22nd December 2024
Share

TUMAKURU:SHAKTHIPEETA FOUNDATION

  1. 500 ಅಧ್ಯಯನ ಪೀಠಗಳ ಬಗ್ಗೆ: ರಾಜ್ಯದ ಎಲ್ಲಾ ವಿಧವಾದ ವಿಶ್ವ ವಿದ್ಯಾನಿಲಯಗಳಲ್ಲಿರುವ ವಿವಿಧ ಅಧ್ಯಯನ ಪೀಠಗಳ ಪಟ್ಟಿ ಮಾಡುವುದು, ಅವುಗಳಲ್ಲಿರುವ ಮೂಲಭಾತ ಸೌಕರ್ಯಗಳ ಜಿಐಎಸ್ ಆಧಾರಿತ ಮಾಹಿತಿ ಸಂಗ್ರಹ ಮಾಡುವುದು. 500 ಅಧ್ಯಯನ ಪೀಠಗಳಿಗಿಂತ ಕಡಿಮೆ ಇದ್ದಲ್ಲಿ ಹೊಸದಾಗಿ, ಯಾವ ವಿಶ್ವ ವಿದ್ಯಾಲಯದಲ್ಲಿ ಯಾವ ಅಧ್ಯಯನ ಪೀಠ ಮಾಡಬೇಕು ಎಂಬ ಬಗ್ಗೆ ನಿರ್ಣಯ ಮಾಡುವುದು.
  2. 500 ಅಧ್ಯಯನ ಪೀಠಗಳಿಗೆ ಜಮೀನು ಹುಡುಕುವ ಬಗ್ಗೆ: ಪಟ್ಟಣ ಪಂಚಾಯಿತಿ, ಪುರಸಭೆ ನಗರಸಭೆ ಮತ್ತು ಕಾರ್ಪೋರೇಷನ್ ಸುತ್ತ- ಮುತ್ತ 5 ಕೀಮೀ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನುಗಳನ್ನು ಯಾರಿಗೂ ಮಂಜೂರು ಮಾಡುವ ಆಗಿಲ್ಲ. ನಗರದ ಪ್ರದೇಶಗಳು ಸೇರಿದಂತೆ ಕನಿಷ್ಠ ಒಂದು ಎಕರೆಯಿಂದ 100 ಎಕರೆ ವರೆಗೂ ಇರುವ ಸರ್ಕಾರಿ ಜಮೀನು ಹುಡುಕುವುದು. ತಾತ್ಕಾಲಿಕ ಹಾಲಿ ಕಟ್ಟಡಗಳು ಇದ್ದರೂ ಹುಡುಕುವುದು. 500 ಅಧ್ಯಯನ ಕೇಂದ್ರಗಳಿಗೂ ವಿಶೇಷವಾಗಿ ರಾಜ್ಯ ಸರ್ಕಾರ ತಲಾ 2 ಕೋಟಿಯಂತೆ ಕಟ್ಟಡಗಳಿಗೆ ಅನುದಾನ ಬಿಡುಗಡೆ ಮಾಡಲು ನಿರ್ಣಯ ಮಾಡುವುದು.
  3. 500 ಅಧ್ಯಯನ ಪೀಠಗಳ ಅಭಿವೃದ್ಧಿ ಡಿಜಿಟಲ್ ನಕ್ಷೆ ಬಗ್ಗೆ: ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ವತಿಯಿಂದ 500 ಅಧ್ಯಯನ ಪೀಠಗಳ ಜಿಐಎಸ್ ಆಧಾರಿತ ನಕ್ಷೆಯನ್ನು ಪಡೆಯಲು ನಿರ್ಣಯ ಮಾಡುವುದು.
  4. ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್– 2047: 500 ಅಧ್ಯಯನ ಪೀಠಗಳ ವ್ಯಾಪ್ತಿಯಲ್ಲಿ ಇಂಡಿಯಾ @ 100 ಅಂಗವಾಗಿ, ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್- 2047 ಯೋಜನೆಗಳ ಬಗ್ಗೆ. ಆಯಾ ವ್ಯಪ್ತಿಯಲ್ಲಿ ಮುಂದಿನ 25 ವರ್ಷಗಳ ಅವಧಿಯಲ್ಲಿ ಎಲ್ಲೆಲ್ಲಿ ಯಾವ ಯೋಜನೆಗಳನ್ನು ಕೈಗೊಳ್ಳ ಬೇಕು, ಎಂಬ ಗ್ರಾಮವಾರು/ಬಡಾವಾಣೆವಾರು ಅಭಿವೃದ್ಧಿ ಡಿಜಿಟಲ್ ಮ್ಯಾಪ್ ಸಿದ್ಧಪಡಿಸುವ ಬಗ್ಗೆ  ನಿರ್ಣಯ ಮಾಡುವುದು.
  5. 500 ಅಧ್ಯಯನ ಪೀಠಗಳ ನಾಲೇಡ್ಜ್ ಬ್ಯಾಂಕ್ ಬಗ್ಗೆ: ಆಯಾ ಅಧ್ಯಯನ ಪೀಠಗಳ ವ್ಯಾಪ್ತಿಯಲ್ಲಿನ ಗ್ರಾಮಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಗಳ ಮೂಲಕ ಆಯಾ ವ್ಯಾಪ್ತಿಯ ನಾಲೇಡ್ಜ್ ಲ್ ಪರ್ಸನ್ ಪಟ್ಟಿ ಸಂಗ್ರಹ ಮಾಡುವ ಬಗ್ಗೆ  ನಿರ್ಣಯ ಮಾಡುವುದು.

