21st November 2024
Share

TUMAKURU:SHAKTHIPEETA FOUNDATION

ಪ್ರಧಾನಿ ಶ್ರೀ ನರೇಂದ್ರಮೋದಿಯವರ ಜೈ ಅನುಸಂಧಾನ್ ಘೋಷಣೆಯಡಿ ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಅನ್ನು ರಾಜ್ಯದ ಸರ್ವಪಕ್ಷಗಳ, 341 ಚುನಾಯಿತ ಜನಪ್ರತಿನಿಧಿಗಳ, ಮಾಜಿ ಮುಖ್ಯಮಂತ್ರಿಗಳ, ಪರಿಣಿತ ತಜ್ಞರುಗಳ, ಜ್ಞಾನದಾನಿಗಳ ನೇತೃತ್ವದಲ್ಲಿ ಸಿದ್ಧಪಡಿಸುವ ಹಿನ್ನಲೆಯಲ್ಲಿ, ಈಗಾಗಲೇ ವಿವಿಧ ವರ್ಗದವರು ಎರ್ಪಡಿಸಿದ್ದ 10 ಸರಣಿ ಸಭೆಗಳಲ್ಲಿ ಉಪನ್ಯಾಸ ಮಾಡಲಾಗಿದೆ. 

ಹಿರಿಯ ಅಧಿಕಾರಿಗಳ ಸಲಹೆ ಮೇರೆಗೆ ವಿಧ್ಯಾರ್ಥಿಗಳ ಸಲಹೆಗಳನ್ನು ಪಡೆಯಲು ‘INDIA @ 100 : KNOWLEDGE BANK: STUDENT IDEA’ ಕಾರ್ಯಕ್ರಮವನ್ನು, ರಾಜ್ಯದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ, ವಿನೂತನ ಐಡಿಯಾ ಪಡೆಯುವುದರ ಜೊತೆಗೆ ಇಂಡಿಯಾ @ 100 ಗೆ ವಿದ್ಯಾರ್ಥಿಗಳನ್ನು ತೊಡಗಿಸಿ ಕೊಳ್ಳಲು ಚಿಂತನೆ ನಡೆಸಲಾಗಿದೆ.

3 ಗಂಟೆಗಳ ಕಾರ್ಯಕ್ರಮದ ರೂಪುರೇಷೆ.

  1. ಇಂಡಿಯಾ @ 100 ಪಿಪಿಟಿ: 20 ನಿಮಿಷ.
  2. ನಾಲೇಡ್ಜ್ ಬ್ಯಾಂಕ್ ಪಿಪಿಟಿ: 20 ನಿಮಿಷ.
  3. ಜಲಜಾಗೃತಿ ಪಿಪಿಟಿ: 20 ನಿಮಿಷ
  4. ಪರಿಸರ ಸಂರಕ್ಷಣೆ ಪಿಪಿಟಿ: 20 ನಿಮಿಷ.
  5. ಶಕ್ತಿಪೀಠ ಫೌಂಡೇಷನ್ ಪಿಪಿಟಿ: 20 ನಿಮಿಷ.
  6. ನನ್ನ ಬದುಕಿಗೆ ನಾನೇ ನಾಯಕ ಪಿಪಿಟಿ: 20 ನಿಮಿಷ.
  7. ಭವಿಷ್ಯದ ಆಯಾಮಗಳ ಪಿಪಿಟಿ: 20 ನಿಮಿಷ.
  8. ವಿದ್ಯಾರ್ಥಿಗಳ ಐಡಿಯಾ ಪಿಪಿಟಿ :20 ನಿಮಿಷ
  9. ಪ್ರಾಯೋಜಕತ್ವ ಸಂಸ್ಥೆಯ ಪಿಪಿಟಿ: 20 ನಿಮಿಷ.

ಭಾಗವಹಿಸಿದವರಿಗೆ ಭಾಗವಹಿಸುವಿಕೆ ಪತ್ರ. ಜ್ಞಾನದಾನ ಪ್ರಶಸ್ತಿ ಪತ್ರ. ವಿವಿಧ ಸ್ಪರ್ಧೇಗಳ ವಿಜೇತರಿಗೆ ಪ್ರಶಸ್ತಿ ಪತ್ರ.

ಒಂದು ಶಾಲಾ ಕಾಲೇಜಿನಲ್ಲಿಯೇ ಕಾರ್ಯಕ್ರಮ ಆಯೋಜಿಸಿ, ಕಾರ್ಯಕ್ರಮದ ರೂಪುರೇಷೆಗಳನ್ನು ಅಂತಿಮ ಗೊಳಿಸಲಾಗುವುದು.

ಈ ಹಿನ್ನಲೆಯಲ್ಲಿ ವಿವಿಧ ಇಲಾಖೆಗಳ ಅನುಮತಿಯೊಂದಿಗೆ, ಸರ್ಕಾರದ ಅನುದಾನ ರಹಿತವಾಗಿ, ರಾಜ್ಯಾದ್ಯಾಂತ ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮ ಆಯೋಜಿಸಲು ಆಸಕ್ತಿ ಇರುವವರು ಸಂಪರ್ಕಿಸಲು ಬಹಿರಂಗ ಮನವಿ.

ಸಾರ್ವಜನಿಕರ ದೇಣಿಗೆ, ಸಿ.ಎಸ್.ಆರ್ ಫಂಡ್ ಮೂಲಕ ಕಾರ್ಯಕ್ರಮ ಆಯೋಜನೆ ಮಾಡಬಹುದಾಗಿದೆ.