22nd November 2024
Share

TUMAKURU:SHAKTHIPEETA FOUNDATION

ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚು ಅನುದಾನ ಪಡೆಯಲು ಸ್ಟ್ರಾಟಜಿ ಸಿದ್ಧಪಡಿಸಲು, ಕರ್ನಾಟಕ ರಾಜ್ಯದ ಮೌಲ್ಯಮಾಪನ ಪ್ರಾಧಿಕಾರದ ಜೊತೆ ಎಂ.ಓ.ಯು ಮಾಡಿಕೊಂಡ ನಂತರ, ಶಕ್ತಿಪೀಠ ಫೌಂಡೇಷನ್ ಸಹಭಾಗಿತ್ವದಲ್ಲಿ ನಿರಂತರವಾಗಿ ಶ್ರಮಿಸಲಾಗುತ್ತಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

ಇಲ್ಲಿಯವರೆಗೂ ಸರಣಿ ಸಭೆ ನಡೆದ ವಿವರ.

  1. ದಿನಾಂಕ: 08.05.2022 ರಂದು ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ಕುಂದರನಹಳ್ಳಿಯಲ್ಲಿ ಸಭೆ- ಪ್ರಾಯೋಜಕತ್ವÀ ಶಕ್ತಿಪೀಠ ಫೌಂಡೇಷನ್-ಕೆ.ಆರ್.ಸೋಹನ್‍ರವರು ಸಹಕಾರ: ಶ್ರೀ ಸಿದ್ಧರಾಮಣ್ಣನವರು, ಶ್ರೀ ವಿಶ್ವನಾಥ್‍ನವರು, ಶ್ರೀ ಮಹೇಶ್‍ರವರು ಮತ್ತು ತಂಡ.
  2. ದಿನಾಂಕ: 29.05.2022 ರಂದು ತುಮಕೂರು ನಗರದ ಆರ್.ಎಸ್.ಕಲ್ಯಾಣ ಮಂಟಪ  ರಾಜ್ಯ ಮಟ್ಟದ ಸಭೆಯಲ್ಲಿ ಉಪನ್ಯಾಸ – ಆಯೋಜಿಸಿದವರು ರಾಜ್ಯ ಮಟ್ಟದ ಬಿಜೆಪಿ ರೈತ ಮೋರ್ಚಾ. ಸಹಕಾರ: ರಾಜ್ಯಸಭಾ ಸದಸ್ಯ ಶ್ರೀ ಕಾಡಾಡಿ ಈರಣ್ಣನವರು ಮತ್ತು ಶ್ರೀ ಶಿವಪ್ರಸಾದ್‍ರವರು.
  3. ದಿನಾಂಕ: 16.06.2022 ರಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ತುಮಕೂರು ಜಿಲ್ಲಾ ಜಲಸಂವಾದ  ಸಭೆ- ಆಯೋಜಿಸಿದವರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಕಾರ: ಶ್ರೀ ಸಿದ್ದಲಿಂಗಪ್ಪನವರು.  ಶ್ರೀ ಸಿ.ಕೆ.ಮಹೇಂದ್ರವರು, ಶ್ರೀ ಸಾಯಿ ಗುರುಸಿದ್ದಪ್ಪನವರು ಮತ್ತು ತಂಡ.
  4. ದಿನಾಂಕ: 21.06.2022 ರಂದು ತುಮಕೂರು ಜಿಲ್ಲೆ, ಕೊರಟಗೆರೆ ತಾಲ್ಲೋಕಿನ, ಹೊಲತಾಳು ಗ್ರಾಮದಲ್ಲಿ ತಲಪುರಿಕೆ ಸಂಶೋದನಾ ಸಭೆ- ಆಯೋಜಿಸಿದವರು ಕುರುಂಕೋಟೆ ಗ್ರಾಮಪಂಚಾಯಿತಿ ಅಧ್ಯಕ್ಷ, ಉಪಾಧ್ಯಾಕ್ಷ, ಸದಸ್ಯರು ಮತ್ತು ಪಿಡಿಓ, ಸಹಕಾರ: ಸಾಹಿತಿ ಮತ್ತು ಸಂಶೋಧಕ ಶ್ರೀ ಹೊಲತಾಳು ಸಿದ್ಧಗಂಗಯ್ಯ, ಶ್ರೀ ಮಣುವಿನ ಕುರಿಕೆ ಶಿವರುದ್ರಯ್ಯನವರು.
  5. ದಿನಾಂಕ: 28.06.2022 ರಂದು ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೋಕಿನ, ಬುಕ್ಕಾಪಟ್ಟದಲ್ಲಿ ಜಲಸಂವಾದ ಸಭೆ-ಆಯೋಜಿಸಿzವರುÀ ಶ್ರೀ ರಘುರಾಂ ರವರು. ಸಹಕಾರ: ಶ್ರೀ ಪುಟ್ಟಕಾಮಣ್ಣನವರು.
  6. ದಿನಾಂಕ: 06.07.2022 ರಂದು ತುಮಕೂರು ನಗರದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಚೇರಿಯಲ್ಲಿ ಸಭೆ- ಆಯೋಜಿಸಿದವರು ಶಕ್ತಿಪೀಠ ಫೌಂಡೇಷನ್ ಸಹಕಾರ: ಸಿಇಓ ಚಿ.ಕೆ.ಆರ್.ಸೋಹನ್‍ರವರು.
  7. ದಿನಾಂಕ:15.12.2022 ರಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಮ್ಮೇಳನದಲ್ಲಿ ತುಮಕೂರು ಜಿಲ್ಲೆಯ ಅಭಿವೃದ್ಧಿ ಆಯಾಮಗಳು ಸಂವಾದ, ಆಯೋಜಿಸಿದವರು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್. ಸಹಕಾರ: ದೆಹಲಿಯಲ್ಲಿ ಅತ್ಯಂತ ಪ್ರಮುಖ ಕಾರ್ಯ ಇದ್ದುದರಿಂದ ಸಭೆಗೆ ಹಾಜರಾಗಲು ಸಾಧ್ಯಾವಾಗಲಿಲ್ಲ.
  8. ದಿನಾಂಕ:23.01.2023 ಮತ್ತು 24.01.2023 ಎರಡು ದಿವಸಗಳ ಕಾರ್ಯಾಗಾರ ನಡೆಯಲಿದೆ-ಆಯೋಜಿಸುವವರು, ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೋಕು, ಮೂಕಾನನ ರೆಸಾರ್ಟ್, ವೆಸ್ಟರ್ ಘಾಟ್ ಫೌಂಡೇಷನ್, ಸಕಲೇಶಪುರ ರೆಸಾರ್ಟ್ ಓನರ್ಸ್ ಅಸೋಶಿಯೇಷನ್ ಮತ್ತು ಸಕಲೇಶಪುರ ಹೋ ಸ್ಟೇ ಓನರ್ಸ್ ಅಸೋಶಿಯೇಷನ್- ಸಹಕಾರ ಶ್ರೀ ವೇದಾನಂದಾಮೂರ್ತಿಯವರು ಮತ್ತು ತಂಡ. 

