2nd January 2025
Share

TUMAKURU:SHAKTHIPEETA FOUNDATION

  ಕರ್ನಾಟಕ ರಾಜ್ಯದ ಸಮಗ್ರ ನೀರಿನ ಮಾಹಿತಿಯುಳ್ಳ ಜಲಗ್ರಂಥದ ಸಮಾಲೋಚನೆಯನ್ನು ನಡೆಸುವ ಮೂಲಕ, ದೆಹಲಿಯಲ್ಲಿ ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಮನೆಯಲ್ಲಿ ದಿನಾಂಕ:12.02.2023 ರಂದು, ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯನವರ ಜನ್ಮ ದಿನಾಚರಣೆ ಆಚರಿಸಲಾಯಿತು.

ಈ ಸಭೆಯಲ್ಲಿ ಶ್ರೀ ಜಿ.ಎಸ್.ಬಸವರಾಜ್ ರವರು, ಶ್ರೀ ವೇದಾನಂದಾಮೂರ್ತಿಯವರು, ಶ್ರೀ ಕೆ.ಮೂರ್ತಿಯವರು, ಚಿ.ಕೆ.ಆರ್.ಸೋಹನ್ ರವರು ಭಾಗವಹಿಸಿದ್ದರು. ನನ್ನ ಕನಸಿನ ಜಲಗ್ರಂಥಕ್ಕೆ, ರಾಜ್ಯದ ವಿವಿಧ ತಜ್ಞರುಗಳ ಪರಿಕಲ್ಪನೆಯನ್ನು  ಸೇರ್ಪಡೆ ಮಾಡುವ ಕೆಲಸಕ್ಕೆ ಚಾಲನೆ ನೀಡಲಾಯಿತು.

ಮಂಡ್ಯದ ಶ್ರೀ ಸಂದೇಶ್ ಕೆ.ಮೂರ್ತಿಯರವರ ತಂಡ, ಸುಮಾರು 400 ಟಿ.ಎಂ.ಸಿ ಅಡಿ ನೀರನ್ನು ನದಿ ನೀರಿನಲ್ಲಿ ವಂಚಿತವಾಗಿರುವ, ರಾಜ್ಯದ ವಿವಿಧ ವಿದಾನಸಭಾ ಕ್ಷೇತ್ರಗಳಿಗೆ  ಕೊಂಡೊಯ್ಯುವ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಿರುವ ಪಿಪಿಟಿಯನ್ನು ಪರಮಶಿವಯ್ಯನವರ ವರದಿಯಲ್ಲಿನ ಅಂಶಗಳ ಬಗ್ಗೆ ಚರ್ಚೆ ನಡೆಯಿತು.

ಇದೊಂದು ಸವಾಲಿನ ಕೆಲಸವರಾದರೂ, ಮುಂದಿನ ಮಾರ್ಚ್ ತಿಂಗಳ ಒಳಗೆ ರಾಜ್ಯದ ವಿವಿಧ ತಜ್ಞರುಗಳ ಅಭಿಪ್ರಾಯಗಳನ್ನು ಕ್ರೋಡೀಕರಿಸಲು ಕಾಲಮಿತಿ ಹಾಕಿ ಕೊಳ್ಳಲಾಯಿತು.