ಶಕ್ತಿಪೀಠ ನಾಲೇಡ್ಜ್ ಬ್ಯಾಂಕ್-2047 : ನವರಾತ್ರಿಗೆ ಲೋಕಾರ್ಪಣೆ ?
TUMKURU:SHAKTHIPEETA FOUNDATION
ಇಂಡಿಯಾ @ 100 ಅಂಗವಾಗಿ ನವಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಅನ್ನು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು, ಪರಿಣಿತರು, ಸಂಘÀ ಸಂಸ್ಥೆಗಳು ನೀಡುವ ಸಲಹೆಗಳ ಸಂಗ್ರಹಕ್ಕಾಗಿ ಫಿಸಿಕಲ್ ಗ್ರಂಥಾಲಯ/ಮ್ಯೂಸಿಯಂ ಸ್ಥಾಪಿಸಲು ಸುಮಾರು 565 ರ್ಯಾಕ್ಸ್ ಗಳ ಮಾದರಿ ಸಿದ್ಧಪಡಿಸಲಾಗಿದೆ.
ಗ್ರಂಥಾಲಯ, ಡಿಜಿಟಲ್ ಗ್ರಂಥಾಲಯ, ಹ್ಯೂಮನ್ ಗ್ರಂಥಾಲಯ ಹಾಗೂ ಇಂಡಿಯಾ @ 100 ಅಥವಾ ಇಂಡಿಯಾ-2047 ಅಥವಾ ಮಿಷನ್ ಕರ್ನಾಟಕ @ 20247 ಅಥವಾ ನಾಲೇಡ್ಜ್ ಬ್ಯಾಂಕ್-2047 ಯೂ ಟ್ಯೂಬ್ ಚಾನಲ್ ಆರಂಭಿಸಲು ಚಿಂತನೆ ನಡೆಸಲಾಗಿದೆ.
ಶಕ್ತಿಪೀಠ ಫೌಂಡೇಷನ್ ಮತ್ತು ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಪರಿಕಲ್ಪನೆ.
- 504: ವಿಶ್ವದ 108 ಶಕ್ತಿಪೀಠ. ಸಿದ್ಧಿಪೀಠ, ಜ್ಯೋತಿರ್ಲಿಂಗ, ವಿಷ್ಣು, ಬ್ರಹ್ಮ, ವೀರಭಧ್ರ.ಗಣೇಶ, óಷಣ್ಮುಖ, ಆಂಜನೇಯ, ನವಗ್ರಹ, ಅಷ್ಟ ದಿಕ್ಪಾಲಕರು, ಧ್ವಾರಪಾಲಕರು, ಬಸವಣ್ಣ,ಸಾಯಿಬಾಬಾ, ಸ್ವಾಮಿವಿವೇಕಾನಂದ, ಅಂಬೇಡ್ಕರ್, ಗುರುನಾನಕ್, ಅಲ್ಲಾ, ಏಸು, ಇತ್ಯಾದಿ ಸರ್ವಧರ್ಮದ ಅವರು ಯಾವುದೇ ಹೆಸರಿನಲ್ಲಿ ಕರೆಯುವ ದೇವರುಗಳ ಪಕ್ಕಾ ಮಾಹಿತಿ.
