TUMAKURU:SHAKTHIPEETA FOUNDATION
ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಅಥವಾ ಮಾರ್ಚ್ ತಿಂಗಳ ಮೊದಲನೇ ವಾರದಲ್ಲಿ ತುಮಕೂರಿನಲ್ಲಿ ‘ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047’ ರಾಜ್ಯ ಮಟ್ಟದ ಎರಡನೇ ಕಾರ್ಯಾಗಾರ ನಡೆಯಲಿದೆ.
ಎರಡು ದಿವಸಗಳ ಕಾಲ ನಡೆಯುವ, ಈ ಕಾರ್ಯಾಗಾರದ ಸ್ಪಾನ್ಸರ್ ಆಗಿ ತುಮಕೂರಿನ ‘ಮುಂಜಾನೆ ಬಳಗ’ದ ಮುಖ್ಯಸ್ಥರು ಮೌಖಿಕವಾಗಿ ಒಪ್ಪಿಗೆ ನೀಡಿದ್ದಾರೆ.
ಈ ಕಾರ್ಯಾಗಾರದಲ್ಲಿ ಹೊಸ 31 ಅಂಶಗಳ ಬಗ್ಗೆ ಒಂದು ದಿವಸ ಹಾಗೂ ಜಲಗ್ರಂಥದ ಬಗ್ಗೆ ಒಂದು ದಿವಸÀ ಚರ್ಚೆ ನಡೆಯಲಿದೆ.
ಜಲಗ್ರಂಥದ ಬಗ್ಗೆ ಮೂಕಾನನ ರೆಸಾರ್ಟ್‍ನಲ್ಲಿ ಕೈಗೊಂಡ ನಿರ್ಣಯದ ಮೇರೆಗೆ, ಮುಂದಿನ ಚುನಾವಣೆ ಪ್ರಣಾಳಿಕೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಈ ಕೆಳಕಂಡಂತೆ ಘೋಶಿಸಲು ಮನವಿ ಸಲ್ಲಿಸಲಾಗುವುದು. ಇದು ಒಂದು ಕರಡು ಪ್ರತಿ, ತಾವೂ ಸಲಹೆ ನೀಡಬಹುದಾಗಿದೆ.
- ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ಒದಗಿಸಲಾಗುವುದು.
- ಊರಿಗೊಂದು ಕೆರೆ- ಆ ಕೆರೆಗೆ ನದಿ ನೀರು ಯೋಜನೆಯಡಿ, ರಾಜ್ಯದ ಎಲ್ಲಾ ಗ್ರಾಮಗಳಿಗೂ ನದಿ ನೀರಿನ ಅಲೋಕೇಷನ್ ಮಾಡಿ, ಆಧ್ಯತೆ ಮತ್ತು ಆರ್ಥಿಕ ಪರಿಸ್ಥಿಗೆ ಅನುಗುಣವಾಗಿ ಯೋಜನೆ ಜಾರಿಮಾಡಲಾಗುವುದು.
- ರಾಜ್ಯದ ಎಲ್ಲಾ ವಿಧವಾದ ಜಲಸಂಗ್ರಹಾಗಾರಗಳನ್ನು ಗಂಗಾಮಾತೆ ದೇವಾಲಯ ಎಂದು ಘೋಷಣೆ ಮಾಡಿ, ಅಭಿವೃದ್ಧಿ ಮತ್ತು ಸಂರಕ್ಷಣೆ ಮಾಡಲಾಗುವುದು.
- ಕೇಂದ್ರ ಸರ್ಕಾರದ ನದಿ ಜೋಡಣೆಯಿಂದ ಇಂತಿಷ್ಟು ನದಿ ನೀರು ಪಡೆಯಲು ಶ್ರಮಿಸಲಾಗುವುದು ಎಂದು ಘೋಷಣೆ ಮಾಡಲಾಗುವುದು.
