12th October 2024
Share

TUMAKURU:SHAKTHIPEETA FOUNDATION

ತುಮಕೂರು ಜಿಲ್ಲಾ, ತುಮಕೂರು ತಾಲ್ಲೋಕು, ಹೆಬ್ಬೂರಿನಲ್ಲಿ, ಕರ್ನಾಟಕ ರಾಜ್ಯ ಸರ್ಕಾರದ ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಇಂಜಿನಿಯರ್ ಶ್ರೀ ಅರವಿಂದ್ ರವರ ನೇತೃತ್ವದಲ್ಲಿ, ಹೈಡ್ರಾಲಜಿ ಎಸ್.ಇ. ಶ್ರೀಮತಿ ಪದ್ಮಾವತಿ, ಜಿಯೋಮೆಟಿಕ್ ಸೆಂಟರ್ ನಿರ್ದೇಶಕರಾದ ಶ್ರೀ ವಿಜಯಕುಮಾರ್, ಪ್ರೌಢಶಾಲಾ ಮುಖ್ಯೋಪಾದ್ಯಾರು, ಉಪಾಧ್ಯಾಯರು, ಇಂಜಿನಿರ್‍ಗಳ ಸಮ್ಮುಖದಲ್ಲಿ ಒಂದು ಗಂಟೆ ಮಕ್ಕಳ ಜೊತೆ ಸಂವಾದ ನಡೆಯಿತು.

ನನಗೆ ಕರೆದಿದ್ದು ಭಾಷಣ ಮಾಡಲು, ನಾನು ಮಕ್ಕಳಿಂದಲೇ ವಿಷಯ ತಿಳಿದುಕೊಳ್ಳ ಬೇಕು ಎಂಬ ಬಗ್ಗೆ ನಿರ್ಧಾರ ಮಾಡಿದ್ದೆ. ನಮ್ಮ ಇಂಜಿನಿಯರ್ ಶ್ರೀ ಚೌಡಪ್ಪನವರಿಗೂ ತಿಳಿಸಿದ್ದೆ.

ನಾನು ಮಕ್ಕಳ ಜೊತೆ ಚರ್ಚೆ ಆರಂಭಿಸಿದ್ದು ಅಲ್ಲಿರುವ ಮಳೆ ಮಾಪನ ಕೇಂದ್ರ ಯಾರದ್ದು, ಮಕ್ಕಳ ಉತ್ತರ ಸರ್ಕಾರದ್ದು, 5 ನಿಮಿಷ ಚರ್ಚೆಯ ನಂತರ ಮತ್ತೆ ಕೇಳಿದಾU,À ಮಕ್ಕಳ ಉತ್ತರ ಆ ಮಳೆಮಾಪನ ಕೇಂದ್ರ ನಮ್ಮದು.

ನಿಮ್ಮ ಊರಿನಲ್ಲಿ ಬಿದ್ದ ಮಳೆ ನೀರು ಎಲ್ಲಿಗೆ ಹೇಗೆ ಹೋಗುತ್ತದೆ.

ಕರಾಬು ಹಳ್ಳಗಳ ಮೂಲಕ, ಕಟ್ಟೆ, ಕೆರೆಗೆ ಹೋಗಿ, ದೊಡ್ಡ ಹಳ್ಳಗಳ ಮೂಲಕ ನದಿಗೆ ಹೋಗಿ, ಅಲ್ಲಿಂದ ಸಮುದ್ರ ಸೇರುತ್ತದೆ ಇದು ಮಕ್ಕಳ ಉತ್ತರ.

ಈ ಹಳ್ಳ, ಕೆರೆ ಕಟ್ಟೆಗಳನ್ನು ಎಷ್ಟು ಜನ ಒತ್ತುವರಿ ಮಾಡಿದ್ದಾರಾ, ಎಂಬ ಪ್ರಶ್ನೆಗೆ ನಮ್ಮ ಮನೆಯಲ್ಲಿ ಕರಾಬು ಹಳ್ಳ ಮುಚ್ಚಿ ಗಿಡ ಕಟ್ಟಿದ್ದಾರೆ ಎಂಬುದಾಗಿತ್ತು. ಇದು ಪಾಪ ಎನ್ನು ಅರ್ಥ ಮಾಡಿಸಲಾಯಿತು.

ಗಂಗೆಯನ್ನು ಎಲ್ಲಿ ಏಕೆ ಪೂಜಿಸುತ್ತಿರಾ? ಎಂದಾಗ ಮಕ್ಕಳ ಉತ್ತರ ಬೋರ್ ಕೊರೆದಾಗ ನೀರು ಬಿದ್ದಾಗ ಪೂಜಿಸುತ್ತೇವೆ, ಗಂಗಮ್ಮನನ್ನು ಮಾಡುತ್ತೇವೆ ಎಂಬುದಾಗಿತ್ತು. ಮತ್ತೆ ನಿಮ್ಮೂರಿನಲ್ಲಿರುವ ಹಳ್ಳ, ಕೆರೆ ಕಟ್ಟೆ ಗಂಗಮ್ಮನ ದೇವಾಲಯ ಅಲ್ಲವಾ ಎಂದಾಗ ಹೌದು ಜಲಸಂಗ್ರಹಾಗಾರಗಳು ಗಂಗಾಮಾತೆ ದೇವಾಲಯ ಎಂಬುದಾಗಿತ್ತು.

ನೋಡಿ ಮಕ್ಕಳ ಜ್ಞಾನ ಹೇಗಿದೆ.

ಅಭಿವೃದ್ಧಿ ಪೀಠ, ಜಲಪೀಠ, ಶಕ್ತಿಪೀಠಗಳ ಬಗ್ಗೆ ಹಲವಾರು ವಿಷಯಗಳ ಸುರಿಮಳೆ ಇತ್ತು. ಇದೇ ರೀತಿ ಒಂದು ಗಂಟೆಗಳ ಕಾಲ ಚರ್ಚೆ ಮಾಡಿ ಕುಳಿತು ಕೊಂಡಾಗ, ಮಕ್ಕಳ ಡಿಮ್ಯಾಂಡ್ ಇನ್ನೂ ಸ್ವಲ್ಪ ಸಮಯ ಮಾತನಾಡಿ ಎಂಬುದಾಗಿತ್ತು. ಇನ್ನೊಮ್ಮೆ ನಿಮ್ಮ ಶಾಲೆಗೆ ಬರುತ್ತೇನೆ ಎಂದು ಹೇಳಿದೆ.

ಭಾಗವಹಿಸಿದ್ದವರು ಮಳೆಮಾಪನ ಬಗ್ಗೆ, ನೀರಿನ ಬಗ್ಗೆ, ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು. ಇದೊಂದು ಅರ್ಥಪೂರ್ಣ ಕಾರ್ಯ ಕ್ರಮವಾಗಿತ್ತು.