24th April 2024
Share

TUMAKURU:SHAKTHIPEETA FOUNDATION

ಚುನಾವಣಾ ಕಾವು, ಚುನಾಯಿತ ಜನಪ್ರತಿನಿಧಿಗಳಿಗೆ ಒಂದು ನಿಮಿಷವೂ ಬಿಡುವು ಇಲ್ಲ. ಆದರೂ ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲು, ಅಗತ್ಯವಿರುವ ಎಲ್ಲಾ ಕಡತಗಳಿಗೆ ಅನುಮೋದನೆ ನೀಡಲು ಯೋಜನಾ ಸಚಿವರಾದ ಶ್ರೀ ಮುನಿರತ್ನರವರು ತಮ್ಮ ಆಪ್ತಕಾರ್ಯದರ್ಶಿ ಶ್ರೀ ಸೋಮಶೇಖರ್ ರವರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಯೋಜನಾ ಇಲಾಖೆಯ ಅಪರಮುಖ್ಯ ಕಾರ್ಯದರ್ಶಿಯವರಿಗೆ ತಿಳಿಸಿ, ಅಗತ್ಯವಿರುವ ಎಲ್ಲಾ ಅನುಮೋದನೆ ಪಡೆದು ಕೊಂಡು ಕಾರ್ಯ ಆರಂಭಿಸಲಿ. ಚುನಾವಣೆಗೆ ಕಾರ್ಯಕ್ಕೆ ಯೋಜಿಸಿದ ಅಧಿಕಾರಿಗಳನ್ನು ಹೊರತು ಪಡಿಸಿ, ಉಳಿದ ಅಧಿಕಾರಿಗಳು, ಚುನಾವಣಾ ಮುಗಿಯುವುದರೊಳಗೆ ಎಲ್ಲಾ ಇಲಾಖಾವಾರು ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಲಿ.

ಅವರು ಕೆಲಸ ಮಾಡಲು ಯಾರ ಅಡ್ಡಿಯೂ ಇರುವುದಿಲ್ಲ. ಈ ವಿಧಾನಸಭಾ ಚುನಾವಣಾ ನಡೆಯುವ ಅವಧಿಯಲ್ಲಿ, ಮುಂದಿನ 2047 ರವರೆಗಿನ ದಿಕ್ಸೂಚಿಗೆ ಮೂಹೂರ್ತ ನಿಗದಿಯಾಗಲಿ ಎಂಬ ಮಹತ್ವದ ನಿರ್ಧಾರ ಘೋಷಣೆ ಮಾಡಿದರು ಎಂದರೆ ತಪ್ಪಾಗಲಾರದು.