22nd December 2024
Share

TUMAKURU:SHAKTHIPEETA FOUNDATION

ಕರ್ನಾಟಕ ರಾಜ್ಯದಲ್ಲಿ ವಿಧಾನಸಭಾ ಚುನಾವÀಣೆ ನಡೆಯುತ್ತಿದೆ. 2047 ಕ್ಕಿಂತ ಮೊದಲೇ ಭಾರತ ವಿಶ್ವಗುರುವಾಗ ಬೇಕು ಎಂಬ ಕನಸನ್ನು ದೇಶದ ಪ್ರಧಾನಿಯವರಿಂದ ಆರಂಭಿಸಿ, ಕಡುಬಡವರು  ಕಾಣುತ್ತಿದ್ದಾರೆ.

ಮುಂದಿನ 5 ಅವಧಿಯ ವಿಧಾನಸಭಾ ಸದಸ್ಯರ ಕರ್ತವ್ಯ ಬಹಳ ಮಹತ್ತರವಾಗಿದೆ. ಸರ್ವಪಕ್ಷಗಳು ಈ ಬಗ್ಗೆ ಗಂಬೀರವಾಗಿ ಚಿಂತನೆ ಮಾಡುವುದು ಸೂಕ್ತವಾಗಿದೆ. ಪ್ರತಿ ವರ್ಷ ಶಾಸಕರಿಗೆ ನವಕರ್ನಾಟಕ ವಿಷನ್ ಡಾಕ್ಯುಮೆಂಟ್ -2047 ಅನುಷ್ಠಾನ ಅವಾರ್ಡ್ ನೀಡಿ ಗೌರವಿಸುವ ಮೂಲಕ, ಕೆಲಸ ಮಾಡದ ಶಾಸಕರಿಗೆ ಎಚ್ಚರಿಸುವುದು ಒಂದು ಅಂಶವಾಗಬೇಕಿದೆ.

MLA RANKING ನೀಡಲು ಮೊದಲೇ ಪ್ಯಾರಾಮೀಟರ್ಸ್/ ಸೂಚ್ಯಂಕಗಳನ್ನು ನೀಡುವುದು ಅಗತ್ಯವಾಗಿದೆ. ಆದ್ದರಿಂದ ತಮ್ಮ ಐಡಿಯಾಗಳನ್ನು ನೀಡಲು ಈ ಮೂಲಕ ಮನವಿ ಮಾಡಲಾಗಿದೆ.

ವಿಧಾನಸಭಾ ಸದಸ್ಯರ ಪ್ರಣಾಳಿಕೆಗೆ ಬಹಳ ಜನ ವಿವಿಧ ಐಡಿಯಾ ನೀಡಿರುವುದು ಹರ್ಷ ತಂದಿದೆ. ಹಲವಾರು ಮಠಾಧಿಪತಿಗಳು, ಧಾರ್ಮಿಕ ಮುಖಂಡರು, ಅಭಿವೃದ್ಧಿ ಆಸಕ್ತರು ಹಾಗೂ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಸಹ ಮೆಚ್ಚುಗೆ ವ್ಯಕ್ತಪಡಿಸಿ, ಅವರವರ ಐಡಿಯಾಗಳನ್ನು ನೀಡಿದ್ದಾರೆ.

ನಾನು ಬರೆದ ವಿಧಾನಸಭಾ ಸದಸ್ಯರ ಪ್ರಣಾಳಿಕೆಯ ಅಂಶಗಳು ಮತ್ತು ತಾವೂ ನೀಡುತ್ತಿರುವ ಸಲಹೆಗಳು ಸೇರಿದಂತೆ, ವಿವರವಾದ ರ್ಯಾಂಕಿಂಗ್ ಪ್ಯಾರಾಮೀಟರ್ಸ್ ಸಿದ್ಧಪಡಿಸುವುದರಿಂದ, ವಿಧಾನಸಭಾ ಸದಸ್ಯರುಗಳಿಗೆ ಮಾರ್ಗದರ್ಶಿ ಕೈಪಿಡಿಯಂತಿರ ಬೇಕು. ಶಾಸಕರು ಏನೇಲ್ಲಾ ಮಾಡಬಹುದು ಎಂಬ ಅರಿವು ಜನ ಸಾಮಾನ್ಯರಿಗೂ ಜಾಗೃತಿ ಮೂಡುವುದು.

ಆದ್ದರಿಂದ ಒಂದು ಅತ್ಯಂತ ಸಾಮಾನ್ಯ ಯೋಜನೆಯಿಂದ ಆರಂಭಿಸಿ, ಬೃಹತ್ ಯೋಜನೆವರೆಗೂ ತಾವೂ ಐಡಿಯಾಗಳನ್ನು ನೀಡಲು ಮನವಿ.

