TUMAKURU:SHAKTHIPEETA FOUNDATION
‘ಮುಂದಿನ ಯುಗ–ಜ್ಞಾನ ಯುಗ’ ಎಂದು ಘೋಷಣೆ ಮಾಡಿರುವ, ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಕನಸು ನನಸು ಮಾಡಲು ಹಾಗೂ 2047 ಕ್ಕೆ ಭಾರತ ವಿಶ್ವಗುರುವಾಗಲು, ರಾಜ್ಯ ರಾಜ್ಯಗಳ ಮಧ್ಯೆ ಅಭಿವೃದ್ಧಿಯಲ್ಲಿ ಪೈಪೋಟಿ ಸೃಷ್ಠಿಸಲು, ಮಾನ್ಯ ಪ್ರಧಾನಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ‘ಜೈ ಅನುಸಂಧಾನ್’ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ,
ಕಳೆದ 35 ವರ್ಷಗಳಿಂದ ಅಭಿವೃದ್ಧಿ ಸಮಾಜ ಸೇವೆ ಮಾಡುತ್ತಿರುವ ಅನುಭವದ ಜೊತೆಗೆ ರಾಜ್ಯಾಧ್ಯಾಂತ ‘ಜ್ಞಾನದಾನಿ’ಗಳ ಸಹಕಾÀರದೊಂದಿಗೆ ‘ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047’ ಸಿದ್ಧತೆ ಪಡಿಸಲು ಕಾರ್ಯಾರಂಭ ಮಾಡಲಾಗಿದೆ.
ರಾಜ್ಯಮಟ್ಟದ ದಿಶಾ ಸಮಿತಿಯ ಸದಸ್ಯನಾಗಿ, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದೊಂದಿಗೆ, ಎಂ.ಓ.ಯು ಮಾಡಿಕೊಂಡು ಕರ್ನಾಟಕ ರಾಜ್ಯ, ಕೇಂದ್ರ ಸರ್ಕಾರದಿಂದ ಹೆಚ್ಚಿಗೆ ಅನುದಾನ ತರಲು ಸ್ಟ್ರಾಟಜಿ ತಯಾರಿಸಲು, ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ, ನದಿ ನೀರಿನಲ್ಲಿ ಸಾಮಾಜಿಕ ನ್ಯಾಯ ನೀಡಲು, ‘ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಅಭಿವೃದ್ಧಿ ಮೌಲ್ಯಮಾಪನ’ ಅಗತ್ಯವಾಗಿದೆ.
ಈ ಹಿನ್ನಲೆಯಲ್ಲಿ ಜ್ಞಾನಿಗಳ ಜೊತೆಗೆ, ರಾಜ್ಯದ ಸರ್ವಪಕ್ಷಗಳ ನಾಯಕರ ಹಾಗೂ 341 ಜನ ಚುನಾಯಿತ ಜನಪ್ರತಿನಿಧಿಗಳ ಹಾಗೂ ನಾಮನಿರ್ದೇಶಕರ ಸಹಭಾಗಿತ್ವ ಅತ್ಯಗತ್ಯವಾಗಿದೆ ಎಂಬುದು ನನ್ನ ಪರಿಕಲ್ಪನೆಯಾಗಿದೆ.
ದಿನಾಂಕ:04.05.2001 ರಲ್ಲಿ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಆರಂಭಿಸಿದ ದಿನದಿಂದ ತುಮಕೂರು ಲೋಕಸಭಾ ಸದಸ್ಯ ಶ್ರೀ ಜಿ.ಎಸ್.ಬಸವರಾಜ್ ರವರ, ವಸತಿ ಸಚಿವರಾದ ಶ್ರೀ ವಿ.ಸೋಮಣ್ಣನವರ ಹಾಗೂ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರ ಪೋಷಕತ್ವದಲ್ಲಿ ಯಶಸ್ವಿಯಾಗಿ ಸುಮಾರು 21 ವರ್ಷಗಳು ಕಳೆದಿವೆ.
ದಿನಾಂಕ:16.08.2019 ರಂದು ಶಕ್ತಿಪೀಠ ಫೌಂಡೇಷನ್ ಸ್ಥಾಪನೆ ಮಾಡಿದ್ದು, ಶಕ್ತಿಪೀಠ, ಅಭಿವೃದ್ಧಿಪೀಠ ಮತ್ತು ಜಲಪೀಠ ರಚಿಸಿ, ಪಾರದರ್ಶಕ ರೀತಿಯಲ್ಲಿ ‘ಅಭಿವೃದ್ಧಿ ಲಾಭಿ’ ಮಾಡಿ, ‘ಕೇಂದ್ರ ಸರ್ಕಾರದಿಂದ ಕರ್ನಾಟಕ ಹೆಚ್ಚಿನ ಅನುದಾನ ಪಡೆದ ರಾಜ್ಯವಾಗ ಬೇಕು ಎಂಬುದು ನನ್ನ ಕನಸಾಗಿದೆ’.
ಈ ಹಿನ್ನಲೆಯಲ್ಲಿ ಈ ಪೋಟೋಗಳಲ್ಲಿರುವ ನಾಯಕರ ಜೊತೆಗೆ ಇನ್ನೂ ಹಲವಾರು ರಾಜಕೀಯ ಪಕ್ಷಗಳ ಅಧ್ಯಕ್ಷರನ್ನು ಸೇರ್ಪಡೆ ಮಾಡಿಕೊಂಡು, ಪರ-ವಿರೋಧಗಳೊಂದಿಗೆ, ಅಂತಿಮವಾಗಿ ಅವರೆಲ್ಲರ ಲಿಖಿತ ಅನುಮತಿ ಪಡೆದು, ನಿರಂತರವಾಗಿ ಶ್ರಮಿಸಲು ಉತ್ಸುಕನಾಗಿದ್ದೇನೆ. ಈ ಬಗ್ಗೆ ಸಾರ್ವಜನಿಕ ಚರ್ಚೆ ಅಗತ್ಯ.
ನಿಮ್ಮ ಅಭಿಪ್ರಾಯ, ಸಲಹೆ ಮತ್ತು ಮಾರ್ಗದರ್ಶನ ನೀಡುವಿರಾ?