30th April 2024
Share

TUMAKURU:SHAKTHIPEETA FOUNDATION

ಕ್ರಮಾಂಕ:ಶಕ್ತಿ/9/2023                                        ದಿನಾಂಕ:17.03.2023

ಶ್ರೀ ಬಸವರಾಜ್ ಬೊಮ್ಮಾಯಿರವರು.

ಮಾನ್ಯ ಮುಖ್ಯ ಮಂತ್ರಿಯವರು.

ಕರ್ನಾಟಕ ಸರ್ಕಾರ. ವಿಧಾನಸೌಧ, ಬೆಂಗಳೂರು.

ಮಾನ್ಯರೇ

ವಿಷಯ: ಆನ್ ಲೈನ್ ಮೂಲಕ ಕೆಳಕಂಡ ವಿವಿಧ ಜನಜಾಗೃತಿ ಆಂದೋಲನಕ್ಕೆ ಚಾಲನೆ ನೀಡುವ ಬಗ್ಗೆ:

ತಮ್ಮ ಅಧ್ಯಕ್ಷತೆಯಲ್ಲಿ ಇರುವ ರಾಜ್ಯ ಮಟ್ಟದ ದಿಶಾ ಸಮಿತಿ, ಈಗಾಗಲೇ ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿಗೆ ಅನುದಾನ ತರಲು ಸ್ಟ್ರಾಟಜಿ ರೂಪಿಸುತ್ತಿದೆ. ಈ ಹಿನ್ನಲೆಯಲ್ಲಿ ‘ಇಂಡಿಯಾ @ 100  ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047’ ರಚಿಸುವುದು ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಗೆ ಚಾಲನೆ ನೀಡುವುದು ಅಗತ್ಯವಾಗಿದೆ.

ಪ್ರವಾಸೋಧ್ಯಮ ಇಲಾಖೆ ದಿನಾಂಕ:23.03.2023 ಅಥವಾ 24.03.2023 ರಂದು ವಿಜಯ ನಗರ ಜಿಲ್ಲೆ, ಹೊಸಕೋಟೆ, ಹಂಪಿಯಲ್ಲಿರುವ ಕನ್ನಡ ವಿಶ್ವ ವಿದ್ಯಾನಿಲಯದಲ್ಲಿ ರಾಜ್ಯ ಮಟ್ಟದ ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ಸ್’ ಸ್ಥಾಪನೆ ಅಂಗವಾಗಿ, ಜನಜಾಗೃತಿ ಆಂದೋಲನದ ಸಮಾರಂಭವನ್ನು ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ.

 ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಈ ಕೆಳಕಂಡ ವಿವಿಧ ಜನಜಾಗೃತಿ ಆಂದೋಲನ ಕೈಗೊಳ್ಳಲು ಸಿದ್ಧತೆ ನಡೆಸಿವೆ. ಆದ್ದರಿಂದ ತಾವು 

ದಿನಾಂಕ:23.03.2023 ಅಥವಾ 24.03.2023 ಅಥವಾ ತಮಗೆ ಸೂಕ್ತವಾದ ದಿವಸ, ಈಗಾಗಲೇ ನಿಗದಿಯಾಗಿರುವ ಹಂಪಿಯ ಕನ್ನಡ ವಿಶ್ವ ವಿದ್ಯಾನಿಲಯ ಅಥವಾ ರಾಜ್ಯದ ಯಾವುದಾದರೊಂದು ವಿಶ್ವ ವಿದ್ಯಾನಿಲಯ ಅಥವಾ ತಮ್ಮ ಗೃಹ ಕಚೇರಿ ಕೃಷ್ಣಾ’ ದಲ್ಲಿ ಆನ್ ಲೈನ್ ಮೂಲಕ ಜನಜಾಗೃತಿ ಆಂದೋಲನಕ್ಕೆ ಚಾಲನೆ ನೀಡಬಹುದಾಗಿದೆ,

 ಎಲ್ಲಾ ಯೋಜನೆಗಳು ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಅಚ್ಚುಮೆಚ್ಚಿನ ಯೋಜನೆಗಳಾಗಿರುವುದರಿಂದ ಅವರನ್ನು ಸಹ, ವಚ್ರ್ಯುಯಲ್ ಸಮಾರಂಭದಲ್ಲಿ ಭಾಗವಹಿಸಲು ಮನವಿ ಮಾಡಬಹುದಾಗಿದೆ.

  ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯ, ಇಂಜಿನಿಯರಿಂಗ್ ಕಾಲೇಜುಗಳು ಸೇರಿದಂತೆ 6 ನೇ ತರಗತಿಗೆ ಮೇಲ್ಪಟ್ಟ ಎಲ್ಲಾ ಶಾಲಾ-ಕಾಲೇಜುಗಳಲ್ಲಿ, ಪರೀಕ್ಷೆಗಳು ನಡೆಯುವ ತರಗತಿಗಳನ್ನು ಹೊರತುಪಡಿಸಿ, ರಾಜ್ಯದ ಎಲ್ಲಾ ಉಸ್ತುವಾರಿ ಸಚಿವರು, ಸಚಿವರು, ಲೋಕಸಭಾ ಸದಸ್ಯರು, ರಾಜ್ಯ ಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು, ಎಲ್ಲಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ವಿವಿಧ ಇಲಾಖೆಗಳ, ನಿಗಮಗಳ, ಕಾರ್ಪೋರೇಷನ್, ಬೋರ್ಡ್‍ಗಳ ಮುಖ್ಯಸ್ಥರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯವರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ ರವರು ಸಹ ಕಡ್ಡಾಯವಾಗಿ ಭಾಗವಹಿಸುವ ಮೂಲಕ ರಾಜ್ಯಧ್ಯಾಂತ ಸಂಚಲನ ಮೂಡಿಸ ಬಹುದಾಗಿದೆ ಎಂಬ ಅಂಶವನ್ನು ತಮ್ಮ ಆಧ್ಯಗಮನಕ್ಕೆ ತರಬಯಸುತ್ತೇನೆ.

 ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯನಾಗಿ, ನಾನು ಕೇಂದ್ರ ಸರ್ಕಾರದಿಂದ ಕರ್ನಾಟಕ ರಾಜ್ಯಕ್ಕೆ ಹೆಚ್ಚಿಗೆ ಅನುದಾನ ತರಲು ಸ್ಟ್ರಾಟಜಿ ರೂಪಿಸಲು. ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರದೊಂದಿಗೆ ಉಚಿತವಾಗಿ ಎಂ.ಓ.ಯು. ಮಾಡಿಕೊಂಡು ಆರಂಭಿಸಿದ, ನಂತರ ತುಮಕೂರಿನ ಶಕ್ತಿಪೀಠ ಫೌಂಡೇಷನ್, ಅಭಿವೃದ್ಧಿ ರೆವೂಲ್ಯೂಷನ್ ಫೋರಂ,   ಬೆಂಗಳೂರಿನ ಪ್ರೆಸ್ ಕ್ಲಬ್ ಆಫ್ ಬೆಂಗಳೂರು, ಹಾಸನ ಜಿಲ್ಲೆಯ ವೆಸ್ಟರ್ನ್ ಘಾಟ್ ಫೌಂಡೇಷನ್, ಮೂಕಾನನ ರೆಸಾರ್ಟ್ ಹೀಗೆ ಹಲವಾರು ಸಂಸ್ಥೆಗಳು ಒಡಂಬಡಿಕೆ ಮಾಡಿಕೊಳ್ಳಲು ಸಜ್ಜಾಗಿವೆ.’

 ರಾಜ್ಯದ್ಯಾಂತ ಈ ಎಲ್ಲಾ ಅಂಶಗಳ ಬಗ್ಗೆ ಜನಜಾಗೃತಿ ಆರಂಭಿಸಲು ಸಿದ್ಧತೆ ಆರಂಭವಾಗಿರುವ ಹಿನ್ನಲೆಯಲ್ಲಿ, ತಾವೂ ಅಧಿಕೃತವಾಗಿ ಚಾಲನೆ ನೀಡುವುದು ಮಹತ್ವದ್ದಾಗಿದೆ. ಆದ್ದರಿಂದ ಸೂಕ್ತ ದಿನಾಂಕ, ಸಮಯ ಸ್ಥಳ, ನಿಗದಿಪಡಿಸಲು ಸಂಭಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಈ ಮೂಲಕ ಕೋರಿದೆ.

ವಿವಿಧ ಜನ ಜಾಗೃತಿ ಆಂದೋಲನ ಸಭೆಗಳ ವಿವರ.

