TUMAKURU:SHAKTHIPEETA FOUNDATION
ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಗೆ ಇಂಜಿನಿಯರಿಂಗ್ ವಿದ್ಯಾರ್ಥಿಗಳ ‘ಆಕ್ಟಿವಿಟಿ ಪಾಯಿಂಟ್ಸ್’ ಮೂಲಕ, ರಾಷ್ಟ್ರಕ್ಕೆ ಮಾದರಿಯಾಗುವಂತ ಯೋಜನೆ ರೂಪಿಸಲು, ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿರುವ, ಕರ್ನಾಟಕ ರಾಜ್ಯ ಮಟ್ಟದ ದಿಶಾ ಸಭೆಯಲ್ಲಿ ವಿಷಯ ಮಂಡಿಸಲು ಚಿಂತನೆ ನಡೆಯುತ್ತಿದೆ. ಸರ್ಕಾರದ ಹಂತದಲ್ಲಿ ಈಗಾಗಲೇ ಕಡತ ಸೃಷ್ಠಿಯಾಗಿದೆ.
‘ರಾಜ್ಯದ ಪ್ರತಿಯೊಂದು ಗ್ರಾಮ/ ನಗರ ಪ್ರದೇಶಗಳ ಬಡಾವಣೆಗಳಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಒಂದು ಪವಾಡವನ್ನು ಸೃಷ್ಠಿಸಲು ವೇದಿಕೆ ಸಜ್ಜಾÀಗುತ್ತಿದೆ. ಇದೊಂದು ಐತಿಹಾಸಿಕ ನಿರ್ಣಯವಾಗಲಿದೆ.’
ಕರ್ನಾಟಕ ರಾಜ್ಯದ ಸರ್ಕಾರಿ ಮತ್ತು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಡಲೇ ಬೇಕಾಗಿರುವ ಆಕ್ಟಿವಿಟಿ ಪಾಯಿಂಟ್ಸ್ ಗಳ ಮೂಲಕ. ರಾಜ್ಯದ ಪ್ರತಿಯೊಂದು ಗ್ರಾಮದ ‘ಅಭಿವೃದ್ಧಿ ಡಿಜಿಟಲ್ ಮ್ಯಾಪ್ ಮತ್ತು ಊರಿಗೊಂದು ಪುಸ್ತಕ’ ರಚಿಸಲು ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
- ರಾಜ್ಯದಲ್ಲಿರುವ ಇಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆ.
- ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸಂಖ್ಯೆ.
- ರಾಜ್ಯದಲ್ಲಿರುವ ಗ್ರಾಮ, ಕಾಲೋನಿ, ತಾಂಡಾಗಳ ಸಂಖ್ಯೆ.
- ಪ್ರತಿಯೊಂದು ಗ್ರಾಮವನ್ನು ಹೇಗೆ ವಿದ್ಯಾರ್ಥಿಗಳಿಗೆ ಹಂಚಬೇಕು, ಅವರು ಹುಟ್ಟಿದ ಗ್ರಾಮ ಅಥವಾ ಇಷ್ಟಪಟ್ಟ ಗ್ರಾಮವನ್ನು ಪ್ರತಿ ವಿದ್ಯಾರ್ಥಿವಾರು ಅಥವಾ ತಂಡವಾರು ಹಂಚಬೇಕೇ?
- ಸರ್ಕಾರಿ ಇಲಾಖೆಗಳಿಂದ ಲಭ್ಯವಿರುವ ಗ್ರಾಮದ ಜಿಐಎಸ್ ಆಧಾರಿತ ನಕ್ಷೆ ಮತ್ತು ಡಾಟಾ ಪಡೆಯುವುದು ಹೇಗೆ? ಆ ತಂಡದಲ್ಲಿ ಯಾರು, ಯಾರು ಇರಬೇಕು?
- ವಿದ್ಯಾರ್ಥಿಗಳಿಗೆ ಗ್ರಾಮವಾರು ಎಷ್ಟು ಸಂಭಾವನೆ ಕೊಡಬೇಕು ಅಥವಾ ಅವರ ಖರ್ಚಿನಲ್ಲಿಯೇ ನಕ್ಷೆ ಮತ್ತು ಪುಸ್ತಕ ಮಾಡಲು ಸಾಧ್ಯಾವೇ?
- ಯಾವ ಯಾವ, ಇಲಾಖಾ ಅಧಿಕಾರಿಗಳು ಸಂಗ್ರಹಿಸಿರುವ ಡಾಟಾಗಳಿಗೆ ಮತ್ತು ನಕ್ಷೆಗೆ ಅನುಮೋದನೆ ನೀಡಬೇಕು.
- ಊರಿಗೊಂದು ಪುಸ್ತಕದ ಟೆಂಪ್ಲೇಟ್ ಹೇಗಿರಬೇಕು?
- ಪ್ರತಿ ಗ್ರಾಮದ ಅಭಿವೃದ್ಧಿ ಡಿಜಿಟಲ್ ನಕ್ಷೆಯ ಮಾದರಿ ಹೇಗಿರಬೇಕು ಮತ್ತು ನಕ್ಷೆಯಲ್ಲಿ ಏನು. ಏನು. ಯಾವ ಕಲರ್ ನಲ್ಲಿ ಇರಬೇಕು?
