8th January 2025 10:06:06 AM
Share

TUMAKURU:SHAKTHI PEETA FOUNDATION

  ಯಾವುದೇ ಪಕ್ಷದ ವಿಧಾನಸಭಾ ಸದಸ್ಯರಾಗಲಿ, ಯಾವ ಕ್ಷೇತ್ರದ ವಿಧಾನಸಭಾ ಸದಸ್ಯರಾಗಲಿ, ಯಾವುದೇ ಧರ್ಮಕ್ಕೆ ಸೇರಿದ ವಿಧಾನಸಭಾ ಸದಸ್ಯರಾಗಲಿ, ಯಾವುದೇ ಜಾತಿಗೆ ಸೇರಿದ ವಿಧಾನಸಭಾ ಸದಸ್ಯರಾಗಲಿ ಒಂದು ಕಾಮನ್ ಅಜೆಂಡಾ ಇಟ್ಟುಕೊಳ್ಳುವುದು ಮತದಾರರ ಅನಿಸಿಕೆ. ಸರ್ಕಾರವೇ ಮಾರ್ಗದರ್ಶಿ ಸೂತ್ರ ರಚಿಸಬೇಕು. ಮುಂದಿನ ಸರ್ಕಾರದ ಪ್ರಥಮ ಸಚಿವ ಸಂಪುಟದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲು ಮನವಿ ಮಾಡಲಾಗುವುದು.

ಪ್ರತಿಯೊಬ್ಬ ಅಭ್ಯರ್ಥಿ, ಬಗ್ಗೆ ಮತದಾರರ ಮುಂದೆ ಘೋಷಣೆ ಮಾಡಲಿ. ನಿವೇನಂತಿರಾ?

  1. ವಿಧಾನಸಭಾ ಕ್ಷೇತ್ರಕ್ಕೊಂದು ಶಾಸಕರ ಹೈಟೆಕ್ ಕಚೇರಿ/2047 ಭವನ ನಿರ್ಮಾಣ, ಗ್ರಂಥಾಲಯ, ಪಕ್ಕದಲ್ಲಿ ವಿಧಾನಸಭಾ ಕ್ಷೇತ್ರ ಥೀಮ್ ಪಾರ್ಕ್, ಒಂದು ಹೈಟೆಕ್ ದಾಸೋಹ ಭವನ ನಿರ್ಮಾಣ.
  2. ವಿಧಾನಸಭಾ ಕ್ಷೇತ್ರದ ಅಧ್ಯಯನ ಸೆಂಟರ್ ಸ್ಥಾಪನೆ.
  3. ಶಾಸಕರ ಕಚೇರಿಯಲ್ಲಿ ಜಿಐಎಸ್ ಪರಿಣಿತÀ ಉದ್ಯೋಗಿ ನೇಮಕ.
  4. ವಿಧಾನಸಭಾ ಕ್ಷೇತ್ರದ ಯೋಜನಾವಾರು ವಿಷನ್ ಗ್ರೂಪ್ ಮತ್ತು ಪ್ರÀಷರ್ ಗ್ರೂಪ್ ರಚನೆ.
  5. ಶಾಸಕರ ಅಧ್ಯಕ್ಷತೆಯ ಪ್ರತಿಯೊಂದು ಸಮಿತಿಯ ಅಜೆಂಡಾ ಟೆಂಪ್ಲೇಟ್ ಮಾಡುವುದು.
  6. ವಿಧಾನ ಸಭಾ ಸದಸ್ಯರ ರ್ಯಾಂಕಿಂಗ್ ಟೆಂಪ್ಲೇಟ್ ಪಾರದರ್ಶಕವಾಗಿ ಪ್ರದರ್ಶನ ಮಾಡುವುದು.
  7. ಪ್ರತಿಯೊಂದು ಗ್ರಾಮದ/ ಬಡಾವಣೆಯ ಅಭಿವೃದ್ಧಿ ಡಿಜಿಟಲ್ ನಕ್ಷೆ ಸಿದ್ಧಪಡಿಸಿ, ಪಾರದರ್ಶಕವಾಗಿ ಪ್ರಕಟಿಸುವುದು. 1947 ರಿಂದ ಇಲ್ಲಿಯವರೆಗೂ ಆಗಿರುವ ಕಾಮಗಾರಿಗಳ ಒಂದು ಕಲರ್, 2047 ರವರೆಗೆ ಆಗಬೇಕಾಗಿರುವ ಯೋಜನೆಗಳ ಒಂದು ಕಲರ್ ನಕ್ಷೆ, ಅವರ ಅವಧಿಯ ಪ್ರತಿಯೊಂದು ವರ್ಷ ಕೈಗೊಂಡ ಯೋಜನೆಗಳ ಒಂದು ಕಲರ್ ನಕ್ಷೆ ಮಾಡುವುದು.
