TUMAKURU:SHAKTHIPEETA FOUNDATION
ಕೇಂದ್ರ ಸರ್ಕಾರ ಯೋಜನಾ ಮಂಡಳಿಯನ್ನು ಪುನರ್ ರಚಿಸಿ, ನೀತಿ ಆಯೋಗ- NITI AYOG : National Institution for Transforming India ರಚಿಸಿರುವ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರ ಯೋಜನಾ ಮಂಡಳಿಯನ್ನು ಪುನರ್ ರಚಿಸಿ, ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆ – SITK: State Institute for Transformation of Karnatakaಎಂಬ ಸಂಸ್ಥೆಯನ್ನು ರಚಿಸಿದೆ.
‘ಇಂಡಿಯಾ @ 100 ಅಂಗವಾಗಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047’ ಸಿದ್ಧಪಡಿಸಲು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಪಾತ್ರ ಮಹತ್ತರವಾಗಿದೆ.
ಇದರಡಿಯಲ್ಲಿ ಬರುವ ಕರ್ನಾಟಕ ರಾಜ್ಯ ಪರಿವರ್ತನಾ ಸಂಸ್ಥೆಯು ಸೇರಿದಂತೆ, ಎಲ್ಲಾ ವಿಭಾಗಗಳ ಸಹಭಾಗಿತ್ವದಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳುÀ, ನಿಗಮಗಳು, ಬೋರ್ಡ್‍ಗಳುÀ, ಕಾರ್ಪೋರೇಷನ್‍ಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ 2047 ರವರೆಗೆ ಕೈಗೊಳ್ಳ ಬೇಕಾಗಿರುವ ವಿಷನ್ ಡಾಕ್ಯುಮೆಂಟ್ ಸಿದ್ಧಪಡಿಸಲು ವ್ಯಾಪಕ ಕಾರ್ಯಕ್ರಮ ರೂಪಿಸುವುದು ಅಗತ್ಯವಾಗಿದೆ.
ಕರ್ನಾಟಕ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣೆಗೆ ಬಳಸಿಕೊಂಡಿರುವ ಅಧಿಕಾರಿಗಳು ಮತ್ತು ನೌಕರರನ್ನು ಹೊರತು ಪಡಿಸಿದರೆ, ಉಳಿದ ಅಧಿಕಾರಿಗಳು ಮತ್ತು ನೌಕರರು ಬಹುತೇಕ ಬಿಡುವಾಗಿರುತ್ತಾರೆ.
ಈ ಸಮಯದಲ್ಲಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047 ಸಿದ್ಧಪಡಿಸಲು, ಮುಖ್ಯ ಕಾರ್ಯದರ್ಶಿಯವರು ಮತ್ತು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು ವಿಶೇಷ ಆಸಕ್ತಿ ವಹಿಸಬಹುದಾಗಿದೆ.
ಜಲಸಂಪನ್ಮೂಲ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು, ನನಗೆ ಪದೇ ಪದೇ ಹೇಳುತ್ತಿದ್ದ ಮಾತು, ಈ ಭಾರಿ ಚುನಾವಣಾ ನೀತಿ ಸಂಹಿತೆ ಅವಧಿಯಲ್ಲಿ, ನದಿ ನೀರಿನಲ್ಲಿ ನ್ಯಾಯ ಒದಗಿಸಲು, ರಾಜ್ಯದ ಪ್ರತಿಯೊಂದು ಗ್ರಾಮಕ್ಕೂ ನದಿ ನೀರಿನ ಅಲೋಕೇಷನ್ ಮಾಡಲು ಯೋಜನೆ ಸಿದ್ಧಪಡಿಸುತ್ತೇವೆ ಎಂಬುದಾಗಿತ್ತು. ನೀತಿ ಸಂಹಿತೆ ಜಾರಿಯಾದ ನಂತರ ನಾನು ಇನ್ನೂ ಅವರನ್ನು ಭೇಟಿಯಾಗಿಲ್ಲ.