ಇನ್ನೂ ಅಗತ್ಯವಿರುವ ವಿಷಯಗಳ ಬಗ್ಗೆ ಒಂದು ಸಂವಾದ ನಡೆಸಿ, ಸರ್ಕಾರಕ್ಕೆ ವರದಿ ನೀಡಲು ಸಮಾಲೋಚನೆ ನಡೆಸಲಾಗಿದೆ. ಈ ವಿಷಯದ ಬಗ್ಗೆ ಸಮಾಲೋಚನೆಯನ್ನು ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿರುವ ಶ್ರೀ ಚನ್ನಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಸಿ, ನಂತರ ರಾಜ್ಯದ ಎಲ್ಲಾ ಇಂಜಿನಿಯರಿಂಗ್ ಕಾಲೇಜುಗಳಿಗೆ ರವಾನಿಸಿ, ಅವರೆಲ್ಲರ ಅಭಿಪ್ರಾಯ ಸಂಗ್ರಹಿಸಿದ ನಂತರ, ಸರ್ಕಾರದ ಹಂತದಲ್ಲಿ ಒಂದು ಮಾರ್ಗದರ್ಶಿ ಸೂತ್ರ ಸಿದ್ಧಪಡಿಸಲು ಚರ್ಚೆ ನಡೆದಿದೆ.
ಕರ್ನಾಟಕ ರಾಜ್ಯ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್ ನ ನಿರ್ದೇಶಕರೊಂದಿಗೂ ಸಮಾಲೋಚನೆ ನಡೆಸಲಾಗಿದೆ. ಅವರಲ್ಲಿ, ಕೆ.ಎಂ.ಡಿ.ಎಸ್, ನಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಇರುವ ಎನ್.ಆರ್.ಡಿ.ಎಂಎಸ್ ನಲ್ಲಿನ ನಕ್ಷೆಗಳ ವಿತರಣೆ ಬಗ್ಗೆಯೂ ಸಮಾಲೋಚನೆ ಆರಂಭವಾಗಿದೆ.
ಡಾಟಾ ಸೆಂಟರ್
- ಎಲ್ಲಾ ಚುನಾಯಿತ ಜನಪ್ರತಿನಿಧಿಗಳಿಗೆ ಡಾಟಾ ಸೆಂಟರ್.
- ಎಲ್ಲಾ ರಾಜಕೀಯ ಪಕ್ಷಗಳಿಗೆ ಡಾಟಾ ಸೆಂಟರ್.
- ವಿರೋಧ ಪಕ್ಷಗಳ ಹೊಣೆಗಾರಿಕೆ.
- ಆಡಳಿತ ಪಕ್ಷದ ಹೊಣೆಗಾರಿಕೆ
- ಅಧಿಕಾರಿಗಳ ಹೊಣೆಗಾರಿಕೆ.
- ಚುನಾಯಿತ ಜನಪ್ರತಿನಿಧಿಗಳ ಹೊಣೆಗಾರಿಕೆ.
- ಅಧ್ಯಯನ ಪೀಠಗಳ ಹೊಣೆಗಾರಿಕೆ.
- ಎಲ್ಲಾ ವರ್ಗದ ಜನತೆಯ ಹೊಣೆಗಾರಿಕೆ.
- ಮಾಧ್ಯಮಗಳ ಹೊಣೆಗಾರಿಕೆ.
ಒಂದು ರಾಜ್ಯ-ಒಂದು ಡಾಟಾ ಮತ್ತು ಒಂದು ರಾಜ್ಯ- ಒಂದು ನಕ್ಷೆ.
ರಾಜ್ಯದ್ಯಾಂತ ಬೇಸ್ ಮ್ಯಾಪ್ ಮತ್ತು ಬೇಸ್ ಡಾಟಾ ಒಂದೇ ಆಗಿರಬೇಕು. ವಿದ್ಯಾರ್ಥಿಗಳು, ಯಾವುದೇ ಗ್ರಾಮದ ನಕ್ಷೆ ಅಥವಾ ಡಾಟಾ ಕೇಳಿದರೂ ತಕ್ಷಣ ಆನ್ ಲೈನ್ ನಲ್ಲಿರುವ ಮಾಹಿತಿಗಳನ್ನು ಉಚಿತವಾಗಿ ನೀಡಬೇಕು. ತಾಜಾ ಡಾಟಾ ಅಪ್ ಡೇಟ್ ಮಾಡಲು ಸ್ಥಳೀಯ ಸಂಸ್ಥೆಗಳಿಗೆ ಖಡಕ್ ಆದೇಶ ಮಾಡಬೇಕು. ಈ ಕೆಳಕಂಡ ಸಂಸ್ಥೆಗಳ ಕನ್ವರ್ಜೆನ್ಸ್ ಮಾಡಬೇಕು. ಸುಳ್ಳು ಅಂಕಿ ಅಂಶಗಳನ್ನು ನೀಡುವವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನು ರೂಪಿಸಬೇಕು.
- ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಸೆಂಟರ್
- ಎನ್.ಆರ್.ಡಿ.ಎಂ.ಎಸ್.
- ಎನ್.ಐ.ಸಿ
- ಕೆ.ಎಂ.ಡಿ.ಎಸ್
- ಮಾಹಿತಿ ಕಣಜ.
- ಡಾಟಾ ಲೇಕ್.
- ಕುಟುಂಬ
- ಸ್ಮಾರ್ಟ್ ಸಿಟಿಗಳ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್.
- ಇಲಾಖಾವಾರು ಇರುವ ಡಾಟಾ ಆಪರೇಟರ್.
- ಅಂಕಿಅಂಶಗಳ ಇಲಾಖೆ ಲೈವ್ ಡಾಟಾ.
ಹೀಗೆ ಅಗತ್ಯವಿರುವ ಎಲ್ಲಾರ ಸಹಭಾಗಿತ್ವದ ಬಗ್ಗೆಯೂ ಒಂದು ರೂಪುರೇಷೆ ನಿರ್ಧರಿಸಬೇಕಿದೆ.