27th July 2024
Share

ಹೆಚ್..ಎಲ್ ನಿಂದ ಇಂಡಿಯಾ @ 100

TUMAKURU:SHAKTHIPEETA FOUNDATION

ಎಮ್ಮೆ ಕಾಯುವಾಗ ಮೂಡಿದ ಪರಿಕಲ್ಪನೆಗೆ ದಿನಾಂಕ:01.08.1988 ರಂದು ಕುಂದರನಹಳ್ಳಿ ಗಂಗಮಲ್ಲನನ್ನು ಪೂಜಿಸಿ  ಆರಂಭಿಸಿದ ಭಗಿರಥ ಪ್ರಯತ್ನ

ದಿನಾಂಕ:06.02.2023 ರಂದು ಹೆಚ್.ಎಲ್.ಘಟಕ ಲೋಕಾರ್ಪಣೆ.

ಮನುಷ್ಯನಿಗೆ ಆಸೆ ಇರಬೇಕುಅತಿ ಆಸೆ ಇರಬಾರದು,

ನಿಮ್ಮೂರೆಲ್ಲಿ? ಹೆಚ್..ಎಲ್ ಎಲ್ಲಿ?- ಶ್ರೀ ಜಿ.ಎಸ್.ಬಸವರಾಜ್

35 ವರ್ಷಗಳ ಭಗಿರಥ ಪ್ರಯತ್ನ.

ನಮ್ಮೂರಿನಲ್ಲಿ ಯುದ್ಧ ದೇವಾಲಯ

ಗುಬ್ಬಿ ಹೆಚ್..ಎಲ್ ಹೀರೋಶ್ರೀ ಜಿ.ಎಸ್.ಬಸವರಾಜ್

ಹೆಚ್..ಎಲ್ ಘಟಕ ನಮ್ಮೂರಿಗೆ ಬಂದ ಕಥೆ.

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ, ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ, ಕುಂದರನಹಳ್ಳಿ ನನ್ನ ಹುಟ್ಟೂರು. ಬಡತನದ ಬೇಗೆಯಲ್ಲಿ ಬಳುತ್ತಿರುವ ಒಂದು ಕುಟುಂಬದಲ್ಲಿದ್ದರೂ ಅಂದು ಕಂಡ ಅದ್ಭುತ ಕನಸು  ನನಸಾಗಿದ್ದು, ಈ ಊರಿನಲ್ಲಿ ಹುಟ್ಟಿದ್ದಕ್ಕೆ ನನ್ನ ‘ಜನ್ಮ ಸಾರ್ಥಕ ‘ಎಂಬ ಭಾವನೆ ನನ್ನದಾಗಿದೆ. ನಿರಂತರವಾಗಿ ಶ್ರಮಿಸಿದ ಶ್ರೀ ಜಿ.ಎಸ್.ಬಸವರಾಜ್ ರವರಿಗೆ, ನನಗೆ ಮತ್ತು ನಮ್ಮೊಂದಿಗೆ ಹೆಜ್ಜೆ ಹಾಕಿದವರಿಗೆ ಆಗಿರುವ ಆನಂದಕ್ಕೆ ಪಾರವೇ ಇಲ್ಲ

ಬಿದರೆಹಳ್ಳ ಅಮೃತ ಮಹಲ್ ಕಾವಲ್

    ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೂಕು, ನಿಟ್ಟೂರು ಹೋಬಳಿ, ಬಿದರೆಹಳ್ಳ ಅಮೃತ್ ಮಹಲ್ ಕಾವಲ್ ಸರ್ವೆ ನಂ 1 ರಲ್ಲಿನ ಒಟ್ಟು ವಿಸ್ತೀರ್ಣ 2,487 ಎಕರೆ 17 ಗುಂಟೆ.  ಹಿಂದೆ ಧರಖಾಸ್ತು ಮೂಲಕ ಹಂಚಿರುವ  ಜಮೀನು 439 ಎಕರೆ 35 ಗುಂಟೆ.  ಅರಣ್ಯ ಇಲಾಖೆಗೆ ವರ್ಗಾವಣೆಯಾದ ಜಮೀನು 1093 ಎಕರೆ   1956 ರಲ್ಲಿ ಕಂದಾಯ ಇಲಾಖೆಗೆ ವರ್ಗಾವಣೆಯಾಗಿರುವ ಜಮೀನು 929 ಎಕರೆ 34 ಗುಂಟೆ.    

   ರಾಜ್ಯದ ರಾಜಧಾನಿ ಬೆಂಗಳೂರಿನಿಂದ  102 ಕಿ.ಮೀ. ತುಮಕೂರಿನಿಂದ  32 ಕಿ.ಮೀ. ದೂರದಲ್ಲಿ ತುಮಕೂರಿನಿಂದ  ತಿಪಟೂರಿಗೆ  ಹೋಗುವ ರಾಷ್ಟ್ರೀಯ ಹೆದ್ಧಾರಿ-206 ರಲ್ಲಿನ ಸಾಗರನಹಳ್ಳಿ ಗೇಟ್‍ನಿಂದ, ಕುಂದರನಹಳ್ಳಿ, ಸೋಪನಹಳ್ಳಿ, ತಿಮ್ಮಳೀಪಾಳ್ಯ ಮತ್ತು ಯಲ್ಲಾಪುರದ ಗೇಟ್ ವರೆಗೆ ಸುಮಾರು 2 ಕಿ.ಮೀ. ಉದ್ದ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು 150 ಮೀ ದೂರದಲ್ಲಿರುವ  ವಿಶಾಲವಾದ ಅಮೃತ ಮಹಲ್ ಕಾವಲ್‍ಗೆ  ಜಿಲ್ಲೆಯಲ್ಲಿನ ವಿವಿಧ ಭಾಗಗಳಿಂದ ವಲಸೆ ಬಂದು ಗುಡಿಸಲುಗಳನ್ನು ಹಾಕಿಕೊಂಡು ಸರ್ಕಾರಿ ಜಮೀನನ್ನು ಉಳುಮೆ ಮಾಡುತ್ತಿದ್ದ ಪ್ರದೇಶಕ್ಕೆ ಗುಡ್ಲು ಎಂದು ಕರೆಯುತ್ತಿದ್ದರು.

ಕುಂದರನಹಳ್ಳಿ ಶ್ರೀ ಗಂಗಮಲ್ಲಮ್ಮ ಪೂಜಿಸಿ ಆರಂಭ.

 ಆಂದ್ರ ಪ್ರದೇಶದಿಂದ ಬಂದು ನಮ್ಮೂರಿನಲ್ಲಿ ತಾಯಿ ನೆಲಸಿದ್ದಾಳೆ, ಇದು ಮೂಲ ಕುಂಚಿಟಿಗರ ಗಾಳೇರು ಬೆಡಗುರವರ ಮನೆ ದೇವರು, ಕರ್ನಾಟಕ ಮತು ಆಂದ್ರ ಎರಡು ರಾಜ್ಯಗಳ ಸುಮಾರು 65 ಕುಟುಂಬಗಳ ಮನೆ ದೇವರು. ನಮ್ಮೂರಿನಲ್ಲಿ ನೆಲಸಿರುವ ಗ್ರಾಮದೇವತೆ. 

ಕ್ಯಾತಸಂದ್ರದ ವಾಲ್ಮೀಕಿ ಜನಾಂಗದ  ಶ್ರೀ ಹನುಂತಪ್ಪನವರು ನಮ್ಮೂರಿನಲ್ಲಿ ವಾಸವಾಗಿದ್ದರು.  ಅವರು ಅದಲಗೆರೆ ಮಾಧ್ಯಮಿಕ ಶಾಲೆಯಲ್ಲಿ ಹಿಂದಿ ಮಾಸ್ಟರ್ ಆಗಿದ್ದರು,  ಅವರು ಜೋತಿಷ್ಯ, ಶಾಸ್ತ್ರ, ಪಂಚಾಂಗ ಹೀಗೆ ಜನತೆಯ ಕಷ್ಟ ಸುಖಗಳಿಗೆ ಪರಿಹಾರ ಸೂಚಿಸುತ್ತಿದ್ದರು.

ಅವರು ನಮ್ಮ ತಂದೆಗೆ ಕಾಯಿಲೆಯಾದಾಗ ದೇವಿ ಪುರಾಣ ಪುಸ್ತಕ ತಂದು ಕೊಟ್ಟು, ಪುಸ್ತಕ ಪೂಜಿಸಿ ಓದಲು ಮತ್ತು ಮಲಗುವಾಗ ಅವರ ತಲೆದಿಂಬು ಕೆಳಗೆ ಇಡಲು ಸಲಹೆ ನೀಡಿದರು. ಆ ಪುಸ್ತಕದಲ್ಲಿ ‘ದೇವಿಗೆ ಅರಿಕೆ ಮಾಡಿದ ಯಾವುದೇ ಕೆಲಸ ಗ್ಯಾರಂಟಿ ಆಗಲಿದೆ ಎಂದು ಬರೆದಿತ್ತು.

ದಿನಾಂಕ:1.8.1988 ರಂದು ಕುಂದರನಹಳ್ಳಿ ಗ್ರಾಮದಲ್ಲಿರುವ ಶ್ರೀ ಗಂಗಮಲ್ಲಮ್ಮ ದೇವಾಲಯದಲ್ಲಿ ಅರಿಕೆ ಮಾಡಿ ಗುಬ್ಬಿ ತಾಲ್ಲೂಕು ಬಿದರೆಹಳ್ಳಕಾವಲ್‍ನಲ್ಲಿರುವ ಸರ್ಕಾರಿ ಜಮೀನಿನಲ್ಲಿ ಯಾವುದಾದರೊಂದು ಬೃಹತ್ ಕೈಗಾರಿಕೆ ಆರಂಭಿಸಲು ಶಕ್ತಿಕೊಡು ತಾಯಿ ಎಂದು ಪ್ರಾರ್ಥಿಸಿದ್ದೆ.  ಇದರ ಪ್ರತಿಫಲ ಇಂದು ನಮ್ಮ ಕುಟುಂಬವೇ ‘ವಿಶ್ವದ 108 ಶಕ್ತಿಪೀಠಗಳ ಆರಾಧಕರಾಗಿ ಶಕ್ತಿಪೀಠ ಕ್ಯಾಂಪಸ್’ ಮಾಡಲು ಪ್ರೇರಣೆಯಾಗಿದೆ ಎಂದರೆ ತಪ್ಪಾಗಲಾರದು.

ಶ್ರೀ ಜಿ.ಎಸ್.ಬಸವರಾಜ್ ಕನಸು ಕಂಡಿದ್ದರಂತೆ.

 ತುಮಕೂರು ಲೋಕಸಭಾ ಸದಸ್ಯರಾಗಿದ್ದ ಶ್ರೀ ಜಿ.ಎಸ್.ಬಸವರಾಜ್ ರವರು ಸಹ ಈ ಜಮೀನಿನನಲ್ಲಿ ಕೋಕೋನಟ್ ರೀಸರ್ಚ್ ಸೆಂಟರ್   ಉದ್ದಿಮೆ ತರಬೇಕು ಎಂದು ಕನಸು ಕಂಡಿದ್ದರಂತೆ. ಕಾರಣಾಂತರದಿಂದ ಅವರ ಆಸೆ ಕೈಗೂಡಲಿಲ್ಲ.

ನನಗೆ ಅವರ ಪರಿಚಯವಾಗಿದ್ದು 1990 ರಲ್ಲಿ ಅಂದಿನಿಂದ ಇಲ್ಲಿಯವರೆಗೆನ ನಮ್ಮ ನಿರಂತರ ಪ್ರಯತ್ನ ಒಂದು ಸಾಧನೆ ಎಂದರೆ ತಪ್ಪಾಗಲಾರದು.

151 ಎಕರೆ ಹಂಚಿಕೆ, ಬಗರ್ ಹುಕುಂ ಹುಳುಮೆದಾರ ರೈತರ ಸಭೆ.

ದಿ: 10.09.1992 ರಂದು ಕುಂದರನಹಳ್ಳಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ, ಜಮೀನು ಉಳುಮೆ ಮಾಡುತ್ತಿದ್ದ ಸುತ್ತಮುತ್ತಲಿನ ರೈತರ ಸಭೆ ಕರೆದು, ಈ ಜಮೀನನ್ನು ರೈತರಿಗೆ ಮಂಜೂರು ಮಾಡಿಸಲು ಅಥವಾ ಯಾವುದಾದರು ಒಂದು ಉದ್ದಿಮೆಯನ್ನು  ಆರಂಭಿಸಲು ನಿರ್ಣಯ ಕೈಗೊಳ್ಳಲಾಯಿತು. ನಂತರ ನಡೆದ ಬೆಳವಣಿಗೆಯಲ್ಲಿ ಜಮೀನಿನ ಸುತ್ತ-ಮುತ್ತ ಬಗರ್ ಹುಕುಂ ಯೋಜನೆಯಡಿಯಲ್ಲಿ ಉಳುಮೆ ಮಾಡುತ್ತಿದ್ದ ಸುತ್ತಮುತ್ತಲಿನ ಗ್ರಾಮಗಳ ಸುಮಾರು 1,000 ಜನ ಹಾಗೂ ಕಾವಲುಗಾರರಾಗಿ ಕೆಲಸ ನಿರ್ವಹಿಸುತ್ತಿದ್ದ ಸುಮಾರು 6-7 ಕುಟುಂಬಗಳು ಎಲ್ಲರನ್ನು ಕಡೆಗಣಿಸಿ, ಎಲ್ಲಿಂದಲೋ ಬಂದು  ಗುಡಿಸಲು ಹಾಕಿಕೊಂಡು ಇದ್ದವರ ಅದೃಷ್ಠ ಚೆನ್ನಾಗಿತ್ತು.      ಬಗರ್ ಹುಕುಂ ಯೋಜನೆಯಲ್ಲಿ ಸುಮಾರು    151 ಎಕರೆ 35 ಗುಂಟೆ ಜಮೀನನ್ನು  ಆಗಿನ ಶಾಸಕರಾಗಿದ್ದ ದಿ.ಜಿ.ಎಸ್.ಶಿವನಂಜಪ್ಪನವರು ಮಂಜೂರು ಮಾಡಿದರು.

ಉಳಿದ ಜಮೀನಿನನಲ್ಲಿ ಯಾವುದಾದರೂ ಉದ್ದಿಮೆ ಮಂಜೂರು ಮಾಡಿಸೋಣ ಅಥವಾ ತಲಾ ಎರಡರೆಡು ಎಕರೆ ಜಮೀನು ಮಂಜೂರು ಮಾಡಿಸಿಕೊಳ್ಳೋಣ ಎಂಬ ನಿರ್ಧಾರಕ್ಕೆ ಬಂದೆವು.

ಬೃಹತ್ ಉದ್ದಿಮಿಗೆ ಜಮೀನು ಕಾಯ್ದಿರುಸುವಿಕೆ

ಆಗಿನ ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನವಿ ಮೇರೆಗೆ, ಆಗಿನ ಮುಖ್ಯ ಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ಣರವರು ಮತ್ತು ಕಂದಾಯ ಸಚಿವರಾಗಿದ್ದ ದಿ. ಶ್ರೀಕಂಠಯ್ಯನವರ ಶಿಪಾರಸ್ಸು ಮೇರೆಗೆ, ದಿ: 18.10.2002 ರಂದು ನಡೆದ ಗುಬ್ಬಿ ತಾಲ್ಲೂಕು ಬಗರ್‍ಹುಕುಂ ಸಕ್ರಮ ಸಮಿತಿಯ ಸಭೆಯಲ್ಲಿ ಕೈಗೊಂಡಿರುವ ನಿರ್ಣಯದಂತೆ ಫಾರಂ ನಂ 53 ರಲ್ಲಿ ಸುಮಾರು 437 ಅರ್ಜಿಗಳು ಮತ್ತು ಫಾರಂ ನಂ 50 ರಲ್ಲಿ  317   ಅರ್ಜಿಗಳು ಸೇರಿದಂತೆ ಒಟ್ಟು ‘754 ಅರ್ಜಿಗಳನ್ನು ವಜಾ ಮಾಡುವ ಮೂಲಕ ಆಗಿನ ಶಾಸಕರಾದ ದಿ.ವೀರಣ್ಣಗೌಡರು ನಿಜಕ್ಕೂ ಬಹಳ ಒಳ್ಳೆಯ ಕೆಲಸ ಮಾಡಿದರು.’

ಅಂದಿನಿಂದ ನ್ಯಾಯಾಲಯಗಳ ಮೊಕೊದ್ದÀಮೆಗಳ ಸಾಲು ಸಾಲು ಬಂದರೂ ಜಯ ಕಟ್ಟಿಟ್ಟ ಬುತ್ತಿಯಾಯಿತು.

ಹಲವಾರು ಯೋಜನೆಗಳ ಮಂಜೂರಾತಿಗೆ ಶತಪ್ರಯತ್ನ.

ಶ್ರೀ ಜಿ.ಎಸ್.ಬಸವರಾಜ್ ರವರೊಂದಿಗೆ ಸೇರಿದ ನಂತರ ಹಲವಾರು ಯೋಜನೆಗಳ ಮಂಜೂರಾತಿಗೆ ಶ್ರಮಿಸಿದೆವು, ಶ್ರೀ ಟಿ.ಆರ್.ರಘೋತ್ತಮರಾವ್ ರವರಂತೂ ಸಾವಿರಾರು ಪತ್ರಗಳನ್ನು ಎಂಪಿ ಯವರಿಂದ ಬರೆಸಿದ್ದಾರೆ.

1.      ಕಾಸಿಕಣಗಲೆ ಗಿಡದಿಂದ ಕ್ಯಾನ್ಸರ್  ಔಷದ ತಯಾರಿಕಾ ಘಟಕ,

2.      ತುಮಕೂರು ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಯತ್ನ,

3.      ಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಕುಶಲಕರ್ಮಿಗಳ ಘಟಕ ಸ್ಥಾಪನೆಗೆ ಪ್ರಯತ್ನ,

4.      ಅನಿಲ ಆಧಾರಿತ ವಿದ್ಯುತ್ ಘಟಕ  ಸ್ಥಾಪನೆಗೆ ಪ್ರಯತ್ನ,

5.      ಆಯುಷ್ ಸಂಶೋಧನಾ ಕೇಂದ್ರ ಮತ್ತು ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಯತ್ನ,

6.      ಕಾಯರ್ ಪಾರ್ಕ್‍ಗೆ ಪ್ರಯತ್ನ,

7.      ಇಂಟರ್‍ನ್ಯಾಷನಲ್ ಮೆಗಾ ಮಾರ್ಕೆಟ್ ಗೆ ಪ್ರಯತ್ನ,

8.      ಅಂತರ ರಾಷ್ಟ್ರೀಯ ಮಟ್ಟದ ಪ್ರವಾಸಿ ಕೇಂದ್ರ ಸ್ಥಾಪನೆಗೆ ಪ್ರಯತ್ನ

9.      ತುಮಕೂರು ನಿಮ್ಜ್ ಅಡಿಯಲ್ಲಿ ಎಜುಕೇಷನ್ ಹಬ್ ಗೆ ಪ್ರಯತ್ನ,

10.     ಕೃಷಿ ಮತ್ತು ತೋಟಗಾರಿಕಾ  ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಯತ್ನ,

11.      ಆರ್ಟೀಸಾನ್ ಹಬ್ ಸ್ಥಾಪನೆಗೆ ಪ್ರಯತ,್ನ

12.     ಮೇವು ಉತ್ಪಾದನಾ ಕೇಂದ್ರ ಮತ್ತು ಹೈನುಗಾರಿಕಾ ಸಂಶೋದನಾ ಕೇಂದ್ರ ಮಂಜೂರಾತಿಗೆ ಪ್ರಯತ್ನ,

13.     ಅಗ್ರಿ ಲಾಜಿಸ್ಟಿಕ್ ಪಾರ್ಕ್ ಸ್ಥಾಪನಗೆ ಪ್ರಯತ್ನ,

14.     ರೈಲ್ವೇ ಕೋಚ್ ಸ್ಥಾಪನಗೆ ಪ್ರಯತ್ನ,

15.     ತೆಂಗು ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಪ್ರಯತ್ನ ಮಾಡಲಾಯಿತು.

ಮಠಗಳ ವಾಸನೆ.

ಸಿದ್ಧಗಂಗಾ ಮಠ ಮತ್ತು ಚುಂಚನಗಿರಿ ಮಠದವರಿಗೆ, ಜಮೀನು ಮಂಜೂರು ಮಾಡುತ್ತಾರಂತೆ, ದಿ.ಬಾಣಸಂದ್ರದ ಹುಚ್ಚೇಗೌಡರಿಗೆ ಜಮೀನು ಮಂಜೂರಾಗಿದೆಯಂತೆ ಎಂಬ ಗಾಳಿ ಮಾತುಗಳು ಹರಿದಾಡಿದವು.

ಕೈಗಾರಿಕಾ ವಸಾಹತು.

ಶ್ರೀ ಬಿ.ಎಸ್. ಯಡಿಯೂರಪ್ಪನವರು ಮುಖ್ಯ ಮಂತ್ರಿಯಾಗಿದ್ದ ಸಮಯದಲ್ಲಿ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀ ಎಸ್.ಸುರೇಶ್ ಕುಮಾರ್ ಮತ್ತು ಅವರ ಆಪ್ತ ಕಾರ್ಯದರ್ಶಿ ಯಾಗಿದ್ದ, ಶ್ರೀ ಎ.ಆರ್.ಮಂಜುನಾಥ್ ರವರು ಹಾಗೂ ಕೆ.ಐ.ಎ.ಡಿ.ಬಿ ಭೂಸ್ವಾಧಿನ ಅಧಿಕಾರಿಯಾಗಿದ್ದ ಶ್ರೀ ರಾಮಕೃಷ್ಣರವರು ನನ್ನ ಮನವಿ ಮೇರೆಗೆ ಕೈಗಾರಿಕಾ ಪ್ರದೇಶವಾಗಿ ಘೋಷಣೆ ಮಾಡಿದ್ದು ಇತಿಹಾಸ.

ಸ್ಟೀಲ್ ಪ್ಯಾಕ್ಟರಿಗೆ ಜಮೀನು.

ಎಲ್ಲರಿಗೂ ಚಳ್ಳೆಣ್ಣೆ ತಿನ್ನಿಸಿ, ಈ ಜಮೀನನಲ್ಲಿ ಸ್ಟೀಲ್ ಪ್ಯಾಕ್ಟರಿಗೆ ಸಿಂಗಲ್ ವಿಂಡೋ ಯೋಜನೆಯಡಿ ಜಮೀನು ಮಾಜೂರು ಮಾಡಿದ ಇತಿಹಾಸವೂ ಇದೆ. ಮತ್ತೆ ಅದನ್ನು ಶ್ರೀ ಜಿ.ಎಸ್.ಬಸವರಾಜ್ ರವರು  ವಜಾ ಮಾಡಿಸಿದರು. ಈ ಯೋಜನೆ ವಿರುದ್ಧ ಪ್ರತಿಭಟನೆ ಆರಂಬಿಸಿದಾಗ ಗುಬ್ಬಿ ಹಲವಾರು ನಾಯಕರು ನನ್ನ ವಿರುದ್ಧ ಆರೋಪ ಮಾಡಿದರು.

ಮತದಾರರ ಪ್ರಣಾಳಿಕೆ ಭರವಸೆ.

2008 ಲೋಕಸಭಾ ಚುನಾವಣೆಯಲ್ಲಿ, ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಹೊರ ತಂದ ಮತದಾರರ ಪ್ರಣಾಳಿಕೆಯಲ್ಲಿ, ಈ ಜಮೀನಿನನಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಯಾವುದಾದರೂ ಘಟಕ ಮಂಜೂರು ಮಾಡಿಸುವ ಅಂಶ ಸೇರ್ಪಡೆ ಮಾಡಲಾಯಿತು.

  2009 ರ ಲೋಕಸಭಾ ಚುನಾವಣೆಯಲ್ಲಿ  ಅಭಿವೃದ್ಧಿ ರೆವೂಲ್ಯೂಷನ್ ಫೋರಂ ನೇತೃತ್ವದಲ್ಲಿ ಬಿಡುಗಡೆ ಮಾಡಿದ್ದ ಮತದಾರರ ಪ್ರಣಾಳಿಕೆಯ ಅಂಶದಲ್ಲಿನ ಪ್ರತಿಯೊಂದು ವಿಚಾರಗಳ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರದ ಇಲಾಖೆಗಳಿಗೆ ಫೋರಂ ವತಿಯಿಂದ ಪತ್ರ ಸಿದ್ಧಪಡಿಸಲಾಗಿತ್ತು ಮತ್ತು ಕೇಂದ್ರ ಸರ್ಕಾರದ ಇಲಾಖೆಗಳಿಗೆ ಶ್ರೀ.ಟಿ.ಆರ್. ರಘೋತ್ತಮರಾವ್‍ರವರು ಸಿದ್ಧಪಡಿಸಿದ್ದರು. ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರಿಂದ ವಿವಿಧ ಇಲಾಖೆಗಳಿಗೆ ಪತ್ರ ಬರೆಸಲಾಗಿತ್ತು. ಈ ಪ್ರಕಾರ ಕೇಂದ್ರ ರಕ್ಷಣಾ ಸಚಿವರಿಗೆ ಶ್ರೀ ಜಿ.ಎಸ್.ಬಸವರಾಜ್‍ರವರಿಂದ ಮನವಿ ಸಲ್ಲಿಸಲಾಗಿತ್ತು.

  ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳಿಗೆ ಪ್ರತಿಯೊಂದು ವಿಚಾರಗಳ ಬಗ್ಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎಸ್. ಸುರೇಶ್ ಕುಮಾರ್ ರವರಿಂದ ಸಚಿವರ ಆಪ್ತ ಕಾರ್ಯದರ್ಶಿ ಶ್ರೀ ಡಾ.ಎ.ಆರ್. ಮಂಜುನಾಥ್‍ರವರು ಸ್ವಯಂ ಪ್ರೇರಣೆಯಿಂದ ಸಿದ್ಧಪಡಿಸಿ ಪತ್ರ ಬರೆಯಲಾಗಿತ್ತು. ಸಚಿವರು ಕೇಂದ್ರ ಸರ್ಕಾರದ ರಕ್ಷಣಾ ಸಚಿವರಿಗೆ ಪತ್ರ ಬರೆಯಲಿಲ್ಲ. ಮಾನ್ಯ ಮುಖ್ಯಮಂತ್ರಿಗಳಿಂದ ಬರೆಸಲು ತಿರ್ಮಾನಿಸಿದೆವು.  

