12th October 2024
Share

TUMAKURU:SHAKTHIPEETA FOUNDATION

ಗುಬ್ಬಿ ತಾಲ್ಲೋಕು ಬಿದರೆಹಳ್ಳಕಾವಲ್‍ನಲ್ಲಿ ಲೋಕಾರ್ಪಣೆ ಗೊಂಡ ಹೆಚ್.ಎ.ಎಲ್ ಇತಿಹಾಸಗಳ ಪುಟ ಸೇರಿದೆ. ವಿಶ್ವದ ಎಲ್ಲಾ ರಾಷ್ಟ್ರಗಳ ಗಮನವನ್ನು ಸೆಳೆದಿದೆ, ಕಾರಣ ಇದು ಯುದ್ಧ ಹೆಲಿಕ್ಯಾಪ್ಟರ್ ಮತ್ತು ಸಾಮಾಗ್ರಿಗಳನ್ನು ಸಿದ್ಧಪಡಿಸುವ ಯುದ್ಧ ದೇವಾಲಯವಾಗಿದೆ.

ದಿನಾಂಕ:03.01.2016 ರಂದು ಶಂಕುಸ್ಥಾಪನೆ ಮಾಡಿದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರೇ ದಿನಾಂಕ:06.02.2023 ರಂದು 7 ವರ್ಷಗಳು, ಒಂದು ತಿಂಗಳು ಮೂರು ದಿವಸದ ಅಂತರದಲ್ಲಿ ಲೋಕಾರ್¥ಣೆ ಮಾಡಿದ್ದಾರೆ. ಇನ್ನೂ ಪೂರ್ಣಮಾಣದ ಕಾಮಗಾರಿ ಮುಕ್ತಾಯಗೊಳ್ಳಲು 2025 ರವರೆಗೆ ಕಾಯಬೇಕಿದೆ.

ದಿನಾಂಕ:01.08.1988 ರಿಂದ ಆರಂಭವಾದ ಹೋರಾಟಕ್ಕೆ ದಿನಾಂಕ:06.02.2023 ರಂದು ಮುಕ್ತಿ ದೊರಕಿದೆ. ಸುಮಾರು 34 ವರ್ಷ 4 ತಿಂಗಳು, 5 ದಿವಸಗಳ ಕಾಲ ನಿರಂತರವಾಗಿ ಒಂದು ಸರ್ಕಾರಿ ಯೋಜನೆಗೆ ಶ್ರಮಿಸಿದ ತೃಪ್ತಿ ಮನೋಭಾವದ ಹಿನ್ನಲೆಯಲ್ಲಿ.

ಲೋಕಾರ್ಪಣೆ ನಡೆಯುವ ವೇಳೆ ವಿಶ್ವದ 108 ಶಕ್ತಿಪೀಠಗಳ ವೃತಮಾಡುವ ಮೂಲಕ ಮನಸ್ಸಿಗೆ ನೆಮ್ಮದಿಯಾಗಿದೆ.