  1. ನ್ಯಾಷನಲ್ ಟೂರಿಸಂ ಯೂತ್ ಕ್ಲಬ್ಸ್’ ಸ್ಥಾಪನೆ ಜನಜಾಗೃತಿ ಆಂದೋಲನದ ಬಗ್ಗೆ: ನೋಡೆಲ್ ಇಲಾಖೆ: ಪ್ರವಾಸೋಧ್ಯಮ ಇಲಾಖೆ. ಸಹಭಾಗಿತ್ವ:  ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ, ಕಲ್ಚರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ. ಮುಜರಾಯಿ, ವಕ್, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ.
  2. ನಾಲೇಡ್ಜ್ ಬ್ಯಾಂಕ್’ ಸ್ಥಾಪನೆ ಜನಜಾಗೃತಿ ಆಂದೋಲನದ ಬಗ್ಗೆ: ಕೇಂದ್ರ ಸರ್ಕಾರದ ಬಯೋಡೈವರ್ಸಿಟಿ ಮ್ಯಾನೇಜ್ ಮೆಂಟ್ ಕಮಿಟಿಯ ಮಾರ್ಗದರ್ಶಿ ಸೂತ್ರದಂತೆ, ರಾಜ್ಯದ ಪ್ರತಿಯೊಂದು ಗ್ರಾಮದ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಪ್ರತಿಯೊಂದು ಬಡಾವಣೆಯ ನಾಲೇಡ್ಜಬಲ್ ಪರ್ಸನ್ ಹುಡುಕಿ ‘ನಾಲೇಡ್ಜ್ ಬ್ಯಾಂಕ್’ ಸ್ಥಾಪನೆ ಮಾಡುವುದು. ನೋಡೆಲ್ ಇಲಾಖೆ: ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ: ಸಹಬಾಗಿತ್ವ  ಗ್ರಾಮೀಣಾಭಿವೃದ್ಧಿ ಇಲಾಖೆ, ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ.
  3. ಅಭಿವೃದ್ಧಿ ಡಿಜಿಟಲ್ ನಕ್ಷೆ’ ಆರಂಭಿಸುವ ಜನಜಾಗೃತಿ ಆಂದೋಲನದ ಬಗ್ಗೆ: ಇಂಡಿಯಾ @ 100  ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಅಡಿಯಲ್ಲಿ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಆಕ್ಟಿವಿಟಿ, ಪಾಯಿಂಟ್ಸ್, ಇಕೋಕ್ಲಬ್, ಎನ್.ಎಸ್.ಎಸ್. ವಿವಿಧ ವಿದ್ಯಾರ್ಥಿಗಳು ಮಾಡುವ ಪ್ರಾಜೆಕ್ಟ್ ವರ್ಕ್, ಎನ್.ಸಿ.ಸಿ, ಸ್ಕೌಟ್ಸ್ ಮತ್ತು ಗೈಡ್ಸ್, ರೆಡ್ ಕ್ರಾಸ್ ಕ್ಲಬ್, ಹೀಗೆ ವಿವಿಧ ವಿದ್ಯಾರ್ಥಿಗಳ ಸಂಸ್ಥೆಗಳ ಮತ್ತು ಪರಿಣಿತಜ್ಞರ ಮೂಲಕ ರಾಜ್ಯದ ಪ್ರತಿಯೊಂದು ಗ್ರಾಮದ/ಬಡಾವಣೆಯಲ್ಲಿ, ಆಯಾ ವ್ಯಾಪ್ತಿಯ ಎಲ್ಲಾ ಹಂತದ ವಿದ್ಯಾರ್ಥಿಗಳೆಲ್ಲಾ ಸೇರಿ, ವಿವಿಧ ವರ್ಗದ ಜನತೆಯ, ಪ್ರತಿಯೊಂದು ಕುಟುಂಬದ ಸಲಹೆ ಅಭಿಪ್ರಾಯ ಸಂಗ್ರಹಿಸಿ, 1947 ರಿಂದ ಇಲ್ಲಿಯವರೆಗೆ ಆಯಾ ಪ್ರದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಅನುಷ್ಠಾನ ಗೊಂಡಿರುವ ವಿವಿಧ ಯೋಜನೆಗಳು, ವ್ಯಕ್ತಿ ಹಾಗೂ ಕುಟುಂಬಗಳಿಗೆ ದೊರೆಯುತ್ತಿರುವ ವಿವಿಧ ಇಲಾಖೆಯ ಸೌಲಭ್ಯಗಳು ಮತ್ತು ಮುಂದಿನ 2047 ರವರೆಗೆ ಆಯಾ ವ್ಯಾಪ್ತಿಯಲ್ಲಿ, ಕೈಗೊಳ್ಳ ಬೇಕಾಗಿರುವ ಯೋಜನೆಗಳ ಜಿಐಎಸ್ ಮಾಹಿತಿಯುಳ್ಳ ಅಭಿವೃದ್ಧಿ ಡಿಜಿಟಲ್ ನಕ್ಷೆ’ ಆರಂಭಿಸುವ ಜನಜಾಗೃತಿ ಆಂದೋಲನ.

