27th July 2024
Share

TUMAKURU:SHAKTHIPEETA FOUNDATION

ಮೋದಿಜಿಯವರು ದಿನಾಂಕ:06.02.2023 ರಂದು ನಮ್ಮೂರಿಗೆ ಹೆಚ್.ಎ.ಎಲ್ ಲೋಕಾರ್ಪಣೆ ಮಾಡಲು ಬರುತ್ತಿದ್ದಾರೆ. ದಿನಾಂಕ:01.08.1988 ರಂದು ಕುಂದರನಹಳ್ಳಿ ಗ್ರಾಮದೇವತೆ ಶ್ರೀ ಗಂಗಮಲ್ಲಮ್ಮ ದೇವತೆಯನ್ನು ಪೂಜಿಸಿ, ಗುಬ್ಬಿ ತಾಲ್ಲೋಕು ಬಿದರೆಹಳ್ಳಕಾವಲ್ ನಲ್ಲಿನ ಸುಮಾರು 930 ಎಕರೆ ಸರ್ಕಾರಿ ಜಮೀನಿನನಲ್ಲಿ ಯಾವುದಾದರೂ ಬೃಹತ್ ಉದ್ದಿಮೆ ಸ್ಥಾಪಿಸಲು ಶಕ್ತಿಕೊಡು ತಾಯಿ ಎಂದು ಪ್ರಾರ್ಥಿಸಿ, ಮೋದಿಜಿಯವರು ಬರುವ ದಿನಕ್ಕೆ ಸರಿಯಾಗಿ 34 ವರ್ಷ, 6 ತಿಂಗಳು, 5 ದಿವಸಗಳಾಗಿವೆ.

ಇಷ್ಟು ದಿವಸಗಳಲ್ಲಿ ಕಳೆದ 32 ವರ್ಷಗಳಲ್ಲಿ, ಬಹುತೇಕ ನಾನು ಮತ್ತು ತುಮಕೂರು ಲೋಕಸಭಾ ಸದಸ್ಯರಾಗಿರುವ ಶ್ರೀ ಜಿ.ಎಸ್.ಬಸವರಾಜ್ ರವರು ಜೊತೆಯಲ್ಲಿಯೇ ಹೆಚ್.ಎ.ಎಲ್ ಘಟಕ ಲೋಕಾರ್ಪಣೆಯಾಗುವವರೆಗೂ ನಿರಂತರವಾಗಿ ಶ್ರಮಿಸಿದ್ದೇವೆ.

ನಾವು ನಮ್ಮ ನಿರುದ್ಯೋಗಿಗಳಿಗೆ  ಮತ್ತು ರೈತರಿಗೆ, ಈ ಕೆಳಕಂಡ  ಆಶ್ವಾಸನೆಯನ್ನು ಕಳೆದ 23 ವರ್ಷಗಳಿಂದ ನೀಡುತ್ತಾ ಬಂದಿದ್ದೇವು. ಆದರೂ ಇದೂವರೆಗೂ ಕಾನೂನು ರೂಪಿಸಲು ಹಾಗೂ ಸಹಕರಿಸಲು ಸಾಧ್ಯಾವಾಗಿಲ್ಲ.

‘ಈ ದೇಶದ ಶೇ 85 % ಜನ ಯುವಕ-ಯುವತಿಯರು, ಹಗಲು-ಇರುಳು ಮೋದಿಜಿ ಜಪ ಮಾಡುತ್ತಿದ್ದಾರೆ, ರಾಜ್ಯದಲ್ಲೂ ಬಿಜೆಪಿ, ಕೇಂದ್ರದಲ್ಲೂ ಬಿಜೆಪಿ, ಎಂಪಿಯವರು ಬಿಜೆಪಿ. ನಾನೂ ಸಹ ಪಕ್ಷಾತೀತವಾಗಿದ್ದರೂ, ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ರಾಜ್ಯಮಟ್ಟದ ದಿಶಾ ಸಮಿತಿ ಸದಸ್ಯ.’

ಹೀಗಿದ್ದರೂ, ನಾವೂ ನೀಡಿದ ಭರವಸೆ ಹೀಡೇರಿಸಲು ಸಾಧ್ಯಾವಾಗದ ಮೇಲೆ ಯಾವ ಮುಖ ಇಟ್ಕೊಂಡು ಮೋದಿಜಿ ಸಭೆಗೆ ಹೋಗಲಿ.

