24th April 2024
Share

TUMAKURU:SHAKTHIPEETA FOUNDATION

ಸರ್ಕಾರಿ ಭೂಮಿ ಉಳುಮೆ ಮಾಡುತ್ತಿದ್ದವರಿಗೆ, ಹೆಚ್.ಟಿ.ಲೈನ್ ಸ್ಥಳಾಂತರ ಮಾಡುವಾಗ ತೊಂದರೆ ಆದ ರೈತರಿಗೆ, ಸುತ್ತಮುತ್ತಲಿನ ಗ್ರಾಮಗಳ ರೈತರಿಗೆ ಮತ್ತು ನಿರುದ್ಯೋಗಿಗಳಿಗೆ ನೀಡಿದ್ಧ ಭರವಸೆಯನ್ನು ಹೀಡೇರಿಸಲು ಸಾಧ್ಯಾವಾಗದೇ ಇರುವ ಕಾರಣ, ನಾನು ಹೆಚ್.ಎ.ಎಲ್ ಸಮಾರಂಭಕ್ಕೆ ಹೋಗ ಬೇಕೆ? ಬೇಡವೇ? ಎಂಬ ಬಗ್ಗೆ ಇಂದು ನಿರ್ಧಾರ ? ಕೈಗೊಳ್ಳುತ್ತೇನೆ.

ಯಾವ ಭರವಸೆಯನ್ನು ಯಾವ ಹಂತದಲ್ಲಿ ನಿರ್ಧಾರ ಕೈಗೊಳ್ಳ ಬೇಕು ಎಂಬ ಮಾಹಿತಿ ನನಗೂ ಗೊತ್ತಿದೆ. ಏಕಾಎಕಿ ತೀರ್ಮಾನ ಮಾಡುವ ಭರವಸೆಗಳಲ್ಲ. ಈಗಾಗಲೇ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು, ಮಾನ್ಯ ಪ್ರದಾನಿಯವರ ಬಳಿ ಕರೆದುಕೊಂಡು ಹೋಗುತ್ತೇನೆ, ಬನ್ನಿ ಅಲ್ಲಿಯೇ ಚರ್ಚೆ ಮಾಡೋಣ.

 ದೇಶದ ನಿರುದ್ಯೋಗಿಗಳಿಗೆ ಅನೂಕೂಲ ಮಾಡಲು ನಾನು ಶ್ರಮ ಹಾಕುವುದಿಲ್ಲವೇ? ಲೋಕಸಭೆಯಲ್ಲಿ ಚರ್ಚೆಗೂ ಬರೆಯುತ್ತೇನೆ. ಆರಂಭದಿಂದ ಶ್ರಮಿಸಿ ನಿಮ್ಮೂರಿನ ಸಮಾರಂಭಕ್ಕೆ ಬರದೇ ಇರುವುದು ಸರಿಯಲ್ಲ ಎಂದಿದ್ದಾರೆ.

ಹೆಚ್.ಎ.ಎಲ್ ನವರಿಗೆ ಈಗಾಗಲೇ ಹೇಳಿದ್ದೇನೆ, ಸುತ್ತ-ಮುತ್ತ ಇರುವ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ಅಡಿಯಲ್ಲಿ ಸಿ.ಎಸ್.ಆರ್ ಫಂಡ್ ನೀಡಲು ಒಪ್ಪಿದ್ದಾರೆ. ಈ ಬಗ್ಗೆ ಕೇಂದ್ರ ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ರವರ ಬಳಿಯೂ ಹೋಗಿ ಸಮಾಲೋಚನೆ ಮಾಡೋಣ ಎಂಬ ಮಾತನ್ನು ಹೇಳಿದ್ದಾರೆ.

ನನಗೂ ಭರವಸೆಯಿದೆ ನಮ್ಮ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಇದೂವರೆಗೂ ಮಾತನಾಡಿದ್ದೆಲ್ಲ, ಬಾಷಣ ಮಾಡಿದ್ದೆಲ್ಲ, ಕಾನೂನುಗಳಾಗಿವೆ ಅಥವಾ ಅನುಪಯುಕ್ತ ಕಾನೂನುಗಳನ್ನು ಕಿತ್ತು ಎಸೆದಿದ್ದಾರೆ. ಒಬ್ಬ ಸಾಮಾನ್ಯ ಮನುಷ್ಯನ ಕೂಗು ಕೇಳಿಸಿಕೊಳ್ಳುವ ಜಾಣ್ಮೆ ಅವರಿಗೆ ಮತ್ತು ಅವರ ತಂಡಕ್ಕೆ ಇದೆ.

ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ಸಹ ಮಾತನಾಡಿದ್ದಾರೆ. ಇಂಗ್ಲೀಷ್‍ನಲ್ಲಿ ಕಳುಹಿಸಲು ಹೇಳಿದ್ದಾರೆ. ಮೈಸೂರಿನ ಸ್ನೇಹಿತರು ಒಬ್ಬರು ತರ್ಜುಮೆ ಮಾಡುತ್ತಿದ್ದಾರೆ. ಎಲ್ಲವನ್ನೂ ಪ್ರಧಾನಿಯವರ ಮತ್ತು ಮಾನ್ಯ ಮುಖ್ಯಮಂತ್ರಿಯವರ ಗಮನಕ್ಕೆ ತರಲೇಬೇಕು ಎಂಬ ದೃಢ ನಿರ್ಧಾರ ಮಾಡಲಾಗಿದೆ.

ರಾಜ್ಯದ 28 ಜನ ಲೋಕಸಭಾ ಸದಸ್ಯರು ಹಾಗೂ 13 ಜನ ರಾಜ್ಯ ಸಭಾಸದಸ್ಯರೊಂದಿಗೂ ಮುಖಾ- ಮುಖಿಯಾಗಿ ಭೇಟಿ ಮಾಡಿ ಸಮಾಲೋಚನೆ ನಡೆಸಲು ಚಿಂತನೆ ಮಾಡಿದ್ದೇವೆ.

ದೇಶದ ಎಲ್ಲಾ ಸಂಸದರಿಗೂ ಇಂಗ್ಲೀಷ್ ಪ್ರತಿಯನ್ನು ರಾವಾನಿಸಲಾಗುವುದು.

ರಾಜ್ಯದ ಸರ್ವ ಪಕ್ಷಗಳ ನಾಯಕರುಗಳ ಜೊತೆಗೂ ಸಮಾಲೋಚನೆ ನಡೆಸುತ್ತೇವೆ. ‘ಇಂಡಿಯಾ @ 100’ ಅಂಗವಾಗಿ, ‘ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ‘ನ ನಮ್ಮ ಮೊದಲು ಗುರಿ, ಸ್ಥಳೀಯರಿಗೆ ಹಾಗೂ ಭೂ ಸಂತ್ರಸ್ಥರಿಗೆ ಉದ್ಯೋಗ ನೀಡಲು ರಾಜ್ಯದಲ್ಲಿ ಡಾ.ಸರೋಜಿನಿ ಮಹಿಷಿ ವರದಿ ಆಕ್ಟ್ ಹಾಗೂ ಕೇಂದ್ರದಲ್ಲೂ ಇದೇ ಮಾದರಿ ಸ್ಪಷ್ಟ ಕಾನೂನು ರೂಪಿಸುವುದಾಗಿದೆ.

ಈ ಬಗ್ಗೆ ಜ್ಞಾನ ಇರುವವರು ಜ್ಞಾನದಾನ ಮಾಡಲು ಮನವಿ.

ತುಮಕೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಶ್ರೀ ನಾಗೇಶ್ ರವರ ಬಳಿ ಸಮಾಲೋಚನೆ ಮಾಡಿದ್ದೇನೆ. ಡಾ.ಸರೋಜಿನಿ ಮಹಿಷಿ ವರದಿ ಬಗ್ಗೆ ಪರಿಣಿತರ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದಾರೆ.

ರಾಜ್ಯದ ಪರಿಣಿತರೊಂದಿಗೆ ಒಂದು ರಾಜ್ಯ ಮಟ್ಟದ ಕಾರ್ಯಾಗಾರವನ್ನು ನಡೆಸಲು ಆಸಕ್ತಿ ಇರುವವರು ಸಂಪರ್ಕ ಮಾಡಬಹುದಾಗಿದೆ.