23rd December 2024
Share

TUMKURU:SHAKTHIPEETA FOUNDATION

ದಿನಾಂಕ:01.08.1988 ರಂದು ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ನನ್ನ ಹುಟ್ಟೂರು ಕುಂದರನಹಳ್ಳಿಯ  ಗ್ರಾಮ ದೇವತೆ ಶ್ರೀ ಗಂಗಮಲ್ಲಮ್ಮನನ್ನು ಪೂಜಿಸಿ, ನನ್ನ ಊರಿಗೆ ಹೊಂದಿಕೊಂಡಿದರುವ ಬಿದರೆಹಳ್ಳ ಕಾವಲ್ ಸರ್ಕಾರಿ ಜಮೀನಿನಲ್ಲಿ ಯಾವುದಾದರೊಂದು ಕೇಂದ್ರ ಸರ್ಕಾರದ ಬೃಹತ್ ಉದ್ದಿಮೆ ಆರಂಭಿಸಲು ಶ್ರಮಿಸಲು ಶಕ್ತಿ ಕೊಡು ತಾಯಿ ಎಂದು ಪ್ರಾರ್ಥನೆ ಮಾಡಿದ್ದು ಇತಿಹಾಸ.

ಶ್ರೀ ನರೇಂದ್ರಮೋದಿಯವರೇ ಹೆಚ್.ಎ.ಎಲ್ ಘಟಕಕ್ಕೆ 2016 ರಲ್ಲಿ ಅಡಿಗಲ್ಲು ಹಾಕಿ, ಅವರೇ 2023 ರಲ್ಲಿ ಲೋಕಾರ್ಪಣೆ ಮಾಡಿದ್ದೂ ಇತಿಹಾಸ. ಅಂದಿನಿಂದ ಇಲ್ಲಿಯವರೆಗೂ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆಯಲ್ಲಿ ಇರುವುದು ಒಂದು ಇತಿಹಾಸವೇ ಸರಿ. 

ಸುಮಾರು 35 ವರ್ಷ(2023-1988) ಒಂದು ಗ್ರಾಮ ದೇವತೆ ಪೂಜಿಸಿ, ಹೆಚ್.ಎ.ಎಲ್ ಘಟಕ ಸ್ಥಾಪನೆಗೆ ಶ್ರಮಿಸಿದ ಸ್ಫೂರ್ತಿ, ಜೊತೆಗೆ ಕುಂದರನಹಳ್ಳಿ ಗ್ರಾಮದ ಅಭಿವೃದ್ಧಿ, CHIKKA NAYANAHALLI ತಾಲ್ಲೋಕು ಶ್ರೀ ತೀರ್ಥರಾಮೇಶ್ವರ ವಜ್ರದ ಅಭಿವೃದ್ಧಿ, ತುಮಕೂರು ನಗರದ ಅಭಿವೃದ್ಧಿ, ತುಮಕೂರು ಜಿಲ್ಲಾ ಅಭಿವೃದ್ಧಿಗೆ ಶ್ರಮಿಸಿದ ಅನುಭವ ನನಗೆ ‘ಆನೆ ಬಲ’ ತುಂಬಿದೆ.

2047 ರ ವೇಳೆಗೆ, ಭಾರತ ವಿಶ್ವ ಗುರು ವಾಗಲು, ಅಭಿವೃದ್ಧಿಯಲ್ಲಿ ರಾಜ್ಯ, ರಾಜ್ಯಗಳ ಮಧ್ಯೆ ಪೈಪೋಟಿ ತರಲು ಪ್ರಧಾನಿಯವರಾದ ಶ್ರೀ ನರೇಂದ್ರ ಮೋದಿಯವರ ‘ಜೈ ಅನುಸಂಧಾನ್ ಘೋಷಣೆ ನನ್ನನ್ನು ಬಡಿದೆಬ್ಬಿಸಿದೆ.