ಒಂದು ದೇವತೆ ಪೂಜಿಸಿ ಹೆಚ್.ಎ.ಎಲ್ ಮಂಜೂರಾತಿಗೆ 35 ವರ್ಷ ಶ್ರಮಿಸಿದ್ದೇವೆ, ಈಗ ವಿಶ್ವದ  7 ದೇಶಗಳಲ್ಲಿರುವ 108 ಶಕ್ತಿಪೀಠಗಳ ದೇವತೆಗಳನ್ನು ಪೂಜಿಸಿ, ಈ ಕೆಳಕಂಡ  ಬೇಡಿಕೆಗಳ ಬಗ್ಗೆ ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಸುಗ್ರೀವಾಜ್ಞೆ ಅಥವಾ ಬಿಲ್ ಪಾಸ್ ಆಗುವವರೆಗೂ ಶ್ರಮಿಸಲು ಶಕ್ತಿ ಕೊಡು ತಾಯಿ ಎಂದು ಪ್ರಾರ್ಥಿಸಿ, ನಮ್ಮ ಹೋರಾಟ ಆರಂಭಿಸುತ್ತೇವೆ.

ಈಗ ರಾಜ್ಯದ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ, ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಜೊತೆ ಮಾತನಾಡಿ, ಕಾನೂನು ರೂಪಿಸುವ ಶಕ್ತಿ ಮಾಜಿ ಮುಖ್ಯಮಂತ್ರಿಯವರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಗೆ, ಕೇಂದ್ರ ಸಚಿವರಾದ ಶ್ರೀ ಪ್ರಹ್ಲಾದ್ ಜೋಷಿಯವರಿಗೆ, ಶ್ರೀ ಬಿ.ಎಲ್.ಸಂತೋಷ್ ರವರಿಗೆ ಹಾಗೂ ಶ್ರೀ ನಳೀನ್ ಕುಮಾರ್ ಕಟೀಲ್ ವರಿಗೆ ಇದೆ. ಈ ನಾಲ್ಕು ಜನರ ಜೊತೆಗೆ, ರಾಜ್ಯದ ಪಕ್ಷಾತೀತವಾಗಿ 41 ಜನ ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರ ಬೆಂಬಲವನ್ನು ಪಡೆಯಲಾಗುವುದು.

ಈ ಬಗ್ಗೆ ದಿನಾಂಕ:10.01.2023 ರಂದು ಗುಬ್ಬಿ ತಹಶೀಲ್ಧಾರ್ ರವರ ಮೂಲಕ, ದೇಶದ ಪ್ರಧಾನಿಯವರಿಗೆ ಪತ್ರ ಬರೆಯಲಾಗಿದೆ. ಈ ಪತ್ರವನ್ನು ಬೆನ್ನು ಹತ್ತುವ ಕೆಲಸ ಇಂದಿನಿಂದಲೇ ಆರಂಭವಾಗಲಿದೆ.

ಯುವಕರೇ ನಿಮ್ಮ ಸಹಕಾರವೂ ನನಗೆ ಅಗತ್ಯ.

ಮಾನ್ಯ ಶ್ರೀ ನರೇಂದ್ರಮೋದಿಜಿಯವರು, ಪ್ರಧಾನ ಮಂತ್ರಿಯವರು, ಭಾರತ ಸರ್ಕಾರ ಮತ್ತು ಮಾನ್ಯ ಶ್ರೀ ಬಸವರಾಜ್ ಬೊಮ್ಮಾಯಿರವರು ಮುಖ್ಯ ಮಂತ್ರಿಯವರು, ಕರ್ನಾಟಕ ಸರ್ಕಾರ. ಇವರಿಗೆ ಗುಬ್ಬಿ ತಹಶೀಲ್ಧಾರ್ ರವರ ಮೂಲಕ ಸಲ್ಲಿಸಿರುವ ಮನವಿ.