  ನಂತರ  ಗುಬ್ಬಿ ತಾಲ್ಲೂಕು ಬಿದರೆಹಳ್ಳ ಅಮೃತ್ ಮಹಲ್ ಕಾವಲ್‍ಗೆ ಮಂಜೂರಾಗಿದ್ದ ಪಿಎಂಬಿ ಮೆಟಾಲಿಕ್ ಪ್ರೈವೇಟ್ ಲಿಮಿಟೆಡ್‍ನ ಯೋಜನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಕರ್ನಾಟಕ ರಾಜ್ಯ ಉದ್ಯೋಗ ಮಿತ್ರಕ್ಕೆ ಭೇಟಿ ನೀಡಿದಾಗ ಅಲ್ಲಿ ಒಂದು ‘ಮಿನಿ ಕುರುಕ್ಷೇತ್ರ’ ನಡೆದು ಹೋಯಿತು.

   ಕರ್ನಾಟಕ ರಾಜ್ಯ ಉದ್ಯೋಗ ಮಿತ್ರದಲ್ಲಿ ಒಂದೊಂದು ಸೆಕ್ಟರ್‍ಗೂ ಒಬ್ಬೊಬ್ಬ ಅಧಿಕಾರಿಗಳು ಇರುತ್ತಾರೆ. ನಾನು ಭೇಟಿ ಕೊಟ್ಟಾಗ ಪಿಎಂಬಿ ಮೆಟಾಲಿಕ್‍ಗೆ ಸಂಬಂಧಿಸಿದ ಅಧಿಕಾರಿ ನನಗೆ ಸಿಗಲಿಲ್ಲ. ಆದರೆ ಕೆಲವು ಅಧಿಕಾರಿಗಳ ಜೊತೆ ಸಮಾಲೋಚನೆ ಮಾಡಿದೆ. ಅದರಲ್ಲಿ ಒಬ್ಬರು ಏರೋಸ್ಪೇಸ್ ವಿಭಾಗ ನೋಡಿಕೊಳ್ಳುತ್ತಿದ್ದ ಶ್ರೀ ಗಂಗಾಧರಯ್ಯನವರು,  ಇವರು ತುಮಕೂರು ಜಿಲ್ಲೆಯವರೇ.

  ಅಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಸಚಿವರಿಗೆ ಶ್ರೀ ಜಿ.ಎಸ್.ಬಸವರಾಜ್‍ರವರು ಈಗಾಗಲೇ ಪತ್ರ ಬರೆದಿದ್ದಾರೆ, ನಾವು ರಕ್ಷಣಾ ಇಲಾಖೆಯ ಯಾವುದಾದರೂ ಒಂದು ಯೋಜನೆ ಮಂಜೂರು ಮಾಡಿಸಬೇಕು. ನೋಡಿ ಪ್ರಣಾಳಿಕೆಯಲ್ಲಿ ಪ್ರಕಟಿಸಿದ್ದೇವೆ ಎಂದು ಮತದಾರರ ಪ್ರಣಾಳಿಕೆ ನೀಡಿದೆ. ಸರ್ಕಾರಿ ಜಾಗ ಖಾಸಗಿಯವರಿಗೂ ನೀಡುವುದು ಸೂಕ್ತವಲ್ಲ. ಜಮೀನು ಎಂಥಹ ಪರಿಸರದಲ್ಲಿದೆ ಎಂದರೆ ನೋಡಲು ಖುಷಿಯಾಗುತ್ತಿದೆ. ಎಜುಕೇಷನ್ ಹಬ್ ಮತ್ತು ಹೆಲ್ತ್ ಹಬ್ ಮಾಡಲು ಸೂಕ್ತ ಜಾಗ ಎಂದು ಹೇಳಿದೆ.

  ಅಲ್ಲಿ ಏರೋಸ್ಪೇಸ್ ವಿಭಾಗ ನೋಡಿಕೊಳ್ಳುತ್ತಿದ್ದ ಶ್ರೀ ಗಂಗಾಧರಯ್ಯನವರ ಅಮೃತವಾಣಿಯಿಂದ ಹೆಚ್.ಎ.ಎಲ್ ವತಿಯಿಂದ ಯುದ್ಧ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಸ್ಥಾಪಿಸಲು ಜಮೀನು ಹುಡುಕುತ್ತಿದ್ದಾರೆ ಎಂಬ ಮಹತ್ತರವಾದ ಮಾಹಿತಿ ದೊರಕಿತು.

   ತಕ್ಷಣದಿಂದ ಬಿದರೆಹಳ್ಳ ಅಮೃತ ಮಹಲ್ ಕಾವಲ್‍ಗೆ ಶುಕ್ರ ದೆಸೆ ಆರಂಭವಾಯಿತು. ಸೈನಿಕರ ದೇವಾ ನಿರ್ಮಾಣ ಮಾಡಲು ವೇದಿಕೆ ಸಜ್ಜಾಯಿತು.

  ಜೊತೆಗೆ ಈ ವಿಭಾಗದ ಕೆಲಸದ ಹೊಣೆಗಾರಿಕೆ ಇವರದಾಗಿತ್ತು. ಇವರು ಶ್ರೀ ಜಿ.ಎಸ್.ಬಸವರಾಜ್ ರವರ ತೋಟದಲ್ಲಿ ತೆಂಗಿನ ಸೊಸಿ ಮತ್ತು ಹಲಸಿನ ಸೊಸಿ ತೆಗೆದು ಕೊಂಡು ಹೋಗಿದ್ದು, ಎಂಪಿಯವರ ಮಾವನವರಾದ ಶ್ರೀ ಶಿವಣ್ಣವರ ಶಿಸ್ತು, ನಾನು ಸಹ ಅವರ ಮತದಾರರ ಕ್ಷೇತ್ರದವರು ಎಂಬ ಮಾಹಿತಿ ತಿಳಿದು ನನಗೂ ಖುಷಿಯಾಯಿತು.

ಜೊತೆಗೆ ಹೆಚ್.ಎ.ಎಲ್ ನಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಯವರು ಇದ್ದಾರೆ, ಅವರೊಂದಿಗೆ ಎಂಪಿ.ಯವರಿಂದ ಮಾತನಾಡಿಸಿ ಎಂದು ಅವರ ನಂಬರ್ ಕೊಟ್ಟರು, ನಂತರ ಶುರುವಾಯಿತು ಈ ಜೋಡಿ ಕೆಲಸ.ನಿಜಕ್ಕೂ ಇವರಿಬ್ಬರ ಸಹಕಾರವನ್ನು ನಾನು ಜೀವನದಲ್ಲಿ ಮರೆಯುವಂತಿಲ್ಲ.

ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಸ್ವಾಮ್ಯದ ಹೆಚ್.ಎ.ಎಲ್ ವತಿಯಿಂದ ಯುದ್ಧ ಹೆಲಿಕ್ಯಾಪ್ಟರ್ ತಯಾರಿಕಾ ಘಟಕ ಸ್ಥಾಪಿಸಲು ಜಮೀನು ಹುಡುಕುತ್ತಿದ್ದಾರೆ ಎಂಬ ಅಂಶವನ್ನು ನಾನು ಮೊದಲು ತಿಳಿಸಿದ್ದು ಶ್ರೀ.ಟಿ.ಆರ್. ರಘೋತ್ತಮರಾವ್‍ರವರಿಗೆ, ಗುಬ್ಬಿ ತಾಲ್ಲೂಕು ಬಿದರೆಹಳ್ಳ ಅಮೃತ್ ಮಹಲ್ ಕಾವಲ್‍ಗೆ ಮಂಜೂರು ಮಾಡಲು ರಕ್ಷಣಾ ಸಚಿವರಿಗೆ ಪತ್ರ ಬರೆಯಲು ಮಾತನಾಡಿದೆವು.

ಪಾಪ ಆ ಪುಣ್ಯಾತ್ಮನಿಗೆ ಹಾಲು ಅನ್ನ ಉಂಡಷ್ಟು ಖುಷಿಯಾಯಿತು. ನಮಗೆ ಎಲ್ಲೋ ಪ್ಲಾóಷ್ ಆಗಿಯೇ ಮತದಾರರ ಪ್ರಣಾಳಿಕೆಯಲ್ಲಿ ರಕ್ಷಣಾ ಇಲಾಖೆಯ ಘಟಕ ಅಂತ ಸೇರಿಸಿದ್ದೇವೆ  ಎಂದು ಹರ್ಷ ವ್ಯಕ್ತಪಡಿಸಿದರು. ಅಂದಿನಿಂದ ಕೇಂದ್ರ ಸರ್ಕಾರಕ್ಕೆ ಶ್ರೀ ಬಸವರಾಜ್ ರವರ ಮೂಲಕ ಪತ್ರ ಬರೆಸಲು  ಆರಂಭಿಸಿದರು.

ಹೆಚ್..ಎಲ್ ಘಟಕ ಮಂಜೂರಾತಿ ಪ್ರಯತ್ನ

2009 ರ ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಸದಸ್ಯರಾಗಿ ಶ್ರೀ ಜಿ.ಎಸ್.ಬಸವರಾಜ್ ರವರು ಆಯ್ಕೆಯಾದ ನಂತರ, ಈ ಜಮೀನನಲ್ಲಿ ಹೆಚ್.ಎ.ಎಲ್ ಘಟಕ ಮಂಜೂರಾತಿಗೆ ಪ್ರಯತ್ನ  ಆರಂಭವಾಯಿತು.

ಶ್ರೀ ಜಿ.ಎಸ್.ಬಸವರಾಜ್ ರವರ ವಾಣಿ.

ಆರಂಭದಲ್ಲಿ ಶ್ರೀ ಜಿ.ಎಸ್.ಬಸವರಾಜ್ ರವರು, ಒಬ್ಬ ಮನುಷ್ಯನಿಗೆ ಆಸೆ ಇರಬೇಕುದುರಾಸೆ ಇರಬಾರದು, ನಿಮ್ಮ ಊರು ಎಲ್ಲಿ ಹೆಚ್..ಎಲ್ ಎಲ್ಲಿ ಹುಡುಗಾಟನಾ, ನನ್ನಿಂದ ಇಂತಹ ಪತ್ರ ಬರೆಸುವುದು ಸರಿನಾ ಎಂದಾಗ, ನಾನು ಬೇಸರ ಪಡಲಿಲ್ಲ, ಇದು ಯಾವುದಾದರೂ ಬಿಲ್ ಕೊಡಲು ಅಥವಾ ವರ್ಗಾವಣೆ ಪತ್ರ ಅಲ್ಲ.ಸಹಿ ಹಾಕಿದರೆ ಹಾಕಿ, ಇಲ್ಲದಿದ್ದರೆ ಬಿಡಿ ಎಂದಾಗ ತಕ್ಷಣ ಅವರು, ಆಯಿತು, ಪಾರ್ಲಿಮೆಂಟ್ ಕುಂದರನಹಳ್ಳಿಗೆ ಬರಲಿ ಎಂದರೂ ಸಹಿ ಮಾಡುತ್ತೇನೆ, ಎಂದು ಸಹಿ ಮಾಡಿದ ಅಮೃತ ಘಳಿಗೆ ಇಂದು ಹೆಚ್.ಎ.ಎಲ್ ಲೋಕಾರ್ಪಣೆಗೆ ಅಡಿಗಲ್ಲು ಆಯಿತು.

  ಸರಿ ಇಬ್ಬರೂ ಬೆಂಗಳೂರಿಗೆ ಹೋದೆವು, ಪೈ ಹೊಟೆಲ್ ಸಜ್ಜೆ ರೊಟ್ಟಿ ಊಟಕ್ಕೆ ಶ್ರೀ ಗಂಗಾಧರಯ್ಯನವರನ್ನು ಕರೆದೆ, ಅಲ್ಲಿ ಸುಧೀರ್ಘವಾಗಿ ಚರ್ಚೆಯಾಯಿಯಿತು. ಅವರು ಹೆಚ್.ಎ.ಎಲ್ ಆಫೀಸರ್ ಶ್ರೀ ಮಲ್ಲಿಕಾರ್ಜುನ ಸ್ವಾಮಿರವರಿಗೆ ಫೋನ್ ಮಾಡಿ ಮಾತನಾಡಿಸಿದರು.

  ಅಂದಿನಿಂದ ಎಂಪಿಯವರು ಶುರು ಮಾಡಿದರು, ಜಿಗಣೆ ಹಿಡಿದ ಹಾಗೆ ಹಿಡಿದು ಕೊಂಡರು. ಕೇಂದ್ರ ರಕ್ಷಣಾ ಸಚಿವ ಶ್ರೀ ಅಂತೋನಿಯವರು ಬಹಳ ಒಳ್ಳೆಯ ಮನುಷ್ಯ ಈಗ ಬಿಡಬಾರದು ಏನಾದರೂ ಮಾಡಿ ಈ ಜಾಗಕ್ಕೆ ಮುಕ್ತಿ ಕೊಟ್ಟು ಬಿಡೋಣ, ನಾವಿಬ್ಬರೂ ಅಕ್ಕ-ಪಕ್ಕದ ಮನೆಯಲ್ಲಿ  ಇದ್ದೆವು. ಎಂದು ಅವರ ಘತಕಾಲದ ನೆನಪುಗಳನ್ನು ಹಂಚಿಕೊಂಡರು.

ರಾಜ್ಯದಲ್ಲಿ ಬಿಜೆಪಿಕೇಂದ್ರದಲ್ಲಿ ಯುಪಿಎ ಸರ್ಕಾರ.

ರಾಜ್ಯ ಸರ್ಕಾರದ ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ರಾಜ್ಯದಲ್ಲಿ ಬಿಜೆಪಿ – ಕೇಂದ್ರದಲ್ಲಿ ಯುಪಿಎ ಸರ್ಕಾರವಿದೆ. ನಮ್ಮ ರಾಜ್ಯಕ್ಕೆ ಮಂಜೂರಾಗುವುದು ಕಷ್ಟ ಎಂಬ ಮಾತುಗಳು ನಿರಂತರವಾಗಿದ್ದವು.

ಬಸವರಾಜ್ ರವರು ಬಿಜೆಪಿ, ಕೆಜೆಪಿ ಮತ್ತು ಕಾಂಗ್ರೆಸ್ ಎಲ್ಲಾ ಸಂಬಂಧಗಳ ಹೂರಣ ಇಲ್ಲಿ ಪ್ರಯೋಜನಕ್ಕೆ ಬಂತು ಎಂದರೂ ತಪ್ಪಾಗಲಾರದು.

ಪ್ರಧಾನ ಮಂತ್ರಿ ಡಾ. ಮನೋಮೋಹನ್ ಸಿಂಗ್, ಶ್ರೀಮತಿ ಸೋನಿಯಾ ಗಾಂದಿಯವರ ಮತ್ತು ರಕ್ಷಣಾ ಸಚಿವರಾದ ಶ್ರೀ ಎ.ಕೆ.ಅಂತೋನಿ ಸಹಕಾರ ಮರೆಯುವ ಹಾಗಿಲ್ಲ.

ಆರಂಭದಲ್ಲಿ ರಾಜ್ಯದಲ್ಲಿ ಬೆಜೆಪಿ ಸರ್ಕಾರ ಇದ್ದರೂ, ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದರೂ, ಮಂಜೂರಾಗುವ ಹಂತದಲ್ಲಿ ಎರಡು ಕಡೆ ಕಾಂಗ್ರೆಸ್ ಸರ್ಕಾರ ಇದ್ದುದು ಮತ್ತು ಶ್ರೀ ಜಿ.ಎಸ್.ಬಸವರಾಜ್ ರವರು ದೀರ್ಘ ಅವಧಿಯಲ್ಲಿ ಕಾಂಗ್ರೆಸ್‍ನಲ್ಲಿದ್ದದು ಯೋಜನೆಯ ಮಂಜೂರಾತಿಗೆ ಸಹಕಾರಿಯಾಯಿತು.

 ಪ್ರಧಾನ ಮಂತ್ರಿ ಡಾ. ಮನೋಮೋಹನ್ ಸಿಂಗ್, ಶ್ರೀಮತಿ ಸೋನಿಯಾ ಗಾಂಧಿಯವರ ಮತ್ತು ರಕ್ಷಣಾ ಸಚಿವರಾದ ಶ್ರೀ ಎ.ಕೆ.ಅಂತೋನಿ ಸಹಕಾರ ಮರೆಯುವ ಹಾಗಿಲ್ಲ. ಮಾಜಿ ಸಚಿವರಾದ ದಿ. ಆಸ್ಕರ್ ಪರ್ನಾಂಡಿಸ್ ರವರು ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರಿಗೆ ಶ್ರೀಮತಿ ಸೋನಿಯಾ ಮೇಡಂ ಹೇಳಿದ್ದಾರೆ, ಶ್ರೀ ಜಿ.ಎಸ್.ಬಸವರಾಜ್ ರವರಿಗೆ ಬೆಂಬಲಿಸಿ ಎನ್ನುವ ಮಾತು. ಕಾಂಗ್ರೇಸ್‍ನ ಸರ್ಕಾರ ಸಂಪೂರ್ಣವಾಗಿ ಸಹಕರಿಸಲು ಸಹಕಾರಿಯಾಯಿತು. ಮೂರು ದಿವಸ ಪ್ರತಿ ರಾತ್ರಿ ಕಾದು ಕುಳಿತು ಆಸ್ಕರ್ ರವರಿಂದ ಶಿಫಾರಸ್ಸು ಮಾಡಿಸಿದ ಅನುಭವ ನಿಜಕ್ಕೂ ಅವಿಸ್ಮರಣೀಯ.

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಯವರಿಗೆ, ರಕ್ಷಣಾ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಪತ್ರಗಳುÀ ಧಾರವಾಹಿಗಳಂತೆ ಮುಂದುವರೆದೆವು.

ಮುಖ್ಯ ಮಂತ್ರಿಯವರಾದ ಶ್ರೀ ಡಿ.ವಿ.ಸದಾನಂದಾಗೌಡರವರಿಗೆ ಪತ್ರ.

 ದಿನಾಂಕ:06.05.2012 ರಂದು ಆಗಿನ ಮುಖ್ಯ ಮಂತ್ರಿಯವರಾದ ಶ್ರೀ ಸದಾನಂದಾಗೌಡರವರಿಗೆ, ಬೃಹತ್ ಕೈಗಾರಿಕಾ ಸಚಿವರಾದ ಶ್ರೀ ಮುಗೇಶ್ ನಿರಾಣಿಯವರಿಗೆ, ಶ್ರೀ ಜಿ.ಎಸ್.ಬಸವರಾಜ್ ರವರು ಹೆಚ್.ಎ.ಎಲ್ ಗೆ ಜಮೀನು ಮಂಜೂರು ಮಾಡಲು ಪತ್ರ ಬರೆಯಲಾಯಿತು.

ಬೀದರ್ ನಲ್ಲಿ 500 ಎಕರೆ ಜಮೀನು

ಶ್ರೀ ಟಿ.ಆರ್.ರಘೋತ್ತಮರಾವ್‍ರವರು ಸಂಗ್ರಹಿಸಿದ ಕರ್ನಾಟಕ ರಾಜ್ಯದ ಬೀದರ್, ಗುಲ್ಬರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಹೆಚ್.ಎ.ಎಲ್ ಘಟಕ ಆರಂಭಿಸಲು ಕ್ರಮಕೈಗೊಳ್ಳಲಾಗಿದೆ ಎಂಬ  ಮಾಹಿತಿ ದಿನಾಂಕ:01.09.2013 ರಂದು ಕನ್ನಡ ಪ್ರಭ ಪತ್ರಿಕೆಯ ವರದಿ ನನ್ನ ನಿದ್ದೆಗೆಡಿಸಿತ್ತು. 

ಸಹಕರಿಸಿದ ಜಿಲ್ಲಾಧಿಕಾರಿ ಶ್ರೀ ಕೆ.ಎಸ್.ಸತ್ಯಮೂರ್ತಿ

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಬಿದರೆಹಳ್ಳ  ಕಾವಲ್‍ನಲ್ಲಿ ಸರ್ಕಾರಿ ಜಮೀನು ಇದೆ, ಇಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಸ್ವಾಮ್ಯದ ಹೆಚ್.ಎ.ಎಲ್.ವತಿಯಿಂದ ಯುದ್ಧ ಹೆಲಿಕ್ಯಾಪ್ಟರ್ ತಯಾರಿಸುವ ಘಟಕವನ್ನು ಆರಂಭಿಸಬಹುದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧಿಸಿದ ಎಲ್ಲಾ ಇಲಾಖೆಯ ಚುನಾಯಿತ ಜನಪ್ರತಿನಿಧಿಗಳು ಮತ್ತು ಎಲ್ಲಾ ಹಂತದ ಅಧಿಕಾರಿಗಳಿಗೆ ಮನವರಿಕೆ ಮಾಡುವಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರು ಒಂದು ರೀತಿಯಲ್ಲಿ ಯಶಸ್ವಿಯಾದರೂ ಜಮೀನು ಬಗ್ಗೆ ದಾಖಲೆ ಮಾಡಿಸುವಲ್ಲಿ ಹಿನ್ನಡೆಯಾಯಿತು ಅಂದರೆ ತಪ್ಪಗಲಾರದು.

  ತುಮಕೂರು ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ರಾಜುರವರು ಮತ್ತು ಶ್ರೀ ಸಿ.ಸೋಮಶೇಖರ್‍ರವರ ಅವಧಿಯಲ್ಲಿ ಕರ್ನಾಟಕ ಸರ್ಕಾರದಿಂದ ಪತ್ರ ಬಂದಿದ್ದರೂ ಇವರ ಅವಧಿಯಲ್ಲಿ ಇವರಿಬ್ಬರೂ ಏನು ಮಾಡಿದ್ದಾರೆ ಎಂಬ ಮಾಹಿತಿ ಇದೂವರೆಗೂ ಸಂಸದರಿಗೂ ಮತ್ತು ನನಗೂ ಗೊತ್ತಿಲ್ಲ.

  ಬಹುತೇಕ ಎಲ್ಲಾ ಸಮಾಧಾನಕರ ಬೆಳವಣಿಗೆಗಳು ನಡೆದ ನಂತರ ಶ್ರೀ ಜಿ.ಎಸ್.ಬಸವರಾಜ್‍ರವರು ಫೋನ್ ಮಾಡಿ ಜಮೀನಿನ ದಾಖಲೆ ಯಾವ ಹಂತದಲ್ಲಿದೆ ಎಂದು ಕೇಳಿದರು ನನಗೆ ಗಾಬರಿಯಾಯಿತು, ವಿಚಾರಿಸಿ ಹೇಳ್ತಿನಿ ಸಾರ್ ಎಂದಾಗ ‘ಒಳ್ಳೆ ಗಿರಾಕಿ ಕಣಯ್ಯಾ ಒಳ್ಳೆ ಸಮಯದಲ್ಲಿ ಹುಳಿಯಾಳು ಅನ್ನುವ ಹಾಗೆ ಆಯಿತು, ಮೊದಲು ನೋಡು ಅಂದರು.

 ಆಗ ನಾನು ಜಿಲ್ಲಾಧಿಕಾರಿಯಾಗಿದ್ದ ಶ್ರೀ ಕೆ.ಎಸ್.ಸತ್ಯಮೂರ್ತಿಯವರಿಗೆ ಫೋನ್ ಮಾಡಿ ಸಾರ್ ಹೆಚ್.ಎ.ಎಲ್ ಘಟಕಕ್ಕೆ ಜಮೀನು ನೀಡುವ ಕಡತ ಯಾವ ಹಂತದಲ್ಲಿದೆ ಸಾರ್ ಎಂದು ಕೇಳಿದೆ. ಅವರು ನೀವು ಯಾರು ಅಂದರೂ ನಾನು ಕುಂದರನಹಳ್ಳಿ ರಮೇಶ್ ಅಂತ ಸಾರ್, ಎಂಪಿಯವರಿಗೆ ಈ ಬಗ್ಗೆ ಮಾಹಿತಿ ಬೇಕಾಗಿತ್ತು,  ಎಂದಾಗ ಅವರು ನನಗೆ ಈ ಬಗ್ಗೆ ಗೊತ್ತಿಲ್ಲ ವಿಚಾರಿಸಿ ಹೇಳ್ತೀನಿ ಅಂದರು, ಸರಿ ಸಾರ್ ಅಂತ ಹೇಳಿದೆ.

 ಮೂರು ದಿವಸ ಬಿಟ್ಟು ಪುನಃ ಡಿಸಿಯವರಿಗೆ ಮಾತನಾಡಿದೆ, ಅವರು ಎಲ್ಲಾ ನೋಡಿದೆ, ಅಲ್ಲಾ ಮಾರಾಯ ಇಬ್ಬರು ಡಿಸಿಗಳು ನಿಮ್ಮವರೇ ಇದ್ದರೂ ಸರ್ಕಾರದಿಂದ ಬಹಳ ಹಿಂದೆ ಪತ್ರ ಬಂದಿದ್ದರೂ ಇನ್ನೂ ಯಾಕೆ ರೆಕಾರ್ಡ್ ಮಾಡಿಸಿಲ್ಲ, ಎಂದು ತಮಾಷೆ ಮಾಡಿದರು. ಆಯಿತು ನಿಮಗೆ ಎಷ್ಟು ದಿವಸದಲ್ಲಿ ರೆಡಿಯಾಗಬೇಕು ಹೇಳಿ, ಒಳ್ಳೆ ಯೋಜನೆ ಮಾಡಿ ಕಳುಹಿಸುತ್ತೇನೆ ಎಂಪಿಯವರು ಮಾತನಾಡಿದ್ದಾರೆ ಎಂದರು. ಸಾರ್ ಒಂದು ವಾರದಲ್ಲಿ ಅಂದೆ ನೋಡೋಣ ಅಂದರು.

