12th September 2024
Share

TUMAKURU:SHAKTHIPEETA FOUNDATION

ಆವರಣದಲ್ಲಿ ಹಸಿರು ಮಯ ಮಾಡಿರುವ ಪಿಜೆಸಿ ಕಂಪನಿಯವರಿಗೆ ಹೃದಯ ಪೂರ್ವಕ ಅಭಿನಂದನೆ.

ಇಲ್ಲಿನ ನಿವಾಸಿಗಳು ಸಮುದಾಯ ಚಟುವಟಿಕೆ ನಡೆಸಲು ಶ್ರಮಿಸುತ್ತಿರುವ ರೀತಿಗೂ ಹೃದಯ ಪೂರ್ವಕ ಅಭಿನಂದನೆ.

ವಿವಿಧ ಧರ್ಮ, ವಿÀವಿಧ ಜಾತಿ , ಉಪಜಾತಿ, ವೈವಿಧ್ಯಮಯ ಜನರ ಸಹಬಾಳ್ವೆ ನಿಜಕ್ಕೂ ಮೆಚ್ಚುವಂತದ್ದು.

ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿ ಸುಮಾರು 30 ಗುಂಟೆ ಜಮೀನಿನಲ್ಲಿ ವಿವಿಧ ಮಾದರಿಯ ಎಲ್ಲಾ ಜಾತಿಯ ಗಿಡಗಳನ್ನು ಹಾಕುವ ಮೂಲಕ, ಇಲ್ಲಿನ ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಸುವುದು ಮತ್ತು ಔಷಧಿ ಗಿಡಗಳ ಜ್ಯೂಸ್ ಮತ್ತು ಗಾಳಿ ಸೇವನೆ ಮೂಲಕ ಹಿರಿಯರ ನಾಗರೀಕರ ಆರೋಗ್ಯಕ್ಕೆ ಸಹಕರಿಸಲು ಕೆಲವು ಹಸಿರು ಆಸಕ್ತಿ ನಿವಾಸಿಗಳು ಮುಂದಾಗಿದ್ದು ಇತಿಹಾಸ.

ಅದೇಕೋ ಏನೋ ಕಾರಣವಿಲ್ಲದೇ ಸುಮಾರು 5 ತಿಂಗಳು ವಿಳಂಭವಾಗಿದೆ. ಮೊನ್ನೆ ಪಂಚವಟಿ ಗಿಡಗಳಿಗೆ ಪೂಜೆ ಮಾಡಿದ ನಂತರ ಟ್ರಿ ಪಾರ್ಕ್ ನಿರ್ಮಾಣ ಮತ್ತೆ ಗರಿಗೆದರಿದೆ.

ಪಿಜೆಸಿಯ ನಿವಾಸಿಗಳು ಸೇರಿ ಲೇ ಔಟ್ ಪ್ಲಾನ್ ಮಾಡಿ ಕೊಡಿ, ನಾವೇ ಟ್ರಿ ಪಾರ್ಕ್ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಶ್ರೀ ರಾಘವೇಂದ್ರರವರು ಶ್ರೀ ಶಾಸ್ತ್ರಿಯವರಿಗೆ ಹೇಳಿದ್ದರು. ಈ ಹಿನ್ನಲೆಯಲ್ಲಿ ದಿನಾಂಕ:01.04.2023 ರಂದು ಮತ್ತು 02.04.2023 ರಂದು ಬೆಳಿಗ್ಗೆ ಆಸಕ್ತರು ಸೇರಿ, ವಿವಿಧ ವರ್ಗದ ಜನರ ಅಭಿಪ್ರಾಯದೊಂದಿಗೆ ಈ ಕೆಳಕಂಡ ಪ್ರೀ ಹ್ಯಾಂಡ್ ನಕ್ಷೆ ತಯಾರಿಸಲಾಗಿದೆ.

ಆಸಕ್ತರು ಪರಿಸರ ಪ್ರೇಮಿ ಶ್ರೀ ಸಿದ್ಧಗಂಗಪ್ಪನವರಿಗೆ-9343777577 ತಮ್ಮ ಸಲಹೆ, ಮಾರ್ಗದರ್ಶನ ನೀಡಲು ಈ ಮೂಲಕ ಕೋರಿದ್ದಾರೆ.