  ತುಮಕೂರಿನ ಶಕ್ತಿಪೀಠ ಫೌಂಡೇಷನ್ ಅಭಿವೃದ್ಧಿ ಪೀಠದ ಅಡಿಯಲ್ಲಿ ನವಕರ್ನಾಕ ವಿಷನ್ ಡಾಕ್ಯುಮೆಂಟ್-2047, ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯ ಹೆಚ್ಚು ಅನುದಾನ ಪಡೆಯಲು ಸ್ಟ್ರಾಟಜಿ, ಜಲಪೀಠ ಅಡಿಯಲ್ಲಿ ರಾಜ್ಯದ ಪ್ರತಿಯೊಂದು ಹನಿ ನೀರಿನ ಮಾಹಿತಿಯುಳ್ಳ ಜಲಗ್ರಂಥ ರಚನೆ ಮತ್ತು ಶಕ್ತಿಪೀಠ ಅಡಿಯಲ್ಲಿ ವಿಶ್ವದ 108 ಶಕ್ತಿಪೀಠಗಳ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ರಾಜ್ಯಾಧ್ಯಾಂತ ವಿವಿಧ ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ಸರಣಿ ಸಭೆಗಳನ್ನು ನಡೆಸುತ್ತಾ ಬಂದಿದೆ.

 ತುಮಕೂರಿನ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡವನ್ನು ಕೆಡವಿ ಹಾಕಿ, ಹೊಸದಾಗಿ ಕಟ್ಟಡ ನಿರ್ಮಾಣ ಆರಂಭಿಸಿದ ಹಿನ್ನಲೆಯಲ್ಲಿ ಸರಣಿ ಸಭೆಗಳನ್ನು ಆಯೋಜಿಸಲು ಹಾಗೂ ಆಯೋಜಿಸಿದ್ದ ಸಭೆಗಳಲ್ಲಿ ಭಾಗವಹಿಸಲು ಸ್ವಲ್ಪ ತೊಡಕಾಯಿತು.