  ಸುಮಾರು 8-10 ದಿವಸ ಬಿಟ್ಟು ಡಿಸಿಯವರೇ ಫೋನ್ ಮಾಡಿ ಸರ್ಕಾರಕ್ಕೆ ದಾಖಲೆಯನ್ನು ಕಳುಹಿಸಿದ್ದೇನೆ, ಸುಮಾರು  772 ಎಕರೆ 3 ಗುಂಟೆ ಸರ್ಕಾರಿ ಜಮೀನು ಇದೆ ಎಂದು ಹೇಳಿದಾಗ ನನಗೆ ಬಹಳ ಖುಷಿಯಾಯಿತು ಥ್ಯಾಂಕ್ಸ್ ಸಾರ್ ಅಂದು ಹೇಳಿದೆ.

ಎಂಪಿಯವರು ಮತ್ತು ನಾನು ಕಂದಾಯ ಇಲಾಖೆಗೆ ಹೋಗಿ ವಿಚಾರಿಸಿದಾಗ ದಾಖಲೆ ಬಂದಿದೆ ಕಂದಾಯ ಸಚಿವರ ಅನುಮತಿ ಪಡೆದು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯವುದಾಗಿ ತಿಳಿಸಿದರು.

ಜಿಲ್ಲಾಧಿಕಾರಿ ಶ್ರೀ ಕೆ.ಎಸ್.ಸತ್ಯಮೂರ್ತಿ ಜೊತೆ ಜಗಳ

ಶ್ರೀ ಜಿ.ಎಸ್.ಬಸವರಾಜ್‍ರವರು 772 ಎಕರೆ ಜಮೀನು ದಾಖಲೆ ಕಳುಹಿಸಿದ್ದಾರೆ ಎಂದು ಖುಷಿಯಾಗಿದ್ದರು. ಆ ಕಡೆ ಜಿಲ್ಲಾಧಿಕಾರಿ ಸತ್ಯಮೂರ್ತಿ ಒಂದು ರಹಸ್ಯ ಸಭೆ ಕರೆದು, ಆ ಸಭೆಯಲ್ಲಿ ನೋಡಿ ದೊಡ್ಡವ್ರು ಹೇಳಿದ್ದಾರೆ, ಗುಬ್ಬಿ ತಾಲ್ಲೂಕು ಬಿದರೆಹಳ್ಳಕಾವಲ್‍ನಲ್ಲಿ ಹೆಚ್.ಎ.ಎಲ್ ಆಗಬಾರದು, ಏನು ಮಾಡಬಹುದು ಹೇಳಿ, ಇಲ್ಲಿ ಲಿಂಗಾಯಿತರು ಯಾರು ಇದ್ದೀರಾ? ಸಾರ್ ನಾನು ಅಂತ ಒಬ್ಬರು ಹೇಳಿದ್ದಾರೆ, ನೀನು ನಮ್ಮ ಕಡೆ ಪರವಾಗಿಲ್ಲ. ನಾನು ಎಂಪಿಯವರಿಗೆ ಹೇಳುತ್ತೇನೆ ಅವರನ್ನು ಒಪ್ಪಿಸುವ ಜವಾಬ್ಧಾರಿ ನನ್ನದು. ಆದರೆ ‘ಅವನಿಗೆ ಮಾತ್ರ ಗೊತ್ತಾಗೊದು ಬೇಡ’ ನಡೀರಿ ಜಾಗಕ್ಕೆ ಹೋಗಿ ಬರೋಣ ಸ್ಥಳಕ್ಕೆ ಹೋಗಿದ್ದಾರೆ.

  ನನಗೆ ಫೋನ್ ಬಂತು ಡಿಸಿ ಏನೋ ಕತರ್ನಾಗ್ ಕೆಲಸ ಮಾಡುತ್ತಾನೆ ನೋಡಿ, ಆದರೆ ದಾಖಲೆ ಇಲ್ಲದೆ ಎಂಪಿಯವರಿಗೂ ಏನೂ ಹೇಳಲಿಲ್ಲ. ಎಸಿಯವರಾಗಿದ್ದ ಶ್ರೀ ನಕುಲ್‍ರವರು ಈ ದ್ವೇಷದ ಕೆಲಸ ಬೇಡ ಎಂದು ಬಹಳ ಹೇಳಿದ್ದಾರೆ ಎಂಬ ಸುದ್ಧಿ ಬಂತು, ಆದರೂ ಕೇವಲ 20 ದಿನದೊಳಗಾಗಿ ಸರ್ಕಾರಕ್ಕೆ ಅಸತ್ಯದ ವರದಿ ರವಾನೆ ಆಯಿತು.

 ರವಾನೆ ಆದ ತಕ್ಷಣ ಎಂಪಿಯವರ ಗಮನಕ್ಕೆ ತರಬೇಕಾಗಿತ್ತು, ಇಬ್ಬರೂ ಬೆಂಗಳೂರಿಗೆ ಹೋಗುತ್ತಿದ್ದೆವು,  ಸಾರ್ ಡಿಸಿಯವರಿಗೆ ಮಾತಾಡಿ ಜಮೀನು ದಾಖಲೆ ಯಾವ ಮಟ್ಟಕ್ಕೆ ಬಂತು ಕೇಳಿ ಎಂದೆ. ಅವರು ಡಿಸಿಯವರಿಗೆ ಫೋನ್ ಮಾಡಿದ್ರೆ ಡಿಸಿಯವರು ಅಲ್ಲಿ ಜಮೀನು ಇಲ್ಲಾ ಸಾರ್ ಕುಂದರನಹಳ್ಳಿ ರಮೇಶ್ ಎಲ್ಲಾ ಮಿಸ್ ಗೈಡ್ ಮಾಡಿದ್ದಾರೆ. ಎಂಪಿಯವರು ಅರೇ ನೀವೇ ಕಳುಹಿಸಿದ್ದೀರಿ 772 ಎಕರೆ ಇದೆ ಅಂತ, ಈಗ ನೋಡಿದ್ರೆ ಇಲ್ಲ  300 ಎಕರೆ ಮಾತ್ರ ಇದೆ ಹೆಚ್.ಎ.ಎಲ್ ಘಟಕಕ್ಕೆ ಆಗಲ್ಲ ಅಂತಿರಾ. 

 ಎಂಪಿಯವರು ಫೋನ್ ಕಟ್ ಮಾಡಿ ಏನಪ್ಪಾ ಡಿಸಿ ಹೀಗೆ ಹೇಳುತ್ತಾರೆ, ಅಂದಾಗ ಸಾರ್ ನಾಳೆ ಡಿಸಿ ಆಫೀಸ್‍ಗೆ ಬರುತ್ತೇನೆ ಎಲ್ಲಾ ಅಧಿಕಾರಿಗಳನ್ನು ಮಿಟಿಂಗ್ ಕರೆಯೋಕೆ ಹೇಳಿ ಹಾಗೆ ನನಗೂ ಕರೆಯೋಕೆ ಹೇಳಿ ಸಾರ್ ಎಂದೆ. ಅವರು ಅದೇ ಮಾತನ್ನು ಜಿಲ್ಲಾಧಿಕಾರಿಗಳಿಗೆ ಹೇಳಿದರು.

 ಎಂಪಿಯವರಿಗೂ ತಲೆ ಬಿಸಿಯಾಯಿತು, ಏನು ಕಥೆ ಇದು ಅಂದಾಗ ಕಾರಿನಲ್ಲಿ ಯಾರ್ಯಾರೋ ಇದ್ದರು, ನಾನು ಇರಲಿ ಬಿಡಿ ಸಾರ್ ನಾಳೆ ನೋಡೋಣ ಅಂದು ಸುಮ್ಮನಾದೆ. ಎರಡೇ ನಿಮಿಷಕ್ಕೆ ಜಿಲ್ಲಾಧಿಕಾರಿ ಕಚೇರಿಯಿಂದ ಫೋನ್ ಬಂತು ಸಾರ್ ನಾಳೆ 10 ಗಂಟೆಗೆ ಮಿಟಿಂಗ್ ಇದೆ ನೀವು ಬರಬೇಕಂತೆ ಡಿಸಿಯವರು ಹೇಳಿದ್ದಾರೆ. ಆಯಿತು ಸಾರ್ ಬರುತ್ತೇನೆ ಎಂದೆ. 

  ಬೆಂಗಳೂರಿನಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕಚೇರಿಗೆ ಹೋಗಿ ಕೇಳಿದಾಗ ಸತ್ಯದ ವರದಿ ಗೆ ಬದಲಾಗಿ ಇನ್ನೊಂದು  ಅಸತ್ಯದ ವರದಿ ಮುಂದೆ ಇಟ್ಟರು. ನಾನು ನನಗೆ ಗೊತ್ತಿದ್ದ ಎಲ್ಲಾ ಕಥೆ ಹೇಳಿದೆ ಆಮೇಲೆ ನಡಿರಿ ಸಾರ್ ‘ದೇವಿ’ ಇದ್ದಾಳೆ ನೋಡೋಣ ಎಂದು ಆ ವಿಷಯ ಮರೆತೆವು. ನನಗೆ ಸಾಯಂಕಾಲ ನಿದ್ದೆ ಬರಲಿಲ್ಲ, ರಾತ್ರಿ ಪೂರ್ತಿ ದೇವಿ ಪುಸ್ತಕ ಓದಿದೆ,

  ಬೆಳಿಗ್ಗೆ ಸಭೆಗೆ ಹೋಗುವಾಗ ನಾನು ಶ್ರೀ ಟಿ.ಆರ್.ರಘೋತ್ತಮರಾವ್, ಶ್ರೀ ಎಂ.ಎಸ್.ರುದ್ರಮೂರ್ತಿ, ಶ್ರೀ ಶಿವಕುಮಾರ್‍ರವರನ್ನು ಕರೆದೆ ಇವರೆಲ್ಲಾ ಒಂದು ರೀತಿ ನನಗೆ ಅಭಿವೃದ್ಧಿ ಪಂಡಿತರು. ಎಂಪಿಯವರ ಜೊತೆಯಲ್ಲಿ ಶ್ರೀ ಕೊಪ್ಪಳ್ ನಾಗರಾಜು ಮತ್ತು ಶ್ರೀ ಬಿ.ಎಸ್.ಕೈಲಾಸ್ ಬಂದರು.

  ಎಂಪಿಯವರು ಜಿಲ್ಲಾಧಿಕಾರಿ ಚೇಂಬರ್‍ಗೆ ಹೋದರು, ನಾವು ಸಭಾಂಗಣದಲ್ಲಿ ಕುಳಿತುಕೊಂಡೆವು, ಜಿಲ್ಲಾಧಿಕಾರಿ ಕಚೇರಿಯವರು ಸಾರ್ ತಾವು ಬರಬೇಕಂತೆ ಎಂಪಿಯವರು ಕರೆತಿದ್ದಾರೆ ನಾನು ಇಲ್ಲ ಅಂತ ಹೇಳಿಬಿಡಿ ಅಂದೆ.

 ಸಭೆಗೆ ಎಲ್ಲಾ ಅಧಿಕಾರಿಗಳು ಬಂದಿದ್ದರು, ಎಂಪಿಯವರು ಸೇರಿದಂತೆ ಅದೊಂದು ತುಂಬಿದ ಸಭೆ.

ಡಿಸಿ:-ಜಿಲ್ಲಾಧಿಕಾರಿಗಳು ಆರಂಭ ಮಾಡಿದರು. ನೋಡಿ ಬಿದರೆಹಳ್ಳಕಾವಲ್‍ನಲ್ಲಿ ಜಮೀನು ಇಲ್ಲ ಕೇವಲ 300 ಎಕರೆ ಇದೆ ಇದರಲ್ಲಿ ಹೆಚ್.ಎ.ಎಲ್. ಘಟಕ ಮಾಡೋಕೆ ಆಗಲ್ಲ, ಸುಮ್ಮನೆ ಕೆಲವರು ಜಮೀನು ಇದೆ ಸುಳ್ಳು ಹೇಳಿದ್ದಾರೆ. ಜನಪ್ರತಿನಿಧಿಗಳ ದಾರಿ ತಪ್ಪಿಸಿದ್ದಾರೆ.

ನಾನು:- ಸ್ವಾಮಿ ನಿಲ್ಲಿಸಿ ನಿಮ್ಮ ಮಾತು ಸುಳ್ಳು ಹೇಳುತ್ತಿದ್ದೀರಿ.

ಡಿಸಿ:- ನಾನು ಸತ್ಯಮೂರ್ತಿ ಸುಳ್ಳು ಹೇಳುವುದಿಲ್ಲಾ,

ನಾನು:- 300 ಎಕರೆ ಇದೆ ಅನ್ನೋದು ಸುಳ್ಳಲ್ವಾ?

ಡಿಸಿ:- ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ದಾಖಲೆ ತಗೊಂಡು ಹೇಳಬೇಕು ನೀವು?

ನಾನು:- ನಿಮ್ಮ ಕಚೇರಿಗೆ ಮೂಲ ದಾಖಲೆ ಕೊಟ್ಟಿರೊದೇ ನಾನು ಕೇಳಿ ನಿಮ್ಮ ಅಧಿಕಾರಿಗಳನ್ನು, ಆಮೇಲೆ ಆರ್.ಟಿ.ಐ ಮಾಡಿ ಅಂತ ಅಣ್ಣಾ ಅಜಾರೆ ಹೇಳೋದಕ್ಕಿಂತ ಮುಂಚೆ ನಿಮ್ಮ ಕಚೇರಿಗೆ ಅರ್ಜಿ  ಕೊಟ್ಟಿದ್ದೇನೆ.

ಡಿಸಿ:- ಮತ್ತೆ ಯಾಕೆ ಸುಳ್ಳು ಹೇಳಿದ್ದೀರಾ?

ನಾನು:- ನೀವು ಸುಳ್ಳು ಹೇಳುತ್ತಿರುವುದು, ಕೆಐಡಿಬಿಗೆ ನೋಟೀಫಿಕೇಷನ್ ಮಾಡುವಾಗ ಕೊಟ್ಟಿರೋ ದಾಖಲೆ ಸುಳ್ಳಾ? ನೀವು ಈ ಹಿಂದೆ ಕಳುಹಿಸಿರೋ ದಾಖಲೆ ಸುಳ್ಳಾ? ನಿಮ್ಮೊಬ್ಬರನ್ನು ಬಿಟ್ಟು ಇದು ಸುಳ್ಳು ಅಂತ ಯಾರಾದರೂ ಒಬ್ಬರ ಕೈಲಿ ಹೇಳಿಸಿ ನೋಡೋಣಾ?

ಡಿಸಿ:- ಮಾತು ಜಾಸ್ತಿ ಆಯಿತು, ನನ್ನನ್ನು ಏನೂ ಅಂದ್ಕೊಂಡಿದ್ದೀರಾ?

ನಾನು:- ಡಿಸಿಯಾಗಿ ಒಬ್ಬ ರಾಜಕಾರಣಿ ಅಂತ ಅಂದ್ಕೊಂಡಿದಿನಿ. ನಾನು ರೈತ ನನ್ನನ್ನು ನೀವು ಏನೂ ಮಾಡೋಕೆ ಅಗಲ್ಲ.

ಮಾತಿಗೆ ಮಾತು ಬೆಳೆಯಿತು, ಇಬ್ಬರೂ ಕಡಿಮೆ ಆಗಲಿಲ್ಲ, ಸಭೆಯಲ್ಲಿದ್ದವರು ಏನೇನೋ ಮಾತನಾಡಿದರು. ಇಬ್ಬರಿಗೂ ಕಿವಿಗೆ ಹೋಗಲಿಲ್ಲ,  ಸತ್ಯ ಹೇಳಬೇಕೆಂದರೆ ಇಬ್ಬರೂ ಮನುಷ್ಯ ರೀತಿ ವರ್ತಿಸಲಿಲ್ಲ.

   ಕೊನೆಗೆ ಎಂಪಿಯವರು ಡಿಸಿಯವರೇ ಕುಳಿತು ಕೊಳ್ಳಿ, ಏ ನೀನು ಸುಮ್ಮನಿರಪ್ಪಾ? ಈಗ ಒಂದು ಕೆಲಸ ಮಾಡಿ ಡಿಸಿಯವರೇ ಬಿದರೆಹಳ್ಳ ಕಾವಲ್‍ನಲ್ಲಿ ಒಂದು ಸಭೆ ಕರೆಯಿರಿ ಅಲ್ಲೇ ರೈತರ ಸಮ್ಮುಖದಲ್ಲಿ ತೀರ್ಮಾನ ಮಾಡೋಣ ಅಂದರು.

ಡಿಸಿ:- ನನ್ನನ್ನು ರೈತರು ಕೊಲೆ ಮಾಡುತ್ತಾರೆ.

ನಾನು:- ನಿಮ್ಮನ್ನು ಕೊಲೆ ಮಾಡಲು ಬಂದರೆ ನಾನು ರಕ್ಷಣೆ ಕೋಡುತ್ತೇನೆ.

ಡಿಸಿ:- ನೀನು ಸರ್ವೇ ಮಾಡುವಾಗ ಬರಬೇಕು, ಬರದಿದ್ದರೆ ‘ಗಡಿಪಾರು’ ಮಾಡುತ್ತೇನೆ.

ನಾನು:- ಮುಚ್ಚಿರಿ ಬಾಯನಾ ಗಡಿಪಾರು ಮಾಡೋಕೆ ನಾನೇನು ನಿನ್ನಂತ ಅಲ್ಕಾ ಕೆಲಸ ಮಾಡಿಲ್ಲ, ನೀವು ಸಂಬಳ ತಗೊಂಡು 30 ವರ್ಷ ಕೆಲಸ ಮಾಡಿದ್ದರೆ, ನಾನು ಬಿಟ್ಟಿಯಾಗಿ 30 ವರ್ಷ ಕೆಲಸ ಮಾಡಿದ್ದೇನೆ, ನಿನ್ನ ಮನೆ ಆಳು ಅಂದ್ಕೊಂಡಿದಿರಾ ನನ್ನ ಭಾಷೆ ದಿಕ್ಕು ತಪ್ಪಿತು.

  ಎಂಪಿಯವರು ಪುನಃ ಮಧ್ಯೆ ಪ್ರವೇಶಿಸಿ ಡಿಸಿಯವರೇ ಪೋಲೀಸ್ ರಕ್ಷಣೆ ಕೊಡಿಸ್ತಿನಿ ಬನ್ನಿ ಕೊಲೆ ಮಾಡದ ಹಾಗೆ ನೋಡಿಕೊಳ್ಳುತ್ತೇನೆ. ನೋಡ್ರಿ ಅವನು ಆ ಊರಿನವನು ಆತನಿಗೆ ಎಲ್ಲಾ ಗೊತ್ತಿದೆ, ಅಲ್ಲದೆ ಅವನಿಗೆ ಈ ಕೆಲಸ ಮಾಡಲು ಯಾರು ಸಂಬಳ ಕೊಟ್ಟಿಲ್ಲಾ ಸುಮ್ಮಿನಿರಿ, ನಿಮಗೆ ಯಾರೋ ತಪ್ಪು ಮಾಹಿತಿ ಕೊಟ್ಟವರೆ, ಕಾಲೋನಿ ಜನ ಒಳ್ಳೆಯವರು ಅವರ ಜಾಗ ಬಿಡೋಣ ಅವರು ಕೊಲೆ ಮಾಡಲ್ರಿ, ಜಾಗ ಬಿಟ್ಟರೆ ‘ಮಂಗಳಾರಾತಿ’ ಮಾಡ್ತಾರೆ ಅವರೆಲ್ಲಾ ನನ್ನ ಶಿಷ್ಯರು ಎಂದು ಡಿಸಿಯವರಿಗೆ ಹೇಳಿದರು. ಇದೇ ‘ಮಂಗಳಾರತಿ ವರದಿ’

  ನೋಡಾಪ್ಪಾ ಇವರು ಡಿಸಿಯವರು ನೀನು ಹಾಗೆ ರೇಗಿದರೆ ತಪ್ಪು, ಇರು ನೋಡೋಣ ಎಲ್ಲಾ ಇವತ್ತಿಗೆ ಮುಗಿಯಲ್ಲ, ಸ್ವಲ್ಪ ಶಾಂತಿ ಬೇಕು ಇದು ಒಳ್ಳೆಯದಲ್ಲ ಮುಖ್ಯ ಮಂತ್ರಿಗಳಿಲ್ಲವಾ? ಮೌನವಾಗಿರು ಇನ್ನೊಂದು ಮಾತು ಬೇಡ ಎಂದು ಗದರಿದರು.

ಡಿಸಿ:- ಸರಿ ಸಾರ್ ನೀವು ಹೇಳಿದ ಹಾಗೆ ಮಿಟಿಂಗ್ ಮಾಡೋಣ, ನಂತರ ಸೂಕ್ತ ತೀರ್ಮಾನ ಮಾಡೋಣ ಎಂಪಿಯವರು ಲೇಟ್ ಮಾಡ ಬೇಡಿ 3-4 ದಿವಸದಲ್ಲಿ ಮಾಡಿ ಎಂದು ಹೇಳಿದರು. ಸಭೆ ಮುಕ್ತಾಯವಾಯಿತು.

 ಮಾನ್ಯ ನಿ. ಜಿಲ್ಲಾಧಿಕಾರಿ  ಶ್ರೀ ಕೆ.ಎಸ್. ಸತ್ಯಮೂರ್ತಿಯವರೇ ನಾನು ಆ ದಿನ ಅಧಿಕಾರಿಗಳ ಸಭೆಯಲ್ಲಿ ಆ ರೀತಿ ಮಾತನಾಡಿದ್ದು ತಮಗೆ ಅವಮಾನವಾಗಿದೆ, ಅದು ನನಗೆ ಗೊತ್ತು ನಾನು ಆ ರೀತಿ ಮಾತನಾಡದಿದ್ದರೆ ಹೆಚ್.ಎ.ಎಲ್ ಘಟಕ ಮುಗಿದ ಅಧ್ಯಾಯ ಆಗುತ್ತಿತ್ತು. ನಿಮಗೆ ನೋವಾಗಿದ್ದರೆ ನಾನು ಈಗ ನಿಮ್ಮ ಕ್ಷಮೆ ಕೇಳುತ್ತೇನೆ.

   ಶ್ರೀ ಜಿ.ಎಸ್.ಬಸವರಾಜ್‍ರವರು ಮತ್ತು ಶ್ರೀ ಟಿ.ಆರ್ ರಘೋತ್ತಮರಾವ್‍ರವರು ಮೂರು ದಿವಸ ನನ್ನ ಬಳಿ ಮಾತನಾಡಲಿಲ್ಲ, ನಾನು ಮಾತನಾಡಲಿಲ್ಲ ನಾಲ್ಕನೇ ದಿನಕ್ಕೆ ಎಂಪಿಯವರು ಫೋನ್ ಮಾಡಿ ಮಿಟಿಂಗ್ ಏನೇನು ಮಾಡ್ತಿಯಪ್ಪಾ ಅಂದರು. ಸಾರ್ ಅದು ಸರ್ಕಾರಿ ಸಭೆ ತಹಶೀಲ್ದಾರ್ ಮಾಡುತ್ತಾರೆ ಎಂದೆ, ಜನಗಳಿಗೆ ಹೇಳಿ ಗಲಾಟೆ ಆಗಬಾರದು ಎಂದು ಸಲಹೆ ನೀಡಿದರು.

ಕೊಳ್ಳಿ ಇಟ್ಟ ಜಿಲ್ಲಾಧಿಕಾರಿ ಶ್ರೀ ಕೆ.ಎಸ್.ಸತ್ಯಮೂರ್ತಿ

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಬಿದರೆಹಳ್ಳ  ಕಾವಲ್‍ನಲ್ಲಿ ಸರ್ಕಾರಿ ಜಮೀನು ಇದೆ, ಇಲ್ಲಿ ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆ ಸ್ವಾಮ್ಯದ ಹೆಚ್.ಎ.ಎಲ್.ವತಿಯಿಂದ ಯುದ್ಧ ಹೆಲಿಕ್ಯಾಪ್ಟರ್ ತಯಾರಿಸುವ ಘಟಕವನ್ನು ಆರಂಭಿಸಬಹುದು ಎಂಬ ವರದಿಯನ್ನು ಒಬ್ಬರೇ ಜಿಲ್ಲಾಧಿಕಾರಿ ಶ್ರೀ ಕೆ.ಎಸ್.ಸತ್ಯಮೂರ್ತಿಯವರು ಸುಮಾರು 100 ದಿವಸದ ಅವಧಿಯಲ್ಲಿ ಮೂರು ರೀತಿ ವರದಿಗಳನ್ನು ನೀಡುತ್ತಾರೆ. ‘ಅಸತ್ಯದ ವರದಿ’ಗೆ ತುಮಕೂರು ಉಪವಿಭಾಗಾಧಿಕಾರಿಯಾಗಿದ್ದ ಶ್ರೀ ನಕುಲ್‍ರವರು ಇಂತಹ ವರದಿ ನೀಡಲು ನಾನು ‘ಐಎಎಸ್’ ಮಾಡಿ ಬಂದಿಲ್ಲ ಎಂದು ವರದಿ ನೀಡಲೇ ಇಲ್ಲವಂತೆ. ತಹಶೀಲ್ದಾರ್‍ರವರು ಪಾಪ ಭಯಭೀತರಾಗಿ  ನೀಡಿದ್ದಾರಂತೆ.

ಕೆ.ಎಸ್.ಸತ್ಯಮೂರ್ತಿ ಸತ್ಯದ ವರದಿದಿನಾಂಕ: 02.08.2013  ರಂದು  772 ಎಕರೆ 3 ಗುಂಟೆ

ಕೆ.ಎಸ್.ಸತ್ಯಮೂರ್ತಿ ಅಸತ್ಯದ ವರದಿದಿನಾಂಕ: 23.08.2013  ರಂದು  300 ಎಕರೆ

ಕೆ.ಎಸ್.ಸತ್ಯಮೂರ್ತಿ ಮಂಗಳಾರತಿ ವರದಿದಿನಾಂಕ: 16.11.2013 ರಂದು 610 ಎಕರೆ

  ಗುಮಾಸ್ತ ಇಟ್ಟ ಚುಕ್ಕೆಯನ್ನು ಗೌರ್ವನರ್ ಕಿತ್ತರು ಬರಲ್ಲವಂತೆ    ಎಂಬ ಅಮಲಿನಲ್ಲಿ ಈ ರೀತಿ ನೀಡಿರ ಬಹುದು. ಸತ್ಯದ ಮತ್ತು ಅಸತ್ಯದ ವರದಿಯಲ್ಲಿ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಪ್ರತಿ ರವಾನಿಸಿದ್ದಾರೆ, ‘ಮಂಗಳಾರತಿ’ ವರದಿಯಲ್ಲಿ ಕೇಸ್ ಹಾಕಲು ಅನೂಕೂಲವಾಗುವಂತೆ ಅರ್ಜಿ ಹಾಕಿದವರಿಗೂ ವಿಳಂಭವಾಗಬಾರದು ಎಂದು ಪ್ರತಿಯನ್ನು ಕಳುಹಿಸಿರುವ ತಂತ್ರ ನಿಜಕ್ಕೂ ಅದ್ಭುತ.                       

