22nd December 2024
Share

TUMAKURU: SHAKTHIPEETA FOUNDATION

ನಾವು ಕಾರ್ಯಕ್ರಮ ರೂಪಿಸಿ ಉಪನ್ಯಾಸ ಮಾತ್ರ ಎಂದು ಕೊಂಡಿದ್ದೆವು, ತಾವೂ ಅಜೆಂಡಾ ನೀಡಿ ಸಭೆಯ ನಿರ್ಣಯ ನೀಡುವುದರ ಬಗ್ಗೆ ಗಮನ ಸೆಳೆದಿದ್ದೀರಿ,  ಆಸಕ್ತರು  ಕುಳಿತು ನೀವೂ ನೀಡಿರುವ ಅಜೆಂಡಾ ಬಗ್ಗೆ, ನಮ್ಮ ವಿಶ್ವ ವಿದ್ಯಾನಿಲಯದ ಅಭಿಪ್ರಾಯಗಳನ್ನು ನೀಡುತ್ತೇವೆ. ಇದು ಒಂದು ಒಳ್ಳೆಯ ಬೆಳವಣಿಗೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧ ಪ್ರೋ.ಶ್ರೀ ಕೃಷ್ಣರವರು ಆಶ್ಚರ್ಯ ವ್ಯಕ್ತ ಪಡಿಸಿದರು.

ವಿಧ್ಯಾರ್ಥಿಗಳಲ್ಲಿ ಡ್ರಗ್ಸ್ ಕಂಟ್ರೋಲ್ ಮಾಡಲು ಸ್ನೇಹಿತನಾದ ಇನ್ನೊಬ್ಬ ವಿದ್ಯಾರ್ಥಿಯಿಂದ ಸಾಧ್ಯ. ಕುಟುಂಬದವರಿಗೆ ಗೊತ್ತಾಗದ ವಿಷಯ ತನ್ನ ಸ್ನೇಹಿತರಿಗೆ ಗೊತ್ತಿರುತ್ತದೆ. ಡ್ರಗ್ಸ್ ಕಂಟ್ರೋಲ್ ಮಾಡುವುದು ಒಂದು ಪ್ರಮುಖ ಕೆಲಸ ಎಂದು ಯೋಜನಾ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿ ಶ್ರೀ ಮತಿ ಶಾಲಿನಿ ರಜನೀಶ್ ಪ್ರತಿಪಾದಿಸಿದರು.

ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆ ಬಗ್ಗೆ ಮೌಲ್ಯಮಾಪನ ವರದಿಗಳು ಬೆಳಕು ಚೆಲ್ಲಬೇಕು. ಕೆಲವು ಜಿಲ್ಲೆಗಳು ಸಾಕಷ್ಟು ಅಭಿವೃದ್ಧಿಯಾಗಿದ್ದರೆ, ಇನ್ನೂ ಕೆಲವು ಅಭಿವೃದ್ಧಿ ವಂಚಿತವಾಗಿವೆ. ಇಂಥಹ ಪ್ರದೇಶಗಳ ಗುರುತಿಸಿ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಶ್ರೀ ಮುಝಾಪರ್ ಅಸ್ಸಾಧಿಯವರು ಗಮನ ಸೆಳೆದರು.

ದಿನಾಂಕ:09.03.2023 ರಂದು ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ನಡೆದ ಚರ್ಚೆಯಲ್ಲಿ ಹಲವಾರು ಜನ ಪಾಲ್ಗೊಂಡಿದ್ದರು.

ಇಂಡಿಯಾ @ 100 ಅಂಗವಾಗಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047  ಬಗ್ಗೆ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಶೇಷವಾಗಿ ನನ್ನ ಗಮನ ಸೆಳೆದ ಅಂಶಗಳು.

