30th April 2024
Share

TUMAKURU:SHAKTHIPEETA FOUNDATION

ಇದೊಂದು ಸರ್ವಪಕ್ಷಗಳ ಅರ್ಥಪೂರ್ಣವಾದ ಯೋಜನೆಯಾಗಲಿ?

  ಈ ಕಾರ್ಯಕ್ರಮಕ್ಕೆ ಚುನಾವಣಾ ನೀತಿ ಅಡ್ಡ ಬರಬಾರದು, ಚುನಾವಣಾ ಆಯೋಗದ ಅನುಮತಿ ಕೇಳಿ, ನಾವೂ 31 ಜಿಲ್ಲೆಗಳಲ್ಲಿ ತಲಾ 3 ಸಭೆಗಳನ್ನು ಆಯೋಜಿಸಿದರೆ, ಒಟ್ಟು 93 ಕಾರ್ಯಕ್ರಮವಾಗಲಿವೆ.

ಒಂದೊಂದು ಕಾರ್ಯಕ್ರಮದಲ್ಲಿ 5 ಮಹತ್ವದ ವಿಷಯಗಳ ಚರ್ಚೆಗೆ ಪ್ರಧಾನಿಯವರು ಯೋಜನೆ ರೂಪಿಸಿದ್ದಾರೆ. ಒಟ್ಟು  465 ವಿಷಯಗಳ/ಯೋಜನೆಗಳ ಬಗ್ಗೆ ಸುಮಾರು 46500 ಯುವ ಸಮೂಹ ಚರ್ಚೆ ಮಾಡಲಿದ್ದಾರೆ.

ರಾಜ್ಯದಲ್ಲಿ ಚುನಾವಣೆ ಘೋಷಣೆ ಆಗುವ ಈ ಸಮಯದಲ್ಲಿ, ಈ ಚರ್ಚೆ ಬಹಳ ಮುಖ್ಯವಾಗಿದೆ. ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ, ಆಯಾ ಕ್ಷೇತ್ರದ ಸರ್ವಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಂದೊಂದು ಕಾರ್ಯಕ್ರಮ ರೂಪಿಸಿ ಚರ್ಚೆ ಮಾಡಿದರೆ, ಅದೊಂದು ಸರ್ವಪಕ್ಷಗಳ ಚುನಾವಣಾ ಪ್ರಣಾಳಿಕೆ ಜೊತೆಗೆ, ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್- 2047 ಗೆ ಅಡಿಪಾಯವಾಗಲಿದೆ.

ಒಂದೇ ದಿವಸ 224 ವಿಧಾನಸಭಾ ಕ್ಷೇತ್ರಗಳಲ್ಲೂ ಕಾರ್ಯಕ್ರಮ ನಡೆಸಿದರೆ, ಇದೊಂದು ದಾಖಲೆಯಾಗಲಿದೆ.

ಈ ಕಾರ್ಯಕ್ರಮದಲ್ಲಿ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು, ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ್ ಖರ್ಗೆರವರು,  ಮಾಜಿ ಪ್ರಧಾನಿಯವರಾದ ಶ್ರೀ ಹೆಚ್.ಡಿ.ದೇವೇಗೌಡರವರು, ಮುಖ್ಯ ಮಂತ್ರಿಯವರಾದ ಶ್ರೀ ಬಸವರಾಜ್ ಬೊಮ್ಮಾಯಿರವರು, ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ಧರಾಮಯ್ಯನವರು, ಜನತಾದಳದ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿರವರು, ಇನ್ನೂ ಆಸಕ್ತ ಸರ್ವಪಕ್ಷಗಳ ಅಧ್ಯಕ್ಷರು ಆನ್‍ಲೈನ್ ಮೂಲಕ ಮಾತನಾಡಲಿ.

ಇದು ಬಿಜೆಪಿಯ ಶ್ರೀ ನರೇಂದ್ರಮೋದಿಯವರು ಸೂಚಿಸಿದ ಕಾರ್ಯಕ್ರಮವಲ್ಲ, ಬಾರತ ದೇಶದ ಪ್ರಧಾನಿಯವರು ಘೋಷಣೆ ಮಾಡಿರುವ ಕಾರ್ಯಕ್ರಮ, ಅಲ್ಲದೇ, ಚುನಾವಣಾ ಪೋಳ್ಳು ಭರವಸೆಗಳಿಗಿಂತ ಯುಕರ ಸಲಹೆಗೆ ಮಹತ್ವ ಬರಲಿದೆ. ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳು ಕೈಜೋಡಿಸಲು ಮನವಿ.

ಎನ್.ಎನ್.ಎಸ್, ಶಿಪಾಯಿರವರಾದ ಶ್ರೀಮತಿ ಶ್ವೇತಗೌಡರವರೇ, ಈ ಬಗ್ಗೆ 31 ಜಿಲ್ಲೆಗಳ ತಮ್ಮ ಸಹಪಾಠಿಗಳ ಅಭಿಪ್ರಾಯ ಪಡೆದುಕೊಳ್ಳಿ. ಅಸ್ಸಾಂಗೆ ಹೋಗಿದ್ದ 31 ಜಿಲ್ಲೆಗಳ ನಿಮ್ಮ ತಂಡ ಆಕ್ಟೀವ್ ಆಗಲಿ.

ಶ್ರೀ ವಿವೇಕಾನಂದರ ವಾಣಿ, ಯುವಕರೇ ಏಳಿ, ಎದ್ದೇಳಿ, ಸರ್ವಪಕ್ಷಗಳ ಯುವಕರೇ ಸ್ವಯಂ ಆಗಿ, ಈ ಯೋಜನೆ ರೂಪಿಸಿ?