19th April 2024
Share

TUMAKURU:SHAKTHIPEETA FOUNDATION

‘ಮುಂದಿನ ಯುಗ-ಜ್ಞಾನ ಯುಗ’ ಎಂದು ಘೋಷಣೆ ಮಾಡಿರುವ, ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಕನಸು ನನಸು ಮಾಡಲು ಹಾಗೂ 2047 ಕ್ಕೆ ಭಾರತ ವಿಶ್ವಗುರುವಾಗಲು, ರಾಜ್ಯ ರಾಜ್ಯಗಳ ಮಧ್ಯೆ ಅಭಿವೃದ್ಧಿಯಲ್ಲಿ ಪೈಪೋಟಿ ಸೃಷ್ಠಿಸಲು, ಮಾನ್ಯ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು  ‘ಜೈ ಅನುಸಂಧಾನ್’ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ.

 ಬೆಂಗಳೂರು ಪ್ರೆಸ್‍ಕ್ಲಬ್‍ನೊಂದಿಗೆ ಸಂವಾದ ನಡೆಸಿ, ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಬೆಂಗಳೂರು ಪ್ರೆಸ್‍ಕ್ಲಬ್ ಅಧ್ಯಕ್ಷರಾದ ಶ್ರೀಧರ್‍ ರವರೊಂದಿಗೆ ಅಂತಿಮ ಸಮಾಲೋಚನೆ ನಡೆಸಿ, ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆದಿದೆ.

ದಿಶಾ ಮಾನಿಟರಿಂಗ್ ಸೆಲ್

ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಂಪಾದನೆ, ಜಾಗೃತಿ ಮತ್ತು ಅನುಷ್ಠಾನಕ್ಕಾಗಿ.

ಕರ್ನಾಟಕ ರಾಜ್ಯ, ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ತರಲು ನಿರಂತರ ಸ್ಟ್ರಾಟಜಿಗಾಗಿ.

ದೆಹಲಿ ಪ್ರತಿನಿಧಿ ಸಚಿವಾಲಯ ಸ್ಥಾಪಿಸುವುದು ಅಥವಾ ಮಾನ್ಯ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿರುವ ರಾಜ್ಯ ಮಟ್ಟದ ದಿಶಾ ಸಮಿತಿ ಅಡಿಯಲ್ಲಿ ಕಾರ್ಯ ನಿರ್ವಹಿಸುವುದು. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ಇದರಡಿ ಕಾರ್ಯ ನಿರ್ವಹಿಸುವುದು. ಲೋಕಸಭಾ ಸದಸ್ಯರು, ರಾಜ್ಯಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಹಾಗೂ ದೆಹಲಿ ಪ್ರತಿನಿಧಿ ಸೇರಿದಂತೆ, 341 ಚುನಾಯಿತ ಅಥವಾ ನಾಮನಿರ್ದೇಶನ ಸದಸ್ಯರು  ಕೇಳುವ ಮಾಹಿತಿಯನ್ನು ನೀಡುವುದು.

ಸುಮಾರು 100 ಕೋಟಿ ವೆಚ್ಚದಲ್ಲಿ, ದೆಹಲಿ ಪ್ರತಿನಿಧಿ ಮ್ಯೂಸಿಯಂ-1  ಅಥವಾ ಸೆಂಟರ್ ಆಪ್ ಎಕ್ಸಲೆನ್ಸ್ ಕ್ಯಾಪ್ಚರಿಂಗ್ ಜಿಓಐ ಫಂಡ್ಸ್  ಸ್ಥಾಪಿಸುವುದು.

ದಿಶಾ ಭವನ ಅಥವಾ ಲೋಕಸಭಾ ಸದಸ್ಯರ ಮ್ಯೂಸಿಯಂ-28

ದಿಶಾ ಭವನ ಅಥವಾ ರಾಜ್ಯ ಸಭಾ ಸದಸ್ಯರ ಮ್ಯೂಸಿಯಂ-13

ಕೆಡಿಪಿ ಭವನ ಅಥವಾ ವಿಧಾನಸಭಾ ಸದಸ್ಯರ ಮ್ಯೂಸಿಯಂ-225

ಕೆಡಿಪಿ ಭವನ ಅಥವಾ ವಿಧಾನಪರಿಷತ್ ಸzಸ್ಯರ ಮ್ಯೂಸಿಯಂ-75

ಸರ್ಕಾರಿ ಜಮೀನು 1 ಎಕರೆಯಿಂದ 10 ಎಕರೆವರೆಗೆ ಮೀಸಲಿಡುವುದು.

ರಾಜ್ಯ ಸರ್ಕಾರ ತಲಾ 5 ಕೋಟಿಯಂತೆ 340*5= 1700 ಕೋಟಿ

ಒಟ್ಟು= 1800 ಕೋಟಿ 5 ವರ್ಷದ ಯೋಜನೆ ಘೋಷಣೆ ಮಾಡುವುದು.

ಕೇಂದ್ರ ಸರ್ಕಾರದ ಕಲ್ಚರ್ ಇಲಾಖೆಯಿಂದ ಅನುದಾನ ಪಡೆಯಲು ಪ್ರಸ್ತಾವನೆ ಸಲ್ಲಿಸ ಬಹುದಾಗಿದೆ.