  1. ವಿಧ್ಯಾರ್ಥಿಗಳಲ್ಲಿ ಡ್ರಗ್ಸ್ ಕಂಟ್ರೋಲ್
  2. ಕೋಮುವಾದ.
  3. ಪ್ರಾದೇಶಿಕ ಅಸಮತೋಲನ ವರದಿಗಳ ಮೌಲ್ಯಮಾಪನ ಹೇಗಿರಬೇಕು.
  4. ಸಂವಿಧಾನ ಬದಲಾವಣೆ ಕೂಗು
  5. ಅಧ್ಯಯನ ಪೀಠಗಳ ವರದಿಗಳು ದೂಳು ತಿನ್ನುತ್ತಿವೆ. ಇವುಗಳ ಬಗ್ಗೆ ಚಿಂತನ – ಮಂಥನ ಮಾಡುವರು ಯಾರು.
  6. ವಿಶ್ವ ವಿದ್ಯಾಲಯಗಳಲ್ಲಿರುವ ಅಧ್ಯಯನ ಪೀಠಗಳಿಗೆ ಕೆಲಸವಿಲ್ಲ, ಆರ್ಥಿಕ ಸಂಪನ್ಮೂಲವಿಲ್ಲ,, ನಿರ್ಧಿಷ್ಠ ಕಾರ್ಯಕ್ರಮವಿಲ್ಲ. ಒಂದು ನಿರ್ಧಿಷ್ಠ ಮಾರ್ಗದರ್ಶಿ ಸೂತ್ರ ಬೇಡವೇ?
  7. ವಿಶ್ವ ದರ್ಜೆಯ ವಿಶ್ವವಿದ್ಯಾಲಯಗಳ ನಿರ್ಮಾಣ ಎಂದರೆ, ಇರುವ ಕುರ್ಚಿ, ಎಸಿ, ಮೊದಲನೇ ಪ್ಲೋರ್ ಇರುವ ಕಟ್ಟಡಕ್ಕೆ ಲಿಪ್ಟ್ ಹಾಕುವುದೋ ಅಥವಾ ಭೋಧನೆ ಗುಣಮಟ್ಟ ಹೆಚ್ಚಿಸುವೊದೋ?
  8. ಹಾಸ್ಟೆಲ್ ಊಟ ಸರಿ ಇಲ್ಲ ಎಂದರೆ, ಡಿಬಾರ್ ಮಾಡುತ್ತಾರೆ, ಶಾಸಕರ ಬಳಿ ಹೋಗಿ ದೂರು ಕೊಟ್ಟರೆ ಅಧಿಕಾರಿ ಕ್ಷಮೆ ಕೇಳಿ ಎನ್ನುತ್ತಾರೆ. ವಸ್ತು ಸ್ಥಿತಿ ಅರಿಯಲು ಯಾರಿಗೂ ಮನಸ್ಸಿಲ್ಲ, ಇಂಥಹ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಅಭಿವೃದ್ಧಿಯಲ್ಲಿ ಹೇಗೆ ತೊಡಗಿಸಿಕೊಳ್ಳ ಬಹುದು.
  9. ಜಿಲ್ಲೆಗೊಂದು ವಿಶ್ವ ವಿದ್ಯಾನಿಲಯ ಯಾರಿಗೋಸ್ಕರ ಅಥವಾ ಯಾವ ರೀತಿಯ ವಿಶ್ವ ವಿದ್ಯಾನಿಲಯ, ಯಾವ ಜಿಲ್ಲೆಯಲ್ಲಿ  ಇರ ಬೇಕು? ಎಂಬ ಬಗ್ಗೆ ಅಧ್ಯಯನ ಬೇಡವೇ?
  10. ಕೇಂದ್ರ ಸಚಿವ ಸಂಪುಟದಲ್ಲಿ ಯಾವುದೇ ಒಂದು ಯೋಜನೆ ಘೋಶಿಸಿದರೆ, ನಮ್ಮ ರಾಜ್ಯಕ್ಕೆ ಹೇಗೆ ಬಳಸಿಕೊಳ್ಳ ಬಹುದು ಎಂಬ ಬಗ್ಗೆ ನಮ್ಮಲ್ಲಿ ಚರ್ಚೆ ಆರಂಭವಾಗಬೇಕು- ವೈಬ್ರಂಟ್ ವಿಲೇಜ್ ಉಲ್ಲೇಖಿಸಿ.

ಚಿತ್ರದಲ್ಲಿ ಮೈಸೂರು ವಿಶ್ವ ವಿದ್ಯಾನಿಲಯದ ಕುಲಪತಿ ಶ್ರೀ ಮುಝಾಪರ್ ಅಸ್ಸಾಧಿಯವರು ಪ್ರೋ. ಶ್ರೀ ಮಾರುತಿರವರು, ಪ್ರೋ.ಶ್ರೀ ಕೃಷ್ಣರವರು, ಪ್ರೋ ಶ್ರೀ ರಾಮಚಂದ್ರರವರು, ಪ್ರೋ ಶ್ರೀ ಸೋಮಶೇಖರ್ ರವರು, ಶ್ರೀ ವೇದಾನಂದಾ ಮೂರ್ತಿಯವರು, ಪ್ರೋ. ಶ್ರೀ ಎಂ.ಜಿ.ಬಸವರಾಜ್ ರವರು ಇದ್ದಾರೆ.