22nd December 2024
Share

TUMAKURU:SHAKTHIPEETA FOUNDATION

ದಿನಾಂಕ:11.03.2023 ರಂದು ಬರೆದ ತುಮಕೂರು ವಿಸಿಯªರಿಗೆ ಮನವಿ ಭಾಗ-1 ಆದರೆ, ಇಂದಿನ ಬರಹವನ್ನು ಭಾಗ-2 ಎಂದು ಕರೆಯಲಾಗಿದೆ. ಈ ಕಾರ್ಯಕ್ರಮದ ಹೂರಣ ಹೊರಗೆ ಬರುವವರೆಗೂ ಹಲವಾರು ಸರಣಿ ಮಾಹಿತಿ ನೀಡುವುದು ಸೂಕ್ತವಾಗಿದೆ.

ನಾನು 12 ವಿಭಾಗಗಳನ್ನು ಮಾಡಿ ಬರೆದಿದ್ದೆ, ಓದುಗರ ಪ್ರಶ್ನೆ ಇನ್ನೂ ಈ ಕೆಳಕಂಡ 7 ವಿಭಾಗಗಳನ್ನು ಏಕೆ ಬಿಟ್ಟಿದ್ದೀರಿ ಸಾರ್ ಎನ್ನುವುದಾಗಿತ್ತು. ಪ್ರಶ್ನೆ ಮಾಡಿದ ಓದುಗರಿಗೆ ಅಭಿನಂದನೆಗಳು.

  1. ತಾಲ್ಲೋಕು ಪಂಚಾಯಿತಿ ಕ್ಷೇತ್ರಕ್ಕೊಂದು
  2. ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೊಂದು
  3. ವಾರ್ಡ್ ಗೊಂದು
  4. ಹೋಬಳಿಗೊಂದು
  5. ತಾಲ್ಲೋಕಿಗೊಂದು.
  6. ಉಪವಿಭಾಗಾಧಿಕಾರಿಗಳ ವ್ಯಾಪ್ತಿಗೊಂದು.
  7. ರೀಜನಲ್ ಕಮಿಷನರ್ ವ್ಯಾಪ್ತಿಗೊಂದು

ಹೌದು ಇವುಗಳ ಅಗತ್ಯವೂ ಇದೆ. ಒಟ್ಟು 19 ವಿಭಾಗಗಳಾಗಲಿದೆ. ಜೊತೆಗೆ

  1. ವ್ಯಕ್ತಿಗೊಂದು

ಇದರಲ್ಲಿ ಹುಟ್ಟುವ ಮಗುವಿನಿಂದ ಆರಂಭಿಸಿ, ಹಿರಿಯ ನಾಗರೀಕರಾಗಿ ಸಾಯುವವರಿಗೂ ಎಲ್ಲಾ ಹಂತದವರಿಗೂ, ಎಲ್ಲಾ ವರ್ಗದವರಿಗೂ ಇರುವ ಯೋಜನೆಗಳನ್ನು ತರಲಾಗುವುದು.

 ತುಮಕೂರು ವಿಶ್ವವಿದ್ಯಾನಿಲಯದ ವಿಸಿಯವರಾದ ಶ್ರೀ ವೆಂಕಟೇಶ್ವರಲುರವರು ಮಾತನಾಡಿ, ಸಾರ್ ಎಲ್ಲಾ ಓದಿದೆ, ಇದೊಂದು ಅರ್ಥಪೂರ್ಣ ಮಾಹಿತಿ ಆಗಬೇಕು, ತಾವೂ ವಿದ್ಯಾರ್ಥಿಗಳ ಜೊತೆ ಸಂವಾದ ಮಾಡುವ ಮುನ್ನ ಅವರಿಗೆ ನೀಡುವ ಕೈಪಿಡಿಯಂತೆ ಆಗಲಿದೆ.