1947 ರಿಂದ ಕೈಗೊಂಡಿರುವ ಹಾಗೂ 2047 ರವರೆಗೆ ಅವರವರ ವ್ಯಾಪ್ತಿಯಲ್ಲಿ ಕೈಗೊಳ್ಳ ಬಹುದಾದ ಅಭಿವೃದ್ಧಿ ಯೋಜನೆಗಳ ಡಾಟಾ ಬ್ಯಾಂಕ್, ಜಿಐಎಸ್ ಲೇಯರ್ ಮತ್ತು ಆಯಾ ವ್ಯಾಪ್ತಿಯ ಶಾಸನಗಳು, ಕಲೆ, ಸಂಸ್ಕøತಿ, ಇತಿಹಾಸಗಳ ಪ್ರಾತ್ಯಾಕ್ಷಿಕೆ ಮ್ಯೂಸಿಯಂ ಮತ್ತು ಒಂದು ಹೋಟೆಲ್ ಅಥವಾ ರೆಸಾರ್ಟ್‍ಗೆ ಬಾಡಿಗೆ ನೀಡುವುದು. ಆಯಾ ವ್ಯಾಪ್ತಿಯ ಪ್ರೆಸ್ಕ್ಲಬ್ ಅಥವಾ ಕಾರ್ಯನಿರತ ಪತ್ರಕರ್ತರ ಭವನವೂ ಸಹ ಕ್ಯಾಂಪಸ್ನಲ್ಲಿ ಇರಬೇಕು ಅಥವಾ ಅವರೇ ನಿರ್ವಹಣೆ ಮಾಡಲೂ ಬಹುದು ಆಯಾ ಚುನಾಯಿತ ಜನಪ್ರತಿನಿಧಿಗಳೇ ಆಯಾ ಮ್ಯೂಸಿಯಂ ಅಧ್ಯಕ್ಷರಾಗಿರಬೇಕು.

ನಿರ್ವಹಣೆ: ಪ್ರತಿಯೊಬ್ಬ ಚುನಾಯಿತ ಅಥವಾ ನಾಮನಿರ್ದೇಶನ ಸದಸ್ಯರು, ಅವರು ಅಧಿಕಾರಕ್ಕೆ ಬಂದ ದಿನದಿಂದ ಒಬ್ಬ ಅಭಿವೃದ್ಧಿ ಸಲಹಾಗಾರರನ್ನು ಅಥವಾ ಒಂದು ಎನ್.ಜಿ.ಓ ನೇಮಕ ಮಾಡಿಕೊಳ್ಳುವುದು ತಲಾ ಮಾಸಿಕ ರೂ 100000 ನಿರ್ವಹಣೆ ಮತ್ತು ದಿನಗೂಲಿಗಾಗಿ ನೀಡುವುದು. ವಾರ್ಷಿಕವಾಗಿ ರೂ= 100000*341*12=40,92,00000 ಇದು ಹೆಚ್ಚು ಕಡಿಮೆ ಆಗಬಹುದು.

‘ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ ಒದಗಿಸಲು ನಿರಂತರವಾಗಿ ಶ್ರಮಿಸುವ ಮಾನಿಟರಿಂಗ್ ಸೆಲ್ ನಂತೆ ಕಾರ್ಯನಿರ್ವಹಿಸಲು. ಆಯಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಷಯವಾರು ಪರಿಣಿತರು ಮತ್ತು  ಜ್ಞಾನಿಗಳನ್ನು ಗೌರ್ವನಿಂಗ್ ಕೌನ್ಸಿಲ್ನಲ್ಲಿ ಸೇರ್ಪಡೆ ಮಾಡುವುದು. ಗೌರವ ಸಂಭಾವನೆಯೊಂದಿಗೆ ಅವರ ಜ್ಞಾನದಾನ ಪಡೆಯಬಹುದಾಗಿದೆ.

  ಪಿಪಿಪಿ ಆಧಾರದ ಮೇಲೆ ಅಥವಾ ಸಿ.ಎಸ್,ಆರ್ ಫಂಡ್‍ನಿಂದ ತಲಾ ಒಂದೊಂದು ಕಂಪನಿಗೆ, ಸಂಸ್ಥೆಗೆ ನಿರ್ವಹಣೆಗಾಗಿ ನೀಡಲೂಬಹುದು. 2023-24 ನೇ ಸಾಲಿನಲ್ಲಿ ಆಯವ್ಯಯದಲ್ಲಿ ಮಂಡಿಸಿ, ಒಂದು ಮಾರ್ಗದರ್ಶಿ ಸೂತ್ರ ರೂಪಿಸುವುದು ಅಗತ್ಯ.

ಇದೊಂದು ಜನಪರ, ಪಾರದರ್ಶಕ ಯೋಜನೆಯಾಗ ಬೇಕು. ರಾಜ್ಯದ ಸರ್ವಪಕ್ಷಗಳ ಅಭಿಪ್ರಾಯವನ್ನು ಪಡೆಯಲಾಗುವುದು. ತಮ್ಮ ಅಭಿಪ್ರಾಯ, ಸಲಹೆ, ಮಾರ್ಗದರ್ಶನಕ್ಕಾಗಿ ಬಹಿರಂಗ ಮನವಿ.