  1. ತುಮಕೂರು ಜಿಲ್ಲೆ, ಗುಬ್ಬಿ ಹೆಚ್.ಎ.ಎಲ್ ಘಟಕ ಸೇರಿದಂತೆ, ದೇಶದ ಯಾವುದೇ ಭಾಗದಲ್ಲಿ, ಕೇಂದ್ರ ಸರ್ಕಾರದಿಂದ  ಬೃಹತ್ ಕೈಗಾರಿಕೆ ಸ್ಥಾಪನೆ ಮಾಡಿದರೆ, ಸ್ಥಳೀಯರಿಗೆ, ಭೂ ಸಂತ್ರಸ್ಥರಿಗೆ, ಹೆಚ್.ಟಿ.ಲೈನ್ ಸಂತ್ರಸ್ತರಿಗೆ ಉದ್ಯೋಗ ನೀಡಲು ಡಾ.ಸರೋಜಿನಿ ಮಹಿಷಿ ಮಾದರಿಯಲ್ಲಿ, ಕಾನೂನು ಮತ್ತು ನಿಯಮ’ ರೂಪಿಸುವುದು.
  2. ತುಮಕೂರು ಜಿಲ್ಲೆ, ಗುಬ್ಬಿ ಹೆಚ್.ಎ.ಎಲ್ ಘಟಕ ಸೇರಿದಂತೆ, ದೇಶದ ಯಾವುದೇ ಭಾಗದಲ್ಲಿ, ಕೇಂದ್ರ ಸರ್ಕಾರದಿಂದ  ಬೃಹತ್ ಕೈಗಾರಿಕೆ ಸ್ಥಾಪನೆ ಮಾಡಿದರೆ, ಸುತ್ತ ಮುತ್ತ 2.5 ಕೀಮೀ. ನಿಂದ 10 ಕೀಮೀ ವ್ಯಾಪ್ತಿಯವರೆಗೆ ಸ್ಮಾರ್ಟ್ ವಿಲೇಜ್/ರುರ್ಬನ್  ಮಾದರಿ’ಯಲ್ಲಿ ಸಮಗ್ರ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವುದು.
  3. ತುಮಕೂರು ಜಿಲ್ಲೆ, ಗುಬ್ಬಿ ಹೆಚ್.ಎ.ಎಲ್ ಘಟಕದ ಭೂ ಹಾಗೂ ಹೆಚ್.ಟಿ.ಲೈನ್ ಸಂತ್ರಸ್ತರಿಗೆ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ನೀಡಿದ ಭರವಸೆಯಂತೆ, ನಿವೇಶನ ಮತ್ತು ಮನೆ’ ಯನ್ನು ನೀಡುವುದು.
  4. ತುಮಕೂರು ಜಿಲ್ಲೆ, ಗುಬ್ಬಿ ಹೆಚ್.ಎ.ಎಲ್ ಘಟಕ ಸುತ್ತ ಮುತ್ತ 2.5 ಕೀಮೀ. ನಿಂದ 10 ಕೀಮೀ ವ್ಯಾಪ್ತಿಯವರೆಗೆ ಹೇಮಾವತಿ ನದಿ ನೀರಿನಿಂದ ಮೈಕ್ರೋ ಇರ್ರಿಗೇಷನ್’ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವುದು.
  5. ತುಮಕೂರು ಜಿಲ್ಲೆ, ಗುಬ್ಬಿ ಹೆಚ್.ಎ.ಎಲ್ ವಿಸ್ತರಣಾ ಘಟಕ ಸೇರಿದಂತೆ, ಎರೋಸ್ಪೇಸ್ ಹಬ್, ಡಿಫೆನ್ಸ್ ಹಬ್, ಎರೋಸ್ಪೇಸ್ ಕಾರಿಡಾರ್ ಮತ್ತು ಡಿಫೆನ್ಸ್ ಕಾರಿಡಾರ್ ಯೋಜನೆಗಳಿಗೆ ‘2047 ರವೆಗೆ ಕರ್ನಾಟಕ ರಾಜ್ಯದಲ್ಲಿ ರೂ 5 ಲಕ್ಷಕೋಟಿ ಹೂಡಿಕೆ ಮಾಡಲು ಘೋಷಣೆ’ ಮಾಡುವುದು.
  6. ತುಮಕೂರು ಜಿಲ್ಲೆ, ಗುಬ್ಬಿ ಹೆಚ್.ಎ.ಎಲ್ ವಿಸ್ತರಣಾ ಘಟಕಕ್ಕೆ ಎಫ್,ಸಿ ಆಕ್ಟ್ ಪ್ರಕಾರ, ಹೆಚ್.ಎ.ಎಲ್ ಕೇಳಿರುವ ಅಂದಾಜು 1300 ಎಕರೆ ಅರಣ್ಯ ಜಮೀನನ್ನು, ಕರ್ನಾಟಕ ರಾಜ್ಯ ಸರ್ಕಾರ ಮಂಜೂರು ಮಾಡುವ ಹಾಗೂ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಕೈಗೊಳ್ಳುವ ಯೋಜನೆ ಬಗ್ಗೆ ಘೋಷಣೆ’ ಮಾಡುವುದು.