ನೋಡೆಲ್ ಇಲಾಖೆ: ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ: ಸಹಬಾಗಿತ್ವ  ಗ್ರಾಮೀಣಾಭಿವೃದ್ಧಿ ಇಲಾಖೆ, ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ. ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ,ಕರ್ನಾಟಕ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್ ಸೆಂಟರ್,  ಎನ್.ಆರ್.ಡಿ.ಎಂ.ಎಸ್. ಎನ್.ಐ.ಸಿ. ಕೆ.ಎಂ.ಡಿ.ಎಸ್. ಮಾಹಿತಿ ಕಣಜ.ಡಾಟಾ ಲೇಕ್.ಕುಟುಂಬ. ಸ್ಮಾರ್ಟ್ ಸಿಟಿಗಳ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್. ವಿವಿಧ ಇಲಾಖಾವಾರು ಇರುವ ಡಾಟಾ ಆಪರೇಟರ್. ಅಂಕಿ ಅಂಶಗಳ ಇಲಾಖೆ ಲೈವ್ ಡಾಟಾ.ಹೀಗೆ ಅಗತ್ಯವಿರುವ ಎಲ್ಲಾ ಸಂಸ್ಥೆಗಳು. 

4. ಇಂಡಿಯಾ @ 100  ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲು, ಉತ್ತಮ ಸಲಹೆ ನೀಡಿದ ಜ್ಞಾನಿಗಳಿಗೆ ಜ್ಞಾನದಾನ ಪ್ರಶಸ್ತಿ’ ಆರಂಭಿಸುವ ಜನಜಾಗೃತಿ ಆಂದೋಲನದ ಬಗ್ಗೆ: ನೋಡೆಲ್ ಇಲಾಖೆ: ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ.ಸಹಭಾಗಿತ್ವ: ಸರ್ಕಾರದ ಎಲ್ಲಾ ಇಲಾಖೆಗಳು.

5.ಪಂಚಪ್ರಾಣ್  ಇಂಡಿಯಾ-2047’ ಯುವ ಸಂವಾದ ಜನಜಾಗೃತಿ ಆಂದೋಲನದ ಬಗ್ಗೆ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ, ಅಭಿವೃದ್ಧಿ ಹೊಂದಿದ ಬಾರತದ ಗುರಿ, ರಾಷ್ಟ್ರೀಯ ಏಕತೆ ಮತ್ತು ಐಕ್ಯಮತ್ಯ, ವಸಾಹತು ಶಾಹಿ ಮನಸ್ಥಿತಿ ಜಾಡನ್ನು ತೆಗೆದು  ಹಾಕುವುದು, ನಾಗರೀಕರಲ್ಲಿ ಕರ್ತವ್ಯ ಪ್ರಜ್ಞೆ ಮತ್ತು ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಪಡುವುದು ಪ್ರಮುಖ ಉದ್ದೇಶವಾಗಿದೆ. ನೋಡೆಲ್ ಇಲಾಖೆ: ನೆಹರು ಯುವ ಕೇಂದ್ರ ಸಹಭಾಗಿತ್ವ:ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ.

6.ರಾಜ್ಯದ ‘ವಿಶ್ವ ವಿದ್ಯಾಲಯಗಳಲ್ಲಿರುವ ಅಧ್ಯಯನ ಪೀಠ’ ಗಳಿಗೆ ಇಂಡಿಯಾ @ 100  ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲು ನಿರ್ಧಿಷ್ಠ ಕ್ಷೇತ್ರವಾರು ಹಾಗೂ ವಿಷಯವಾರು ಹೊಣೆಗಾರಿಕೆ ನೀಡುವ ಜನಜಾಗೃತಿ ಆಂದೋಲನದ ಬಗ್ಗೆ: ನೋಡೆಲ್ ಇಲಾಖೆ: ನೋಡೆಲ್ ಇಲಾಖೆ: ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ: ಸಹಭಾಗಿತ್ವ:  ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಹೈಯರ್ ಎಜುಕೇಷನ್ ಕೌನ್ಸಿಲ್

7.ಯುವಕ-ಯುವತಿ ಸಂಘಟನೆಗಳಿಗೆ,’ ಇಂಡಿಯಾ @ 100  ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲು ನಿರ್ಧಿಷ್ಠ ಕ್ಷೇತ್ರವಾರು ಹಾಗೂ ವಿಷಯವಾರು ಹೊಣೆಗಾರಿಕೆ ನೀಡುವ ಜನಜಾಗೃತಿ ಆಂದೋಲನದ ಬಗ್ಗೆ: ನೋಡೆಲ್ ಇಲಾಖೆ: ನೋಡೆಲ್ ಇಲಾಖೆ: ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ: ಸಹಭಾಗಿತ್ವ:  ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ. ಗ್ರಾಮೀಣಾಭಿವೃದ್ಧಿ ಇಲಾಖೆ, ಪೌರಾಡಳಿತ ಮತ್ತು ನಗರಾಭಿವೃದ್ಧಿ ಇಲಾಖೆ.

ವಂದನೆಗಳೊಂದಿಗೆ                                              ತಮ್ಮ ವಿಶ್ವಾಸಿ

                                                      (ಕುಂದರನಹಳ್ಳಿ ರಮೇಶ್)

ರಾಜ್ಯ ಮಟ್ಟದ ದಿಶಾ ಸಮಿತಿ ಸದಸ್ಯ.