ಕೇಂದ್ರ ಸರ್ಕಾರ 31 ಜಿಲ್ಲೆಗಳಲ್ಲಿ 93 ಕಾರ್ಯಕ್ರಮ ಆಯೋಜಿಸಲು ತಲಾ 20000 ರೂ ವೆಚ್ಚ ನೀಡಲು ಯೋಜನೆ ರೂಪಿಸಿದೆ, ನಮ್ಮ ರಾಜ್ಯ ಸರ್ಕಾರ ರೂ. ಉಳಿದ 407 ಕಾರ್ಯಕ್ರಮ ಆಯೋಜಿಸಲು ತಲಾ 20000 ನೀಡಲು ಮನವಿ ಮಾಡುವುದು.

ಚುನಾವಣಾ ಸಮಯವಾಗಿರುವುದರಿಂದ 500 ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜಿಸುವುದು ಸೂಕ್ತವಾಗಿದೆ ಎಂಬುದು, ರಾಜ್ಯದ ಹಿರಿಯ ಅಧಿಕಾರಿಯವರ ಅಭಿಪ್ರಾಯವಾಗಿದೆ.

ನೀವೇನಂತಿರಾ?

ಹಿನ್ನಲೆ: ವಿಶ್ವವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳ ಬಳಕೆ.

 ರಾಜ್ಯದಲ್ಲಿರುವ ಎಲ್ಲಾ ವಿಧವಾದ ವಿಶ್ವ ವಿದ್ಯಾನಿಲಯಗಳಲ್ಲಿರುವ ಅಧ್ಯಯನ ಪೀಠಗಳು ಮತ್ತು ಸಂಶೋದನಾ ಸಂಸ್ಥೆಗಳಿಗೂ ಒಂದೊಂದು ಮೂಲ ಉದ್ದೇಶಗಳ ಜೊತೆಗೆ ಹೆಚ್ಚುವರಿ ಹೊಣೆಗಾರಿಕೆ ನೀಡಬಹುದಾಗಿದೆ. ಹಾಲಿ ಇರುವ ಅಧ್ಯಯನ ಪೀಠಗಳು ಸೇರಿದಂತೆ. ಒಟ್ಟು ಕೆಳಕಂಡ 500 ಅಧ್ಯಯನ ಪೀಠಗಳ ಸ್ಥಾಪನೆಯಾಗ ಬೇಕು. ಕೆಳಕಂಡಂತೆ ಅವರವರ ಕಚೇರಿಯಲ್ಲಿ ಆಗಿರುವ ಪ್ರಗತಿ ಮತ್ತು ಕಡತಗಳ ಪೆಂಡಿಗ್ ಬಗ್ಗೆ ಮೂರು ತಿಂಗಳಿಗೊಮ್ಮೆ ರ್ಯಾಂಕಿಂಗ್ ವರದಿ ಬಿಡುಗಡೆ ಮಾಡುತ್ತಿರ ಬೇಕು.

ಪ್ರತಿ ಅಧ್ಯಯನ ಕೇಂದ್ರಕ್ಕೂ ಟೆಂಪ್ಲೇಟ್ ಸಿದ್ಧಪಡಿಸಿ ನೀಡಬೇಕು. ಮಾನಿಟರಿಂಗ್ ಸೆಲ್ ನೀಡುವ ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು.

  1. ಕರ್ನಾಟಕ ರಾಜ್ಯದಲ್ಲಿರುವ ವಿಧಾನಸಭಾ ಸದಸ್ಯರು-225
  2. ಕರ್ನಾಟಕ ರಾಜ್ಯದಲ್ಲಿರುವ ವಿಧಾನಪರಿಷತ್ ಸದಸ್ಯರು-75
  3. ಕರ್ನಾಟಕ ರಾಜ್ಯದ ಲೋಕಸಭಾ ಸದಸ್ಯರು-28
  4. ಕರ್ನಾಟಕ ರಾಜ್ಯದ ರಾಜ್ಯಸಭಾ ಸದಸ್ಯರು-12
  5. ಕರ್ನಾಟಕ ರಾಜ್ಯದ ನಾಮನಿರ್ದೇಶಿತ ರಾಜ್ಯಸಭಾ ಸದಸ್ಯರು-1
  6. ದೆಹಲಿ ಪ್ರತಿನಿಧಿ-1
  7. 31 ಜಿಲ್ಲೆಗಳ ಜಿಲ್ಲಾಧಿಕಾರಿಗಳು-31
  8. 31 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು-31
  9. 31 ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು-31
  10. ಪ್ರಧಾನ ಮಂತ್ರಿ ಕಚೇರಿ-1
  11. ಮುಖ್ಯ ಮಂತ್ರಿ ಕಚೇರಿ-1
  12. ನೀತಿ ಆಯೋಗ ಕೇಂದ್ರ ಸರ್ಕಾರ-1
  13. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಚಿವಾಲಯಗಳ ಕ್ಲಸ್ಟರ್-62

