22nd December 2024
Share

TUMKURU:SHAKTHIPEETA FOUNDATION

ಹೆಚ್.ಎ.ಎಲ್ ವತಿಯಿಂದ ಸಿ.ಎಸ್.ಆರ್ ಫಂಡ್ ಕೊಡಿಸುವ ಭರವಸೆ ನೀಡಿದ್ದ ಕುಂದರನಹಳ್ಳಿ ಶ್ರೀ ಗಂಗಮಲ್ಲಮ್ಮ ದೇವಿಯ ದೇವಾಲಯದ ನೂತನ ಕಟ್ಟಡದ ಕಾಮಗಾರಿ.

ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು ಬಿದರೆಹಳ್ಳ ಕಾವಲ್ ಹೆಚ್.ಎ.ಎಲ್ ಘಟಕದ ಸುತ್ತ ಮುತ್ತ ರೈತರ ಹಾಗೂ ನಿರುದ್ಯೋಗಿಗಳಿಗೆ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಮತ್ತು ನಾನು ಕಳೆದ 35 ವರ್ಷಗಳಿಂದ ನೀಡಿದ ಆಶ್ವಾಸನೆಯಂತೆ ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ಜಾರಿಗೊಳಿಸಲು ಹಾಗೂ ಭವಿಷ್ಯದ ನವ ಕರ್ನಾಟP ವಿಷನ್ ಡಾಕ್ಯುಮೆಂಟ್ ಯೋಜನೆಗಳಿಗೆ ಶ್ರಮಿಸಲು  ಸರ್ಕಾರಗಳಿಗೆ, ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರಮೋದಿಯವರು ಶಂಕುಸ್ಥಾಪನೆ (03.01.2016) ಮತ್ತು ಲೋಕಾರ್ಪಣೆ(06.02.2023) ಮಾಡಿದ ಅಂಗವಾಗಿ ವಿವಿಧ ಕೆಳಕಂಡ ಯೋಜನೆಗಳ ಜಾರಿಗೆ ಶ್ರಮಿಸಲು ಉದ್ದೇಶಿಸಲಾಗಿದೆ. 

ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ರಾಜ್ಯದ ಸರ್ವಪಕ್ಷಗಳಿಗೂ ಮನವಿ ಸಲ್ಲಿಸಲಾಗುವುದು. ಆಸಕ್ತರು ಸೂಕ್ತ ಸಲಹೆ ಮಾರ್ಗದರ್ಶನ ನೀಡಲು ಬಹಿರಂಗ ಮನವಿ.