- ರಾಜ್ಯದ ನದಿ ಜೋಡಣೆಗೆ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳಲ್ಲಿ ಶೇಕಡ— ನೀರು ಬಳಸಲಾಗುವುದು ಎಂದು ಘೋಷಣೆ.
- ನದಿ ನೀರು ರಾಷ್ಟ್ರೀಯ ಸ್ವತ್ತು ಎಂದು ಘೋಶಿಸಲು ಶ್ರಮಿಸಲಾಗುವುದು.
- ರಾಜ್ಯಾಧ್ಯಾಂತ ಅಂತರ್ಜಲ ಅಭಿವೃದ್ಧಿ ಕಾರಿಡಾರ್ ಅಥವಾ ವಾಟರ್ ಗ್ರಿಡ್ ಕೆನಾಲ್ ನಿರ್ಮಾಣ ಮಾಡಲಾಗುವುದು.
- ಪ್ರವಾಹದ ನದಿ ನೀರು ಸಂಗ್ರಹಿಸಲು, ರಾಜ್ಯಾಧ್ಯಾಂತ ಹೊಸ ಬಫರ್ ಡ್ಯಾಂಗಳನ್ನು ನಿರ್ಮಾಣ ಮಾಡಲಾಗುವುದು.
- ರಾಜ್ಯಾಧ್ಯಾಂತ ರಾಜಕಾಲುವೆ ಒತ್ತುವರಿ ತೆರವುಗೊಳಿಸಿ ಸಂರಕ್ಷಣೆ ಮಾಡಲಾಗುವುದು.
ಈ ಬಗ್ಗೆ ಸಮಾಲೋಚನೆ ನಡೆಸಲು ದಿನಾಂಕ:07.01.1997 ರಿಂದ ಇದೂವರೆಗೂ ನನಗೆ ತಿಳಿದಿರುವ ಕೆಳಕಂಡ ನೀರಾವರಿ ಪರಿಣಿತರ ‘ಜ್ಞಾನ ದಾನ’ ಪಡೆಯಲು ಉದ್ದೇಶಿಸಲಾಗಿದೆ.
- ಈಗಗಾಲೇ ಜಲಸಂಪನ್ಮೂಲ ಅಪರಮುಖ್ಯ ಕಾರ್ಯದರ್ಶಿಯವರಿಗೆ ಸಲ್ಲಿಸಿರುವ 220 ಅಂಶಗಳ ಮಾಹಿತಿ.
- ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರದಿ
- ನೀರಾವರಿ ತಜ್ಞ ಕ್ಯಾಪ್ಟನ್ ರಾಜರಾವ್ ವರದಿ
- ನೀರಾವರಿ ತಜ್ಞ ಅಂಗಡಿ ವರದಿ
- ನೀರಾವರಿ ತಜ್ಞ ದೇಸಾಯಿ ವರದಿ
- ನೀರಾವರಿ ತಜ್ಞ ಕೆ.ಸಿ.ರೆಡ್ಡಿ ವರದಿ
- ನೀರಾವರಿ ತಜ್ಞ ಬಾಳೆಕುಂದ್ರಿ ವರದಿ
- ನೀರಾವರಿ ತಜ್ಞ ಮುಗ್ಧಂ ವರದಿ
- ಇತರೆ ನೀರಾವರಿ ತಜ್ಞರ ವರದಿಗಳು.
- ಗುಲ್ಭರ್ಗದ ಶ್ರೀ ಸಜ್ಜನ್ ರವರು ಸಿದ್ಧಪಡಿಸಿರುವÀ ವರದಿ.
- ಬಿಜಾಪುರದ ಶ್ರೀ ಸಜ್ಜನ್ ಸಿದ್ಧಪಡಿಸಿರುವÀ ವರದಿ.
- ಶಿವಮೊಗ್ಗದ ಶ್ರೀ ಹರೀಶ್ ರವರು ಸಿದ್ಧಪಡಿಸಿರುವÀ ವರದಿ.