ರಾಜ್ಯದ 225 ಜನ ವಿಧಾನಸಭಾ ಸದಸ್ಯರು, 75 ಜನ ವಿಧಾನಪರಿಷತ್ ಸದಸ್ಯರು, 28 ಜನ ಲೋಕಸಭಾ ಸದಸ್ಯರು, 12 ರಿಂದ 13 ಜನ ರಾಜ್ಯಸಭಾ ಸದಸ್ಯರು, ಇಬ್ಬರು ದೆಹಲಿ ಪ್ರತಿನಿಧಿ, 31 ಜಿಲ್ಲೆಗಳ ಜಿಲ್ಲಾಧಿಕಾರಿಗಳು, 31 ಜಿಲ್ಲೆಗಳ ಸಿಇಓ ಗಳು ಮತ್ತು 31 ಜಿಲ್ಲೆಗಳ ಉಸ್ತುವಾರಿ ಕಾರ್ಯದರ್ಶಿಯವರು ಸೇರಿದಂತೆ ಸುಮಾರು 434 ಜನರು ಮೇಲ್ಕಂಡ ಅಧ್ಯಯನ ಪೀಠಗಳ ಹೊಣೆಗಾರಿಕೆ ವಹಸಿಕೊಳ್ಳ ಬೇಕು. ಆರ್ಥಿಕ ನೆರವು ದೊರಕಿಸಬೇಕು.

ಪ್ರತಿಯೊಂದು ಅಧ್ಯಯನ ಕೇಂದ್ರವೂ ಸಹ ಸ್ವಂತವಾಗಿ ದುಡಿದು, ಅಧ್ಯಯನ ಕೇಂದ್ರ ನಡೆಸುವಂಥ ವ್ಯಸ್ಥೆಗಳು ರೂಪುಗೊಳ್ಳ ಬೇಕು. ಪ್ರತಿಯೊಂದು ಅಧ್ಯಯನ ಕೇಂದ್ರವೂ ಥೀಮ್ ಪಾರ್ಕ್‍ಗಳ ಹೊಣೆಗಾರಿಕೆ ಪಡೆಯಬೇಕು. ಥೀಮ್ ಪಾರ್ಕ್‍ಗಳಲ್ಲಿ ಇಕೋ ರೆಸಾರ್ಟ್/ಕಮರ್ಷಿಯಲ್/ಕ್ಲಸ್ಟರ್ ಇತ್ಯಾದಿ ಚಟುವಟಿಕೆ ನಡೆಯುಂತೆ ರೂಪಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರತಿ ವರ್ಷವೂ ಅನುದಾನ ದೊರೆಯಬೇಕು.

ರಾಜ್ಯದಲ್ಲಿರುವ ಪ್ರತಿಯೊಂದು ಜಾತಿ ಉಪಜಾತಿಗೂ ಒಂದೊಂದು ಅಧ್ಯಯನ ಕೇಂದ್ರ ಆರಂಭಿಸಬೇಕು, ಆಯಾ ಜಾತಿಯಲ್ಲಿ ಇರುವ ತೆರಿಗೆ ಪಾವತಿಸುವವರ ಪಟ್ಟಿ, ತೆರಿಗೆ ಪಾವತಿಸಿದವರ ಪಟ್ಟಿ ಸಿದ್ಧಪಡಿಸ ಬೇಕು, ಮುಂದಿನ 25 ವರ್ಷಗಳ್ಲಿ ಪ್ರತೊಯಬ್ಬರು ತೆರಿಗೆ ವ್ಯಾಪ್ತಿಗೆ ಬರುವಂತಹ ವ್ಯವಸ್ಥೆ ಜಾರಿಯಾಬೇಕು.

500 ಅಧ್ಯಯನ ಪೀಠಗಳಿಗೂ ಒಬ್ಬೊಬ್ಬ ಐಎಎಸ್, ಕೆಎಸ್ ಸಮಾನಂತರದ ಹುದ್ದೆಯ ಅಧಿಕಾರಿಗಳಿಗೂ ಹೊಣೆಗಾರಿಕೆ ನೀಡವುದು ಸೂಕ್ತವಾಗಿದೆ.