‘ರಾಜ್ಯದ ಸರ್ವಪಕ್ಷಗಳ ನೇತೃತ್ವದಲ್ಲಿ, ಮಾಜಿ ಮುಖ್ಯ ಮಂತ್ರಿಗಳ ಮಾರ್ಗದರ್ಶನದಲ್ಲಿ,ವಿವಿಧ ಸಂಘಟನೆಗಳ ಒಡಂಬಡಿಕೆಯೊಂದಿಗೆಜ್ಞಾನಿಗಳ ಸಹಭಾಗಿತ್ವದಲ್ಲಿ ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಅನುಷ್ಠಾನಕ್ಕೆ ಶ್ರಮಿಸಲು, ವಿಶ್ವದ 108 ಶಕ್ತಿಪೀಠಗಳ ಸಮ್ಮುಖದಲ್ಲಿ ಮುನ್ನುಡಿ ಬರೆಯಲಾಗಿದೆ.

ಶಕ್ತಿಪೀಠ ಫೌಂಡೇಷನ್ ವತಿಯಿಂದ, ಸುಮಾರು 504 ಶಕ್ತಿಪೀಠ ಫ್ಯಾಮಿಲಿಗಳ ಸಹಕಾರದಿಂದ, ತುಮಕೂರು ನಗರದಲ್ಲಿ, ಈ ಕೆಳಕಂಡ ಅಂಶÀಗಳ ಮ್ಯೂಸಿಯಂ, ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ, ಹ್ಯೂಮನ್ ಗ್ರಂಥಾಲಯ. ಆರಂಭಿಸಲು ಸುಮಾರು 504 ವಿಭಾಗಗಳ/RACKS ಗಳನ್ನು ಸಿದ್ಧಪಡಿಸಲು ಚಿಂತನೆ ಆರಂಭವಾಗಿದೆ. ಆಸಕ್ತರು ಖುದ್ಧಾಗಿ ಬಂದು ಸ್ಥಳ ವೀಕ್ಷಣೆ ಮಾಡಿ ಸಲಹೆ ನೀಡಲು ಮನವಿ.

ದಿನಾಂಕ:01.08.2023 ರ ವೇಳೆÀಗೆ ಲೋಕಾರ್ಪಣೆ ಗುರಿ ಹೊಂದಲಾಗಿದೆ. ಮ್ಯೂಸಿಯಂ ಕಲೆಕ್ಷನ್ ಆರಂಭವಾಗ ಬೇಕಿದೆ. ನಿರ್ಧಿಷ್ಠವಾಗಿ 504 ಶಕ್ತಿಪೀಠ ಫ್ಯಾಮಿಲಿಗಳ ಜೊತೆಯಲ್ಲಿ ಸೇರ್ಪಡೆ ಆಗಲು ಬಯಸುವವರು ಖುದ್ಧಾಗಿ ಸಂಪರ್ಕಿಸಬಹುದಾಗಿದೆ. ದಿನಾಂಕ:16.08.2019 ರಂದು ನೊಂದಣಿಯಾಗಿರುವ ಶಕ್ತಿಪೀಠ ಫೌಂಡೇಷನ್, ಅಂದಿನಿಂದ ಶಕ್ತಿಪೀಠ ಫ್ಯಾಮಿಲಿ ಜೋಡಿಸುವ ಕೆಲಸ ಮಾಡುತ್ತಾ ಬಂದಿದೆ. ಕೇವಲ ಕೆಲವೇ ಕುಟುಂಬಗಳು ಮಾತ್ರ ಖಾಲಿ ಉಳಿದಿವೆ.

 ಒಂದು ಕುಟುಂಬ ತಲಾ ರೂ 15000 ಮುಂಗಡ ಹಣ ಪಾವತಿಸಿ, ಒಂದು ಲಾಕರ್/RACKS ಅನ್ನು ಪಡೆಯಬಹುದಾಗಿದೆ. ಯಾವಾಗ ಬೇಕಾದರೂ ಮುಂಗಡ ಹಣವನ್ನು ಪೂರ್ತಿಯಾಗಿ ಹಿಂಪಡೆದು, ಶಕ್ತಿಪೀಠ ಫ್ಯಾಮಿಲಿಯಿಂದ ಹೊರಹೋಗಲು ಅವಕಾಶವಿದೆ. ಒಂದು ರೂಪಾಯಿಯನ್ನು ಕಡಿತ ಗೊಳಿಸುವುದಿಲ್ಲ. ಸಂಗ್ರಹಿಸ ಬೇಕಾದ ಮಾಹಿತಿಗಳನ್ನು ಕಡ್ಡಾಯವಾಗಿ ಸಂಗ್ರಹಿಸಬೇಕಿದೆ. ಸಂಗ್ರಹಿಸಿದ ಒರಿಜನಲ್ ಮಾಹಿತಿಯನ್ನು ವಾಪಸ್ಸು ನೀಡುವುದಿಲ್ಲ.