  8. ಕ್ಷೇತ್ರದಲ್ಲಿದ್ದಾಗ ಬೆಳಿಗ್ಗೆ ಎದ್ದ ತಕ್ಷಣ ಜನರ ಜೊತೆಯಲ್ಲಿ ಒಂದೊಂದು ದಿನ, ಒಂದೊಂದು ಕಡೆ ವಾಕ್ ಮಾಡುವುದು ಅಥವಾ ಯೋಗ ಸೆಂಟರ್‍ಗಳಿಗೆ ಭೇಟಿ ನೀಡುವುದು.
  9. ಕ್ಷೇತ್ರದಲ್ಲಿದ್ದಾಗ ಪ್ರತಿ ದಿವಸ ಕಡೇ ಪಕ್ಷ ಒಂದು ಗಂಟೆ ತಮ್ಮ ಕಚೇರಿಯಲ್ಲಿ ಕೂರುವುದು. ಸಾರ್ವಜನಿಕರ ಅಹವಾಲು ಕೇಳುವುದು.
  10. ಕಚೇರಿಗೆ ಬರುವವರೆಗೆ ನೀರು, ಕಾಫಿ-ಟೀ, ತಿಂಡಿ, ಊಟ ಕೊಡಿಸುವುದು. ಅದಕ್ಕೆ ಒಂದು ಪರ್ಮನೆಂಟ್ ವ್ಯವಸ್ಥೆ ಮಾಡಿಕೊಳ್ಳುವುದು. 
  11. ಕ್ಷೇತ್ರದಲ್ಲಿದ್ದಾಗ ಪ್ರತಿ ದಿವಸ ಒಂದು ಕಾಮಗಾರಿ ನಡೆಯುವ ಗ್ರಾಮಪಂಚಾಯಿತಿಗಾಗಲಿ ಅಥವಾ ವಾರ್ಡ್ ಗಳಿಗಾಗಲಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವುದು, ಆ ಭಾಗದ ಕಾರ್ಯಕರ್ತರಿಗೆ ವಿಷಯ ತಿಳಿಸಿ, ಅವರೊಂದಿಗೂ ಒಂದು ಸಭೆ ನಡೆಸುವುದು. ಆ ಭಾಗದ ಕಾರ್ಯಕರ್ತರ ಮನೆಗೆ ಬೇಇಟಿ ನೀಡುವುದು.
  12. ಕ್ಷೇತ್ರದಲ್ಲಿದ್ದಾಗ ಪ್ರತಿ ದಿವಸ ಒಂದು ವಿಷಯ ಪರಿಣಿತರೊಂದೊಗೆ ಸಮಾಲೋಚನೆ ನಡೆಸುವುದು. ಅವರೊಂದಿಗೆ ತಿಂಡಿ ಅಥವಾ ಊಟ ಮಾಡುವುದು.
  13. ಪ್ರತಿ ತಿಂಗಳು ಮತದಾರರೊಂದಿಗೆ ಒಂದು ಸಂವಾದ ಕಾರ್ಯಕ್ರಮ ಏರ್ಪಡಿಸುವುದು.
  14. ಕಾರ್ಯಕರ್ತರು ಕಾರ್ಯಕ್ರಮಕ್ಕೆ ಕರೆದಾಗ ಎಷ್ಟೇ ಸಮಯವಾಗಲಿ ತಪ್ಪದೆ ಹಾಜರಾಗುವುದು. ಒಂದು ವೇಳೆ ಅಂದು ಹಾಜರಾಗಲು ಸಾಧ್ಯಾವಾಗದೇ ಇದ್ದಲ್ಲಿ ಇನ್ನೊಂದು ದಿವಸ ಅವರ ಮನೆಗೆ ಭೇಟಿ ನೀಡುವುದು.