- 504: ಲೋಕಸಭಾ ಸದಸ್ಯರು, ರಾಜ್ಯ ಸಭಾ ಸದಸ್ಯರು, ವಿಧಾನಸಭಾ ಸದಸ್ಯರು, ವಿಧಾನಪರಿಷತ್ ಸದಸ್ಯರು, ದೆಹಲಿ ಪ್ರತಿನಿಧಿ, ಮುಖ್ಯ ಮಂತ್ರಿ, ರಾಜ್ಯಪಾಲ, ವಿಧಾನ ಸಭೆ/ಪರಿಷತ್ ಅಧ್ಯಕ್ಷರು, ವಿರೋಧ ಪಕ್ಷದ ನಾಯಕ, ಸರ್ವಪಕ್ಷಗಳು, 31 ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, 31 ಜಿಲ್ಲಾಧಿಕಾರಿ, 31 ಜಿಲ್ಲೆಗಳ ಜಿಲ್ಲಾ ಪಂಚಾಯತ್ ಸಿಇಓ. ಪ್ರಧಾನ ಮಂತ್ರಿ, ರಾಷ್ಟ್ರಪತಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳ ಕ್ಲಸ್ಟರ್ ಗಳ ಅಧ್ಯಯನ ಪೀಠಗಳ ಪಕ್ಕಾ ಮಾಹಿತಿ. .
- 504: ಐಎಎಸ್/ಕೆಎಎಸ್ ಸಮಾನಾಂತರ ಹುದ್ದೆಯವರು ಸಹಕರಿಸುವವರ ಪಕ್ಕಾ ಮಾಹಿತಿ.
- 504: 1947 ರಿಂದ 2047 ರವರೆಗಿನ ಅಭಿವೃದ್ಧಿ ಯೋಜನೆಗಳ ಅಧ್ಯಯನ ಪೀಠಗಳ- ಜ್ಞಾನಿಗಳು/ಸಂಚಾಲಕರು/ ಮಾಧ್ಯಮ ಸ್ನೇಹಿತರ ಪಕ್ಕಾ ಮಾಹಿತಿ.
- 504: ಜಾತಿ/ಉಪಜಾತಿ ಸಂಘಟನೆಗಳ- ಪಧಾದಿಕಾರಿಗಳ ಪಕ್ಕಾ ಮಾಹಿತಿ.
- 504: ಔಷಧಿ ಗಿಡ/ಮರಗಿಡಗಳ ಮಾಹಿತಿಯುಳ್ಳ- ನಾಟಿ ವೈಧ್ಯರು, ಪಾರಂಪರಿಕ ವೈಧ್ಯರು, ಹಕೀಮರ ಪಕ್ಕಾ ಮಾಹಿತಿ.
- 504: ರೈತರ ಬೆಳೆಗಳ ಮೌಲ್ಯ ವರ್ಧಿತ ಉತ್ಪನ್ನಗಳು/ವಿವಿಧ ಕ್ಲಸ್ಟರ್ ಗಳನ್ನು-ಪಿಪಿಪಿ ಮಾದರಿಯಲ್ಲಿ ಆರಂಭಿಸಲು ಆಸಕ್ತಿ ಇರುವ-ಉಧ್ಯಮಿಗಳ ಪಕ್ಕಾ ಮಾಹಿತಿ.
- 504: ಇಂಡಿಯಾ @ 100, ಥೀಮ್ ಪಾರ್ಕ್, ಆಯಾ ಭೌಗೋಳಿಕಕ್ಕೆ ಅನುಗುಣವಾಗಿ ಪಿಪಿಪಿ ಮಾದರಿಯಲ್ಲಿ ಆರಂಭಿಸಲು ಆಸಕ್ತಿ ಇರುವ-ಉಧ್ಯಮಿಗಳಪಕ್ಕಾ ಮಾಹಿತಿ.
- 504: ಇಕೋ ರೆಸಾರ್ಟ್ ಪಿಪಿಪಿ ಮಾದರಿಯಲ್ಲಿ ಆರಂಭಿಸಲು ಆಸಕ್ತಿ ಇರುವ-ಉಧ್ಯಮಿಗಳಪಕ್ಕಾ ಮಾಹಿತಿ.
