22nd December 2024
Share

TUMAKURU:SHAKTHIPEETA FOUNDATION

ಕೆಲವು ಶಕ್ತಿಪೀಠಗಳ ಪುಸ್ತಕಗಳಲ್ಲಿ ಈಗಿನ ವಿಜಯನಗರ ಜಿಲ್ಲೆಯ, ಹೊಸಪೇಟೆ ತಾಲ್ಲೋಕಿನ, ಹಂಪಿಯಲ್ಲಿ ಶ್ರೀ ವಿರುಪಾಕ್ಷ ದೇವಾಲಯದಲ್ಲಿರುವ ಶ್ರೀ ಭುವನೇಶ್ವರಿ ದೇವಿ ಶಕ್ತಿಪೀಠ ಎಂದು ಉಲ್ಲೇಖಿಸಿರುವ ಹಿನ್ನಲೆಯಲ್ಲಿ ದಿನಾಂಕ:21.03.2023 ರಂದು ದೇವಾಲಯಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಆರಂಭಿಸಲಾಯಿತು.

ದೇವಾಲಯದ ಪ್ರಧಾನ ಅರ್ಚಕರ ಜೊತೆಯಲ್ಲಿ ಕೂಲಂಕುಷವಾಗಿ ಚರ್ಚೆ ನಡೆಸಲಾಯಿತು. ಚರ್ಚೆ ಮಾಡುವಾಗ ಅಲ್ಲಿದ್ದ ಹಲವು ಭಕ್ತರಿಗೂ ವಿಶೇಷ ಆಸಕ್ತಿ ಮೂಡಿಸಿತು.

ಗಂಗಾವತಿಯ ಶ್ರೀ ಮಲ್ಲಿಕಾರ್ಜುನಯ್ಯನವರ ಕುಟುಂಬದವರು ಸಾರ್ ತಾವೂ ಯಾರು, ಈ ಮಾಹಿತಿ ಏಕೆ ಸಂಗ್ರಹ ಮಾಡುತ್ತಿದ್ದೀರಿ ಎಂದು ಕೂತಹಲದಿಂದ ಪ್ರಶ್ನೆ ಮಾಡಲು ಆರಂಭಿಸಿದಾಗ, ಅವರ ಜೊತೆಯಲ್ಲಿ ಅವರ ಮಗಳು ವಿದ್ಯಾರ್ಥಿನಿಯೊಬ್ಬರು  ಇದ್ದರು, ಅವರಿಗೆ ನೀವೂ ಶಕ್ತಿಪೀಠಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ನನಗೆ ಕಳುಹಿಸಿದ ನಂತರ ಹೇಳುತ್ತೇನೆ, ಎಂದು ಆಕೆಗೂ ಒಂದು ಹೊಣೆಗಾರಿಕೆ ನೀಡಲಾಯಿತು.

ಪ್ರವಾಸೋಧ್ಯಮ ಡಿಡಿ ಶ್ರೀ ತಿಪ್ಪೆಸ್ವಾಮಿರವರು, ಕೆ ಎಸ್.ಎಸ್.ಡಿ.ಸಿಯ ಶ್ರೀ ಭುವನ್‍ರವರು, ಸೆಕ್ಯೂರಿಟಿಯವರ ಸಹಕಾರ ಮರೆಯುವಂತಿಲ್ಲ.

ಮಹತ್ವದ ವಿಚಾರ ತಿಳಿಯಿತು:

ಶಿವನ ಪತ್ನಿ ಸತಿಯ ದೇಹವನ್ನು ಶ್ರೀ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಭಾಗಗಳಾಗಿ ಮಾಡಿದ ನಂತರ, ಅಂಗಗಳು ಬಿದ್ದ ಸ್ಥಳಗಳು ಶಕ್ತಿಪೀಠಗಳಾಗಿವೆ, ಸತಿಯು ಮುಂದಿನ ಜನ್ಮದಲ್ಲಿ ಹಿಮವಂತನ ಮಗಳು ಪಾರ್ವತಿಯಾಗಿ ಜನಿಸಿರುತ್ತಾಳೆ. ಶಿವನು ಹಂಪಿಗೆ ಬಂದು ತಪಸ್ಸು ಮಾಡುತ್ತಿರುವಾಗ ಆವರ ಸೇವೆಗೆಂದು ಪಾರ್ವತಿಯೂ ಸಹ ಬಂದು ತಪಸ್ಸು ಮಾಡಿದ ಜಾಗ ಇದು.

ಇದು ಶಕ್ತಿಪೀಠವೋ, ಅಲ್ಲವೋ ನಿಖರವಾದ ಮಾಹಿತಿ ನಮಗೆ ಗೊತ್ತಿಲ್ಲ. ಆದರೆ ಶಕ್ತಿಪೀಠಗಳ ಸಂಭಂದ ಈ ರೀತಿ ಇದೆ ಎಂದು ಅರ್ಚಕರು ತಿಳಿಸಿದರು.

ಈ ಬಗ್ಗೆ ತಾಳೆ ಗರಿ, ಶಾಸನಗಳು, ಸಂಶೋಧನಾ ಗ್ರಂಥಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ ನಂತರ ನಿಖರವಾಗಿ ಹೇಳಬಹುದಾಗಿದೆ ಎಂಬ ಅಂಶವನ್ನು ಅವರು ತಿಳಿಸಿದ್ದಾರೆ.

ಇದೂವರೆಗೂ ಯಾರಾದರೂ ಶಕ್ತಿಪೀಠದ ಬಗ್ಗೆ ಮಾಹಿತಿ ಸಂಗ್ರಹಿಸಲು ಇಲ್ಲಿಗೆ ಬಂದಿದ್ದರಾ? ಎಂಬ ಪ್ರಶ್ನೆಗೆ ನನಗೆ ತಿಳಿದಿರುವ ಹಾಗೆ ನೀವೇ ಮೊದಲಿಗರು ಎಂದರು.

ಬಗ್ಗೆ ಮಾಹಿತಿ ಇರುವವರು ಹಂಚಿಕೊಳ್ಳಲು ಮನವಿ