ನಮ್ಮ ದೇಶದ ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರು ಮತ್ತು ವಿಧಾನಸಭಾ ಚುನಾವಣೆ ನಂತರ, ನಮ್ಮ ರಾಜ್ಯದ  ಮುಂದಿನ ಮುಖ್ಯಮಂತ್ರಿಯವರ ನೇತೃತ್ವದಲ್ಲಿ, ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ನಡೆಯುವ ಸಭೆಯಲ್ಲಿ, ಎಲ್ಲರು ಯೂನಿಫಾರಂ ಹಾಕಿಕೊಂಡು ಭಗವಹಿಸುವುದು ಕಡ್ಡಾಯವಾಗಿದೆ. ಅಲ್ಲಿಯವರೆಗೂ ಎಲ್ಲರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.

ಈ ಮ್ಯೂಸಿಯಂ ಅನ್ನು, 35 ವರ್ಷಗಳ ನನ್ನ ಮತ್ತು ಶ್ರೀ ಜಿ.ಎಸ್.ಬಸವರಾಜ್ ರವರ ಒಡನಾಟದ ಸವಿನೆನಪಿಗಾಗಿ, ಅವರ 85 ನೇ ವರ್ಷದ ಅಭಿನಂದನಾ ಗ್ರಂಥ ಬಿಡುಗಡೆ ಆಗುವಾಗ ಲೋಕಾರ್ಪಣೆ ಮಾಡಲು ಚಿಂತನೆ ನಡೆಸಲಾಗಿದೆ. ಇನ್ನೂ ಮುಂದೆ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಗೆ 504 ಜನರು ಮಹಾಪೋಷಕರಾಗಿರುತ್ತಾರೆ.

ಇದು  ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ  ಪರಿಕಲ್ಪನೆ, ನೀತಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.

  1. 504: ವಿಶ್ವದ 108 ಶಕ್ತಿಪೀಠ. ಸಿದ್ಧಿಪೀಠ, ಜ್ಯೋತಿರ್ಲಿಂಗ, ವಿಷ್ಣು, ಬ್ರಹ್ಮ, ವೀರಭಧ್ರ.ಗಣೇಶ, óಷಣ್ಮುಖ, ಆಂಜನೇಯ, ನವಗ್ರಹ, ಅಷ್ಟ ದಿಕ್ಪಾಲಕರು, ಧ್ವಾರಪಾಲಕರು, ಬಸವಣ್ಣ,ಸಾಯಿಬಾಬಾ, ಸ್ವಾಮಿವಿವೇಕಾನಂದ, ಅಂಬೇಡ್ಕರ್, ಗುರುನಾನಕ್, ಅಲ್ಲಾ, ಏಸು, ಇತ್ಯಾದಿ ಸರ್ವಧರ್ಮದ ಅವರು ಯಾವುದೇ ಹೆಸರಿನಲ್ಲಿ ಕರೆಯುವ ದೇವರುಗಳ- ಭಕ್ತರು. 
  2. 504: ಲೋಕಸಭಾ ಸದಸ್ಯರು, ರಾಜ್ಯ ಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು, ದೆಹಲಿ ಪ್ರತಿನಿಧಿ, ಮುಖ್ಯ ಮಂತ್ರಿ, ರಾಜ್ಯಪಾಲ, ವಿಧಾನ ಸಭೆ/ಪರಿಷತ್ ಅಧ್ಯಕ್ಷರು, ವಿರೋಧ ಪಕ್ಷದ ನಾಯಕ, ಸರ್ವಪಕ್ಷಗಳು, 31 ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, 31 ಜಿಲ್ಲಾಧಿಕಾರಿ, 31 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಸಿಇಓ. ಪ್ರಧಾನ ಮಂತ್ರಿ, ರಾಷ್ಟ್ರಪತಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳ ಕ್ಲಸ್ಟರ್ ಗಳು, ಇತ್ಯಾದಿ- ಅಧ್ಯಕ್ಷರು.
  3. 504: ಐಎಎಸ್/ಕೆಎಎಸ್ ಸಮಾನಾಂತರ ಹುದ್ದೆ- ಕಾರ್ಯಾಧ್ಯಕ್ಷರು.
  4. 504:  1947 ರಿಂದ 2047 ರವರೆಗಿನ ಅಭಿವೃದ್ಧಿ ಯೋಜನೆಗಳ ಅಧ್ಯಯನ ಪೀಠಗಳ- ಜ್ಞಾನಿಗಳು/ಸಂಚಾಲಕರು/ ಮಾಧ್ಯಮ ಸ್ನೇಹಿತರು.
  5. 504: ಜಾತಿ/ಉಪಜಾತಿ ಸಂಘಟನೆಗಳ- ಪಧಾದಿಕಾರಿಗಳು.
  6. 504: ಔಷಧಿ ಗಿಡ/ಮರಗಿಡಗಳ ಮಾಹಿತಿಯುಳ್ಳ- ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು, ಹಕೀಮರು.
  7. 504: ರೈತರ ಬೆಳೆಗಳ ಮೌಲ್ಯ ವರ್ಧಿತ ಉತ್ಪನ್ನಗಳು/ವಿವಿಧ ಕ್ಲಸ್ಟರ್ ಗಳನ್ನು-ಪಿಪಿಪಿ ಮಾದರಿಯಲ್ಲಿ ಆರಂಭಿಸಲು ಆಸಕ್ತಿ ಇರುವ-ಉಧ್ಯಮಿಗಳು.
  8. 504: ಇಂಡಿಯಾ @ 100, ಥೀಮ್ ಪಾರ್ಕ್, ಆಯಾ ಭೌಗೋಳಿಕಕ್ಕೆ ಅನುಗುಣವಾಗಿ ಪಿಪಿಪಿ ಮಾದರಿಯಲ್ಲಿ ಆರಂಭಿಸಲು ಆಸಕ್ತಿ ಇರುವ-ಉಧ್ಯಮಿಗಳು.
  9. 504: ಇಕೋ ರೆಸಾರ್ಟ್ ಪಿಪಿಪಿ ಮಾದರಿಯಲ್ಲಿ ಆರಂಭಿಸಲು ಆಸಕ್ತಿ ಇರುವ-ಉಧ್ಯಮಿಗಳು.