ಇವರ ಮಹಾನ್ ಉದ್ದೇಶ ಗುಬ್ಬಿ ತಾಲ್ಲೂಕು ಬಿದರೆಹಳ್ಳ  ಕಾವಲ್‍ನಲ್ಲಿನ ಸರ್ಕಾರಿ ಜಮೀನಿಗೆ ಕೇಂದ್ರ ಸರ್ಕಾರದ ಹೆಚ್.ಎ.ಎಲ್ ಘಟಕ ಬರಬಾರದು. ಇವರು ಮಣಿದ ಲಾಭಿ ನೀಗೂಢ ರಹಸ್ಯ. ರಾಜಕೀಯ ಒತ್ತಡವೋ? ಇದೆ ಜಾಗದಲ್ಲಿ ಖಾಸಗಿ ಕಂಪನಿಗೆ ಕಬ್ಬಿಣದ ಪ್ಯಾಕ್ಟರಿ ಮಾಡಲು ಜಮೀನು ನೀಡಲಾಗಿತ್ತು, ಪಾಪ ಖಾಸಗಿ ಮೈನ್ಸ್ ಪ್ರೀತಿಯೋ/ಮಮತೆಯೋ ? ಅವರೇ ಉತ್ತರಿಸಬೇಕು. ಇಂತಹ ಪುಣ್ಯಾತ್ಮರ ವಿರುದ್ದ ಹೋರಾಟ ಸಾಕಪ್ಪಾ ಸಾಕು!

ಜಯಚಂದ್ರರವರೇ ನಿಮ್ಮ ಕಾಲಿಗೆ ಬೀಳುತ್ತೇನೆ.

  ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರವರು ಹೆಚ್.ಎ.ಎಲ್ ಘಟಕವನ್ನು ತನ್ನ ಸ್ವಂತ ಕ್ಷೇತ್ರ ಶಿರಾಕ್ಕೆ ಕೊಂಡೊಯ್ಯಲು ಶತ ಪ್ರಯತ್ನ ಮಾಡುತ್ತಿದ್ದರು. ಬಹುಷಃ ನಾನು ಮತ್ತು ಜಿಲ್ಲಾಧಿಕಾರಿ ಶ್ರೀಕೆ.ಎಸ್. ಸತ್ಯಮೂರ್ತಿರವರು ಸಭೆಯಲ್ಲಿಯೇ ಜಗಳವಾಡಿದ್ದು ಇದೇ ಕಾರಣಕ್ಕೆ. ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ ಮೇಲೆ ಅವರ ಮಾತು ಕೇಳಬೇಕಾದ ಅನಿವಾರ್ಯತೆ ಅಧಿಕಾರಿಗಳಿಗೆ ಸೃಷ್ಠಿಯಾಗುವುದು ಸಹಜ.

  ನಾನು ಶ್ರೀ ಜಿ.ಎಸ್.ಬಸವರಾಜ್‍ರವರಿಗೆ ಹೇಳಿದೆ ಸಾರ್ ಶ್ರೀ ಟಿ.ಬಿ.ಜಯಚಂದ್ರವರು ಜೊತೆ ಈ ವಿಚಾರ ಮಾತಾಡಲೇ ಬೇಕು, ಇಬ್ಬರ ಜಗಳ ಮೂರನೆಯವರಿಗೆ ಲಾಭ ಆಗಿ ಜಿಲ್ಲೆಗೆ ಯೋಜನೆ ಕೈತಪ್ಪುತ್ತೆ ಎಂದಾಗ ಅವರು ಮಾತಾಡು ನಾನು ಏನು ಬೇಡ ಅಂದಿಲ್ಲವಲ್ಲ ಎಂದರು.

  ನಾನು ಬೆಂಗಳೂರಿಗೆ ಹೋಗಿ ಶ್ರೀ ಟಿ.ಬಿ.ಜಯಚಂದ್ರವರ ಜೊತೆ ಮಾತಾಡಿ ಸಾರ್ ನೀವು, ಡಿಸಿ, ಎಂಪಿ ಕಳಿತುಕೊಂಡರೇ ಎಲ್ಲಾ ಸರಿ ಹೋಗುತ್ತೆ ಅಂದಾಗ ಅವರು ನಾಳೆ ಮಿಟಿಂಗ್ ಇದೆ ಡಿಸಿ ಆಫೀಸ್‍ನಲ್ಲಿ ಮಾತಾಡೋಣಾ ಎಂಪಿಯವರಿಗೂ ಹೇಳಿಬಿಡು ಅಂದ್ರು.

   ನಾನು ಮಿಟಿಂಗ್ ಮುಗಿಯುತ್ತಲೆ ಕಾಣಿಸಿಕೊಂಡೇ ಎಂಪಿಯವರು ಅಲ್ಲೇ ಮಿಟಿಂಗ್‍ನಲ್ಲಿದ್ದರು, ಬಾ ಕುಂದರನಹಳ್ಳಿ ಅಂತ ಕರೆದರು. ಶ್ರೀ ಟಿ.ಬಿ.ಜಯಚಂದ್ರವರು, ಶ್ರೀ ಜಿ.ಎಸ್.ಬಸವರಾಜ್‍ರವರು, ಶ್ರೀಕೆ.ಎಸ್. ಸತ್ಯಮೂರ್ತಿರವರು, ಶ್ರೀ ಗೊವಿಂದರಾಜುರವರು ಜಿಲ್ಲಾ ಪಂಚಾಯತ್ ಸಿ.ಇ.ಓ ಮತ್ತು ನಾನು ಐದು ಜನ ಮಾತ್ರ ಡಿಸಿ ಚೇಂಬರ್‍ನಲ್ಲಿ ನಡೆದ ಸಭೆಯಲ್ಲಿ ಇದ್ದೇವು.

   ಸರಿ ಟಿಬಿಜೆ ಶುರು ಮಾಡಿದ್ದರು ಡಿಸಿಯವರೇ ಏನು  ಈ ಕುಂದರನಹಳ್ಳಿ ಸಮಾಚಾರ, ಎಲ್ಲಿಗೆ ಬಂತು ಹೆಚ್.ಎ.ಎಲ್ ಘಟಕ ಅಂದ್ರು. ಡಿಸಿಯವರು ಸಾರ್ ಶ್ರೀ ವಿದ್ಯಾಶಂಕರ್‍ರವರು ಬೇಗ ರೆಕಾರ್ಡ್ ಕಳುಹಿಸಲು ತಿಳಿಸಿದ್ದಾರೆ ಅಂದ್ರು.  ನಾನು ತಕ್ಷಣ ಶುರು ಮಾಡಿ ಸಾರ್ ನಿಮ್ಮ ಕಾಲಿಗೆ ಬೀಳುತ್ತೇನೆ ರೆಕಾರ್ಡ್ ಕಳುಹಿಸಲು ಹೇಳಿ, ನೀವು ಅದೃಷ್ಟ ಇದ್ದರೆ ಮುಖ್ಯಮಂತ್ರಿ ಆಗುವವರು, ನೀವು ಯಾವ ಯೋಜನೆ ಬೇಕಾದರೂ ಮಾಡಿಸಿಕೊಳ್ಳಿ ಇದು ನನ್ನ ಬಹಳ ವರ್ಷಗಳ ಕನಸು ಸಾರ್ ಅಂದೆ.

  ಶ್ರೀ ಟಿ.ಬಿ.ಜಯಚಂದ್ರವರು ಸೇರಿದಂತೆ ಒಂದೆರಡು ನಿಮಿಷ ಯಾರು ಮಾತನಾಡಲಿಲ್ಲ ಮೌನ. ಸರಿ ಡಿಸಿಯವರೇ ಈ ಜಿಲ್ಲೇಲಿ ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳುತ್ತೇನೆ ಆದರೇ ಈ ಕುಂದರನಹಳ್ಳಿ ರಮೇಶ್‍ಗೆ ತೊಂದರೆ ಕೊಡೊಕೆ ಮನಸ್ಸು ಬರಲ್ಲ ಆತನಿಗೆ ಕಮಿಟ್‍ಮೆಂಟ್ ಇದೆ, ರೆಕಾರ್ಡ್ ಕಳುಹಿಸಿ, ಬಸವರಾಜ್‍ರವರೇ ಬೇಗ ಮಾಡಿಸಿಬಿಡಿ, ಎಂದು ಸರಿ ಬರ್ತಿನಿ ಬಸವರಾಜ್ ಶಿರಾಕ್ಕೆ ಹೋಗಬೇಕು ಎಂದು ಹೊರಟೇ ಬಿಟ್ಟರು. ಇದು ‘ಶಿರಾ ಮತ್ತು ಬಿದರೆಹಳ್ಳಕಾವಲ್ ಗೊಂದಲ ಬಗೆ ಹರಿದ ಇತಿಹಾಸ’ ಕೇವಲ ಮೂರು ನಿಮಿಷದಲ್ಲಿ. ಜಯಚಂದ್ರರವರು ದೊಡ್ಡ ಮನಸ್ಸು ಮಾಡಿ ತ್ಯಾಗ ಮಾಡಿದರು.

  ಹೊರಗಡೆ ಬಂದ ಮೇಲೆ ಬಸವರಾಜ್‍ರವರು ಏನಯ್ಯಾ ಒಂದು ಫೋರಂ ಅಧ್ಯಕ್ಷ ಆಗಿ ಜಯಚಂದ್ರನಿಗೆ ಕಾಲಿಗೆ ಬೀಳುತ್ತೇನೆ ಅಂತೀಯಾ ಎಂದು ಕಿಚಾಯಿಸಿದರು. ಸಾರ್ ನಾನು ನೀವು ಜೊತೆಯಾಗಿ ಎಷ್ಟು ವರ್ಷ ಆಯಿತು ಅಂದೆ. ಏಕೆ 25 ವರ್ಷ ಆಗಿರಬೇಕಲ್ಲವಾ ಅಂದ್ರು. ಯಾವತ್ತಾದರೂ ನಿಮ್ಮ ಕಾಲಿಗೆ ಬಿದ್ದೀದ್ದಿನಾ ಅಂದೆ. ಹುಕಣಯ್ಯಾ ಯಾವುತ್ತು ಬಿದ್ದಿಲ್ಲ ಅಲ್ವಾ ಅಂದ್ರು , ಸರಿ ಒಂದು ಒಳ್ಳೆ ಕೆಲಸಕ್ಕೆ ನೀವು ಮತ್ತು ಟಿಬಿಜೆ ಇಬ್ಬರೂ ಹಿರಿಯರು ಕಾಲಿಗೆ ಬಿದ್ದರು ತಪ್ಪಿಲ್ಲ ಆದರೆ ನನಗೆ ನಾಟಕ ಆಡೋಕೆ ಬರಲ್ಲ ಸಾರ್ ಅಂದೆ.

  ಬಸವರಾಜ್‍ರವರಿಗೂ ಸಮಾಧಾನ ಆಯಿತು, ಒಳ್ಳೆ ಕೆಲಸ ಮಾಡಿದೆ ಕಣಯ್ಯಾ ಸುಮ್ಮನೆ ಎರಡು ವರ್ಷ ಹಾಳಾಗಿ ಹೋಗಿತ್ತು, ಡಿಸಿ ಕಳುಹಿಸುತ್ತಾರೆ ತಿರುಗಾ ಬೈಯಬೇಡಪ್ಪಾ ಅಂದು ಬುದ್ದಿ ಹೇಳಿದರು. ಇದೂ ಒಂದು ಪ್ರಮುಖ ಘಟ್ಟ.

ಶ್ರೀ ಎಸ್.ಆರ್. ಶ್ರೀನಿವಾಸ್ರವರು ಜೈ

  ಮಾಜಿ ಸಚಿವರು ಹಾಗೂ ಗುಬ್ಬಿ ವಿಧಾನಸಭಾ ಸದಸ್ಯರಾದ ಶ್ರೀ ಎಸ್.ಆರ್. ಶ್ರೀನಿವಾಸ್‍ರವರು ಬಿದರೆಹಳ್ಳಕಾವಲ್‍ನಲ್ಲಿ ಯಾವುದಾದರೂ ಯೋಜನೆ ಬರಲಿದೆ ಎಂದು ನನ್ನ ಸ್ಟೇಟ್ ಮೆಂಟ್ ಮಾಧ್ಯಮದಲ್ಲಿ ಬಂದರೆ ಅವರು ಅಥವಾ ಅವರ ಪಕ್ಷದ ಹೊಸಕೆರೆ ರೇಣುಕಾರಾಧ್ಯರವರು ಮತ್ತು ಇತರೆಯವರು ರೈತರನ್ನು ಒಕ್ಕಲೆಬ್ಬಿಸಲು ಬಿಡುವುದಿಲ್ಲಾ ಎಂದು ಸ್ಟೇಟ್ ಮೆಂಟ್ ಮಾಡುವುದು ಸಾಮಾನ್ಯವಾಗಿತ್ತು.

  ಒಂದು ದಿವಸ ಹೊಯ್ಸಳ ಹೋಟೆಲ್ ಮುಂದೆ ಅಕ್ಮಾತ್ ಆಗಿ ಎದುರು ಬದುರು ಆದೇವು. ನಾನು ನಮಸ್ಕಾರ ಸಾರ್ ಅಂದೆ ತಕ್ಷಣ ಅವರು ಅದೇನೋ ಮಾಡುತ್ತಿನಿ ಅಂತಿದ್ದಲ್ಲಾ ಎಲ್ಲಿಗೆ ಬಂತು ಅಂದ್ರು. ಯಾವ ವಿಚಾರ ಸಾರ್ ಅಂದೆ ಅವರು ಅದೇ ಬಿ.ಹೆಚ್.ರಸ್ತೆ ಎಂದರು.

  ಅದು ಬಿಡಿ ಸಾರ್ ಮೊದಲು ಬಿದರೆಹಳ್ಳಕಾವಲ್ ಬಗ್ಗೆ ಹೇಳಿ ಅಂದೆ. ಅದೇನೋ ಅದು ಮಾಡ್ತಿನಿ, ಇದು ಮಾಡ್ತಿನಿ ಅಂತಿಯಾ ಒಂದು ಆಗಲಿಲ್ಲ, ಅಂದಾಗ ನೀವು ಬಿಡಬೇಕಲ್ಲಾ ವಿರುದ್ಧ ಸ್ಟೇಟ್ ಮೆಂಟ್ ಮಾಡ್ತೀರಾ ಅಂದೆ. ನೋಡಪ್ಪಾ ನನಗೆ ಓಟು ಬೇಕು, ನಾನು ಹೇಳ್ತನಿ ನೀವು ಮಾಡೊದು ಮಾಡಿ ಅಂದ್ರು ಅಷ್ಟರ ವೇಳೆಗೆ ಯಾರ್ಯಾರೊ ಬಂದ್ರು ವಿಷಯ ಬದಲಾಯಿತು.

  ಜಿಲ್ಲಾಧಿಕಾರಿ ಮತ್ತು ನನಗೂ ಜಗಳ ಆದ ಮೇಲೆ ಬಿದರೆಹಳ್ಳಕಾವಲ್‍ನಲ್ಲಿ ರೈತರ ಸಭೆ ಮಾಡಲು ಶ್ರೀ ಜಿ.ಎಸ್.ಬಸವರಾಜ್‍ರವರು ತಿರ್ಮಾನ ಮಾಡಿದರು. ಎಂಪಿಯವರು ದೆಹಲಿಯಲ್ಲಿದ್ದರು ನಾನು ಫೋನ್ ಮಾಡಿ ಸಾರ್ ಇವತ್ತು ಗುಬ್ಬಿ ಎಂಎಲ್‍ಎ ಭೇಟಿ ಮಾಡುತ್ತೇನೆ ಎಂದೆ. ಯಾಕೆ ಅಂದ್ರು ಬಿದರೆಹಳ್ಳಕಾವಲ್ ಸಭೆಯ ಬಗ್ಗೆ ಮಾತಾಡಲು ಅಂದೆ. ನೀನು ಮಾಡಿದ್ದಕ್ಕೆಲ್ಲಾ ಪತ್ರಿಕೆಯಲ್ಲಿ ವಿರುದ್ಧ ಹೇಳಿಕೆ ಇರುತ್ತೆ ಬೇಡ ಬಿಡು ಒಬ್ಬೊರಿಗೊಬ್ಬರು ಕಿತ್ತಾಡಿರಾ? ಅಂದಾಗ ಇಲ್ಲ ಹೋಗಿ ಭೇಟಿಯಾಗಿ ಬರುತ್ತೇನೆ ಎಂದು ಹೇಳಿದೆ.

  ಕಾವೇರಿ ಸರ್ವಿಸ್ ಸ್ಟೇಷನ್ ಶ್ರೀ ಲೋಕೇಶ್‍ರವರು ಮತ್ತು ಹೊದಲೂರು ಶ್ರೀ ವಿಜಯಕುಮಾರ್‍ರವರಿಗೆ ಫೋನ್ ಮಾಡಿ ನಾಳೆ ಶಾಸಕರನ್ನು ಭೇಟಿ ಮಾಡಬೇಕು ಬರುತ್ತೇನೆ ಬೆಳಿಗ್ಗೆ ಎಲ್ಲಿಗೆ ಬರಲಿ ಹೇಳಿ ಅಂದಾಗ ಇಬ್ಬರೂ ಸಹ ಸ್ಟೇಡಿಯಂ ಬಳಿ ಬರಲು ತಿಳಿಸಿದರು.

  ಸಾಯಂಕಾಲ ಎಂಪಿಯವರು ಮತ್ತೇ ಫೋನ್ ಮಾಡಿದರು, ಡಿಸಿಗೆ ಮಿಟಿಂಗ್‍ಗೆ ಎಂ.ಎಲ್.ಎ  ಕರೆಯೋಕೆ ಹೇಳಿದಿನೆ ಕಣಯ್ಯಾ, ಅವರ ಅಧ್ಯಕ್ಷತೆಯಲ್ಲಿ ಸಭೆ ಆಗಲಿ ಅಂದ್ರು, ಒಳ್ಳೆ ಕೆಲಸ ಆಯಿತು ಬಿಡಿ ಎಂದು ಬೇರೆ ವಿಚಾರ ಮಾತನಾಡಿದೆವು.

  ಬೆಳಿಗ್ಗೆ ವಿಜಿ ಫೋನ್ ಮಾಡಿ ಬಾರಪ್ಪಾ ಎಂ.ಎಲ್.ಎ. ಯವರಿಗೆ ಹೇಳಿದಿವೆ ಇಲ್ಲೆ ಇದಾರೆ ಅಂದ್ರು. ನಾನು ಹೋದೆ. ಶ್ರೀ ಶ್ರೀನಿವಾಸ್‍ರವರು ಏನು ಸಮಾಚಾರ ಅಂದಾಗ ಸಾರ್ ಬಿದರೆಹಳ್ಳಕಾವಲ್‍ನಲ್ಲಿ  ಸಭೆ ಮಾಡಬೇಕು ಡಿಸಿಗೆ ಹೇಳಿ ಅಂದೆ, ಹೆಚ್.ಎ.ಎಲ್  ಬಗ್ಗೆನಾ,  ಹೌದು ಸಾರ್ ಅಂದಾಗ. ಡಿಸಿಗೆ ಫೋನ್ ಮಾಡಿ ಎಂಪಿಯವರು ಇರೋ ಟೈಮ್‍ನಲ್ಲಿ ಮಿಟಿಂಗ್ ಕರೆದು ಬಿಡಿ, ಆ ಹೆಚ್.ಎ.ಎಲ್ ವಿಚಾರ ಬಗೆ ಹರಿಸೋಣ ಎಂದು ಹೇಳಿದರು.

  ಆ ಮೇಲೆ ಏನ್ ಮಾರಾಯ ಅದು ಆಗುತ್ತಾ ಕಷ್ಟ ಅಂತಾರೆ ಅಂದ್ರು, ಇಲ್ಲ ಸಾರ್ ಶೇ 100 ರಷ್ಟು ಆಗುತ್ತೆ. ಶ್ರೀ ಟಿ.ಬಿ.ಜಯಚಂದ್ರವರು ಒಪ್ಪಿದ್ದಾರೆ ಎಂದೆ. ಸರಿ ಬಿದರೆಹಳ್ಳಕಾವಲ್‍ನವರು ಅಂದ್ರು, ಅವರ ವಿಚಾರವೇ ಬರಲ್ಲಾ   ಹೆಚ್.ಎ.ಎಲ್‍ಗೆ ಸುಮಾರು 650 ಎಕರೆ ಕೊಡೊಣಾ ಉಳಿದಿದ್ದು ಅವರಿಗೆ ಬಿಡಣೋ ಅಂದೆ, ಎಂಪಿಯವರು ಏನು ಹೇಳ್ತಾರೆ ಅವರು ಸಹ ಯಾವ ಕಾರಣಕ್ಕೂ ಅವರಿಗೆ ತೊಂದರೆ ಮಾಡಬಾರದು ಎಂಬ ನಿಲುವಿಗೆ ಬದ್ಧರಾಗಿದ್ದರೇ ಎಂದೆ.

 ಸರಿ ಏನೋ ಒಂದು ಮಾಡಿಸಿ ಬಿಡ್ರಪ್ಪಾ ನಾನು ಸಣ್ಣ ಹುಡುಗನಿಂದಲೂ ಎಂಪಿ, ನೀನು ಹೇಳಿದ್ದೇ ಆಗಿದೆ ಎಂದರು. ಅಂಬಿಕಾ ಹೋಟೆಲ್‍ಗೆ ಹೋಗಿ ಕಾಫಿ ಕುಡಿದು ಅವರಿಬ್ಬರಿಗೂ ಥ್ಯಾಂಕ್ಸ್ ಹೇಳಿ ಬಂದೆ. ಎಂಪಿಯವರಿಗೆ ಫೋನ್ ಮಾಡಿದೆ  ಏನಾಯ್ತಪ್ಪಾ ಅಂದ್ರು ನಿವೆಲ್ಲಾ ಕಳ್ಳರು ಬಿಡಿ ನಾವು ಮಧ್ಯೆದಲ್ಲಿ ಬಂದ್ರೆ ಅಷ್ಟೆ ಎಂದೆ ಏಕೆ ಅಂದ್ರು.

  ಅಲ್ಲಾ ಸ್ವಾಮಿ ನೀವು ಡಿಸಿಗೆ ಎಂ.ಎಲ್.ಎ ಅಧ್ಯಕ್ಷತೆಗೆ ಮಿಟಿಂಗ್ ಕರೆಯೋಕೆ ಹೇಳಿದ್ದೀನಿ ಅಂತಿರಾ, ಎಂ.ಎಲ್.ಎ ಯವರು ಡಿಸಿಯವರಿಗೆ ಎಂಪಿಯವರು ಇದ್ದಾಗ ಮಿಟಿಂಗ್ ಕರೆಯಿರಿ ಅಂತಾರೆ. ಯಾರನ್ನು ನಂಬೋದು ಅಂದಾಗ ಸರಿ ಏನು ಹೇಳಿನಪ್ಪ ಅಂದ್ರು ಅವರು  650 ಎಕರೆ ಕೊಡಲು ಒಪ್ಪಿದ್ದಾರೆ ಎಂದಾಗ ಒಳ್ಳೆ ಕೆಲಸ ಮಾಡಿದೆ ಕಣಯ್ಯಾ ಏನೋ ಒಂದು ಬಹಳ ವರ್ಷದ ಯೋಜನೆಗೆ ಮುಕ್ತಿ ಸಿಗುತ್ತೆ ಎಂದರು.

  ಮತ್ತೆ ಏಕೆ ವಿರೋಧ ಮಾಡ್ತಿದ್ದೆ ಅಂತ ಕೇಳಿಲಿಲ್ಲವ ಅಂದ್ರು, ಸಾರ್ ಅವರು ಆ ಕ್ಷೇತ್ರದ ಶಾಸಕರು ಒಂದು ಸರಿನಾದರೂ ಈ ಬಗ್ಗೆ ಒಂದು ಮಿಟಿಂಗ್ ಮಾಡಿಲ್ಲ ತಪ್ಪಲ್ವ ಅಂದಾಗ, ಅದು ಸರಿ ಬಿಡು ಅಂದ್ರು. ಈ ಯೋಜನೆಗೆ ಶ್ರೀನಿವಾಸ್‍ರವರು ಸಹ ವಿರೋಧ ಮಾಡಲಿಲ್ಲ ಕಮ್ಮುನಿಕೇಷನ್ ಗ್ಯಾಪ್ ಅಷ್ಟೆ. ಕಾಲ ಕೂಡಿ ಬಂದಾಗ ಎಲ್ಲವೂ ಸರಿಹೋಗುತ್ತೆ ಎಂಬ ಹಿರಿಯರ ಮಾತು ಸತ್ಯ.

ಮಹತ್ವದ ತಿಮ್ಮಳಿಪಾಳ್ಯದ ಸಭೆ

ಗುಬ್ಬಿ ತಾಲ್ಲೂಕು ಬಿದರೆಹಳ್ಳಕಾವಲ್ ಜಮೀನಿನ ಯೋಜನೆಗೆ ಸಂಬಂಧಿಸಿದಂತೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ವತಿಯಿಂದ ಹಲವಾರು ಸಭೆ ಮಾಡಿದ್ದೇವೆ, ಶ್ರೀ ಜಿ.ಎಸ್.ಬಸವರಾಜ್‍ರವರು ಸಹ ಆನೇಕ ಸಭೆಗಳಲ್ಲಿ ಭಾಗವಹಿಸಿದ್ದಾರೆ.

 ಆದರೆ ಅಧಿಕೃತವಾಗಿ ಜಿಲ್ಲಾಡಳಿತ ರೈತರ ಸಭೆ ನಡೆಸುತ್ತಿರುವುದು ಇದೇ ಮೊದಲು. ಈಗಾಗಲೇ ಜಿಲ್ಲಾ ಉಸ್ತವಾರಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಸಭೆ, ವಿಧಾನಸಭಾ ಸದಸ್ಯರಾದ ಶ್ರೀ ಎಸ್.ಆರ್. ಶ್ರೀನಿವಾಸ್‍ರವರ ಅಭಿಪ್ರಾಯ ಎಲ್ಲಾ ಪೂರಕವಾಗಿ ನಡೆದಿತ್ತು.