  15. ಕಾರ್ಯಕರ್ತರಿಗೆ ಅವಕಾಶವಿರುವ ವಿವಿಧ ಸಮಿತಿಗಳಿಗೆ ನಾಮಿನೇಷನ್ ಮಾಡುವುದು.(ವಿಧಾನಸಭಾ ಸದಸ್ಯರು ನಾಮಿನೇಷನ್ ಮಾಡಬಹುದಾದ ಪಟ್ಟಿಯನ್ನು ಕಚೇರಿಯಲ್ಲಿ ಪ್ರಕಟಿಸುವುದು.
  16. ಎಷ್ಟೇ ಮೊತ್ತದ ಕಾಮಗಾರಿಯಾಗಲಿ, ಕಾರ್ಯಕರ್ತರಿಗೆ ಸಾದ್ಯಾವಿರುವ ಕಾಮಗಾರಿ ಹೊಣೆಗಾರಿಕೆ ಕೊಡಿಸುವುದು. ಈ ಪಟ್ಟಿಯನ್ನು ಕಚೇರಿಯಲ್ಲಿ ಪ್ರಕಟಿಸುವುದು.ಕಡೇ ಪಕ್ಷ ಒಂದು ಭಾರಿ ಪ್ರತಿಯೊಂದು ಕಾಮಗಾರಿ ವೀಕ್ಷಣೆ ಮಾಡುವುದು.
  17. ಮತದಾರರು ಫೋನ್ ಮಾಡಿದಾಗ ಫೋನ್ ರೀಸಿವ್ ಮಾಡುವುದು, ಸಾಧ್ಯಾವಾಗದೇ ಇದ್ದಲ್ಲಿ, ಅವರ ಆಪ್ತ ಸಹಾಯಕರಿಂದ ಫೋನ್ ಮಾಡಿಸಿ, ಕಚೇರಿಯಲ್ಲಿ ಇರುವಾಗ ಬರಲು ತಿಳಿಸುವುದು.
  18. ಮತದಾರರು ಎದುರಿಗೆ ಸಿಕ್ಕಾಗ ಕೈ ಎತ್ತುವುದು, ಸಮಯವಿದ್ದರೆ ಮಾತನಾಡಿಸುವುದು ಅಥವಾ ಫೋನ್ ಮಾಡಿ ಏನಪ್ಪಾ ಇಲ್ಲಿ ಇದ್ದೀಯಾ ಎನ್ನುವುದು.
  19. ಸಂಕಷ್ಟ ಕಾಲದಲ್ಲಿ ಮತದಾರರಿಗೆ ನೀಡುವ ಸೌಲಭ್ಯವನ್ನು ಪ್ರತಿಯೊಬ್ಬರಿಗೂ ತಲುಪುವಂತೆ ಡಿಜಿಟಲ್ ವ್ಯವಸ್ಥೆ ಮಾಡುವುದು.
  20. ಸೋಶಿಯಲ್ ಮೀಡಿಯಾದಲ್ಲಿ ಶಾಸಕರ ಕಾರ್ಯಕ್ರಮಗಳ ಬಗ್ಗೆ ಪ್ರಕಟಿಸುವುದು.
  21. ಪ್ರತಿಯೊಂದು ಗ್ರಾಮ/ಬಡಾವಣೆಗೆ ಆಗಿರುವ ಯೋಜನೆಗಳ ಬಗ್ಗೆ ಪಾರದರ್ಶಕವಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸುವುದು.
  22. ಕೆಲಸ ಆಗುತ್ತೋ, ಬಿಡುತ್ತೋ  ಪತ್ರ ಕೇಳಿದಾಗ ಪತ್ರಕೊಡುವುದು.
  23. ಕೆಲಸ ಆಗುತ್ತೋ, ಬಿಡುತ್ತೋ  ಫೋನ್ ಮಾಡಲು ಕೇಳಿದಾಗ ಫೋನ್ ಮಾಡುವುದು.
  24. ಮತದಾರರು, ಕಾರ್ಯಕರ್ತರು ತಪ್ಪು ಮಾಡಿದಾಗ, ರಕ್ಷಣೆ ನೀಡಿ, ನಂತರ ಕರೆದು ಬುದ್ದಿ ಹೇಳುವುದು.