   ದುಡಿದು ತಿನ್ನುವ ಜೊತೆಗೆ, ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿಯೂ, ಸ್ವಯಂ ಉದ್ಯೋಗ ಮಾಡುವ ಮೂಲಕ, ದುಡಿದು ಕೊಂಡು ‘ಭಾರತ ವಿಶ್ವ ಗುರು ವಾಗಲು ಶ್ರಮಿಸಲು ಆಸಕ್ತಿ ಇರುವವರು ಉಚಿತವಾಗಿ ನೊಂದಾಯಿಸಿ ಕೊಂಡವರಿಗೆ, ಸ್ಕಿಲ್ ಇಲಾಖೆಯಲ್ಲಿ ಪ್ರತ್ಯೇಕ ಸಿಲಬಸ್ ನೊಂದಿಗೆ ತರಬೇತಿ ನೀಡಲಾಗುವುದು. ಮುಂದಿನ 25 ವರ್ಷಗಳ ಕಾಲ ಮಾನಿಟರಿಂಗ್ ಮಾಡಲಾಗುವುದು. ಆಸಕ್ತರು ಮುಂದೆ ಬರಬಹುದಾಗಿದೆ.

ನಮ್ಮ ಸಂಸ್ಥೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಮತ್ತು ನೌಕರ ವರ್ಗದಿಂದಲೇ ನಮ್ಮ ಕನಸನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ RANKING ನೀಡುವ ಮೂಲಕ ಬಡಿದೆಬ್ಬಿಸುವುದೇ ನಮ್ಮ ಕೆಲಸ.

ವಿನೂತನ ಐಡಿಯಾಗಳನ್ನು ಸ್ವಾಗತಿಸಲಾಗುವುದು. ಈ ಬಗ್ಗೆ ರಾಜ್ಯ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಭೆ ನಡೆಸಲಾಗುವುದು. ಬೆಂಗಳೂರಿನ ಗಾಂಧಿಭವನ’ ದಲ್ಲಿ ಒಂದು ಸಂವಾದ ನಡೆಸಲಾಗುವುದು.