26th April 2024
Share

TUMAKURU:SHAKTHI PEETA FOUNDATION

ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. 100 ನೇ ವರ್ಷದ ಅಭಿವೃದ್ಧಿ ಆಚರಣೆಗೆ ಮಾನ್ಯ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ತಳಪಾಯ ಹಾಕುತ್ತಿದ್ದಾರೆ.

ವಿಪರ್ಯಾಸ ಎಂದರೆ, ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ.ದೇವೇಗೌಡರವರು ಬೇಟಿಯಾಗಿ, ನೀರಾವರಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯಾವಾಗುತ್ತಿದೆ, ತಾವಾದರೂ ಸರಿದೂಗಿಸಿ ಎಂದು ಮನವಿ ಮಾಡಿದಾಗ ಮೋದಿಯವರು ಹೇಳಿದ ಮಾತು,

 ನಮ್ಮವರೇ ಗುಜರಾತ್ ಆಳ್ವಿಕೆ ಮಾಡುತ್ತಿದ್ದರೂ ನರ್ಮದಾ ನದಿ ಯೋಜನೆಯನ್ನು ನನ್ನ ಕನಸಿನಂತೆ ಮಾಡಲು ಸಾಧ್ಯಾವಿಲ್ಲ ಎಂದು ಹೇಳಿದರೂ ಎಂದು ಮಾಧ್ಯಮಗಳಲ್ಲಿ ಪ್ರಕಟವಾಯಿತು. ಇದು ಕಟು ಸತ್ಯವಾದ ಮಾತು, ರಾಜಕಾರಣಕ್ಕೆ ಯಾವ ರೀತಿ ಬೇಕಾದರೂ ವ್ಯಾಖ್ಯಾನ ಮಾಡಬಹುದು. ಪ್ರಧಾನಿಯವರ ಅಂತರಾಳದ ನೋವು ಇದು.

 ನೋಡಿ ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮತ್ತು ಆಗಿನ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾಳಕಿಹೊಳೆರವರು ಮಾಡಿದ ರಾಜ್ಯದ ನದಿಜೋಡÀಣೆ ಮತ್ತು ಊರಿಗೊಂದು ಕೆರೆ ಕೆರೆಗೆ ನದಿ ನೀರು ಯೋಜನಾ ವರದಿ ಆದೇಶವನ್ನು, ಅವರದೇ ಸರ್ಕಾರದ ಅಧಿಕಾರಿಗಳು ಮಾಡಿಲ್ಲ ಎಂದರೆ ಏನರ್ಥ?

ವಿರೋಧ ಪಕ್ಷಗಳು ಸಹ ಬಾಯಿ ಬಿಟ್ಟಿಲ್ಲ, ಆಡಳಿತ ಪಕ್ಷದವರೂ ಸಹ ಚುರುಕಾಗಿಲ್ಲ. ಮೋದಿಯವರ ಬಳಿ ದೂರು ಕೊಂಡೊಯ್ಯಲೇ ಬೇಕಲ್ಲವೇ? ಬೇರೆ ದಾರಿ ಏನಿದೆ? ನ್ಯಾಯಾಲಯಕ್ಕೆ ದಾವೆ ಹೂಡಲು ವಕೀಲರ ಹುಡುಕಾಟ ಆರಂಭವಾಗಿದೆ. ನಾನೊಬ್ಬ ರೈತನಾಗಿಯೇ ವಾದ ಮಾಡಲು ಸಜ್ಜಾಗುತ್ತಿದ್ದೇನೆ.

ನೀರಾವರಿ ತಜ್ಞರಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಈ ರಾಜ್ಯದ ಮುಖ್ಯಮಂತ್ರಿಯವರು, ಇನ್ನೊಬ್ಬ ನೀರಾವರಿ ತಜ್ಞರಾದ ಶ್ರೀ ಅನಿಲ್ ಕುಮಾರ್ ರವರೇ ಅವರ ಆಪ್ತ ಕಾರ್ಯದರ್ಶಿಯವರು, ಈಗ ನಿರೀಕ್ಷೆ ಮಾಡದೇ ಇನ್ನೂ ಯಾವಾಗ ನೀರಿಕ್ಷೆ ಮಾಡಬೇಕು ನೀವೇ ಹೇಳಿ.