  1. ಇಂಡಿಯಾ @100 ಅಂಗವಾಗಿ  ಕರ್ನಾಟಕ ವಿಷನ್ ಡಾಕ್ಯುಮೆಂಟ್ – 2047 ರಚನೆ ಮತ್ತು ಅನುಷ್ಠಾನ.
  2. 2047 ರ ಗ್ರಾಮ/ಬಡಾವಣೆ ಅಭಿವೃದ್ಧಿ ಡಿಜಿಟಲ್ ನಕ್ಷೆ.
  3. ಅಭಿವೃದ್ಧಿಯಲ್ಲಿ ಸಾಮಾಜಿಕ ನ್ಯಾಯ.
  4. ಪ್ರತಿಯೊಂದು ಯೋಜನೆಯ ಅನಾಲೀಸಿಸ್ ಮತ್ತು ಶೇಕಡವಾರು ಸಾಧನೆ.
  5. ವಿಧಾನಸಭೆಯಲ್ಲಿ ಹಾಜರಾತಿ.
  6. ವಿಧಾನಸಭೆಯಲ್ಲಿ ಚರ್ಚೆ ಮಾಡಿದ ವಿಷಯಗಳು.
  7. ವಿಧಾನಸಭಾ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗಳು ಮತ್ತು ಪಡೆದ ಉತ್ತರ.
  8. ವಿಧಾನಸಭಾ ಸದಸ್ಯರ ಅಧ್ಯಕ್ಷತೆಯಲ್ಲಿರುವ ವಿವಿಧ ಸಭೆ ನಡೆಸಿರುವುದು.
  9. ಶಾಸಕರ ಕಚೇರಿ ವ್ಯವಸ್ಥೆ.
  10. ಶಾಸಕರ ಕಚೇರಿಯಲ್ಲಿ ಹಾಜರಾತಿ.
  11. ಸಾರ್ವಜನಿಕರ ಅಹವಾಲುಗಳು.
  12. ಜನಸಂಪರ್ಕ ಸಭೆಗಳು.
  13. ಕಾರ್ಯಕ್ರಮಗಳಿಗೆ ಹಾಜರಾತಿ.
  14. ಮತದಾರರೊಂದಿಗೆ ಸಂವಾದ.
  15. ವಿಷಯವಾರು ಪರಿಣಿತರೊಂದಿಗೆ ಸಮಾಲೋಚನೆ.
  16. ಪಾರದರ್ಶಕತೆ.
  17. ಸೋಶಿಯಲ್ ಮೀಡಿಯಾ.
  18. ಸಾರ್ವಜನಿಕರ ಮನವಿಗಳ ಸಿನಿಯಾರಿಟಿ.
  19. ಅಧಿಕಾರಿಗಳ ಒಡನಾಟ.
  20. ವಿವಿಧ ಸರ್ಕಾರಿ ಕಚೇರಿಗಳ ವ್ಯವಸ್ಥೆ ಕಡೆ ಗಮನ.
  21. ಮಾನವೀಯತೆ ವಿಚಾರಗಳು.
  22. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಪಲಾನುಭವಿಗಳನ್ನು ನಿಗದಿತ ಅವಧಿಯಲ್ಲಿ ಆಯ್ಕೆ.
  23. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿರುವುದು.
  24. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿಶೇಷ ಯೋಜನೆಗಳ ಮಂಜೂರಾತಿಗೆ ಶ್ರಮ.
  25. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರತಿಯೊಂದು ಯೋಜನೆಯ ಮಾಹಿತಿ ಅರಿವು ಮತ್ತು ಅನುಷ್ಠಾನ.
  26. ರಾಜ್ಯ ಸರ್ಕಾರದ ಮುಂಗಡ ಪತ್ರಗಳಿಗೆ ಸಲಹೆ.
  27. ಅಭಿವೃದ್ಧಿ ಪ್ರವಾಸದ ವರದಿಗಳು.
  28. ಗುತ್ತಿಗೆದಾರರ ಲಾಭಿ.
  29. ಸ್ಥಳೀಯ ಸಮಸ್ಯೆಗಳ ಬಗ್ಗೆ ವಿಶೇಷ ಗಮನ.
  30. ವಿವಾದಗಳು.
  31. ಮಾಧ್ಯಮವದರೊಂದಿಗೆ ಒಡನಾಟ.
  32. ಸರ್ಕಾರಿ ಕಚೇರಿಗಳಿಗೆ ಭೇಟಿ.
  33. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ವಿಧಾನಸಭಾ ಕ್ಷೇತ್ರದ ಪಾತ್ರ.
  34. ವಿವಿಧ ದೇಶಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ವಿಧಾನಸಭಾ ಕ್ಷೇತ್ರದ ಪಾತ್ರ.
  35. ಮಧ್ಯವರ್ತಿಗಳ ಕಾಟ.
  36. ಕುಟುಂಬದವರ ಪಾತ್ರ.