ಎಲ್ಲಾ ವರ್ಗದವರು, ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಗೆ ಸಲಹೆ ನೀಡಬೇಕಾದರೆ, 1947 ರಿಂದ 2023-24 ರವರೆಗೆ ಇರುವ ಎಲ್ಲಾ ಇಲಾಖೆಗಳ ಯೋಜನೆಗಳು ತಿಳಿದಿರಬೇಕು ಎಂಬ ಅನಿಸಿಕೆಯನ್ನು ವ್ಯಕ್ತಪಡಿಸಿ, ಇದೊಂದು ಒಳ್ಳೆಯ ಕಾರ್ಯಕ್ರಮ ಮಾಡೋಣ ಸಾರ್ ಎಂದಿದ್ದಾರೆ.

ತುಮಕೂರು ಜಿಲ್ಲಾ  ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರೀ ನರಸಿಂಹರಾಜುರವರು ನೀವೂ ಬರೆದಿರುವುದರ ಜೊತೆಗೆ ಉಳಿದ ಎಲ್ಲಾ ಯೋಜನೆಗಳ ಪಟ್ಟಿಯೊಂದಿಗೆ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದಾರೆ.

ಶ್ರೀ ಬೂವನಹಳ್ಳಿ ನಾಗರಾಜ್ ರವರು ಸಹ ನೀವೂ ಬರೆದಿರುವುದರ ಜೊತೆಗೆ ಉಳಿದ ಎಲ್ಲಾ ಯೋಜನೆಗಳ ಪಟ್ಟಿಯೊಂದಿಗೆ ಕಾರ್ಯಕ್ರಮಕ್ಕೆ ಬರುವುದಾಗಿ ತಿಳಿಸಿದ್ದಾರೆ.

ಎಲ್ಲಾ ಇಲಾಖೆಯ ಅಧಿಕಾರಿಗಳು ಇರುವ, ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಸಾಹಿತಿ ಬಾ.ಹ.ರಮಾಕುಮಾರಿರವರು ಏಕೋ ಮಾತನಾಡಿಲ್ಲ. ಅವರು ಸಹ ಆಸಕ್ತರ ಸಭೆ ನಡೆಸಿ, ಇಲಾಖಾವಾರು ಪಟ್ಟಿಯೊಂದಿಗೆ ಬರಲು ಆಹ್ವಾÀನ.

ಮಾರಶೆಟ್ಟಿಹಳ್ಳಿ ಗ್ರಾಮಪಂಚಾಯಿತಿ ಪಿಡಿಓ ಶ್ರೀಮತಿ ತನುಜ ರವರು ಗ್ರಾಮ ಪಂಚಾಯಿತಿ ಅನುಷ್ಠಾನ ಮಾಡುವ ಎಲ್ಲಾ ಯೋಜನೆಗಳ ಪಟ್ಟಿಯನ್ನು, ನನ್ನ ಸಹಪಾಠಿಗಳ ಜೊತೆ ಸಮಾಲೋಚನೆ ಮಾಡಿ ನೀಡುವುದಾಗಿ ತಿಳಿಸಿದ್ದಾರೆ.

ಇದೊಂದು ಡಿಜಿಟಲ್ ಜನಾಂದೋಲನ, ಎರಡು ದಿವಸದ ಪಟ್ಟಿಯನ್ನು ನೋಡಿ, ಉಳಿದ ಯೋಜನೆಗಳ ಪಟ್ಟಿ ನೀಡಲು ಆಸಕ್ತರಿಗೆ ಬಹಿರಂಗ ಮನವಿ.

ಇಲ್ಲಿ ಯಾರು ಸರ್ವಜ್ಞರಲ್ಲ, ಓದುಗರನ್ನು ಆಂದೋಲನದಲ್ಲಿ  ತೊಡಗಿಸಿಕೊಂಡರೆ ಮಾತ್ರ ಯಶಸ್ವಿಯಾಗಲಿದೆ.