ದುಡಿದು ತಿನ್ನುವ ಜೊತೆಗೆ, ರಾಜ್ಯದ 224 ವಿಧಾನ ಸಭಾ ಕ್ಷೇತ್ರಗಳಲ್ಲಿಯೂ, ಸ್ವಯಂ ಉದ್ಯೋಗ ಮಾಡುವ ಮೂಲಕ, ದುಡಿದು ಕೊಂಡು ‘ಭಾರತ ವಿಶ್ವ ಗುರು’ ವಾಗಲು ಶ್ರಮಿಸಲು ಆಸಕ್ತಿ ಇರುವವರು ಉಚಿತವಾಗಿ ನೊಂದಾಯಿಸಿ ಕೊಂಡವರಿಗೆ, ಸ್ಕಿಲ್ ಇಲಾಖೆಯಲ್ಲಿ ಪ್ರತ್ಯೇಕ ಸಿಲಬಸ್ ನೊಂದಿಗೆ ತರಬೇತಿ ನೀಡಲಾಗುವುದು. ಮುಂದಿನ 25 ವರ್ಷಗಳ ಕಾಲ ಮಾನಿಟರಿಂಗ್ ಮಾಡಲಾಗುವುದು. ಆಸಕ್ತರು ಮುಂದೆ ಬರಬಹುದಾಗಿದೆ.
ನಮ್ಮ ಸಂಸ್ಥೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಮತ್ತು ನೌಕರ ವರ್ಗದಿಂದಲೇ ನಮ್ಮ ಕನಸನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಚುನಾಯಿತ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ರ್ಯಾಂಕಿಂಗ್ ನೀಡುವ ಮೂಲಕ ಬಡಿದೆಬ್ಬಿಸುವುದೇ ನಮ್ಮ ಕೆಲಸ.
ವಿನೂತನ ಐಡಿಯಾಗಳನ್ನು ಸ್ವಾಗತಿಸಲಾಗುವುದು. ಈ ಬಗ್ಗೆ ರಾಜ್ಯ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಭೆ ನಡೆಸಲಾಗುವುದು.
ಸುಮಾರು 12 ಎಕರೆ 15 ಗುಂಟೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಶಕ್ತಿಪೀಠ ಕ್ಯಾಂಪಸ್ ನಲ್ಲಿ ನ ಪ್ರತಿಯೊಂದು ಪ್ರಾತ್ಯಾಕ್ಷಿಕೆಯ, ಕಟ್ಟಡದ, ಮೂಲಭೂತ ಸೌಕರ್ಯದ ಪಕ್ಕಾ ಮಾಹಿತಿ ಮತ್ತು ನಾಲೇಡ್ಜ್ ಬ್ಯಾಂಕ್-2047 ಐಡಿಯಾಗಳ ಸಂಗ್ರಹವೇ ನಮ್ಮ ಮೊದಲ ಆಧ್ಯತೆ.
ಶಕ್ತಿಪೀಠ ಫೌಂಡೇಷನ್ ನೊಂದಾಯಿಸಿದ 5 ವರ್ಷಗಳಲ್ಲಿ ಶಕ್ತಿಪೀಠ ಕ್ಯಾಂಪಸ್ ಲೋಕಾರ್ಪಣೆ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಆದರೇ ಶಕ್ತಿದೇವತೆಗಳ ಮಾರ್ಗದರ್ಶನ ಮೊದಲು ಏನೇನು ಮಾಡಬೇಕು ಎಂಬ ಬಗ್ಗೆ ನಿಖರವಾದ ಪ್ರಸ್ತಾವನೆ ಸಿದ್ಧಪಡಿಸಲು ಆದೇಶಿಸಿದ್ದಾರೆ ಎಂದರೆ ತಪ್ಪಾಗಲಾರದು. 4 ವರ್ಷ ತುಂಬಿ 5 ನೇ ವರ್ಷಕ್ಕೆ ಕಾಲಿಡುವ ವೇಳೆಗೆ ‘ಶಕ್ತಿಪೀಠ ನಾಲೇಡ್ಜ್ ಬ್ಯಾಂಕ್-2047’ ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ. ದೇವರ ಆಟ ಬಲ್ಲವರಾರು.