 ಗುಬ್ಬಿ ತಾಲ್ಲೂಕಿನ ರೈತ ಸಂಘಟನೆಗಳು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಮತ್ತು ಸಂಘ ಸಂಸ್ಥೆಗಳ ಅಭಿಪ್ರಾಯಗಳನ್ನು ಪಡೆದು ಎಲ್ಲರನ್ನು ಸಭೆಗೆ ನಾನೇ ಆಹ್ವಾನಿಸಿದೆ. ಸುತ್ತಮುತ್ತಲಿನ ರೈತರು, ನಿರುದ್ಯೋಗಿಗಳನ್ನು ಸಹ ಆಹ್ವಾನಿಸಿದೆ.

  ನಂತರ ಬಿದರೆಹಳ್ಳಕಾವಲ್ ರೈತರ ಗುಂಪು ಗುಂಪು ಅಭಿಪ್ರಾಯಗಳನ್ನು ಪಡೆದು ಹೆಚ್.ಎ.ಎಲ್ ಗೆ 650 ಎಕರೆ ಭೂಮಿ ಕೊಡೋಣ ಎಂಬ ಸಲಹೆಗೆ ಬಹುತೇಕ ಎಲ್ಲರೂ ಒಪ್ಪಿಗೆ ನೀಡಿದರು. ನಾನು ನನ್ನ ಕೈಲಿ ಆದ ಎಲ್ಲಾ ಕಸರತ್ತುಗಳನ್ನು ಮಾಡಿದೆ.

 ಸಭೆಯ ದಿವಸ ಎಂಪಿಯವರಿಗೆ ನೀವು ಮತ್ತು ಜಿಲ್ಲಾಧಿಕಾರಿಗಳು ಒಟ್ಟಿಗೆ ಬನ್ನಿ, ನಾನು ಶಾಸಕರು, ಪ್ರಜಾ ಪ್ರಗತಿ ಸಂಪಾದಕ ಶ್ರೀ ಎಸ್.ನಾಗಣ್ಣನವರು ಮತ್ತು ಎಂ.ಎಲ್.ಸಿ ಶ್ರೀ ಹುಲಿನಾಯ್ಕರ್‍ರವರು ಒಟ್ಟಿಗೆ ಬರುತ್ತೇವೆ ಎಂದೆ ಎಂಪಿಯವರು ಇಲ್ಲೂ ನಿನ್ನ ತಂತ್ರನಾ ಎಂದು ನಕ್ಕರು.

 ಅಧಿಕೃತ ಸಭೆ ತಿಮ್ಮಳಿಪಾಳ್ಯದ ಗೇಟ್, ಆದರೆ ಕುಂದರನಹಳ್ಳಿ ಗೇಟ್‍ನಲ್ಲಿ ಬಿದರೆಹಳ್ಳಕಾವಲ್‍ನಲ್ಲಿ ಸಭೆ ನಡೆಸಿ ಎಂದು ಶಾಸಕರ ಕಾರಿಗೆ ಜನ ಅಡ್ಡಲಾಗಿ ಬಂದರು. ನಾನು ಇಳಿದೆ ಅಲ್ಲಿನ ಜನ ಅಗಳಪ್ಪ ಆಲೇ ಶಾಸಕರ ಜೊತೆಯಲ್ಲಿದ್ದಾರೆ ನಗುತ್ತಿದ್ದರು. 

  ಸರಿ ಸಾರ್ ಇಲ್ಲೂ ಹೋಗೋಣ, ಅಲ್ಲಿಯೂ ಮಾಡೋಣ ಎಂದ ತಕ್ಷಣ ಎಲ್ಲಾ ಕಾರುಗಳು ಬಿದರೆಹಳ್ಳ ಕಾವಲ್ ಕಡೆ ಹೊರಟವು. ಎಲ್ಲರೂ ಬಂದು ಕುಳಿತರು, ನನಗೆ ಕುರ್ಚಿ ಇರಲಿಲ್ಲ ನಿಂತೇ ಇದ್ದೆ ಮನೆಯಿಂದ ಖುರ್ಚಿ ತಂದು ಹಾಕಿ ಕುಳಿತುಕೊಳ್ಳಲು ಅಲ್ಲಿನ ರೈತರು ಹೇಳಿದರು.

  ಡಿಸಿಯವರ ಪಕ್ಕದಲ್ಲಿ ನಾನು ಕುಳಿತೆ, ಶಾಸಕರು, ಸಂಸದರಿಗೆ ರೈತರು ಅಹವಾಲು ಹೇಳುತ್ತಿದ್ದರು, ಮಹಿಳೆಯರು ಗೋಳೋ ಎಂದು ಅಳುತ್ತಿದ್ದರೂ, ನಾನು ಚಿಕ್ಕಣ್ಣನವರೇ ಎಷ್ಟು ಹೊತ್ತು ಮಾತನಾಡಿದರೂ ಬಗೆ ಹರಿಯಲ್ಲ ನಿಮ್ಮ ನೇರ ನಿರ್ಧಾರ ಹೇಳಿ ಅಂದೆ, ಚಿಕ್ಕಣ್ಣ ಜೋರಾಗಿ ನೋಡಿ ಸ್ವಾಮಿ 650 ಎಕರೆ ಹೆಚ್.ಎ.ಎಲ್ ಗೆ ಕೊಡಿ ಉಳಿದಿದ್ದು ಬಿಡಿ ಎಂದರು.

  ಸಂಸದರು ಆಯಿತಪ್ಪ ನೀವು ಹೇಳಿದ್ದಕ್ಕೆ ನಾನು ಶಾಸಕರು ಇಬ್ಬರೂ ಬದ್ಧ ಎಂದರು, ಶಾಸಕರು ನಿಮ್ಮ ಕಾಲೋನಿ ಉಳಿಸುತ್ತೇವೆ ನಡಿರೋ ಅಲ್ಲಿಗೆ ಹೋಗೋಣ ಎಂದು ಎದ್ದೇ ಬಿಟ್ಟರು. ಎಲ್ಲರೂ ತಪ್ಪಾಳೆ ಹೊಡೆದರು. ನಾನು ಜಿಲ್ಲಾಧಿಕಾರಿಗಳಿಗೆ ನೋಡಿ ಸ್ವಾಮಿ ಏನು ಹೇಳುತ್ತೀರಿ, ಅದೇನೋ ಕೊಲೆ-ಗಿಲೆ ಅಂತಿದ್ದರೀ ಅಂದೆ ಅವರು ಮಾತನಾಡಲಿಲ್ಲ ಎದ್ದು ಹೊರಟರು.

 ತಿಮ್ಮಳಿಪಾಳ್ಯದ ಗೇಟ್ ಪಾರ್ಕ್‍ನಲ್ಲಿ  ಜನ ಜಾತ್ರೆಯಂತೆ ಸೇರಿದ್ದರು. ಬಿದರೆಹಳ್ಳಕಾವಲ್ ಜನರೂ ಅಲ್ಲಿಗೆ ಬಂದರೂ, ಅಲ್ಲಿನ ಸಭೆ ತಾಲ್ಲೂಕಿನ ಸರ್ವಪಕ್ಷಗಳ ಸಭೆಯಂತಿತ್ತು, ಸಂಸದರು ಮತ್ತು ಶಾಸಕರು ಇಬ್ಬರೂ ಮಾತನಾಡಿ 650 ಎಕರೆ ಜಮೀನಿನನ್ನು ಹೆಚ್.ಎ.ಎಲ್ ಗೆ ಕೊಡಲು ತೀರ್ಮಾನಿಸಿದ್ದೇವೆ ಎಂದಾಗ ಜನ ತಪ್ಪಾಳೆ, ಸಿಳ್ಳೆ ಹೊಡೆಯುವ ಮೂಲಕ ಬೆಂಬಲಿಸಿದರು. ಜಿಲ್ಲಾಧಿಕಾರಿಗಳು ಮಾತನಾಡಿ ಸಭೆ ಮುಕ್ತಾಯ ಮಾಡಿದರು.

 ಎರಡು ಕಡೆಯ ಸಭೆ ಕೇವಲ ಒಂದು ಗಂಟೆಯ ಅವಧಿಯಲ್ಲಿ ಮುಗಿದವು ಎಲ್ಲರೂ ಇಷ್ಟು ಸುಲಭವಾಗಿ ಬಗೆಹರಿಯತು ಎಂದು ನಗುತ್ತಾ ಹೊರಟರು. ನಾಳೆ ಬೆಳಿಗ್ಗೆ ಪತ್ರಿಕೆಗಳಲ್ಲಿ ವರದಿ ಬಿದರೆಹಳ್ಳಕಾವಲ್ ಜನರು ಕಾರಿಗೆ ಅಡ್ಡಲಾಗಿ ಮಲಗಿ ಹೆಚ್.ಎ.ಎಲ್ ಗೆ ಜಮೀನು ನೀಡಲು ರೈತರ ವೀರೋಧ, ಜಿಲ್ಲಾಧಿಕಾರಿ ಪತ್ರಕರ್ತರ ಕ್ಯಾಮರಾ ಕಿತ್ತುಕೊಂಡರು, ಹೀಗೆ ರಾಜ್ಯ ಮಟ್ಟದ ನ್ಯೂಸ್ ಆಯಿತು. ನನಗೆ ಈ ಹಿನ್ನೆಲೆ/ರಹಸ್ಯ ಇನ್ನೂ ಅರ್ಥವಾಗಿಲ್ಲ, ಈ ನ್ಯೂಸ್ ತಪ್ಪು ಎಂದು ಸರಿಪಡಿಸಲು ಬಹಳ ಶ್ರಮ ಪಡಬೇಕಾಯಿತು. ಪ್ರಜಾಪ್ರಗತಿಯಲ್ಲಿ ಮಾತ್ರ ವಸ್ತು ಸ್ಥಿತಿ ವರದಿ ಬಂದಿತ್ತು.

ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆ ಸಲ್ಲಿಸಲೇ ಬೇಕು.

ಸಂಸದರ ಬಾಕಿ ಇರುವ 192 ದಿನಗಳ ಲೆಕ್ಕ

 ಗುಬ್ಬಿ ತಾಲ್ಲೂಕು ಬಿದರೆಹಳ್ಳಕಾವಲ್ ಸರ್ಕಾರಿ ಜಮೀನಿನಲ್ಲಿ ಯಾವುದಾದರೂ ಒಂದು ಯೋಜನೆ ಮಾಡಬೇಕು ಎಂದು ಸುಮಾರು 1984 ರಿಂದ ಅಂದರೆ ಶ್ರೀ ಜಿ.ಎಸ್.ಬಸವರಾಜ್‍ರವರು ಪ್ರಥಮ ಭಾರಿ ಲೋಕಸಭಾ ಸದಸ್ಯರಾದ ದಿನದಿಂದ ಇಲ್ಲಿಯವರೆಗೆ(ದಿನಾಂಕ:11.09.2013) ಸುಮಾರು 29 ವರ್ಷ 6 ತಿಂಗಳು ಆಗಿವೆ.

  ಇಲ್ಲಿಂದ ಸಂಸದರ 4 ನೇ ಅವಧಿ ಮುಗಿದು ಚುನಾವಣೆ ಘೋಷಣೆಯಾಗಲು ಕೇವಲ 192 ದಿನಗಳು ಮಾತ್ರ ಬಾಕಿ ಇವೆ. ಹೆಚ್.ಎ.ಎಲ್ ಘಟಕವನ್ನೇ ತರಬೇಕೆಂದು ಶ್ರಮಿಸಲು ಆರಂಭಿಸಿದ ದಿನ ದಿನಾಂಕ:17.06.2011  ಅಂದರೆ 2 ವರ್ಷ 2 ತಿಂಗಳು 24 ದಿವಸದ ಶ್ರಮ ಒಂದು ಹಂತಕ್ಕೆ ತಲುಪಿದೆ.

   ನಾನು ಈ ಪಟ್ಟಿಯನ್ನು ಎಂಪಿಯವರ ಮುಂದೆ ಇಟ್ಟು ಸಾರ್ ಈಗ ಉಳಿದಿರುವ 192 ದಿನಗಳಲ್ಲಿ ಹೆಚ್.ಎ.ಎಲ್ ಘಟಕಕ್ಕೆ ಶಂಕುಸ್ಥಾಪನೆ ಮಾಡಲೇ ಬೇಕು. ಎಂಪಿಯವರು ನಕ್ಕರು ನೋಡಪ್ಪಾ ನೀನು ಸಾಗರನಹಳ್ಳಿ ರೇವಣ್ಣನ ವಂಶ, ಎನಾದರೂ ಹೇಳಿದರೆ ನಿಮಗೆ ಸಿಟ್ಟು ಮೂಗಿನ ತುದಿ ಮೇಲೆ ಇರುತ್ತೆ, ಹಠವಾದಿಗಳು, ನಿಮ್ಮದು ಚಂಡಿಕತೆ ಆದರೂ ನಾನು ಮಾತಾಡಲ್ಲ, ನಾನು ಏನು ಮಾಡಬೇಕು ಹೇಳು ಪ್ರತಿದಿವಸವೂ ನಾನು ಯಾವ ಆಫೀಸ್‍ಗೆ ಹೋಗಬೇಕು ಯಾರನ್ನು ಭೇಟಿ ಮಾಡಬೇಕು, ಪ್ಲಾನ್ ರೆಡಿ ಮಾಡು ನೋಡೆ ಬಿಡೋಣ ಇದು ಒಂದು ಚಾಲೆಂಜ್ ಎಂದರು. 

 ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಸುಮಾರು ನೂರಾರು ಜನ ಅಧಿಕಾರಿಗಳು ಮತ್ತು ನೌಕರರು ಹಗಲಿರಳು ಶ್ರಮಿಸಿದರೆ ಮಾತ್ರ ಇದು ಸಾಧ್ಯ. ನಮ್ಮ ಕರ್ಮ ಜಿಲ್ಲಾಧಿಕಾರಿಗೆ ನೂರಕ್ಕೆ ನೂರರಷ್ಟು ಈ ಯೋಜನೆಗೆ ಮನಸ್ಸಿಲ್ಲ, ಜಿಲ್ಲಾ ಉಸ್ತವಾರಿ ಸಚಿವರು, ಶಾಸಕರು ಸೇರಿದಂತೆ ಯಾರೊಬ್ಬರೂ ಕಡತದ ಅನುಸರಣೆ ಮಾಡುತ್ತಿಲ್ಲ, ಮುಖ್ಯ ಮಂತ್ರಿಗಳಿಗೆ ‘ಶಿವಮೊಗ್ಗ, ಬಿದರ್, ಗುಲ್ಭರ್ಗ, ತುಮಕೂರು ಜಿಲ್ಲೆಯಲ್ಲಿ ಶಿರಾ ಅಥವಾ ಗುಬ್ಬಿ’ ಯಾವುದನ್ನು ಆಯ್ಕೆ ಮಾಡಬೇಕು ಎಂಬ ಗೊಂದಲ. ಕಂದಾಯ ಇಲಾಖೆಗೂ ಯಾವ ಜಿಲ್ಲೆಯ ಜಮೀನು ನೀಡಬೇಕು, ಯಾವ ನಾಯಕರ ಮಾತು ಕೇಳಬೇಕು ಎಂಬುದು ಕಬ್ಬಿಣದ ಕಡಲೆಯಾಗಿತ್ತು.

  ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ಎಸ್.ವಿ.ರಂಗನಾಥ್‍ರವರು / ಶ್ರೀ ಕೌಶಿಕ್ ಮುಖರ್ಜಿರವರು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀ ವಿದ್ಯಾಶಂಕರ್‍ರವರು/ ಶ್ರೀಮತಿ ರತ್ನಪ್ರಭರವರು, ಮೂಲಸೌಲಭ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಂದಿತಾಶರ್ಮರವರು, ದೆಹಲಿ ಕರ್ನಾಟಕ ಭವನದ ರೆಸಿಡೆಂಟ್ ಕಮೀಷನರ್ ಶ್ರೀಮತಿ ವಂದಿನಾ ಗುರ್ನಾನಿರವರು ಇವುರುಗಳಿಗೆ ಯಾವುದಾದರೂ ಜಿಲ್ಲೆಗೆ ಆಗಲಿ ನಮ್ಮ ರಾಜ್ಯಕ್ಕೆ ಈ ಯೋಜನೆ ತರಲೇಬೇಕು ಎಂಬ ದೃಢ ನಿರ್ಧಾರ ಮಾಡಿದ್ದರು.

ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾಗಿದ್ದ ಶ್ರೀ ವಿದ್ಯಾಶಂಕರ್‍ರವರು/ ಶ್ರೀಮತಿ ಶಾಲಿನಿರಜನೀಶ್ ರವರಿಗೆ ತುಮಕೂರು ಜಿಲ್ಲೆಗೆ ತರಲೇಬೇಕು ಎಂಬ ಗುರಿ ಇತ್ತು.

ಶ್ರೀ ಜಿ.ಎಸ್.ಬಸವರಾಜ್ ರವರು ಬಿಜೆಪಿ ಎಂಪಿ, ರಾಜ್ಯದಲ್ಲಿ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮತ್ತು ಕೇಂದ್ರದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ 6 ತಿಂಗಳಲ್ಲಿ ಶಂಕುಸ್ಥಾಪನೆ ಒಂದು ‘ಕನ್ನಡಿಯೊಳಗಿನ ಗಂಟು’ ನನಗೂ ಅರಿವಿತ್ತು ಆದರೂ ಎಲ್ಲೋ ಒಂದು ಕಡೆ ಇದು ಸಾಧ್ಯಾ ಎಂಬ ಆಶಾಭಾವನೆ ನನ್ನದಾಗಿತ್ತು.

 ಹೆಲಿಕ್ಯಾಪ್ಟರ್ ಸ್ಥಳ ಆಯ್ಕೆ ಅಂತಿಮ

 ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಗೆ ಹೆಚ್.ಎ.ಎಲ್ ಸೇರಿದ್ದರಿಂದ ಯಾವ ಜಾಗ ಸೂಕ್ತ ಎಂಬ ಆಯ್ಕೆ ಮಾಡುವುದು ಕೇಂದ್ರಕ್ಕೆ ಸೇರಿದ್ದು ಅಲ್ಲಿಂದಲೇ ತೀರ್ಮಾನವಾಗುವುದು ಒಳ್ಳೆಯದು ಎಂಬ ಐಡಿಯಾ ಹೊಳೆಯಿತು. 

  ಈ ತಂಡದ ಸದಸ್ಯರ ಹೆಸರು ಹೇಳುವುದು ಸೂಕ್ತವಲ್ಲ. ಇದೊಂದು ಅತ್ಯುತ್ತಮ ಪರಿಣಿತರ ಜವಾಬ್ಧಾರಿಯುತ ತಂಡ ಈ ತಂಡದ ಶ್ರಮ ಹೆಚ್.ಎ.ಎಲ್ ಗುಬ್ಬಿಗೆ ಬರಲು ಬಹಳ ಮುಖ್ಯ.

  1. ಗುಜರಾತ್ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ನಾವು ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ ಎಂಬ ಬೇಡಿಕೆಯಿತ್ತು
  2. ತಮಿಳುನಾಡು ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಾದ ಕು.ಜಯಲಲಿತರವರು ನಾವು ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ ಎಂಬ ಬೇಡಿಕೆಯಿತ್ತು
  3. ಆಂಧ್ರ ರಾಜ್ಯದ ಕೇಂದ್ರ ಸಚಿವರಾದ ಮಾನ್ಯ  ಶ್ರೀ ಎಂ.ಎಂ.ಪಲ್ಲಂರಾಜುರವರು ನಾವು ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ ಎಂಬ ಬೇಡಿಕೆಯಿತ್ತು
  4. ಕರ್ನಾಟಕ ರಾಜ್ಯದ ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ನಾವು ಶಿವಮೊಗ್ಗದಲ್ಲಿ ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ ಎಂಬ ಬೇಡಿಕೆಯಿತ್ತು.
  5. ಕರ್ನಾಟಕ ರಾಜ್ಯದ ಮಾನ್ಯ ಮಾಜಿ ಮುಖ್ಯ ಮಂತ್ರಿಗಳಾದ ಶ್ರೀ ಎನ್.ಧರ್ಮಸಿಂಗ್ ರವರು ನಾವು ಬೀದರ್ನಲ್ಲಿ ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ ಎಂಬ ಬೇಡಿಕೆಯಿತ್ತು.
  6. ಕರ್ನಾಟಕ ರಾಜ್ಯದ ಕೇಂದ್ರ ಸಚಿವರಾದ ಮಾನ್ಯ  ಶ್ರೀ ಎಂ.ಮಲ್ಲಿಕಾರ್ಜುನ್ ಖರ್ಗೆರವರು ನಾವು ಗುಲ್ಬರ್ಗದಲ್ಲಿ ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ  ಎಂಬ ಬೇಡಿಕೆಯಿತ್ತು
  7. ಕರ್ನಾಟಕ ರಾಜ್ಯದ ಸಚಿವರಾದ ಮಾನ್ಯ  ಶ್ರೀ ಟಿ.ಬಿ.ಜಯಚಂದ್ರರವರು ನಾವು ಶಿರಾದಲ್ಲಿ ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ ಎಂಬ ಬೇಡಿಕೆಯಿತ್ತು.
  8. ಕರ್ನಾಟಕ ರಾಜ್ಯದ ತುಮಕೂರು ಲೋಕಸಭಾ ಸದಸ್ಯರಾದ ಮಾನ್ಯ  ಶ್ರೀ ಜಿ.ಎಸ್.ಬಸವರಾಜ್ ರವರು ನಾವು ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ನಲ್ಲಿ  ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ ಎಂಬ ಬೇಡಿಕೆಗೆ ಸ್ಪಂಧಿಸಿದ ತಕ್ಷಣ ಸಮರೋಪಾದಿಯಲ್ಲಿ ಕಾರ್ಯಸಾಧನೆಗೆ ಇಳಿದೆವು ಅದು ದೇವಿಯ ಕೃಪೆಯಿಂದ ಸಕ್ಸಸ್ ಆಯಿತು

ಕೈ ಹಿಡಿದ ಕಾಂಗ್ರೆಸ್ ಸಂಬಂಧಶ್ರೀ .ಕೆ.ಆಂತೋನಿ ಸಹಕಾರ.

 ಕೇಂದ್ರ ರಕ್ಷಣಾ ಸಚಿವರಾದ ಶ್ರೀ ಎ.ಕೆ.ಆಂತೋನಿಯವರು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್‍ರವರಿಗೆ ಬಹಳ ವರ್ಷಗಳಿಂದ ಪರಿಚಿತರು. ಬಸವರಾಜ್‍ರವರು ಸುಮಾರು 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದವರು.

  ಕಾಂಗ್ರೆಸ್ ಪಕ್ಷದ ಪಾರ್ಲಿಮೆಂಟ್ ಬೋರ್ಡ್ ಅಧ್ಯಕ್ಷರಾಗಿ ಶ್ರೀಮತಿ ಸೋನಿಯಾಗಾಂಧಿಯವರ ಜೊತೆಯಲ್ಲಿ ಶ್ರೀ ಜಿ.ಎಸ್.ಬಸವರಾಜ್‍ರವರು ಸುಮಾರು 3 ವರ್ಷಗಳ ಪಾರ್ಲಿಮೆಂಟ್ ಬೋರ್ಡ್ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಆಂಧ್ರ ಪ್ರದೇಶದ ಕಾಂಗ್ರೆಸ್ ಪಕ್ಷದ ಚುನವಣಾ ಉಸ್ತುವಾರಿಯಾಗಿಯೂ ಕೆಲಸ ಮಾಡಿದ್ದರು.

  ಜೊತೆಗೆ ಮಾಜಿಪ್ರಧಾನಿ ದಿ.ರಾಜೀವ್ ಗಾಂದಿಯವರ ಒಡನಾಟ ಎಲ್ಲರಿಗೂ ತಿಳಿದ ವಿಷಯ. ಈಗಲೂ ಶ್ರೀಮತಿ ಸೋನಿಯಾಗಾಂದಿಯವರು ಸೆಂಟ್ರಲ್ ಹಾಲ್‍ನಲ್ಲಿ ಬಸವರಾಜ್‍ರವರನ್ನು ನೋಡಿದರೆ ಮಾತನಾಡಿಸದೇ ಇರುವುದಿಲ್ಲ ಅಷ್ಟೊಂದು ಆತ್ಮೀಯತೆ ಇದೆ.

   ತುಮಕೂರಿನ ಸಿದ್ಧಗಂಗಾಮಠಕ್ಕೆ ಶ್ರೀಮತಿ ಸೋನಿಯಾಗಾಂಧಿಯವರು ಬಂದಾಗ ಬಸವರಾಜ್‍ರವರು ಬಿಜೆಪಿ ಪಕ್ಷದಿಂದ ಸಂಸದರಾಗಿದ್ದರು, ಹೆಲಿಪ್ಯಾಡ್‍ಗೆ ಹೋಗಿದ್ದು ಒಂದು ಸುದ್ಧಿಯಾದರೆ, ಇಳಿದಾಗ ಬಸವರಾಜ್‍ರವರನ್ನು ನೋಡಿದ ತಕ್ಷಣ ಸೋನಿಯಾಗಾಂಧಿಯವರು ಮಾತನಾಡಿಸಿದ್ದು ಬಹಳಷ್ಟು ಸುದ್ಧಿಮಾಡಿತ್ತು.

 ಶ್ರೀ ಎ.ಕೆ.ಆಂತೋನಿಯವರು ಮತ್ತು ಶ್ರೀ ಜಿ.ಎಸ್.ಬಸವರಾಜ್‍ರವರು ಒಂದೇ ಕಡೆ ವಾಸವಾಗಿದ್ದವರು, ಈ ಎಲ್ಲಾ ಬೆಳವಣಿಗೆಗೆಳು ಸಹ ಅವರು ನೇರವಾಗಿ ರಕ್ಷಣಾ ಸಚಿವರಿಗೆ ವಸ್ತು ಸ್ಥಿತಿ ವರದಿಯನ್ನು ವಿವರಿಸಿ ಗುಬ್ಬಿಗೆ ಹೆಚ್.ಎ.ಎಲ್ ಘಟಕ ನೀಡಲು ಮನವಿ ಮಾಡಲು ಅನೂಕೂಲವಾಗಿರ ಬಹುದು.