  1. ಬಿದರೆಹಳ್ಳ ಕಾವಲ್ ಸುತ್ತಲೂ ಇರುವ 12 ಗ್ರಾಮಗಳಿಗೆ  ಆಯಾ ಗ್ರಾಮ ಸಮಿತಿಯವರು ಅಗತ್ಯಕ್ಕೆ ತಕ್ಕಂತೆ ಗ್ರಂಥಾಲಯ, ದೇವಾಲಯ, ಧ್ಯಾನಮಂದಿರ ಬಯಲು ರಂಗಮಂದಿರ, ಇತ್ಯಾದಿ ನಿರ್ಮಾಣ ಮಾಡುವ ಕಟ್ಟಡ ಕಾಮಗಾರಿಗಳಿಗೆ ಪ್ರತಿಯೊಂದು ಗ್ರಾಮಗಳಿಗೆ ಒಂದು ಬಾರಿ ತಲಾ ರೂ 30,0000 ಹೆಚ್.ಎ.ಎಲ್. ಸಿ.ಎಸ್.ಆರ್ ಫಂಡ್ ನೀಡುವುದು. (ಹೆಚ್.ಎ.ಎಲ್)
  2. ಸುತ್ತಲೂ ಇರುವ 5 ಗ್ರಾಮಪಂಚಾಯಿತಿಗಳನ್ನು ದತ್ತು ತೆಗೆದುಕೊಂಡು ಹೆಚ್.ಎ.ಎಲ್ ಸ್ಮಾರ್ಟ್ ವಿಲೇಜ್ ವ್ಯಾಪ್ತಿಗೆ ಸೇರಿಸಿಕೊಂಡು  ಪ್ರತಿವರ್ಷವೂ ಹೆಚ್.ಎ.ಎಲ್. ಸಿ.ಎಸ್.ಆರ್ ಫಂಡ್ ನೀಡುವುದು. (ಹೆಚ್.ಎ.ಎಲ್)
  3. ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ರುರ್ಬನ್ ಯೋಜನೆಯನ್ನು ಈ 5 ಗ್ರಾಮಪಂಚಾಯಿತಿಗಳ ವ್ಯಾಪ್ತಿಗೆ ಮಂಜೂರು ಮಾಡುವುದು.(ಗ್ರಾಮೀಣಾಭಿವೃದ್ಧಿ)
  4. ಸುತ್ತಲೂ ಇರುವ 5 ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹೇಮಾವತಿ ಯೋಜನೆಯಿಂದ ಮೈಕ್ರೋ ಇರ್ರಿಗೇಷನ್ ಯೋಜನೆ ಮಾಡಿ, ಆಯಾ ಗ್ರಾಮದ ಕೆರೆ-ಕಟ್ಟೆಗಳಿಗೆ ಹೇಮಾವತಿ ನದಿ ನೀರು ತುಂಬಿಸುವುದು. (ಕಾವೇರಿ ನೀರಾವರಿ ನಿಗಮ)
  5. ಭೂ ಹಾಗೂ ಹೆಚ್.ಟಿ.ಲೈನ್ ಸಂತ್ರಸ್ಥ ರೈತ ಕುಟುಂಬಗಳಿಗೆ ಸರ್ಕಾರದಿಂದ ವಿಸೇಷ ಯೋಜನೆಯಡಿ ನಿವೇಶನ ಮತ್ತು ವಸತಿ ಮಂಜೂರು ಮಾಡುವುದು.(ವಸತಿ ಇಲಾಖೆ)
  6. ಸುತ್ತಲೂ ಇರುವ 5 ಗ್ರಾಮಪಂಚಾಯಿತಿಗಳ ರೈತರಿಗೆ ಹಾಗೂ ನಿರುದ್ಯೋಗಿಗಳಿಗೆ ಅವರು ಕೈಗೊಳ್ಳುವ ನೀಡ್ ಬೇಸ್ಡ್ ಸ್ವಯಂ ಉದ್ಯೋಗ ಕೈಗೊಳ್ಳಲು ಆರ್ಥಿಕ ನೆರವು ನೀಡುವುದು.(ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಲೀಡ್ ಬ್ಯಾಂಕ್)
  7. ಸುತ್ತಲೂ ಇರುವ 5 ಗ್ರಾಮಪಂಚಾಯಿತಿಗಳ ರೈತರ  ಬೋರ್‍ವೆಲ್‍ಗಳಿಗೆ ಒಂದೊಂದು ಟಿಸಿ ಅಳವಡಿಸುವುದು.(ಬೆಸ್ಕಾಂ)
  8. ಹೆಚ್.ಎ.ಎಲ್ ಬಳಿ ರೈತರ ತರಕಾರಿ ಹಾಗೂ ಇತರೆ ಮಾರಾಟ ಮಾಡಲು ಒಂದು ಹೈಟೆಕ್ ಮಾರ್ಕೆಟ್ ಹಾಗೂ ಶೈತ್ಯಾಗಾರ ನಿರ್ಮಾಣ. ಮಾಡುವುದು.(ಎ.ಪಿ.ಎಂ.ಸಿ)
  9. ಹೆಚ್.ಎ.ಎಲ್ ಬಳಿ ಹೈಟೆಕ್ ಆಸ್ಪತ್ರೆ ನಿರ್ಮಾಣ ಮಾಡಿ ಸುತ್ತಲೂ ಇರುವ 5 ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಜನರಿಗೆ ವಿಶೇಷ ಸೌಲಭ್ಯ ನೀಡುವುದು. (ಹೆಚ್.ಎ.ಎಲ್)
  10. ಸುತ್ತಲೂ ಇರುವ 5 ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿಗೊಂದು ಹೈಟೆಕ್ ಮಾದರಿ ಶಾಲೆ ನಿರ್ಮಾಣ ಮಾಡುವುದು ಅಥವಾ ಒಂದೇ ಕಡೆ ಶಾಲೆ ನಿರ್ಮಾಣ ಮಾಡಿ ವಸತಿ ಹಾಗೂ ಬಸ್ ವ್ಯವಸ್ಥೆ ಕಲ್ಪಿಸುವುದು.(ಹೆಚ್.ಎ.ಎಲ್-ಪ್ರಾಥಮಿಕ ಶಿಕ್ಷಣ)
  11. ಸುತ್ತಲೂ ಇರುವ 5 ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಅರಣ್ಯ ಪ್ರದೇಶವನ್ನು ಅಭಿವೃದ್ಧಿ ಪಡಿಸಿ ಸದಾ ಹಸೀರಕರಣ ಮಾಡುವುದು.(ಅರಣ್ಯ ಇಲಾಖೆ)
  12. ಸುತ್ತಲೂ ಇರುವ 5 ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಮಾಡುವುದು.(ಪ್ರವಸೋಧ್ಯಮ ಇಲಾಖೆ)
  13. ಸುತ್ತಲೂ ಇರುವ 5 ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಎಲ್ಲಾ ವಿಧವಾದ ರಸ್ತೆಗಳ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸುವುದು.(ರೆವಿನ್ಯೂ ಇಲಾಖೆ,ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಇಲಾಖೆ)
  14. ಒಂದು ಹೈಟೆಕ್ ವೃದ್ಧಾಶ್ರಮ ಸ್ಥಾಪಿಸುವುದು (ಸಮಾಜ ಕಲ್ಯಾಣ ಇಲಾಖೆ- ಹೆಚ್.ಎ.ಎಲ್)
  15. ಮುಂದಿನ 25 ವರ್ಷಗಳ ಅವಧಿಯವರಿಗೆ ಸುತ್ತಲೂ ಇರುವ 5 ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಪರಿಸರ ಮತ್ತು ಎಕನಾಮಿಕ್ ಅಧ್ಯಯನ ಮಾಡುವುದು.(ಹೆಚ್.ಎ.ಎಲ್)
  16. ಸುತ್ತಲೂ ಇರುವ 5 ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ ಪ್ರಧಾನ ಮಂತ್ರಿಯವರ ಕಾಲದ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಪ್ರಾಯೋಗಿಕ ಅನುಷ್ಠಾನ ಮಾಡಿ ಜಿ.ಐಎಸ್ ಲೇಯರ್ ಹಾಗೂ ಡಾಟಾ ವಿಲೇಜ್ ಮಾಡುವುದು.

ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ

  1. ಕೇಂದ್ರ ಸರ್ಕಾರದ ಎಲ್ಲಾ ಪ್ರಧಾನ ಮಂತ್ರಿಯವರ ಕಾಲದ ಮತ್ತು ರಾಜ್ಯ ಸರ್ಕಾರದ ಎಲ್ಲಾ ಮುಖ್ಯ ಮಂತ್ರಿಯವರ ಕಾಲದ ಯೋಜನೆಗಳ ಮಾಹಿತಿಯುಳ್ಳ ಮ್ಯೂಸಿಯಂ ಅಥವಾ ಥೀಮ್ ಪಾರ್ಕ್ ನಿರ್ಮಾಣ ಮಾಡುವುದು.(ಕಲ್ಚರ್ ಇಲಾಖೆ)
  2. ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಹಾಗೂ ಸೆಂಟರ್ ಆಪ್ ಎಕ್ಸಲೆನ್ಸ್ ಕ್ಯಾಂಪ್ಚರಿಂಗ್ ಗೌರ್ವನಮೆಂಟ್ ಇಂಡಿಯಾ ಫಂಡ್ಸ್ ಸ್ಥಾಪಿಸುವುದು.(ಹೆಚ್.ಎ.ಎಲ್.ಸಿ.ಎಸ್.ಆರ್ ಫಂಡ್)
  3. ಹೆಚ್.ಎ.ಎಲ್ ಮ್ಯೂಸಿಯಂ ನಿರ್ಮಾಣ ಮಾಡುವುದು.(ಕಲ್ಚರ್ ಇಲಾಖೆ)

ಕೇಂದ್ರ ಮತ್ತು ರಾಜ್ಯ ಸರ್ಕಾರ ಆಕ್ಟ್ ಮಾಡುವುದು.