ಡಾ. ಅಂಬೇಡ್ಕರ್‍ರವರ ಸಂವಿಧಾನದಂತೆ ಸಾಮಾಜಿಕ ನ್ಯಾಯ ಪ್ರತಿಪಾದನೆ ಮಾಡಬೇಕಾದವರು ಜಲಸಂಪನ್ಮೂಲ ಸಚಿವರಾದ ಶ್ರೀ ಗೋವಿಂದ ಕಾರಜೋಳರವರು, ಕಾನೂನು ಪಂಡಿತರೇ ಸಣ್ಣ ನೀರಾವರಿ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರು. ಎಲ್ಲರೂ ಜಾಣಕರುಡರಾದರೇ, ಹೇಗೆ?

ಚುನಾವಣಾ ಪ್ರಣಾಳಿಕೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಜಲ ಬುರುಡೆ ಹೊಡೆಯಲು ಆರಂಭಿಸಲು ಸಜ್ಜಾಗುತ್ತಿದ್ದಾರೆ. ಎಷ್ಟು ವರ್ಷ ಕೇಳಬೇಕು ಇವರ ನಾಟಕದ ಮಾತುಗಳನ್ನು. ನಾನಂತೂ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರ ಹಾಗೂ ಮಾಜಿ ಮುಖ್ಯಮಂತ್ರಿಯವರ ಬಳಿ ಜಲ ಸಮಾಲೋಚನೆ ಮಾಡಲು ಆರಂಭಿಸಿದ್ದೇನೆ.

ರಾಜ್ಯದ 7 ನದಿ ಪಾತ್ರಗಳಲ್ಲಿನ ಅಂದಾಜು 3796.10 ಟಿಎಂಸಿ ಅಡಿ ನೀರಿನ ಬಳಕೆ ಲೆಕ್ಕ ಹಾಗೂ ಭವಿಷ್ಯದ ಯೋಜನೆಗಳ ಮಾಹಿತಿಯನ್ನು ನಿಖರವಾಗಿ ಹೇಳುವ ಸರ್ಕಾರದ ತಾಕತ್ತು ಪ್ರದರ್ಶನವಾಗಬೇಕಿದೆ. ನದಿ ನೀರಿನಲ್ಲಿ ಸಾಮಾಜಿಕ ನ್ಯಾಯದ ಪ್ರತಿಪಾದನೆ ಶಕ್ತಿಪೀಠ ಫೌಂಡೇಷನ್ ಮೊದಲ ಆಧ್ಯತೆ. ಬಾಯಿ ಇದ್ದವನು ಬರದಲ್ಲಿ ಬದುಕುತ್ತಾನೆ ಎಂಬುದು ರಾಜಕಾರಣಿಗಳ ಧೋರಣೆ?

ಶ್ರೀ ಗುರುಸಿದ್ಧರಾಮೇಶ್ವರರ 850 ನೇ ಜಯಂತಿ ದಿವಸ ಮುಖ್ಯಮಂತ್ರಿಯವರ ಆದೇಶಕ್ಕೆ ಬೆಲೆಕೊಡದ ಅಧಿಕಾರಿಗಳ ವಿರುದ್ಧ ಜಲಸಮರ ಹಾಗೂ ರಾಜಕೀಯ ಪಕ್ಷಗಳ ಜಲನಾಟಕ’ ಬಯಲು ಮಾಡುವ ‘ಜಲಪ್ರತಿಜ್ಞೆ ಮಾಡುತ್ತಿದ್ದೇನೆ.

ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ನನ್ನ ಸ್ನೇಹಿತರಾದ ಶ್ರೀ ಶಂಕರೇಗೌಡರೇ, ನೀವೂ ರಾಜ್ಯದ ನದಿಜೋಡಣೆ ನೋಡೆಲ್ ಆಫೀಸರ್ ಮತ್ತೊಮ್ಮೆ ನೆನಪಿಸುತ್ತಿದ್ದೇನೆ, ದಯವಿಟ್ಟು ಒಂದು ವರದಿ ನೀಡಿ.  ಶಕ್ತಿಪೀಠ ಫೌಂಡೇಷನ್ ಕಾಲಮಿತಿ ಅವಧಿ ಪೂರ್ಣಗೊಂಡಿದೆ. 108 ಶಕ್ತಿಪೀಠಗಳ ಕೋಪ ಆರಂಭವಾಗುವ ಮುನ್ಸೂಚನೆ ಇದೆ.

ನೀರಾವರಿ ಬಗ್ಗೆ ಆಸಕ್ತಿ ಇರುವವರು ಜಲಮಾಹಿತಿ ಹಂಚಿಕೊಳ್ಳಲು ಒಂದು ಮನವಿ.