12th April 2024
Share

TUMAKURU:SHAKTHIPEETA FOUNDATION

 ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಅನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಪರಿಣಿತರು, ಸಂಘÀ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಶಕ್ತಿಪೀಠ ಫೌಂಡೇಷನ್ ಹಾಗೂ ಇತರೆ ಸಂW Àಸಂಸ್ಥೆಗಳ ಸಹಭಾಗಿತ್ವದಲ್ಲಿ ಆರಂಭಿಸಲಾಗಿದೆ.

ಕೆಲವರ ಅಭಿಪ್ರಾಯ ನೀವೂ ಮಾಡಿದ್ದನ್ನು ಸರ್ಕಾರ ಒಪ್ಪತ್ತಾ ಎಂಬುದಾಗಿದೆ. ಈಗಾಗಲೇ ಸರ್ಕಾರದ ಹಂತದಲ್ಲಿ ಕಡತಗಳನ್ನು ಸಿದ್ಧಪಡಿಸಲು ಸಹ ನಮ್ಮ ಸಂಸ್ಥೆ ಪ್ರಷರ್ ಗ್ರೂಪ್ ಆಗಿ ಕಾರ್ಯ ನಿರ್ವಹಿಸುತ್ತಾ ಬಂದಿದೆ.

ಸರ್ಕಾರಗಳ ಹಂತದಲ್ಲಿಯೇ   ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲು ಈಗಾಗಲೇ ಆರಂಭದ ಸಿದ್ಧತೆ ಪ್ರಾರಂಭವಾಗಿದೆ. ಯಾವುದೇ ಪಕ್ಷದ ನೇತೃತ್ವದ ಸರ್ಕಾರಗಳನ್ನು ಟೀಕೆ ಟಿಪ್ಪಣೆ ಮಾಡುವ ಬದಲು, ನಾವು ಅವರೊಟ್ಟಿಗೆ ಸೇರಿ ಶ್ರಮಿಸೋಣ ಬನ್ನಿ.

ಇಂದು ದೇಶದ ಪ್ರಧಾನಿಯಾಗಿ ಶ್ರೀ ನರೇಂದ್ರಮೋದಿಯವರು ಇದ್ದಾರೆ, 2047 ಕ್ಕೇ ಯಾರೇ ಪ್ರಧಾನಿ ಆಗಿರಲಿ, ಇದು ಭಾರತದ ಗುರಿಯಲ್ಲವೇ? ಮೋದಿಯರವರು ಆರಂಭಿಸಿದ್ದಾರೆ, ಗುರಿ ತಲುಪುವುದು ಯಾರೋ, ಈ ಬಗ್ಗೆ ಅಪಸ್ವರ ಏಕೆ ಎಂಬುದು ನನ್ನ ಮನವರಿಕೆಯಾಗಿದೆ. ಇದು ಬಿಜೆಪಿ ಬ್ರ್ಯಾಂಡ್ ಅಲ್ಲ, ಸರ್ವಪಕ್ಷಗಳ ಬ್ರ್ಯಾಂಡ್ ಎಂದು ಭಾವಿಸಿ. ನೀವೂ ಒಪ್ಪಿ ಅಥವಾ ಬಿಡಿ, ಜನಕರು ಮಾತ್ರ ಮೋದಿಯವರು.

ಚೌಕಿದಾರನಿಂದ ಆರಂಭಿಸಿ, ದೇಶದ ಪ್ರಧಾನಿಯವರ ವರೆಗೂ ಇಂಡಿಯಾ @ 100 ಬಗ್ಗೆ ಐಡಿಯಾ ಕೊಡಬಹುದು, ಇಲ್ಲಿ ವಿದ್ಯಾವಂತ, ಅವಿದ್ಯಾವಂತ ಎಂಬ ಪ್ರಶ್ನೆ ಏಕೆ? ಬುದ್ದಿ ಯಾರಪ್ಪನ ಮನೆಯ ಆಸ್ತಿ? ಇದನ್ನೇ ಮೋದಿಯವರು ನ್ಯಾಷನಲ್ ಎಜುಕೇಷನ್ ಪಾಲಿಸಿಯಲ್ಲೂ ಪ್ರಸ್ಥಾಪ ಮಾಡಿದ್ದಾರೆ.

ಮಾಜಿ ಮುಖ್ಯ ಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರೇ ಹೇಳುವ ಮಾತು, ಕುರಿಕಾಯುವವನು ರಾಜ್ಯದ ಆಯವ್ಯಯ ಮಂಡಿಸಲು ಸಾದ್ಯಾವೇ ಎಂದು ಟೀಕಿಸುತ್ತಿದ್ದವರಿಗೆ, ನನ್ನ ಕಾಯಕವೇ ಉತ್ತರಾ? ಇದಲ್ಲವೇ ತಾಕತ್ತು!

ಯಾವುದೋ ಎ.ಸಿ.ರೂಮಿನಲ್ಲಿ ಕುಳಿತು ಸಿದ್ಧಪಡಿಸಬಾರದು ಎಂಬ ದೃಷ್ಠಿಯಿಂದ, ರಾಜ್ಯದ ಮೂಲೆ, ಮೂಲೆಗಳ ಜನಾಭಿಪ್ರಾಯªನ್ನು ಸಂಗ್ರಹಿÀಸಿ ಸರ್ಕಾರಗಳಿಗೆ ಸಲ್ಲಿಸಲು ನಿರ್ಧಿಷ್ಟ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ.

ಇದು ದೇಶದ ಪ್ರಧಾನಿಯವರ ಘೋಷಣೆಯಾಗಿದೆ. ಕಾದು ನೋಡಿ ಎಂದಷ್ಟೆ ಉತ್ತರ ಹೇಳಬಹುದಾಗಿದೆ.

ತುಮಕೂರು ನಗರದ ಜಯನಗರದ ಉದ್ದೇಶಿತ ಶಕ್ತಿಪೀಠ ನಾಲೇಡ್ಜ್ ಬ್ಯಾಂಕ್- 2047 ಹಿಂಬಾಗದ ಪಾರ್ಕ್‍ನಲ್ಲಿ, ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಬಗ್ಗೆ ಆಸಕ್ತಿ ಪರಿಣಿತರ ಗುಂಪು ಚರ್ಚೆ ಮಾಡಲು ನಡೆದಿರುವ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಲಾಯಿತು.

ಶ್ರೀ ಟಿ.ಆರ್.ರಘೋತ್ತಮ ರಾವ್‍ರವರು , ಶ್ರೀ ಮುರುಳೀಧರ್ ನಾಯಕ್ ರವರು, ಶ್ರೀ ಹರೀಶ್ ರವರು ಜೊತೆಯಲ್ಲಿ ಇದ್ದರು.

ಸದ್ದು ಗದ್ದಲವಿಲ್ಲದೆ, ಸಿದ್ಧಗಂಗಾ ಶ್ರೀಗಳ 116 ನೇ ಜನ್ಮ ದಿವಸದ ಮುನ್ನಾ ದಿನ ಅಧಿಕೃತವಾಗಿ ಗುಂಪು ಚರ್ಚೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.

RACKS MODEL