- ಮಂಡ್ಯದ ಶ್ರೀ ಕೃಷ್ಣಮೂರ್ತಿಯವರು ಸಿದ್ಧಪಡಿಸಿರುವÀ ವರದಿ.
- ಬೆಂಗಳೂರಿನ ಶ್ರೀ ರಂಗನಾಥ್ ರವರು ಸಿದ್ಧಪಡಿಸಿರುವÀ ವರದಿ.
- ತುಮಕೂರಿನ ಶ್ರೀ ವೇದಾನಂದಾಮೂರ್ತಿಯವರು ಸಿದ್ಧಪಡಿಸಿರುವÀ ವರದಿ.
- ತುಮಕೂರಿನ ಶ್ರೀ ಸತ್ಯಾನಂದ್ ರವರು ಸಿದ್ಧಪಡಿಸಿರುವÀ ವರದಿ.
- ಧಾರವಾಡದ ಶ್ರೀ ಗಲಗಲಿಯವರು ಸಿದ್ಧಪಡಿಸಿರುವÀ ವರದಿ.
- ಮೈಸೂರಿನ ಶ್ರೀ ವೆಂಕಟರಾವ್ ರವರು ಸಿದ್ಧಪಡಿಸಿರುವÀ ವರದಿ.
- ಹಾವೇರಿಯ ಶ್ರೀ ಬಸವರಾಜ್ ಸುರಣಗಿಯವರು ಸಿದ್ಧಪಡಿಸಿರುವÀ ವರದಿ.
- ಉಡುಪಿಯ ಶ್ರೀ ಶ್ಯಾನುಭೋಗ್ ರವರು ಸಿದ್ಧಪಡಿಸಿರುವÀ ವರದಿ.
- ರಾಜ್ಯಾಧ್ಯಾಂತ ಇತರೆ ನೀರಾವರಿ ತಜ್ಞರು ಸಿದ್ಧಪಡಿಸಿರುವ ವರದಿಗಳು.
- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ/ಸಂಸ್ಥೆಗಳ ಬಳಿ ಇರುವ ಇತರೆ ವರದಿಗಳು.
- ಕೇಂದ್ರ ಸರ್ಕಾರದ ನದಿ ಜೋಡಣೆ ಮಾಹಿತಿ.
- ರಾಜ್ಯಾದ್ಯಾಂತ ನೀರಾವರಿ ಹೋರಾಟಗಾರರ ಬಳಿ ಇರುವ ಮಾಹಿತಿ.
- ರಾಜ್ಯಾದ್ಯಾಂತ ನೀರಾವರಿ ಸಂಶೋಧನಾ ಸಂಸ್ಥೆಗಳ ವರದಿ.
ಹೀಗೆ ರಾಜ್ಯಾಧ್ಯಾಂತ ‘ಜಲಬಿಕ್ಷೆ’ ಬೇಡಲಾಗುವುದು. ಇನ್ನೂ ಯಾರದರೂ ಯಾವುದಾದರೂ ವರದಿ ಸಿದ್ಧಪಡಿಸಿದ್ದರೆ ಮಾಹಿತಿ ನೀಡಲು ಈ ಮೂಲಕ ಬಹಿರಂಗ ಮನವಿ. ಎಲ್ಲಾ ಮಾಹಿತಿಗಳ ಸಂಗ್ರಹ ಮಾಡಿ ಸರ್ವ ಪಕ್ಷಗಳಿಗೆ ನೀಡಲಾಗುವುದು.
ನ್ಯಾಯಾಲಯದಲ್ಲಿ ‘ಪಿಐಎಲ್’ ಹಾಕಲು ಉದ್ದೇಶಿರುವುದರಿಂದ, ಉಚಿತವಾಗಿ ಸಹಕಾರ ನೀಡಲು ವಕೀಲರಿಗೂ ಬಹಿರಂಗ ಮನವಿ.