  • ರಾಜ್ಯ ಸರ್ಕಾರ ಡಾ.ಸರೋಜಿನಿ ಮಹಿಷಿ ವರದಿ ಆಕ್ಟ್ ಮಾಡಿ, ಇದೇ ಮಾದರಿಯಲ್ಲಿ ಕೇಂದ್ರ ಸರ್ಕಾರವೂ ಸ್ಥಳೀಯ ಹಾಗೂ ಭೂ ಸಂತ್ರಸ್ಥ ಕುಟುಂಬಗಳ ನಿರುದ್ಯೋಗಿಗಳಿಗೆ ಅರ್ಹತೆ ಆಧಾರ ಮೇಲೆ ಹೆಚ್.ಎ.ಎಲ್ ನಲ್ಲಿ ಹಾಗೂ ದೇಶದ ಎಲ್ಲಾ ಉದ್ದಿಮೆಗಳಲ್ಲಿ ಉದ್ಯೋಗ ನೀಡಲು ರಿಸರ್ವೇಷನ್ ಯೋಜನೆ ರೂಪಿಸುವುದು.

ಈ ಭಾಗದ ರೈತರು ಮತ್ತು ನಿರುದ್ಯೋಗಿಗಳಲ್ಲಿ ವಿಶೇಷ ಮನವಿ, ತಮ್ಮೆಲ್ಲರಿಗೆ ನೀಡಿರುವ ಭರವಸೆಯಂತೆ ಶ್ರೀ ಜಿ.ಎಸ್.ಬಸವರಾಜ್ ರವರ ಸಹಕಾರದಿಂದ ಸರ್ಕಾರಗಳೊಂದಿಗೆ ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು, ಅಂತಿಮ ನಿರ್ಧಾರ ಸರ್ಕಾರಗಳು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಬೇಕಿದೆ.

ಈ ಬಗ್ಗೆ ಇಂದಿನಿಂದ ಎಲ್ಲಾ ಇಲಖೆಗಳಿಗೆ ಶ್ರೀ ಜಿ.ಎಸ್.ಬಸವರಾಜ್ ರವರ ಪತ್ರಗಳನ್ನು ಶ್ರೀ ಟಿ.ಆರ್.ರಘೋತ್ತಮರಾವ್ ರವರು ಸಿದ್ಧಪಡಿಸಲು ಶ್ರಮಿಸಿದರೆ, ದೆಹಲಿಯ ಕಚೇರಿಗಳಲ್ಲಿ ದೆಹಲಿಯಲ್ಲಿರುವ ಶ್ರೀ ಮುರುಳೀಧರ್ ನಾಯಕ್ ರವರು ಕಡತ ಅನುಸರಣೆ ಮಾಡಲು ಒಪ್ಪಿದ್ದಾರೆ. ತುಮಕೂರು ನಗರದಲ್ಲಿ ಶ್ರೀ ಸಿ.ಹರೀಶ್‍ರವರು ಹಾಗೂ ಗುಬ್ಬಿ ತಾಲ್ಲೋಕು ಮಟ್ಟದಲ್ಲಿ ಶ್ರೀ ಕೆ.ವೈ.ವಿಶ್ವನಾಥ್ ರವರು  ಕಡತ ಅನುಸರಣೆ ಮಾಡಲಿದ್ದಾರೆ.

 ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆ ದೆಹಲಿಗೆ ಹೋಗಿ ಮಾನ್ಯ ಪ್ರಧಾನ ಮಂತ್ರಿಯವರು ಸೇರಿದಂತೆ, ಕೇಂದ್ರ ಸರ್ಕಾರದ ಎಲ್ಲಾ ಸಚಿವರಿಗೆ ಮನವಿ ಪತ್ರ ನೀಡಲು ಉದ್ದೇಶಿಸಲಾಗಿದೆ.