 ಶ್ರೀ ಎ.ಕೆ.ಆಂತೋನಿಯವರದು ನೇರವಾದ ವ್ಯಕ್ತಿತ್ವ, ಪ್ರಾಮಾಣಿಕರು, ಅವರ ಬಳಿ ಯಾವುದೇ ನಾಯಕರು ಶಿಫಾರಸ್ಸು ಮಾಡಿಸಲು ಅವರನ್ನು ಕೇಳಲು ಹಿಂಜರಿಯುತ್ತಾರೆ ಎಂಬ ಸುದ್ಧಿ ಕಾಂಗ್ರೆಸ್ ಪಕ್ಷದ ವಲಯದಲ್ಲಿದೆ.

  ಬಸವರಾಜ್‍ರವರು ಎರಡು ಭಾರಿ ಹೆಚ್.ಎ.ಎಲ್ ಘಟಕದ ಬಗ್ಗೆ ಆಂತೋನಿಯವರನ್ನು ಭೇಟಿಮಾಡಿ ಸಮಾಲೋಚನೆ ನಡೆಸಿದ್ದಾರೆ. ಅವರು ಅಧಿಕಾರಿಗಳಿಗೆ ಸೂಚಿಸಿ ನಿಯಮ ಮತ್ತು ಕಾನೂನಿನ ಪ್ರಕಾರ ಅತಿ ಶೀಘ್ರವಾಗಿ ಜಮೀನು ಆಯ್ಕೆ ಮಾಡಿ ಘಟಕ ಆರಂಭಿಸಿ, ತುಮಕೂರಿನ ಜಾಗದ ಬಗ್ಗೆ ಶ್ರೀ ಬಸವರಾಜ್ ಜೊತೆ ಚರ್ಚಿಸಿ, ಸ್ಥಳ ಪರಿಶೀಲನೆ ಮಾಡಿ ಎಂದಷ್ಟೆ ಹೇಳಿದ್ದಾರೆ ಎಂಬ ಸುದ್ದಿಯಿದೆ.

  ಬಸವರಾಜ್‍ರವರಿಗೆ ನಿಮ್ಮ ಪತ್ರಗಳ ರಾಶಿ ಈಗಾಗಲೇ ಬಂದಾಗಿದೆ, ಬರುತ್ತಲೇ ಇವೆ ನೀವು ಬರುವ ಅಗತ್ಯವೇ ಇರಲಿಲ್ಲ ಎಂದು ಹಾಸ್ಯ ಮಾಡಿದ್ದಾರೆ. ರಕ್ಷಣಾ ಇಲಾಖೆ ಅತ್ಯಂತ ರಹಸ್ಯ ಯಾರಿಗೂ, ಯಾವುದು ಗೊತ್ತಾಗುವುದಿಲ್ಲ. ಗೊತ್ತಾದರೂ ಮಾತನಾಡುವುದು ಕಷ್ಟ.

ಶ್ರೀ ಸಚ್ಚಿದಾನಂದಸ್ವಾಮಿಜಿಯವರ ಆನೆ ಬಲ

 ಭಾರತ ದೇಶದ ಮಾಜಿ ಪ್ರಧಾನಿಗಳಾದ ದಿ.ಇಂದಿರಾಗಾಂಧಿಯವರು, ದಿ.ರಾಜೀವ್ ಗಾಂಧಿಯವರು ಬಳಿ ಆಪ್ತ ಬಳಗದಲ್ಲಿ ಕಾರ್ಯನಿರ್ವಹಿಸಿದ್ದ ಮತ್ತು ದಿ.ನರಸಿಂಹರಾವ್‍ರವರ ಪೊಲಿಟಿಕಲ್ ಅಡ್ವೈಸರ್ ಆಗಿದ್ದ  ಮತ್ತು ಮಾನ್ಯ ಶ್ರೀ ಹೆಚ್.ಡಿ.ದೇವೇಗೌಡರವರು ಪ್ರಧಾನಿಯಾಗುವಾಗ ಪ್ರಮುಖ ಪಾತ್ರ ವಹಿಸಿದ್ದ ಮಾಜಿ ರಾಜ್ಯಸಭಾ ಸದಸ್ಯರು ಆದ ಶ್ರೀ ಸಚ್ಚಿದಾನಂದಸ್ವಾಮಿಜಿಯವರು ಮತ್ತು ಶ್ರೀ ಜಿ.ಎಸ್.ಬಸವರಾಜ್‍ರವರ ಸ್ನೇಹ ಬಹಳ ಅನೋನ್ಯವಾಗಿತ್ತು.

  ಸ್ವಾಮೀಜಿಯವರು ವಿಶ್ವದ ಯಾವುದೇ ದೇಶಕ್ಕೆ ಯಾರೇ ಹೋಗಬೇಕು ಅಂದರೆ ಅಲ್ಲಿ ಅವರಿಗೆ ಗೊತ್ತಿರುವ ಜನರ ಪಟ್ಟಿಯೇ ಇರುತ್ತಿತ್ತು. ಅವರಿಗೆ ಹೇಳುತ್ತೇನೆ ಸಹಾಯ ಮಾಡುತ್ತಾರೆ ಎಂದು ಹೇಳುತ್ತಿದ್ದರು. ದೇಶದ ಯಾವುದೇ ಹಿರಿಯ ಐಎಎಸ್ ಅಧಿಕಾರಿಗಳು, ಯಾವುದೇ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಮನೆಗೆ ನೇರವಾಗಿ ಹೋಗುವ ಮತ್ತು ಹಲವಾರು ಜನ ಇವರ ಕಾಲಿಗೆ ಬೀಳುವುದು ವಾಡಿಕೆ.

 ಅಂತಹ ಹಿರಿಯರ ಸಹಕಾರ ಗುಬ್ಬಿಗೆ ಹೆಚ್.ಎ.ಎಲ್ ಬರಲು  ಪ್ರಮುಖ ಕಾರಣವೂ ಆಗಿತ್ತು. ಬಸವರಾಜ್ ರವರು ತುಮಕೂರು ಜಿಲ್ಲೆಗೆ ಯಾವುದೇ ಬೃಹತ್ ಯೋಜನೆ ಮಂಜೂರು  ಮಾಡಿಸಿದ್ದರು ಸ್ವಾಮಿಜಿಯವರ ಸಹಕಾರ ಇದ್ದೇ ಇರುತ್ತಿತ್ತು. ದೆಹಲಿಯಲ್ಲಿ ಬಸವರಾಜ್‍ರವರ ಈ ಮಟ್ಟದ ಸಂಪರ್ಕಕಕ್ಕೆ ಸ್ವಾಮಿಜಿಯವರು ಗಾಡ್ ಫಾದರ್ ಎಂದರೆ ತಪ್ಪಾಗಲಾರದು.

  ಕೇಂದ್ರ ಸರ್ಕಾರದ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಶ್ರೀ ಗೋಕುಲ್ ಚಂದ್ರ ಪತಿಯವರು ಐಎಎಸ್ ಮತ್ತು ಜಂಟಿಕಾರ್ಯದರ್ಶಿ ಶ್ರೀ ಕಮಲೇಶ್ ಕುಮಾರ್ ಪಂತ್‍ರವರು ಐಎಎಸ್, ಶ್ರೀ ಅನೂಪ್ ಪೂಜಾರಿ, ಶ್ರೀ ಡಿ.ವಿ.ಪ್ರಸಾದ್ ಇವರ ಜೊತೆ ಸಮಾಲೋಚನೆ ಮಾಡಿ ಗುಬ್ಬಿಯ ಜಮೀನು ಬಗ್ಗೆ ಗಮನಸೆಳೆಯುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

 ಸ್ವಾಮೀಜಿಯವರು ಅಧಿಕಾರಿಗಳಿಗೆ ಹೇಳಿ ಅಷ್ಟಕ್ಕೆ ಸುಮ್ಮನಾಗುತ್ತಿರಲಿಲ್ಲ, ಆ ಅಧಿಕಾರಿಗಳ ಬ್ಯಾಚ್ ಮೆಟ್ಸ್ ಅಥವಾ ಅವರ ಹಿರಿಯ ಅಧಿಕಾರಿಗಳನ್ನು ಶ್ರೀ ಜಿ.ಎಸ್.ಬಸವರಾಜ್‍ರವರ ಮನೆಗೆ ಊಟಕ್ಕೆ ಕರೆದು ನಿಮ್ಮ ಸ್ನೇಹಿತರಿಗೆ ಹೇಳ್ರಪ್ಪಾ ನೀವು ಒಂದು ಮಾತು, ನಮ್ಮ ಬಸವರಾಜ್ ಹೆಚ್.ಎ.ಎಲ್ ಗೆ ಬಹಳ ತಲೆಕೆಡಿಸಿಕೊಂಡು ಬಿಟ್ಟವ್ರೆ, ನಾನು ಬಸವರಾಜ್ ಹೋಗಿ ಹೇಳಿದಿವಿ ಆದರೂ ಮರೆತು ಬಿಟ್ಟರೂ ಎಂದು ಹೇಳುವ ಖ್ಯಾತಿ ಅವರದು.

 ಬಸವರಾಜ್‍ರವರು ಕನಿಷ್ಟ ತಿಂಗಳಿಗೆ ಒಂದು ಭಾರಿಯಾದರೂ ಅವರ ಬೆಂಗಳೂರಿನ ಮನೆಗೆ ಹೋಗಿ ಊಟ ಮಾಡಿಯೇ ಬರಬೇಕಿತ್ತು, ಬಹುಷಃ ಪ್ರತಿ ದಿನ ಫೋನ್ ಮೂಲಕ ಮಾತನಾಡುತ್ತಿದ್ದರು,  ಇತ್ತೀಚೆಗೆ ನಿಧನ ಹೊಂದಿದರು. ಮಾಜಿ ಸಚಿವರಾದ ಶ್ರೀ ಹೆಚ್.ಕೆ.ಪಾಟೀಲ್‍ರವರು ಮತ್ತು ಶ್ರೀ ಜಿ.ಎಸ್.ಬಸವರಾಜ್ ರವರು ಅಂದರೆ ಅವರಿಗೆ ಬಹಳ ಇಷ್ಟ. ಪುಣ್ಯಾತ್ಮರು ಗುಬ್ಬಿಗೆ ಹೆಚ್.ಎ.ಎಲ್ ಬರಲು ಬಹಳ ಸಹಾಯ ಮಾಡಿದ್ದರು.

ಶ್ರೀ ಆರ್.ಕೆ.ತ್ಯಾಗಿರವರ ವಿಮಾನದ ಪ್ರಯಾಣದ ಸಂಬಂಧವೂ ನೆರವಾಯಿತು.

 ಹೆಚ್.ಎ.ಎಲ್ ಕಾರ್ಪೋರೇಟ್ ಆಫೀಸ್ ಬೆಂಗಳೂರಿನಲ್ಲಿದ್ದರೂ, ಎರಡು ಮೂರು ಭಾರಿ ಚೇರ್ಮನ್ ಶ್ರೀ ಆರ್.ಕೆ.ತ್ಯಾಗಿರವರನ್ನು  ಶ್ರೀ ಜಿ.ಎಸ್.ಸವರಾಜ್‍ರವರು ಭೇಟಿ ಮಾಡಲು ಸಮಯ ನಿಗದಿಯಾಗಿದ್ದರೂ ಒಂದು ಭಾರಿಯೂ ಅವರ ಕಚೇರಿಯಲ್ಲಿ ಬೇಟಿಯಾಗಲು ಹೋಗಲೇ ಇಲ್ಲ. 

 ದೆಹಲಿ ಬೆಂಗಳೂರು ಪ್ರಯಾಣ ಮಾಡುವಾಗ ವಿಮಾನದಲ್ಲಿಯೇ ಅಕ್ಕ-ಪಕ್ಕ  ಕುಳಿತುಕೊಂಡು ಬಸವರಾಜ್‍ರವರು ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್ ಜಮೀನಿನ ಬಗ್ಗೆ ಅವರಿಗೆ ಹಲವಾರು ಭಾರಿ ಮನವರಿಕೆ ಮಾಡಿದ್ದರು. ಅವರ ಸಹಕಾರವೂ ಪ್ರಮುಖವಾಗಿತ್ತು, ಕೊನೆಗೂ ಅವರ ಅವಧಿಯಲ್ಲಿ ಶಂಕುಸ್ಥಾಪನೆ ಮಾಡಲು ಸಾಧ್ಯವಾಗಲಿಲ್ಲ.

ಹೆಚ್..ಎಲ್ ಗುಬ್ಬಿ ಜಮೀನು ಕೇಳಿ ಪತ್ರ.

ಅಂತೂ- ಇಂತೂ ದಿನಾಂಕ:20.02.2014 ರಂದು ಹೆಚ್.ಎ.ಎಲ್ ಕಾರ್ಪೋರೇಟ್ ಕಚೇರಿಯಿಂದ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನು ನೀಡಲು ಪತ್ರ ಬಂತು.

ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅಧ್ಯಕ್ಷತೆಯಲ್ಲಿ ಸಭೆ

   ದಿನಾಂಕ:01.03.2014 ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡುವ ಸಂಬಂದ ಕರ್ನಾಟಕ ರಾಜ್ಯದ  ಮುಖ್ಯಕಾರ್ಯದರ್ಶಿಗಳಾದ ಶ್ರೀ ಕೌಶಿಕ್ ಮುಖರ್ಜಿರವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಯಿತು.

ಶ್ರೀ ವಿ.ಸೋಮಣ್ಣವರ ಮಹತ್ವದ ಪಾತ್ರ.

ದಿನಾಂಕ:01.03.2014 ರಂದು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡುವ ಸಂಬಂದ ಕರ್ನಾಟಕ ರಾಜ್ಯದ  ಮುಖ್ಯ ಕಾರ್ಯದರ್ಶಿಗಳಾದ ಶ್ರೀ ಕೌಶಿಕ್ ಮುಖರ್ಜಿರವರ ಅಧ್ಯಕ್ಷತೆಯಲ್ಲಿ ಸಭೆ ಕರೆಯುವ ಮುನ್ನ ಶ್ರೀ ವಿ.ಸೋಮಣ್ಣವರ ಪಾತ್ರ ಬಹಳ ಮುಖ್ಯವಾಗಿತ್ತು

ವಿ.ಸೋಮಣ್ಣವರು ಯಾವುದೇ ಪಕ್ಷದಲ್ಲಿರಲಿ ಮುಖ್ಯ ಮಂತ್ರಿಗಳ ಮತ್ತು ಅಧಿಕಾರಿ ವಲಯದಲ್ಲಿ ಅವರ ನಿಕಟ ಸಂಪರ್ಕದ ಫಲವಾಗಿ ಬಿದರೆಹಳ್ಳ ಕಾವಲ್ ಜಮೀನಿನ್ನು ಹೆಚ್.ಎ.ಎಲ್ ಘಟಕಕ್ಕೆ ಕೊಡುವ ಸಂಬಂದ ಅವರ ಸಹಕಾರ ಮರೆಯಲಾಗದು.  

 ಅವರು ಅಧಿಕಾರಿಗಳ ವಲಯದಲ್ಲಿ ಮಾತನಾಡಿದಾಗ ಇನ್ನೂ ಜಮೀನಿನ ನಕ್ಷೆಯನ್ನೆ ಕೊಟ್ಟಿಲ್ಲವಂತೆ ಇದೇನು ಜಿಲ್ಲಾಡಳಿತನಪ್ಪ ಅವರ ಸ್ಟೈಲ್‍ನಲ್ಲಿ ಏನೇನು ಹೇಳಬೇಕು ಅದೆಲ್ಲವನ್ನೂ ನನಗೆ ಹೇಳಿದರು.

ಪ್ರೀತಿ ಕ್ಯಾಡ್ ನಕ್ಷೆ.

ತಕ್ಷಣ ನಾನೇ ನನ್ನ ಸ್ನೇಹಿತ ಬೆಂಗಳೂರಿನ ಪ್ರೀತಿ ಕ್ಯಾಡ್ ಕನ್ಸಲ್‍ರ್ಟೆನ್ಸಿ ಶ್ರೀ ವೇದಾನಂದಾಮೂರ್ತಿ ಕಚೇರಿಗೆ ಹೋಗಿ ಕುಮಾರಿ ಚಾಂದಿನಿಯವರ ಸಹಕಾರದಿಂದ ಸಂಜೆ ವೇಳೆಗೆ ಈ ನಕ್ಷೆಯನ್ನು ಮಾಡಿಸಿ ಜಿಲ್ಲಾಡಳಿತವೇ ತಯಾಸಿರಿದ ಹಾಗೆ ಮಾಡಿ ಸಲ್ಲಿಸಲಾಯಿತು.

ಭೂಮಿ ಕೊಟ್ಟ ಕಂದಾಯ ಸಚಿವರಾದ ಶ್ರೀ ಶ್ರೀನಿವಾಸ್ ಪ್ರಸಾದ್.

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಲು ಎಷ್ಟೆಲ್ಲಾ ಒತ್ತಡಗಳು, ವಿರೋಧಗಳು, ಜಾತಿ ಒತ್ತಡಗಳು, ಅಡೆತಡೆಗಳು ಬಂದರೂ ಕಂದಾಯ ಸಚಿವರಾದ ಶ್ರೀನಿವಾಸ್‍ಪ್ರಸಾದ್‍ರವರನ್ನು ಶ್ರೀ ಜಿ.ಎಸ್.ಬಸವರಾಜ್‍ರವರು, ಈ ವಿಚಾರವಾಗಿ ಮೊಟ್ಟಮೊದಲ ಭಾರಿ ಭೇಟಿಯಾದಾಗ ಏನು ಮಾತು ಹೇಳಿದರೋ ಅದಕ್ಕೆ ಕೊನೆವರೆಗೂ ಬದ್ಧರಾಗಿ ಜಮೀನು ನೀಡುವ ಮೂಲಕ ತಮ್ಮ ಮಾತು ಉಳಿಸಿಕೊಂಡರು.

  ಬಹಳ ಜನ ಈ ವಿಚಾರವಾಗಿ ಮಾತನಾಡಿದ್ದರು, ಯಾವುದೇ ಕಾರಣಕ್ಕೂ ಶ್ರೀನಿವಾಸ್ ಪ್ರಸಾದ್‍ರವರು ಜಮೀನು ನೀಡಲು ತೊಂದರೆ ಮಾಡಿಯೇ ಮಾಡುತ್ತಾರೆ, ಇವರೆಷ್ಟು ಆಟ ಆಡಿದರೂ ಸಾಧ್ಯಾವಾಗುವುದಿಲ್ಲ ಎಂಬ ಮಾತು ಸದಾ ತೇಲಾಡುತಿತ್ತು. ಇದಕ್ಕೆ ಪ್ರತಿತಂತ್ರ ನಮಗೂ ಗೊತ್ತಿತ್ತು.

 ಶ್ರೀನಿವಾಸ್‍ಪ್ರಸಾದ್ ರವರು ಅವರ ಆಪ್ತಕಾರ್ಯದರ್ಶಿಗೆ ಸೂಚನೆ ನೀಡಿ ಬಸವರಾಜ್‍ರವರು ಹೆಚ್.ಎ.ಎಲ್ ಜಮೀನು ವಿಚಾರವಾಗಿ ಯಾವತ್ತೇ ಬರಲಿ ನಾನಿಲ್ಲದಿದ್ದರೂ, ಈ ಕಡತಕ್ಕೆ ಸಹಿಬೇಕಾದಲ್ಲಿ ನಾನಿರುವ ಬಳಿಗೆ ಕಳುಹಿಸಿ ನನ್ನ ಆದೇಶ ಪಡೆದು ಕಳುಹಿಸ ಬೇಕು ವಿಳಂಬವಾಗಬಾರದು ಎಂದಿದ್ದರು. ಅದೇ ರೀತಿ ಒಮ್ಮೆ ಕಡತವನ್ನು ಮೈಸೂರಿಗೆ ಕಳುಹಿಸಿ ಕಡತಕ್ಕೆ ಸಹಿ ಹಾಕಿಸಿಕೊಂಡು ಬರಲಾಯಿತು.

 ಬಸವರಾಜ್ ಒಮ್ಮೆ ಮಾತನಾಡಿದರೆ, ಮಾತು ಬದಲಿಸುವವರಲ್ಲ ಆ ಕಾಲೋನಿ ಬಿಡುವುದಾಗಿ ಅವರೇ ಹೇಳಿರುವಾಗ ಬೇರೆಯವರ ವಿಷಯದ ಅಗತ್ಯ ನಮಗೆ  ಬೇಕಾಗಿಲ್ಲ ಎಂದು ಖಡಕ್ ಸೂಚನೆ ನೀಡುವ ಮೂಲಕ ಪರೋಕ್ಷವಾಗಿ ಕಾಲೋನಿಗೆ ತೊಂದರೆ ಬೇಡ ಬಸವರಾಜ್ ಎಂದು ಹೇಳಿದಂತಿಂತ್ತು.

ವಿಧ್ಯುತ್ ಕೊಟ್ಟ ಇಂದನ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್.

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಬೇಕಾದರೆ ಯೋಜನೆಗೆ ವಿದ್ಯುತ್ ಸರಬರಾಜು ಮಾಡುವುದು ಒಂದಾದರೆ, ಈ ಜಾಗದಲ್ಲಿದ್ದ ಮೂರು ಹೈಟೆನ್ಸ್‍ಷನ್  ವಿದ್ಯುತ್‍ಲೈನ್‍ಗಳನ್ನು ಶಿಫ್ಟ್ ಮಾಡುವುದು ಒಂದು ಅಸಾಧ್ಯದ ಕೆಲಸ ಎಂದು ಬಿಂಬಿತವಾಗಿತ್ತು.

 ಇಂಧನ ಸಚಿವರಾದ ಶ್ರೀ ಡಿ.ಕೆ.ಶಿವಕುಮಾರ್‍ರವರು ಬಹುತೇಕ ಬಸವರಾಜ್‍ರವರಿಗೆ 2011 ರಿಂದ ಎದುರಿಗೆ ಸಿಕ್ಕಿದಾಗ ಪ್ರಸ್ತಾಪವಾಗುವ ಮೊದಲನೆ ವಿಷಯ ಹೆಚ್.ಟಿ. ಲೈನ್‍ಶಿಪ್ಟ್ ಮಾಡುವುದು ಇದ್ದೇ ಇರುತ್ತಿತ್ತು. ಕೊನೆ-ಕೊನೆಗೆ ಬಸವರಾಜ್‍ರವರಿಗಿಂತ ಮೊದಲೇ ಶಿವಕುಮಾರ್‍ರವರು ಈ ವಿಚಾರ ಹೇಳಿ ನಂತರ ಬೇರೆ ಮಾತನಾಡುವಷ್ಟು ಹಾಸ್ಯ ನಡೆಯುತ್ತಿತ್ತು.

  ಒಮ್ಮೆ ದೆಹಲಿಯ ಕರ್ನಾಟಕ ಭವನದಲ್ಲಿ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಬಳಿ ಬಸವರಾಜ್‍ರವರು ಮಾತನಾಡುವಾಗ ಶ್ರೀ ಡಿ.ಕೆ.ಶಿವಕುಮಾರ್‍ರವರು ಅಲ್ಲಿಗೆ ಬಂದ ತಕ್ಷಣ ಮುಖ್ಯ ಮಂತ್ರಿಯವರಿಗೆ ಸಾರ್ ನೀವು ಹೆಚ್.ಎ.ಎಲ್ ಯೋಜನೆಗೆ ಮಂಜೂರಾತಿ ಕೊಡಿ, ನಾನು ಕರೆಂಟ್ ಕೊಡುವುದರ ಜೊತೆಗೆ ಹೆಚ್.ಟಿ. ಲೈನ್‍ಶಿಪ್ಟ್ ಮಾಡಿ ಕೊಡುತ್ತೇನೆ ಎಂದಾಗ ಎಲ್ಲರೂ ಗೊಳ್ ಎಂದು ನಕ್ಕಿದ್ದರಂತೆ.

 ನಂತರ ಶಿವಕುಮಾರ್‍ರವರು ಬಸಣ್ಣ ಭಂಡ ಬೀಡಲ್ಲ ಸಾರ್,  ನಮಗೆ ಮೊದಲೇ ಗೊತ್ತಿದ್ದರೆ ನಾವೋ – ನೀವೋ ಮಾಡಿಸಿಕೊಳ್ಳ ಬಹುದಿತ್ತು, ಕಾಲ ಮೀರಿದೆ ಮಾಡಿ ಬಿಡಿ ಸಾರ್ ಎನ್ನುವ ಮೂಲಕ ಇಡೀ ಯೋಜನೆಯ ಮಂಜೂರಾತಿಗೂ ಬೆಂಬಲಿಸಿದ್ದರು.

  ಇಂಜಿನಿಯರ್ ಆದ ಶ್ರೀ ಚಂದ್ರಶೇಖರ್‍ರವರು ಯುಗಾದಿ ಹಬ್ಬದ ದಿವಸವೇ   ರಮೇಶ್ ಈವತ್ತೇ ನಿಮ್ಮ ಲೈನ್‍ಶಿಪ್ಟ್ ಮಾಡೋದನ್ನು ನೋಡಿಕೊಂಡು ಬರೋಣ ಬನ್ನಿ, ಎಂದು ಸ್ಥಳಕ್ಕೆ ಬೇಟಿ ನೀಡಿ ಎರಡು ಮೂರು ದಿವಸದಲ್ಲಿಯೇ ವರದಿ ನೀಡಿದ್ದರು. ಅಂದರೆ ಇಡೀ ಅಧಿಕಾರಿಗಳು ಯೋಜನೆ ತರಲು ಕಂಕಣ ಕಟ್ಟಿ ನಿಂತಿದ್ದರು.

ಹೇಮಾವತಿ ನೀರು ಕೊಟ್ಟ ಜಲಸಂಪನ್ಮೂಲ ಸಚಿವ ಶ್ರೀ ಎಂ.ಬಿ.ಪಾಟೀಲ್

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡುವ ಮುನ್ನ ಹೇಮಾವತಿ ನೀರು ಸರಬರಾಜು ಮಾಡುವುದೇ ಒಂದು ಪವಾಡವಾಗಿತ್ತು.