  25. ಮತದಾರರು ಹೇಳುವುದನ್ನು ಒಂದು ನಿಮಿಷ ಕಾಲವಾಕಾಶ ನೀಡಿ ಕೇಳುವುದು. ಒಳ್ಳೆ ಐಡಿಯಾ ಎಂದು ಹೇಳುವುದು.
  26. ಕಾರ್ಯಕರ್ತರ ಗುಂಪುಗಳ ಬಗ್ಗೆ ನಿಗಾ ಇಡುವುದು, ಆಗಾಗ್ಗೆ ಮುಕ್ತವಾಗಿ ಚರ್ಚೆ ಮಾಡುವುದು.
  27. ಯಾರೇ ಪ್ರತಿಭಟನೆ, ಧರಣೆ ಮಾಡಲಿ ಅವರ ಬಳಿಹೋಗಿ ಅಥವಾ ಕಚೇರಿಗೆ ಕರೆಸಿ ಮುಕ್ತವಾಗಿ ಅವರ ಬೇಡಿಕೆಗಳನ್ನು ಆಲಿಸುವುದು.
  28. ಮೀಡಿಯಾ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಬರುವ, ಅನಗತ್ಯ ಟೀಕೆ ಟಿಪ್ಪಣೆಗಳನ್ನು ಉದಾಸೀನ ಮಾಡುವುದು.
  29. ಸಾಧ್ಯವಾದಷ್ಟು ಅಧಿಕಾರಿಗಳೊಂದಿಗೆ ಕಾರ್ಯಕರ್ತg/ಮತದಾರರÀ ಬೇಡಿಕೆಗಳ ಬಗ್ಗೆ ಅವರೊಂದಿಗೆ ಮುಕ್ತವಾಗಿ ಚರ್ಚೆ ಮಾಡುವುದು. ಪ್ರತಿಯೊಂದು ಕಚೇರಿಗೂ ಈ ನೆಪದಲ್ಲಿ ಭೇಟಿ ನೀಡಿ ಕಚೇರಿ ವ್ಯವಸ್ಥೆ ಬಗ್ಗೆ ಸಮಾಲೋಚನೆ ನಡೆಸುವುದು.
  30. ಚಾಡಿ ಮಾತುಗಳ ಬಗ್ಗೆ ಮುಕ್ತವಾಗಿ ಚರ್ಚಿಸುವುದು.
  31. ಕಚ್ಚೆ, ಬಾಯಿ ಪರಿಶುದ್ಧವಾಗಿರ ಬೇಕು.
  32. ಶಾಸಕರ ಅಧ್ಯಕ್ಷತೆಯ ಎಲ್ಲಾ ಸಭೆಗಳನ್ನು ನಿಗದಿತ ಸಮಯದಲ್ಲಿ ನಡೆಸಿ, ಪ್ರಚಾರ ಮಾಡುವುದು.
  33. ಊರಿಗೊಂದು/ಬಡಾವಣೆಗೊಂದು ಪುಸ್ತಕ, ಊರಿಗೊಂದು/ಬಡಾವಣೆಗೊಂದು ಥೀಮ್ ಪಾರ್ಕ್/ ಪವಿತ್ರವನ, ಊರಿಗೊಂದು/ಬಡಾವಣೆಗೊಂದು ಕೆರೆ- ಆ ಕೆರೆಗೆ ನದಿ ನೀರು/ ಗಂಗಾಮಾತೆ ದೇವಾಲಯ.
  34. ತಪ್ಪಾದರೂ ಕೈ ಪರಿಶುದ್ಧವಾಗಿದ್ದರೆ ರಾಜಕಾರಣ ಮಾಡಲು ಸಾಧ್ಯಾವಿಲ್ಲ ಎನ್ನುವ ಮಟ್ಟಕ್ಕೆ ತಲುಪಿದೆ ನಮ್ಮ ಪ್ರಜಾ ಪ್ರಭುತ್ವ. ಈ ವಿಚಾರದಲ್ಲಿ ಸಂವಿಧಾನದ ಬೇರು ಅಲ್ಲಾಡುತ್ತಿದೆ. ಈ ಬಗ್ಗೆ ವ್ಯಾಪಕ ಚರ್ಚೆ ಅಗತ್ಯ.
  35. ನಿಮ್ಮ ಐಡಿಯಾ ಉತ್ತಮವಾಗಿದ್ದರೆ ಸೇರಿಸಲಾಗುವುದು.