  1. ತುಮಕೂರು ಜಿಲ್ಲೆ, ಗುಬ್ಬಿ ತಾಲ್ಲೋಕು, ನನ್ನ ಹುಟ್ಟೂರು ಕುಂದರನಹಳ್ಳಿಯಲ್ಲಿ ಸರ್ಕಾರಿ ಜಮೀನಿನನಲ್ಲಿ ತೆಂಗಿನ ತೋಟ ಮಾಡಿಸಿ, ಗ್ರಾಮಸ್ಥರು ಆದಾಯ ಬಳಸಿಕೊಳ್ಳಲು ಶ್ರಮಿಸಲಾಗಿದೆ.
  2. ತುಮಕೂರು ಜಿಲ್ಲೆ, ಚಿಕ್ಕನಾಯಕನಹಳ್ಳಿ ತಾಲ್ಲೋಕು  ನನ್ನ ಮನೆ ದೇವರಾದ ಶ್ರೀ ತೀರ್ಥರಾಮೇಶ್ವರ ವಜ್ರದಲ್ಲಿ ಸರ್ಕಾರಿ ಜಮೀನನಲ್ಲಿ ಅಡಿಕೆ ತೋಟ ಮಾಡಿಸಿ, ದೇವಾಲಯದವರು ಆದಾಯ ಬಳಸಿಕೊಳ್ಳಲು ಶ್ರಮಿಸಲಾಗಿದೆ.
  3. ತುಮಕೂರು ನಗರದಲ್ಲಿ ಸಿದ್ಧಗಂಗಾ ಶ್ರೀಗಳ 100 ನೇ ವರ್ಷದಲ್ಲಿ ಅವರ ನನೆಪಿನ 36500 ದಿವಸಗಳಿಗೂ ಒಂದು ಗಿಡದಂತೆ, ತುಮಕೂರು ನಗರದಲ್ಲಿ ಗಿಡಗಳನ್ನು ಹಾಕಿ ಬೆಳೆಸಲು ಶ್ರಮಿಸಲಾಗಿದೆ.
  4. ತುಮಕೂರು ಬಳಿ ಉದ್ದೇಶಿತ ವಿಜ್ಞಾನ ಗುಡ್ಡದಲ್ಲಿ ಗಿಡಹಾಕಿಸಲು ಶ್ರಮಿಸಲಾಗಿದೆ.
  5. ಮತ್ತೆ ತುಮಕೂರು ನಗರದಲ್ಲಿ ಮತ್ತು ವಸಂvನರಸಾಪುರದ ಕೈಗಾರಿಕಾ ಕಾರಿಡಾರ್ ನಲ್ಲಿ, ಸುಮಾರು ಒಂದು ಲಕ್ಷ ಗಿಡಹಾಕಲು ಶ್ರಮಿಸುತ್ತಿರುವ ಹಿನ್ನಲೆಯಲ್ಲಿ,  ಮಾಸ್ಟರ್ ಪ್ಲಾನ್ ಸಿದ್ಧವಾಗುತ್ತಿದೆ.
  6. ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೋಕಿನ ವಾಣಿವಿಲಾಸ ಕಾಲುವೆ ಬಳಿ, ನಮ್ಮ ಶಕ್ತಿಪೀಠ ಕ್ಯಾಂಪಸ್ ಗೆ ಹೊಂದಿಕೊಂಡಂತೆ ಇರುವ ಸುಮಾರು 120 ಕೀಮೀ ಕಾಲುವೆ ಅಕ್ಕ-ಪಕ್ಕದಲ್ಲಿ ಗ್ರೀನ್ ಕಾರಿಡಾರ್ ನಿರ್ಮಾಣ ಮಾಡಲು ಶ್ರಮಿಸುತ್ತಿರುವ ಫಲವಾಗಿ,  ನಿಗಮದ ಜಮೀನು ಸರ್ವೇ ಕಾರ್ಯ ಪ್ರಗತಿಯಲ್ಲಿದೆ.
  7. ಈಗ ನಾನು ವಾಸವಿರುವ ಪ್ರಿಸ್ಟೇಜ್ ಜಿಂದಾಲ್ ಸಿಟಿಯಲ್ಲಿಯೂ ‘ಗಿಡಗಳನ್ನು ಹಾಕಿಸಲು ಶ್ರಮಿಸುವುದು ನನ್ನ ಜಾಯಮಾನದ ಗುಣ ಅಷ್ಟೆ’.

ನನ್ನ ಜೊತೆ ತುಮಕೂರಿನಲ್ಲಿ ಗಿಡಹಾಕಿಸಲು ಶ್ರಮಿಸಿದ ಶ್ರೀ ವಿಶ್ವನಾಥ್ ರವರು ಇಲ್ಲಿಯೂ ಕೈ ಜೋಡಿಸುತ್ತಿದ್ದಾರೆ.

ಅಲ್ಲೆಲ್ಲಾ ಗಿಡ ಹಾಕಿಸಲು ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರು ಸಹಕಾರ ನೀಡಿದ್ದಾರೆ. ಇಲ್ಲಿ ಪ್ರಪಂಚದ ವಿವಿಧ ದೇಶಗಳ, ಭಾರತ ದೇಶದ ವಿವಿಧ ರಾಜ್ಯಗಳ, ಕರ್ನಾಟಕ ರಾಜ್ಯದ 31 ಜಿಲ್ಲೆಗಳ ಪಿಜೆಸಿ ನಿವಾಸಿಗಳು ಸಹಕಾರ ನೀಡುತ್ತಿದ್ದಾರೆ.

ಶ್ರೀ ಸಿದ್ಧಗಂಗಪ್ಪನವರು, ಶ್ರೀ ರಾಜೇಶ್ ರವರು, ಶ್ರೀ ವಿಶ್ವನಾಥ್ ರವರು ಆರಂಭದಿಂದಲೂ   ಶ್ರಮಿಸುತ್ತಿದ್ದರೆ, ಪಂಚವಟಿ ಗಿಡ ಹಾಕುವ ದಿನದಿಂದಲೂÀ ನೂರಾರು ಪಿಜೆಸಿ ನಿವಾಸಿಗಳು  ಶ್ರಮಿಸಲು ಮುಂದೆ ಬಂದಿರುವುದು ಹೆಮ್ಮೆ ವಿಚಾರ.

ದತ್ತು ಪಡೆಯಲು ಹಸಿರು ಮನವಿ.

  1. ಪಿಜೆಸಿ ನಿವಾಸಿ ವಿದ್ಯಾರ್ಥಿಗೊಂದು ಗಿಡ,
  2. ಪಿಜೆಸಿ ನಿವಾಸಿ ಕುಟುಂಬಕ್ಕೊಂದು ಗಿಡ,
  3. ಪಿಜೆಸಿ ನಿವಾಸಿ ಜಿಲ್ಲೆಗೊಂದು ಗಿಡ,
  4. ಪಿಜೆಸಿ ನಿವಾಸಿ ರಾಜ್ಯಕ್ಕೊಂದು ಗಿಡ,
  5. ಪಿಜೆಸಿ ನಿವಾಸಿ ದೇಶಕ್ಕೊಂದು ಗಿಡ,