  ಬೆಂಗಳೂರಿನಲ್ಲಿ ಶಕ್ತಿಪೀಠ ಫೌಂಡೇಷನ್ ಗೆಸ್ಟ್ ಹೌಸ್ ಆರಂಭಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಂದ ಮಾಹಿತಿ ಸಂಗ್ರಹಿಸುವ ಕಾರ್ಯ ಚುರುಕಾಗಿದ್ದರಿಂದ ಸಮಯದ ಆಭಾವವೂ ಆಯಿತು ಎಂದರೆ ತಪ್ಪಾಗಲಾರದು.

  ಹಿರಿಯ ಉನ್ನತ ಅಧಿಕಾರಿಗಳ ಸಲಹೆ ಪ್ರಕಾರ, ಯಾವುದಾದರೂ ಒಂದು ಕಚೇರಿಗೆ ಹೋಗಿ ಮಾಹಿತಿ ಪಡೆಯಲು ಸಮಾಲೋಚನೆ ಮಾಡುವುದು, ಚುನಾಯಿತ ಜನಪ್ರತಿನಿಧಿಗಳ, ಪರಿಣಿತ ತಜ್ಞರೊಂದಿಗೆ  ಮತ್ತು ವಿವಿಧ ಸಂಘ ಸಂಸ್ಥೆಗಳ ಪಧಾಧಿಕಾರಿಗಳಿಗೊಂದಿಗೆ ಚರ್ಚಿಸುವುದು ಸಹ ಒಂದು ಸಭೆಯಾಗಲಿದೆ. ಅವುಗಳನ್ನು ಸಹ ಸರಣಿ ಸಭೆಯಡಿಯಲ್ಲಿ ದಾಖಲಿಸಿ ಎಂದು ಸಲಹೆ ನೀಡಿದ್ದಾರೆ.

  ಮೂಕಾನನ ರೆಸಾರ್ಟ್‍ನಲ್ಲಿ ನಡೆಯುವ ಎರಡು ದಿವಸಗಳ ಕಾರ್ಯಾಗಾರದಲ್ಲಿ, ಈ ಬಗ್ಗೆ ಸಮಾಲೋಚನೆ ನಡೆಸಿ, ಮುಂದೆ ನಡೆಯುವ ಒನ್-ಟು-ಒನ್’ ಚರ್ಚೆಯನ್ನು ಸಹ ಸರಣಿ ಸಭೆಯಲ್ಲಿ ದಾಖಲಿಸಲು ಚಿಂತನೆ ನಡೆಸಲಾಗಿದೆ.

  ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ ಮತ್ತು ಮಾನವ ಗ್ರಂಥಾಲಯದಲ್ಲಿ ಎಲ್ಲಾ ದಾಖಲೆಗಳನ್ನು ಡಿಜಿಟಲ್ ಸಂಗ್ರಹ ಮಾಡುವುದು ಪ್ರಮುಖ ಉದ್ದೇಶವಾಗಿದೆ. ದಿನಾಂಕ:01.08.1988 ರಿಂದ ಇಲ್ಲಿಯವರೆಗೂ ನಡೆಸಿದ 35 ವರ್ಷಗಳ ಅವಧಿಯ, ಅಭಿವೃದ್ಧಿ ಸಮಾಜ ಸೇವೆಯ ದಾಖಲೆಗಳನ್ನು ಡಿಜಿಟಲ್ ಗ್ರಂಥಾಲಯದಲ್ಲಿ ದಾಖಲಿಸುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು.

ವರ್ಷದ 365 ದಿವಸಗಳ ಕಾರ್ಯ ಚಟುವಟಿಕೆಗಳ ಮಾಹಿತಿ ಸಂಗ್ರಹಿಸಲು, ವ್ಯವಸ್ಥಿತವಾದ ಸಿದ್ಧತೆ ನಡೆಯುತ್ತಿದೆ. 365 ದಿವಸಗಳಿಗೂ ಕನಿಷ್ಟ  9 ಜನರಂತೆ, 3265 ಕ್ಕೂ ಹೆಚ್ಚು ಜನರ ತಂಡ ಸಹಕಾರ ನೀಡುವ ಭರವಸೆ ಇದೆ.

ನಿಮ್ಮಗಳ ಸಲಹೆಯೇ ನನಗೆ ಸ್ಪೂರ್ತಿ.