್ಣಯಕ್ಕೆ ಶ್ರಮಿಸುವುದು ವಿಶ್ವದ 108 ಶಕ್ತಿಪೀಠ ದೇವತೆಗಳ ಆದೇಶವಾಗಿದೆ.