  ಇದೇ ವೇಳೆಯಲ್ಲಿ ತುಮಕೂರು ಜಿಲ್ಲಾ ಉಸ್ತವಾರಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರು ಮೊದಲೂರು ಕೆರೆಗೆ ಹೇಮಾವತಿ ನೀರಿನ ಅಲೋಕೇಷನ್ ಮಾಡಿಸಲು ಪಟ್ಟು ಹಿಡಿದಿದ್ದರು. ಜೊತೆಗೆ ಈ ಯೋಜನೆ ಶಿರಾಕ್ಕೆ ತೆಗೆದು ಕೊಂಡು ಹೋಗಲೇಬೇಕು ಎಂದು ಪ್ರಯತ್ನಿಸಿದ್ದು ಇತಿಹಾಸ.

 ಈ ಹಿಂದೆ ಶ್ರೀ ಬಸವರಾಜ್ ಬೊಮ್ಮಾಯಿಯವರು ಜಲಸಂಪನ್ಮೂಲ ಸಚಿವರಾಗಿದ್ದಾಗ ಇದೇ ಜಾಗಕ್ಕೆ ಅನಿಲ ಆಧಾರಿತ ವಿದ್ಯುತ್ ಘಟಕಕ್ಕೆ ಹೇಮಾವತಿಯಲ್ಲಿ ನೀರಿಲ್ಲ ಎಂಬ ಕಾರಣ ಹೇಳಿದ್ದರು. ಯೋಜನೆಯೇ ಮಂಜೂರಾಗಲಿಲ್ಲ. ‘ಇದು ನಿಜಕ್ಕೂ ಒಳ್ಳೆಯದೆ ಆಯಿತು. ಏಕೆಂದರೆ ಆ ಯೋಜನೆಗಿಂತ ಈ ಯೋಜನೆ ಒಳ್ಳೆಯದು’.

 ಜಲಸಂಪನ್ಮೂಲ ಕಾರ್ಯದರ್ಶಿ ಶ್ರೀ ಗುರುಪಾದಸ್ವಾಮಿರವರು, ಕಾವೇರಿ ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಕೆ.ಜೈಪ್ರಕಾಶ್‍ರವರು ಮತ್ತು ಶ್ರೀ ಹೆಚ್.ಬಿ.ಮಲ್ಲೇಶ್‍ರವರಿಗೆ ಈ ಯೋಜನೆಗೆ ಹೇಮಾವತಿ ನೀರು ನೀಡುವುದು ಒಂದು ದೊಡ್ಡ ತಲೆನೋವಿನ ವಿಚಾರ, ಬಿಸಿ ತುಪ್ಪ ಉಗುಳುವ ಆಗಿಲ್ಲನುಂಗುವ ಆಗಿಲ್ಲ.

 ಸಚಿವರಾದ ಶ್ರೀ ಎಂ.ಬಿ.ಪಾಟೀಲ್‍ರವರು ಈ ಯೋಜನೆಗೆ ಹೇಮಾವತಿ ನೀರು ಕೊಡಲೇ ಬೇಕು, ನಾನು ಶ್ರೀ ಜಿ.ಎಸ್.ಬಸವರಾಜ್‍ರವರಿಗೆ   ನೀರು ಕೊಡುವುದಾಗಿ ಹೇಳಿದ್ದೇನೆ. ಇಂತಹ ಯೋಜನೆಗೆ ನೀರು ಕೊಡದಿದ್ದರೇ ಹೇಗೆ, ಇದು ರಾಜ್ಯಕ್ಕೆ ಹೆಸರು ತರುವ ಯೋಜನೆ ಅಲ್ಲವೇ? ನೀವು ಏನಾದರೂ ಮಾಡಿ ನಾನು ಆದೇಶ ನೀಡುತ್ತೇನೆ ಒಟ್ಟಿನಲ್ಲಿ ನೀರು ಕೊಡಿ ಎಂಬ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದರಂತೆ.

 ಒಂದು ದಿನ ರಾತ್ರಿ 9 ಗಂಟೆಯಲ್ಲಿ ಜಲಸಂಪನ್ಮೂಲ ಕಾರ್ಯದರ್ಶಿ ಶ್ರೀ ಗುರುಪಾದಸ್ವಾಮಿರವರು, ಕಾವೇರಿ ನಿಗಮದ ವ್ಯವಸ್ಥಾಪಕ ನಿರ್ಧೇಶಕರಾದ ಶ್ರೀ ಕೆ.ಜೈಪ್ರಕಾಶ್‍ರವರು ಮತ್ತು ಶ್ರೀ ಹೆಚ್.ಎಸ್.ಮಲ್ಲೇಶ್‍ರವರು ಹೇಮಾವತಿ ನೀರು ಅಲೋಕೇಷನ್ ಮಾಡುವ ಬಗ್ಗೆ ಮೊಬೈಲ್‍ನಲ್ಲಿಯೇ  ಚರ್ಚೆ, ಎಂಪಿಯವರು ಆ ದಿನ ಬೇಗ ಮಲಗಿದ್ದರು ಅವರಿಗೆ ತೊಂದರೆ ಕೊಡುವುದು ಬೇಡ ಎಂದು ತೀರ್ಮಾನಿಸಿ, ಯಾವ ರೀತಿ, ಎಲ್ಲಿಂದ, ಹೇಗೆ ನೀಡಬೇಕು ಎಂಬ ಬಗ್ಗೆ ಮಧ್ಯೆ ರಾತ್ರಿ 12 ಗಂಟೆವರೆಗೂ ಸಮಾಲೋಚನೆ ನಡೆಯಿತು.

 ಕೊನೆಗೂ ಒಂದು ಬಂಪರ್ ಐಡಿಯಾ ಒಳೆಯಿತು. ಎಲ್ಲರೂ ಸಮಾಧಾನವಾದರು ಬೆಳಿಗ್ಗೆ 10 ಘಂಟೆಗೆ ಶ್ರೀ ಗುರುಪಾದಸ್ವಾಮಿರವರ ಕಚೇರಿಗೆ ಎಂಪಿಯವರು ಮತ್ತು ನಾನು ಹೋದೆವು. ನೀರಿನ ಅಲೋಕೇಷನ್ ಮಂಜೂರಾತಿ ಕಸರತ್ತಿನ ಬಗ್ಗೆ ಚರ್ಚೆಯಾಯಿತು, ಎಂಪಿಯವರು ಓಕೆ ಒಳ್ಳೆ ಐಡಿಯಾ ‘ಅವರು ಚಾಪೆ ಅಡಿ ತೂರಿದರೆ ನಾವು ರಂಗೋಲಿ ಕೆಳಗೆ ತೂರಿದ’ ಗಾದೆ ಹಾಗಿದೆ ಎಂದು ನಕ್ಕರು.

  ಆದೇಶದ ಪ್ರತಿ ರೆಡಿಯಾಯಿತು, ಶ್ರೀ ಎಂ.ಬಿ.ಪಾಟೀಲ್ ಪುಣ್ಯಾತ್ಮ ಕಳುಹಿಸಿ ಬಿಡಿ, ಇದು ಒಂದು ಸಲಹೆ ನಾನು ಬಂದು ಸಹಿ ಹಾಕುತ್ತೇನೆ, ಇನ್ನೂ ಸಚಿವ ಸಂಪುಟದಲ್ಲಿ ಚರ್ಚೆಯಾಗಲೇ ಬೇಕಲ್ಲವೇ ಎಂದು ಫೋನ್ ಮುಖಾಂತರವೇ ಒಪ್ಪಿಗೆ ಸೂಚಿಸಿದರು. ನಂತರ ಆ ದಿನ ಅವರೇ ಬಂದು ಆದೇಶ ನೀಡಿದರಂತೆ. ಒಳ್ಳೆಯ ಕೆಲಸಕ್ಕೆ ದೇವರು ಒಂದು ಮಾರ್ಗ ತೋರಿಸಿಯೇ ತೀರುತ್ತಾನೆ ಎಂಬುದಕ್ಕೆ ಇದು ಒಂದು ಸ್ಪಷ್ಟ ಉದಾಹರಣೆ.

ಮುಖ್ಯಕಾರ್ಯದರ್ಶಿ ಶ್ರೀ ಕೌಶಿಕ್ ಮುಖರ್ಜಿ ಸಭೆಯ ಮಹತ್ವದ ನಿರ್ಣಯ

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಲು  ಮುಖ್ಯ ಕಾರ್ಯದರ್ಶಿ ಶ್ರೀ ಕೌಶಿಕ್ ಮುಖರ್ಜಿರವರ ಅಧ್ಯಕ್ಷತೆಯಲ್ಲಿ ದಿನಾಂಕ: 01.03.2014 ರಂದು ನಡೆದ ಸಭೆಗೆ ಬಹುತೇಕ ಎಲ್ಲಾ ಇಲಾಖೆಗಳು ಸಹಮತ ವ್ಯಕ್ತಪಡಿಸಲು ದಾಖಲೆ ಸಹಿತ ಸಿದ್ಧವಾಗಿ ಸಭೆಗೆ ಹಾಜರಾಗಿದ್ದರಂತೆ.

  ಸಭೆಗೆ ಮುನ್ನ ತುಮಕೂರು ಜಿಲ್ಲಾಧಿಕಾರಿಗಳಾಗಿದ್ದ ಶ್ರೀ ಕೆ.ಎಸ್.ಸತ್ಯಮೂರ್ತಿರವರನ್ನು ಒಮ್ಮೆ ಮಾತನಾಡಿಸ ಬೇಕು ಎಂಬ ಮನಸ್ಸು ಬಂತು. ಆದರೇ ನೀವು ಡಿಸಿಯಾಗಿ ಇರುವವರೆಗೂ ನಿಮ್ಮ ಛೇಂಬರ್ ಒಳಗೆ ಕಾಲಿಡುವುದಿಲ್ಲಾ ಎಂದು ಹೇಳಿ ಬಂದಿದ್ದೆ.

 ವಿಕಾಸ ಸೌಧದಲ್ಲಿ ನಡೆಯುವ ಸಭೆಗೆ ಮುಂಚೆ ಮಾತನಾಡಿಸಲು ತೀರ್ಮಾನಿಸಿ ಹೋದೆ. ನಾನು ಹೋಗುವ ವೇಳೆಗೆ ಸಭಾಂಗಣದ ಒಳಗೆ ಕುಳಿತಿದ್ದರು. ನಾನು ಎರಡು ಭಾರಿ ಬಾಗಿಲಿನಿಂದ ಕೈ ಬೀಸಿ ಕರೆದೆ. ಅವರಿಗೂ ಆಶ್ಚರ್ಯ ಆಗಿರಬೇಕು, ಫೋನ್‍ನಲ್ಲಿ  ಮಾತನಾಡುತ್ತಾ ಹೊರಗಡೆ ಬಂದರು, ನಾನು ಕರೆದೆ ಅಂತ ಬಂದರೋ ಅಥವಾ ಫೋನ್‍ನಲ್ಲಿ ಮಾತನಾಡಲೂ ಬಂದರೋ ನನಗೆ ಗೊತ್ತಿಲ್ಲ.

 ತಕ್ಷಣ ಅವರ ಬಳಿಹೋಗಿ ನೋಡಿ ಸಾರ್ ಇವತ್ತು ನೀವು ಡಿಸಿಯಾಗಿದ್ದೀರಿ, ನಾಳೆ ನಾನೂ ಇರಲ್ಲ, ನೀವೂ ಇರಲ್ಲ ಎಲ್ಲಾ ಒಂದು ದಿವಸ ಸಾಯುತ್ತೇವೆ. ತೊಂದರೆ ಕೊಡಬೇಡಿ ಅದರ ಮೇಲೆ ನಿಮ್ಮಿಷ್ಟ ಎಂದು ಹೇಳಿದೆ. ಊ ಆಯಿತು ಎಂದು ಹೇಳಿ ಒಳಗೆ ಹೋದರು.

 ಸಭೆ ಆರಂಭದಲ್ಲಿಯೇ ಕೌಶಿಕ್ ಮುಖರ್ಜಿರವರ ಖಡಕ್ ಮಾತು, ನನಗೆ ರಾಜ್ಯ ಮುಖ್ಯ ಜಿಲ್ಲೆ, ಜಿಲ್ಲೆಗಳ ರಾಜಕೀಯ ನನಗೆ ಬೇಕಾಗಿಲ್ಲ. ಮೂರು ಮಾತಿನಲ್ಲಿ ಸಭೆ ಮುಗಿಯಬೇಕು ಎಂದು ಹೇಳಿದರಂತೆ.

ಮುಖ್ಯ ಕಾರ್ಯದರ್ಶಿ:- ಹೆಚ್.ಎ.ಎಲ್ ನವರಿಗೆ ನಿಮಗೆ ಯಾವ ಜಾಗಬೇಕು.

ಹೆಚ್.ಎ.ಎಲ್ ಪ್ರತಿನಿಧಿ:- ನಮಗೆ ಗುಬ್ಬಿ ಜಾಗ ಓಕೆ ಸಾರ್.

ಮುಖ್ಯ ಕಾರ್ಯದರ್ಶಿ:- ಜಿಲ್ಲಾಧಿಕಾರಿಗಳೇ ಜಮೀನು ನೀಡಬಹುದಾ?

ಜಿಲ್ಲಾಧಿಕಾರಿ:- ಹೌದು ಸಾರ್ ದಾಖಲೆ ರೆಡಿಯಿದೆ.

ಮುಖ್ಯ ಕಾರ್ಯದರ್ಶಿ:- ಜಲಸಂಪನ್ಮೂಲ ಅಧಿಕಾರಿಗಳಿಗೆ ನೀರು ಕೊಡ ಬಹುದಾ?

ಜಲಸಂಪನ್ಮೂಲ ಕಾರ್ಯದರ್ಶಿ:- ಹೇಮಾವತಿ ನೀರು ನೀಡುತ್ತೇವೆ ಸಾರ್.

ಮುಖ್ಯ ಕಾರ್ಯದರ್ಶಿ:- ಇಂಧನ ಇಲಾಖೆ ಅಧಿಕಾರಿಗಳಿಗೆ ವಿದ್ಯುತ್ ನೀಡಬಹುದಾ? ಹೆಚ್.ಟಿ.ಲೈನ್ ಶಿಪ್ಟ್ ಮಾಡಬಹುದಾ?

ಇಂಧನ ಇಲಾಖೆ ಅಧಿಕಾರಿಗಳು:- ಮಾಡ ಬಹುದು ಸಾರ್.

ಮುಖ್ಯ ಕಾರ್ಯದರ್ಶಿ:- ಹೆಚ್.ಎ.ಎಲ್ ನವರಿಗೆ ಬೇರೆ ಏನಾದರೂ ಇದೆಯಾ?

ಹೆಚ್.ಎ.ಎಲ್ ಪ್ರತಿನಿಧಿ:- ಹಿಂದೆ ಎಕರೆಗೆ ಒಂದು ರುಪಾಯಿಗೆ ಜಾಗ ನೀಡಲು ಪತ್ರ ಬರೆಯಲಾಗಿತ್ತು ಸಾರ್.

ಮುಖ್ಯ ಕಾರ್ಯದರ್ಶಿ:- ತಕ್ಷಣ ದೆಹಲಿಯ ರಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಫೋನ್ ಮೂಲಕ ಮಾತನಾಡಿ, ಒಂದು ಎಕರೆಗೆ ಹತ್ತು ಸಾವಿರ ರೂ ನೀಡುತ್ತಿರೋ ಅಥವಾ ಒಂದು ಲಕ್ಷ ರೂ ನೀಡುತ್ತಿರೋ ಎಂದು ಕೇಳಿದರಂತೆ. ನಂತರ ಅವರೇ ಒಂದು ಲಕ್ಷ ನೀಡಲು ಒಪ್ಪಿದ್ದಾರೆ ಎಂದರಂತೆ.

ಮುಖ್ಯ ಕಾರ್ಯದರ್ಶಿ:- ಉದ್ಯೋಗ ಮಿತ್ರ ಅಧಿಕಾರಿಗಳಿಗೆ ಮಾತನಾಡಿ ನಾಳೆ ಮೂರನೇ ತಾರೀಖು ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ವಿಚಾರ ಮಂಡಿಸಿ, ಎಲ್ಲಾ ಇಲಾಖೆ ಅಧಿಕಾರಿಗಳು ನಿರ್ಧಿಷ್ಟ ದಾಖಲೆ ಸಹಿತ ಬನ್ನಿ ಎಂದು ಹೇಳಿದರಂತೆ.

 ಸಭೆಯಲ್ಲಿದ್ದವರು ಹೊರಗಡೆ ಬಂದು ಹೇಳಿದ ರೀತಿ ಇದು. ದೇವಿಯ ಕೃಪೆ ಸಾರ್ ಎಂದು ಅವರ ಕಚೇರಿಯಲ್ಲಿ ಕಾಫಿ ಕುಡಿದು ಹೊರಟೆ. ಡಿಸಿಯವರಿಗೆ ಮೆಸೆಜ್ ಮಾಡಿದೆ, ಅವರು ಓಕೆ ಎಂದು ಕಳುಹಿಸಿದರು ಥ್ಯಾಂಕ್ಸ್ ಹೇಳಿದೆ. ಇದು ಒಂದು ಮೈಲಿಗಲ್ಲಾಯಿತು.

 ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ  ಅಧ್ಯಕ್ಷತೆಯಲ್ಲಿ SLHLC  ಸಭೆ

 ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಲು  ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ  ಅಧ್ಯಕ್ಷತೆಯಲ್ಲಿ ದಿನಾಂಕ: 04.03.2014 ರಂದು ನಡೆದ  Sಊಐಅಅ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಇದು ಅತ್ಯಂತ ಪ್ರಮುಖ ಘಟ್ಟ.

   ಸಚಿವ ಸಂಪುಟ ಸಭೆ ನಿಗದಿ, ಲೋಕಸಭಾ ಚುನಾವಣೆ ಘೋಷಣೆ

 ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಲು  ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ  ಅಧ್ಯಕ್ಷತೆಯಲ್ಲಿ ದಿನಾಂಕ: 06.03.2014 ರಂದು ಸಚಿವ ಸಂಪುಟ ಸಭೆ ನಿಗದಿಯಾಯಿತು.

 ಈ ವಿಷಯವನ್ನು ಮಂಡಿಸಲಾಯಿತು. ಆದರೆ ದಿನಾಂಕ:05.03.2014 ರಂದು ಲೋಕಸಭಾ ಚುನಾವಣೆ ಘೋಷಣೆಯಾಗಿ ಅಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಯಿತು.   

  ದಿನಾಂಕ:11.09.2013 ರಂದು ನಾವು ಸ್ವಯಂ ಗಡುವು ನಿಗದಿ ಮಾಡಿಕೊಂಡು ಸಂಸದ ಶ್ರೀ ಜಿ.ಎಸ್.ಬಸವರಾಜ್‍ರವರ 4 ನೇ ಅವಧಿ ಮುಗಿದು ಚುನಾವಣೆ ಘೋಷಣೆಯಾಗುವ ಸುಮಾರು 192 ದಿನಗಳು ಪೂರ್ಣಗೊಂಡಿತು. ಆದರೆ ನಮ್ಮ ಗುರಿಯಂತೆ ಯೋಜನೆಗೆ ಶಂಕುಸ್ಥಾಪನೆ ಮಾಡಲು ಸಾಧ್ಯವಾಗಲಿಲ್ಲ ಈ ಹಂತಕ್ಕೆ ಬಂದು ತುದಿಗಾಲಲ್ಲಿ ನಿಲ್ಲಿಸಿತು.

ಸ್ಪರ್ಧೆಯಲ್ಲಿ ಗೆದ್ದ ಜಿ.ಎಸ್.ಬಸವರಾಜ್

  ಹೆಲಿಕ್ಯಾಪ್ಟರ್ ತಯಾರಿಕ ಘಟಕ ಗುಬ್ಬಿಗೆ ತಾನಾಗಿ ಬರಲಿಲ್ಲ, ಅನಧಿಕೃತವಾಗಿ ಒಂದು ತರಹ ಬೃಹತ್ ಕಾಂಫಿಟೇಷನ್ ಏರ್ಪಟ್ಟಿದ್ದು ಇತಿಹಾಸ, ಕೇಂದ್ರದಲ್ಲಿ ಯುಪಿಎ ಸರ್ಕಾರ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ಸರ್ಕಾರಗಳ ಅವಧಿಯಲ್ಲಿ ಹೆಚ್.ಎ.ಎಲ್ ಘಟಕ ತರಲು ಹೋರಾಡಿದ  ಶ್ರೀ ಜಿ.ಎಸ್.ಬಸವರಾಜ್ ರವರು ಬಿಜೆಪಿಯಲ್ಲಿ ಗೆದ್ದು, ಕೆಜೆಪಿಗೆ ಬೆಂಬಲಿಸಿ, ನಂತರ ಕಾಂಗ್ರೆಸ್ಗೆ ಒಂದು ಕಾಲಿಟ್ಟ ವಿಚಿತ್ರವಾದ ಸಂದರ್ಭದಲ್ಲಿ ಘಟಕ ಮಂಜೂರು ಮಾಡಿಸಿದ್ದು ನಿಜಕ್ಕೂ ಅದ್ಭುತ.

5 ಜನ ಮುಖ್ಯಮಂತ್ರಿಯವರ ಪಾತ್ರ

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನಿಗೆ ಮೂರು ಜನ ಮುಖ್ಯ ಮಂತ್ರಿಗಳು ಮಹೂರ್ತ ನಿಗದಿ ಮಾಡಿದ್ದಾರೆ.

ಶ್ರೀ ಜಿ.ಎಸ್.ಬಸವರಾಜ್ ರವರ ಪತ್ರದ ಮೇರೆಗೆ 2001 ರಲ್ಲಿ ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಎಸ್.ಎಂ.ಕೃಷ್ನರವರು ಜಮೀನನ್ನು ಸರ್ಕಾರಿ ಉದ್ದೇಶಕ್ಕಾಗಿ ಕಾಯ್ದಿರಿಸಿರುವ ಕೆಲಸ ಮಾಡಿದ್ದರು.

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಶ್ರೀ ಸುರೇಶ್ ಕುಮಾರ್ ರವರ ಪತ್ರದ ಮೇರೆಗೆ 2009 ರಲ್ಲಿ ಕೈಗಾರಿಕಾ ವಸಾಹತು ಮಾಡಲು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಆದೇಶ ನೀಡಿದ್ದಾರೆ.

ಶ್ರೀ ಜಿ.ಎಸ್.ಬಸವರಾಜ್ ರವರ ಪತ್ರದ ಮೇರೆಗೆ 2012 ರಲ್ಲಿ ಹೆಚ್.ಎ.ಎಲ್ ಘಟಕಕ್ಕೆ ಜಮೀನು ನೀಡಲು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಡಿ.ವಿ.ಸದಾನಂದಗೌಡರವರು  ನಿರ್ಧೇಶನ ನೀಡಿದ್ದಾರೆ.

ಶ್ರೀ ಜಿ.ಎಸ್.ಬಸವರಾಜ್ ರವರ ಪತ್ರದ ಮೇರೆಗೆ 2014 ರಲ್ಲಿ ಹೆಚ್.ಎ.ಎಲ್ ಘಟಕಕ್ಕೆ ಜಮೀನು ಮಂಜೂರು ಮಾಡಲು  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಆದೇಶ ನೀಡಿದ್ದಾರೆ.

ಶ್ರೀ ಜಿ.ಎಸ್.ಬಸವರಾಜ್ ರವರ ಪತ್ರದ ಮೇರೆಗೆ, ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ನಿರ್ದಾರದಿಂದ ಮಾನ್ಯ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರಿಗೆ ಉದ್ಘಾಟನೆ ಭಾಗ್ಯ ದೊರಕಿದೆ.

  ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು, ತುಮಕೂರು ಜಿಲ್ಲೆಯ ಶಿರಾ, ಬೀದರ್, ಗುಲ್ಬರ್ಗ ಮತ್ತು ಶಿವಮೊಗ್ಗ ಜಿಲ್ಲೆ ಯಾವುದು ಬೇಡ,  ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ಕೊಡಿ,  ಹೆಚ್.ಎ.ಎಲ್ ನವರೇ ಈ ಜಮೀನು ಕೊಡಿ ಎಂದ ಮೇಲೆ ನಮ್ಮಿಂದ ಯಾವ ತಕರಾರು ಬೇಡ ಎಂಬ ಗಟ್ಟಿ ನಿರ್ಧಾರ ಮಾಡಿದರು.

2016 ನೇ ಜನವರಿ 3 ನೇ ತಾರೀಖು ಹೆಚ್.ಎ.ಎಲ್ ಘಟಕಕ್ಕೆ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರ ಜೊತೆ ಶಂಕುಸ್ಥಾಪನೆ ಮಾಡುವ ಅವಕಾಶವೂ  ಶ್ರೀ ಸಿದ್ಧರಾಮಯ್ಯನವರಿಗೆ ದೊರಕಿತು.  

ಶ್ರೀ ಜಿ.ಎಸ್.ಬಸವರಾಜ್ ಸೋಲು.

2014 ರ ಲೋಕಸಭಾ ಚುನಾವಣೆಯಲ್ಲಿ ಶ್ರೀ ಜಿ.ಎಸ್.ಬಸವರಾಜ್‍ರವರ ಸೋಲು ಬರಸಿಡಿಲಿನಂತೆ ಬಂದೆರಗಿತು. ಲೋಕಸಭಾ ಸದಸ್ಯರಾದ ಶ್ರೀ ಎಸ್.ಪಿ.ಮುದ್ದುಹನುಮೇಗೌಡರ ಮತ್ತು ನನ್ನ ಸಂಪರ್ಕ ಇಲ್ಲದೇ ಇದ್ದದರಿಂದ ಅವರ ಸಹಕಾರ ನನಗೆ ದೊರೆಯಲಿಲ್ಲ. ಅವರು ಎಂಪಿಯಾಗಿ ಏನೇನು ಮಾಡಿದರೂ ಎಂಬ ಮಾಹಿತಿಯೂ ನನಗೆ ಇಲ್ಲ. ನಾನೂ ಏಕಾಂಗಿಯಾಗಿ ನನ್ನ ಪ್ರಯತ್ನ ಮುಂದುವರೆಸಿದೆ.

ಸಚಿವ ಸಂಪುಟದಲ್ಲಿ ನಿರ್ಣಯ 

 ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಲು  ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ  ಅಧ್ಯಕ್ಷತೆಯಲ್ಲಿ ದಿನಾಂಕ: 26.06.2014 ರಂದು ಸಚಿವ ಸಂಪುಟ ಸಭೆ ನಿಗದಿಯಾಯಿತು. ಈ ವಿಷಯವನ್ನು ಮಂಡಿಸಲಾಯಿತು.     

   ಅಂದು ಬೆಳಿಗ್ಗೆ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಟಿ.ಬಿ.ಜಯಚಂದ್ರರವರ ಕಚೇರಿಗೆ ಹೋಗಿ ಸಾರ್, ಈ ದಿನದ ಸಚಿವ ಸಂಪುಟದಲ್ಲಿ ಹೆಚ್.ಎ.ಎಲ್ ವಿಚಾರ ಇದೆ, ದಯವಿಟ್ಟು ಎಂದೆ ಆಯಿತು ಎಂದಷ್ಟೆ ಹೇಳಿದರು. ಸಚಿವ ಸಂಪುಟದಲ್ಲಿ ನಿರ್ಣಯವಾಯಿತು. ಇದು ಒಂದು ಅತ್ಯಂತ ಪ್ರಮುಖ ಅಂತಿಮ ಹಂತ ಎಂದರೆ ತಪ್ಪಾಗಲಾರದು.

 ಆಡಳಿತಾತ್ಮಕ ಅಧೇಶ

ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಲು  ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ  ಅಧ್ಯಕ್ಷತೆಯಲ್ಲಿ ದಿನಾಂಕ: 26.06.2014 ರಂದು ಸಚಿವ ಸಂಪುಟ ಸಭೆ ನಿರ್ಣಯ ಆದ ಮೇಲೆ ಭೂಮಿ ಕೊಡಲು ಕಂದಾಯ ಇಲಾಖೆ ದಿನಾಂಕ:21.08.2014 ರಂದು ಪ್ರತ್ಯೇಕವಾಗಿ ಒಂದು ಆದೇಶವನ್ನು ನೀಡಿತು.

ಕಿಮ್ಮತ್ತು ಹಣ ಪಾವತಿಗಾಗಿ ಜಿಲ್ಲಾಧಿಕಾರಿಗಳ ಪತ್ರ 

 ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಲು  ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ  ಅಧ್ಯಕ್ಷತೆಯಲ್ಲಿ ದಿನಾಂಕ: 26.06.2014 ರಂದು ಸಚಿವ ಸಂಪುಟ ಸಭೆ ನಿರ್ಣಯ ಆದ ಮೇಲೆ.

ಭೂಮಿ ಕೊಡಲು ಕಂದಾಯ ಇಲಾಖೆ ದಿನಾಂಕ:21.08.2014 ರಂದು ಪ್ರತ್ಯೇಕವಾಗಿ ಒಂದು ಆದೇಶವನ್ನು ನೀಡಿದ ನಂತರ

ತುಮಕೂರು ಜಿಲ್ಲಾಧಿಕಾರಿಗಳು ದಿನಾಂಕ:30.08.2014 ರಂದು ಕಿಮ್ಮತ್ತು ಹಣ ಪಾವತಿಸಲು ಹೆಚ್.ಎ.ಎಲ್ ವ್ಯವಸ್ಥಾಪಕ ನಿರ್ಧೇಶಕರಿಗೆ ಬರೆದ ಪತ್ರ.

ಜಿಲ್ಲಾಧಿಕಾರಿಗಳಿಂದ ಹೆಚ್..ಎಲ್ ಗೆ ಭೂಮಿ ಹಸ್ತಾಂತರ 

 ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನನ್ನು ಹೆಚ್.ಎ.ಎಲ್ ಘಟಕಕ್ಕೆ ನೀಡಲು  ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರ  ಅಧ್ಯಕ್ಷತೆಯಲ್ಲಿ ದಿನಾಂಕ: 26.06.2014 ರಂದು ಸಚಿವ ಸಂಪುಟ ಸಭೆ ನಿರ್ಣಯ ಆದ ಮೇಲೆ.

ಭೂಮಿ ಕೊಡಲು ಕಂದಾಯ ಇಲಾಖೆ ದಿನಾಂಕ:21.08.2014 ರಂದು ಪ್ರತ್ಯೇಕವಾಗಿ ಒಂದು ಆದೇಶವನ್ನು ನೀಡಿದ ನಂತರ

ತುಮಕೂರು ಜಿಲ್ಲಾಧಿಕಾರಿಗಳು ದಿನಾಂಕ:30.08.2014 ರಂದು ಕಿಮ್ಮತ್ತು ಹಣ ಪಾವತಿಸಲು ಹೆಚ್.ಎ.ಎಲ್ ವ್ಯವಸ್ಥಾಪಕ ನಿರ್ಧೇಶಕರಿಗೆ ಬರೆದ ಪತ್ರದ ಮೇಲೆ ಅವರು ಕಿಮ್ಮತ್ತು ಪಾವತಿಸಿದ ನಂತರ

ದಿನಾಂಕ:29.11.2014 ರಂದು ಜಿಲ್ಲಾಧಿಕಾರಿಗಳು ಹೆಚ್.ಎ.ಎಲ್ ನವರಿಗೆ ಭೂಮಿ ಹಸ್ತಾಂತರಿಸಿದರು.

ಹೆಚ್..ಎಲ್ ಗೆ  ಪಹಣಿ

 ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನ ಸರ್ಕಾರಿ ಜಮೀನಿನಲ್ಲಿ ಹೆಚ್.ಎ.ಎಲ್ ಘಟಕಕ್ಕೆ  610 ಎಕರೆ ಜಮೀನಿನ ಪಹಣಿ.

ಗೋವಾಗೆ ಸ್ಥಳಾಂತರ ಸುದ್ದಿ ನಿದ್ದೆ ಗೆಡಿಸಿತು.

ಗೋವಾ ರಾಜ್ಯದ ಕೇಂದ್ರ ರಕ್ಷಣಾ ಸಚಿವರಾದ ಮಾನ್ಯ  ಶ್ರೀ ಮನೋಹರ್ ಪರಿಕ್ಕರ್‍ವರು ನಾವು ಜಮೀನು ಕೊಡುತ್ತೇವೆ ನಮಗೆ ಹೆಲಿಕ್ಯಾಪ್ಟರ್ ತಯಾರಿಕ ಘಟಕ ಮಂಜೂರು ಮಾಡಿ,  ಎಂಬ ಮಾತು ಬರಸಿಡಿಲಿನಂತೆ ಬಂದು ಎರಗಿತು.

ರಾಜ್ಯದ 41 ಜನ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಿಗೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂನಿಂದ ಪತ್ರ ಬರೆದೆ.

ಶ್ರೀ ಸಿದ್ಧರಾಮಯ್ಯನವರಿಂದ ಪತ್ರ ಬರೆಸಲು ರಾಮದುರ್ಗದ ಶಾಸಕರಾದ ಶ್ರೀ ಅಶೋಕ್ ಪಟ್ಟಣಶೆಟ್ಟಿಯವರು. ತುಮಕೂರಿನವರೇ ಆದ ಶ್ರೀ ಉಗ್ರಪ್ಪನವರ ಸಹಕಾರವನ್ನು ಪಡೆದೆವು.

ನಿರಂತರ ದೆಹಲಿ ಭೇಟಿ

ಪ್ರಧಾನಿಯವರಾದ ಶ್ರೀ ನರೆಂದ್ರಮೋದಿಯವರಿಗೆ ಮತ್ತು ರಕ್ಷಣಾ ಸಚಿವರಾದ ಶ್ರೀ ಮನೋಹರ್ ಪರಿಕ್ಕರ್ ರವರಿಗೆ ಕೆಳಕಂಡವರಿಂದ ಪತ್ರ ಬರೆಸಲಾಯಿತು.

1.      ಮಾಜಿ ಮುಖ್ಯ ಮಂತ್ರಿಯªರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರಿಂದ 

2.      ಕೇಂದ್ರ ಸಚಿವರಾದ ಶ್ರೀ ಅನಂತ್ ಕುಮಾರ್ ರವರಿಂದ

3.      ಕೇಂದ್ರ ಸಚಿವರಾದ ಶ್ರೀ ಡಿ.ವಿ.ಸದಾಗೌಡ ರವರಿಂದ 

4.      ಕೇಂದ್ರ ಸಚಿವರಾದ ಶ್ರೀ ಸಿದ್ದೇಶ್ವರ್ ರವರಿಂದ 

5.      ಮಾಜಿ ಕೇಂದ್ರ ಸಚಿವರಾದ ಶ್ರೀ ಆಸ್ಕರ್ ಪರ್ನಾಂರ್ಢಿಸ್ ರವರಿಂದ  

6.      ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ಪ್ರಹ್ಲಾದ್ ಜೋಷಿ ರವರಿಂದ 

7.      ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಶ್ರೀ ಕೆ.ಎಸ್.ಈಶ್ವರಪ್ಪನ ರವರಿಂದ 

8.      ವಿಧಾನಸಭಾ ವಿರೋದ ಪಕ್ಷದ ನಾಯಕರಾದ ಶ್ರೀ ಜಗದೀಶ್ ಶೆಟ್ಟರ್‍ರವರಿಂದ 

9.      ಜೆಡಿಎಸ್ ರಾಜ್ಯಸಭಾ ಸದಸ್ಯರಾದ ಶ್ರೀ ಕುಪೇಂದ್ರ ರೆಡ್ಡಿ ರವರಿಂದ 

ಶ್ರೀ ಹೆಚ್.ಡಿ.ದೇವೇಗೌಡರವರು ಸೇರಿದಂತೆ, ರಾಜ್ಯದ ಲೋಕಸಭಾ ಸದಸ್ಯರು ಹಾಗೂ ರಾಜ್ಯಸಭಾ ಸದಸ್ಯರನ್ನು ಒಳಗೊಂಡತೆ ಸುಮಾರು 35 ಜನ ಸಂಸದರ ದೆಹಲಿ ಬೇಟಿ ನಿಜಕ್ಕೂ ಮರೆಯಲು ಸಾಧ್ಯಾವಿಲ್ಲ.

ಮೂರು £ ..ಎಸ್.ಮಹಿಳೆಯರ ಪಾತ್ರ

ಮೂಲಭೂತ ಸೌಕರ್ಯ ಇಲಾಖೆ ಅಪರಮುಖ್ಯ ಕಾರ್ಯದರ್ಶಿ ಶ್ರೀ ಮತಿ ವಂದಿತಾ ಶರ್ಮರವರು, ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಶ್ರೀ ಮತಿ ಶಾಲಿನಿ ರಜನೀಶ್ ರವರು ಮತ್ತು ದೆಹಲಿ ರೆಸಿಡೆಂಟ್ ಕಮಿಷನರ್ ಶ್ರೀಮತಿ ಗುರ್ನಾನಿರವರ ಸಹಕಾರ ಮರೆಯುವಂತಿಲ್ಲ.

ಐಎಎಸ್ ಅಧಿಕಾರಿಗಳಾದ ಶ್ರೀ ವಿದ್ಯಾಶಂಕರ್, ಶ್ರೀ ಜೈತಿರಾಮಲಿಂಗಂ. ಶ್ರೀ ಡಿ.ವಿ ಪ್ರಸಾದ್ ಹೀಗೆ ಹಲವಾರು ಅಧಿಕಾರಿಗಳು ಶ್ರಮ ನಿಜಕ್ಕೂ ಅದ್ಭುತ.

ಜಿಲ್ಲಾಧಿಕಾರಿ ಗೋ ಬ್ಯಾಕ್ ಚಳುವಳಿ.

ಜಿಲ್ಲಾಧಿಕಾರಿಗಳು ಫಿಸಿಕಲ್ ಆಗಿ ಭೂಮಿ ವರ್ಗಾವಣೆ ಮಾಡಲಿಲ್ಲ ಎಂದು, ನಿಟ್ಟೂರಿನಲ್ಲಿ ಸ್ವಾಮಿಜಿಗಳ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಗೋ ಬ್ಯಾಕ್ ಚಳುವಳಿಯೂ ನಡೆಯಿತು.

ಜಿಲ್ಲಾಧಿಕಾರಿ ಮೋಹನ್ ರಾಜ್ ಆಗಮನ.

ತುಮಕೂರಿಗೆ ಜಿಲ್ಲಾಧಿಕಾರಿಯಾಗಿ ಬಂದ ಶ್ರೀ ಮೋಹನ್ ರಾಜ್ ರವರು ಮತ್ತು ಅವರ ತಂಡ ಹಗಲಿರಳು ಎನ್ನದೇ ಸಮರೋಪಾದಿಯಲ್ಲಿ ಎಲ್ಲಾ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಿದರು. ಇವರು ಪಟ್ಟ ಸಾಹಸವೇ ಒಂದು ಪುಸ್ತಕವಾಗಲಿದೆ.

ಶ್ರೀ ನರೇಂದ್ರ ಮೋದಿಯವರ ಸರ್ಕಾರವೂ ಸ್ಪಂಧಿಸಿತು.

ಎಲ್ಲಾ ಗೊಂzಲÀಗಳಿಗೆ ಪರಿಹಾರ ಕಂಡುಕೊಂಡು, ಪಕ್ಷ ರಾಜಕಾರಣ ಮಾಡದೇ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ, ತುಮಕೂರಿನಲ್ಲಿ ಹೆಚ್.ಎ.ಎಲ್ ಘಟಕ ಸ್ಥಾಪಿಸಲು ಶ್ರೀ ನರೆಂದ್ರ ಮೋದಿಯವರ ಸರ್ಕಾರ ಸ್ಪಂಧಿಸಿತು.

ಕೇಂದ್ರ ರಕ್ಷಣಾ ಸಚಿವರಾಗಿದ್ದ ದಿ.ಅರುಣ್ ಜೇಟ್ಲಿರವರು, ಶ್ರೀಮತಿ ನಿರ್ಮಲಾ ಸೀತಾರಮನ್ ರವರು ಮತ್ತು ದಿ.ಮೋಹನ್ ಪರಿಕ್ಕರ್ ರವರು ಸಹಕರಿಸಿದರು.

ಹೆಚ್..ಎಲ್ ಘಟಕದ ಶಂಕುಸ್ಥಾಪನೆ

 ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಹಳ್ಳ ಕಾವಲ್‍ನಲ್ಲಿನರುವ ಹೆಚ್.ಎ.ಎಲ್ ನ 610 ಎಕರೆ ಜಮೀನಿನಲ್ಲಿ ದಿನಾಂಕ:03.01.2016 ರಂದು ಹೆಚ್.ಎ.ಎಲ್ ಘಟಕದ ಶಂಕುಸ್ಥಾಪನೆ. ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಮತ್ತು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಮತ್ತು ಇತರರು ಭಾಗಿಯಾದರು.

ಗೋವಾ ರಾಜ್ಯದ ಕೇಂದ್ರ ರಕ್ಷಣಾ ಸಚಿವರಾದ ಮಾನ್ಯ  ಶ್ರೀ ಮನೋಹರ್ ಪರಿಕ್ಕರ್‍ವರು ನಾವು ಸಮಾರಂಭದಲ್ಲಿ ಪಕ್ಷಾತೀತವಾಗಿ ಎಲ್ಲರೂ ಪತ್ರ ಬರೆದಿದ್ದೀರಾ, ಇನ್ನೂ ಮುಂದೆ ಯಾವ ಭಯಬೇಡ, ಘಟಕಕ್ಕೆ ಚಾಲನೆ ನೀಡಿದ್ದೇವೇ ಎಂದು ಬಹಿರಂಗವಾಗಿ ಹೇಳಿದ್ದು ಇತಿಹಾಸ.

ಹೆಚ್..ಎಲ್ ಘಟಕದ ಲೋಕಾರ್ಪಣೆ.

ದಿನಾಂಕ:06.02.2023 ರಂದು ಮತ್ತೆ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಮತ್ತು ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ್ ಬೊಮ್ಮಾಯಿರವರು ಮತ್ತು ಇತರರು ಭಾಗಿಯಾಗುತ್ತಿರುವುದು ಹಾಗೂ ಶ್ರೀ ಜಿ.ಎಸ್.ಬಸವರಾಜ್ ರವರು ಲೋಕಸಭಾ ಸದಸ್ಯರಾಗಿ ಭಾಗಿಯಾಗುತ್ತಿರುವುದು ಖುಷಿಯಾಗಿದೆ..

ಸುಮಾರು 35 ವರ್ಷಗಳ ಹೋರಾಟಕ್ಕೆ ಪ್ರತಿಫಲವಂತೂ ದೊರೆಯಿತು.

ಹಲವಾರು ಚುನಾಯಿತ ಜನಪ್ರತಿನಿಧಿಗಳು, ಗ್ರಾಮ ಲೆಕ್ಕಿಗರಿಂದ ಆರಂಬಿಸಿ, ಮುಖ್ಯ ಕಾರ್ಯದರ್ಶಿಯವರ ವರೆಗೂ ವಿವಿದ ಹಂತದ ಅಧಿಕಾರಿಗಳು, ಸಾವಿರಾರು ಜನರ ಸಹಕಾರ, ಅಧಿಕಾರಿಗಳು ಬಂದಾಗ ಜಮೀನು ತೋರಿಸುತ್ತಿದ್ದವರು, ಊಟಹಾಕುತ್ತಿದ್ದವರು, ಟೀಕೆ ಮಾಡುತ್ತಿದ್ದವರು, ಅವಮಾನ ಮಾಡಿದವರು, ಮಾದ್ಯಮದ ಮೂಲಕ ಬೆಂಬಲ ನೀಡಿದವರು. ಹೀಗೆ ಪರ- ವಿರೋಧದ ಒಂದೊಂದು ಘಟನೆಯ ನೆನಪುಗಳನ್ನು ವರದಿ ರೂಪದಲ್ಲಿ  ಸಿದ್ಧಪಡಿಸಲಾಗುತ್ತಿದೆ. ಶೀಘ್ರದಲ್ಲಿ ಬಿಡುಗಡೆ ಮಾಡಲಾಗುವುದು.

ಶ್ರೀ ಜಿ.ಎಸ್.ಬಸವರಾಜ್ ರವರ ರಾಜಕೀಯ ಅವಧಿಯ ಒಂದೊಂದು ಅಭಿವೃದ್ಧಿ ಯೋಜನೆಗಳ ಅನುಭವದ ವರದಿ, ಶ್ರೀ ಟಿ.ಆರ್.ರಘೋತ್ತಮ ರಾವ್‍ರವರು ಸಿದ್ಧಪಡಿಸಿದ ಎಂಪಿಯವರ ಸಾವಿರಾರು ಪತ್ರಗಳ ಮಾಹಿತಿ ಹಾಗೂ ಜೊತೆಗೆ 35 ವರ್ಷಗಳ ನನ್ನ ಅನುಭವಗಳ ವರಧಿ ಸಿದ್ಧವಾಗುತ್ತಿದೆ.

ಅಭಿವೃದ್ಧಿ ಲಾಬಿಗಾಗಿ ಶ್ರಮಿಸಲು ಮೊದಲ ಮೆಟ್ಟಿಲು ಹೆಚ್.ಎ.ಎಲ್ ಘಟಕದ ಅನುಭವ.

1.      ಕುಂದರನಹಳ್ಳಿ ಮಾದರಿ ಗ್ರಾಮ

2.      ಚಿಕ್ಕನಾಯಕನಹಳ್ಳಿ ತಾಲ್ಲೋಕು ತೀರ್ಥರಾಮೇಶ್ವರ ವಜ್ರದ ಮನೆ ದೇವರ ಅಭಿವೃದ್ಧಿ ಯೋಜನೆಗಳು

3.      ತುಮಕೂರು ನಗರ

4.      ತುಮಕೂರು ಜಿಲ್ಲೆ

5.      ಕರ್ನಾಟಕ ರಾಜ್ಯ ಹೀಗೆ ನಿರಂತರವಾಗಿ ಅಭಿವೃದ್ಧಿಗೆ ಶ್ರಮಿಸಿದ

ಈ ಗಟ್ಟಿ ಅನುಭವದ ಮೇರೆಗೆ ವಿಶ್ವದ 108 ಶಕ್ತಿಪೀಠಗಳ ದೇವತೆಗಳನ್ನು ಪೂಜಿಸಿ, ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ‘ಜೈ ಅನುಸಂಧಾನ್’ ಹಾಗೂ ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರ ಮುಂದಿನ ಯುಗ ಜ್ಞಾನಯುಗ ಹೇಳಿಗೆ ಪೂರಕವಾಗಿ.

ರಾಜ್ಯದ ಸರ್ವಪಕ್ಷಗಳ ನೇತೃತ್ವದಲ್ಲಿ, ರಾಜ್ಯದ ಎಲ್ಲಾ ಮಾಜಿಮುಖ್ಯಮಂತ್ರಿಯವರ ಮಾರ್ಗದರ್ಶನದಲ್ಲಿ ಹಾಗೂ ರಾಜ್ಯದ 28 ಜನ ಲೋಕಸಭಾ ಸದಸ್ಯರು, 13 ಜನ ರಾಜ್ಯ ಸಭಾ ಸದಸ್ಯರು, 225 ಜನ ವಿಧಾನಸಭಾ ಸದಸ್ಯರ, 75 ಜನ ವಿಧಾನ ಪರಿಷತ್ ಸದಸ್ಯರ, ದೆಹಲಿ ಪ್ರತಿನಿಧಿಯ ಸಹಭಾಗಿತ್ವದಲ್ಲಿ, ಮೋದಿಜಿಯವರ ಇಂಡಿಯಾ @ 100 ರ ಅಡಿಯಲ್ಲಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್– 2047 ಸಿದ್ಧಪಡಿಸಲು ಚಾಲನೆ ನೀಡಲಾಗಿದೆ.

ಪ್ರಪಂಚದಲ್ಲಿಯೇ ವಿಶಿಷ್ಟವಾದ ಅಭಿವೃದ್ಧಿ ದೇವಾಲಯದ, ಶಕ್ತಿಪೀಠ ಕ್ಯಾಂಪಸ್ ಪರಿಕಲ್ಪನೆಗೂ ಚಾಲನೆ ನೀಡಲಾಗಿದೆ.

ನನ್ನ ಕುಟುಂಬದ ಸಹಕಾರ/ಬೆಂಬಲವೇ ನನಗೆ ಸ್ಪೂರ್ತಿ

35 ವರ್ಷಗಳ ಕಾಲ ‘ಬೀದಿ ಬಸವ’ ಬಿಟ್ಟ ಹಾಗೆ ನನಗೆ ಸಹಕರಿಸಿದ ನನ್ನ ತಂದೆ ದಿ.ಕೆ.ಎಸ್.ರಾಮಲಿಂಗಯ್ಯ. ತಾಯಿ ದಿ.ಪಾರ್ವತಮ್ಮ. ನನ್ನ ಧರ್ಮಪತ್ನಿ ಶ್ರೀಮತಿ ಬಿ.ಸುಜಾತಕುಮಾರಿ, ನನ್ನ ಮಗಳು ಶ್ರೀಮತಿ ಇಂಚರ. ನನ್ನ ಮಗ ಚಿ.ಕೆ.ಆರ್.ಸೋಹನ್ ಹಾಗೂ ನನಗೆ ದುಡಿದು ಹಾಕುತ್ತಿರುವ ನನ್ನ ದಾಯಾದಿ ಸಹೋದರ ಶ್ರೀ ಸಿದ್ಧರಾಮಯ್ಯನವರ ಕುಟುಂಬಕ್ಕೆ ನಾನು ಋಣಿಯಾಗಲೇ ಬೇಕು.

ನನ್ನ ಮಗ ಚಿ.ಕೆ.ಆರ್.ಸೋಹನ್ ಡಾಟಾ ವಿಜ್ಞಾನಿಯಾಗಿದ್ದು, ನಾನು ಇದೂವರೆಗೂ ಮಾಡುತ್ತಿರುವ ಅಭಿವೃದ್ಧಿ ಲಾಭಿಯನ್ನು ಸ್ಟಾರ್ಟ್ ಅಫ್ ಯೋಜನೆಯಡಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯದ ಬಗ್ಗೆ ಚುನಾಯಿತ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮತ್ತು ಅಭಿವೃದ್ಧಿ ಆಸಕ್ತರಿಗೆ ಜಾಗೃತಿ ಮೂಡಿಸಲು ಅಧ್ಯಯನ ಮಾಡುತ್ತಿರುವುದು ನನಗೆ ಹೆಮ್ಮೆಯೆನಿಸಿದೆ.

ನಮ್ಮ ರಾಜ್ಯ ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯಲು ಸ್ಟ್ರಾಟಜಿಯನ್ನು, ಈಗಾಗಲೇ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದ ಸಹಭಾಗಿತ್ವದೊಂದಿಗೆ ಸಿದ್ಧಪಡಿಸುತ್ತಿರುವುದು ನನಗೆ  ಸ್ಪೂರ್ತಿ ತಂದಿದೆ.

ವಿಶ್ವದ 108 ಶಕ್ತಿಪೀಠಗಳಿಗೂ ಪ್ರವಾಸ ಮಾಡಿ, ಶಕ್ತಿಪೀಠಗಳ, ಜ್ಯೋತಿರ್ಲಿಂಗಗಳ, ಸಾಯಿಬಾಬನ ದರ್ಶನ ಪಡೆದ ನಂತರ, ಶಕ್ತಿಪೀಠ ಕ್ಯಾಂಪಸ್ ಮೂಲಕ ಶ್ರಮಿಸಲು ಭರದ ಸಿದ್ಧತೆ ಆರಂಭವಾಗಿದೆ.

ಇದೊಂದು ಕರಡು ಪ್ರತಿ, ತಮ್ಮ ಸಲಹೆಗಳಿಗಾಗಿ ಬಹಿರಂಗ ಮನವಿ.

–      ಕುಂದರನಹಳ್ಳಿ ರಮೇಶ್- 9886774477

ಅಧ್ಯಕ್ಷರು ಅಭಿವೃದ್ಧಿ ರೆವೂಲ್ಯೂಷನ್ ಫೋರಂ, ಸಂಸ್ಥಾಪಕರು ಶಕ್ತಿಪೀಠ ಫೌಂಡೇಷನ್. ಹಾಗೂ ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.