16th September 2024
Share

 

TUMAKURU:SHAKTHIPEETA FOUNDATION

ಇಂದಿನ ವಿಜಯವಾಣಿ ಪತ್ರಿಕೆಯಲ್ಲಿ ಕೆಳಕಂಡ ವರದಿ ಓದಿ ಖುಷಿಯಾಗಿದೆ. ಕಳೆದ ಎರಡು ದಿನಗಳಿಂದ ಶಾಸಕರಿಗೆ RANKING ನೀಡುವ ಅಂಶಗಳ ಬಗ್ಗೆ ಬರೆಯುತ್ತಿದ್ದೇನೆ. ಹಲವಾರು ಸಲಹೆಗಳು ಬರಲಾರಂಭಿಸಿವೆ.

ಈ ವರದಿಯಲ್ಲಿನ ಶಾಸಕರೆಲ್ಲರೂ, ಈಗಿನ ಚುನಾವಣೆಯ ಅಭ್ಯರ್ಥಿಗಳಾಗಿದ್ದಾರೆಯೇ ಎಂಬ ನಿಖರವಾದ ಮಾಹಿತಿ ನನಗಿಲ್ಲ, ಇವರಲ್ಲಿ ಕೆಲವರು ಯಾವ ಪಕ್ಷದವರು ಎಂಬ ಮಾಹಿತಿಯೂ ಗೊತ್ತಿಲ್ಲ. ಯಾವ ಜಾತಿಯವರೂ ಎಂಬ ಮಾಹಿತಿಯೂ ಗೊತ್ತಿಲ್ಲ.

ಒಂದು ವೇಳೆ ಇವರೆಲ್ಲರೂ ಈ ಚುನಾವಣೆಯ ಅಭ್ಯರ್ಥಿಗಳಾಗಿದ್ದಾರೆ, ಪಕ್ಷಾತೀತವಾಗಿ ಗೆಲ್ಲಿಸಿ, ಇಂಥ ಶಾಸಕರ ಸಂಖ್ಯೆ ಹೆಚ್ಚಾದಾಗ ಮಾತ್ರ ವಿಧಾನಸಭೆಗೆ ಗೌರವ ದೊರೆಯಲಿದೆ. ಇಂಡಿಯಾ @ 100 ಅಂಗವಾಗಿ ನವ ಕರ್ನಾಟಕ ವಿಷನ್ ಡಾಕ್ಯುಮೆಂಟ್-2047  ಕ್ಕೆ ಆನೆ ಬಲ ಬರಲಿದೆ.

ಮತದಾರರೇ ಇವರೆಲ್ಲರ ಬಗ್ಗೆ, ಸೋಶಿಯಲ್ ಮೀಡಿಯಾ ಕ್ಯಾಂಪೇನ್ ಆರಂಭಿಸಿ.

ಶಾಸಕರಿಗೆ RANKING  ನೀಡಲು, ಇನ್ನೂ ಹಲವಾರು ಪ್ಯಾರಾಮೀಟರ್ ಗಳು ಇವೆ. ಆದರೂ ಈ ಎರಡು ಪ್ಯಾರಾಮೀಟರ್ ಗಳ ಬಗ್ಗೆ ಅಧ್ಯಯನ ಮಾಡಿದವರಿಗೂ ಧನ್ಯವಾದಗಳು.

ಇವರಿಗೆ ಯಾವ ರೀತಿ ಬೆನ್ನು ತಟ್ಟಬೇಕು ಎನ್ನುವ ಬಗ್ಗೆ ಒಂದೆರೆಡು ದಿವಸದಲ್ಲಿ ರೂಪುರೇಷೆ ಸಿದ್ಧಪಡಿಸಲಾಗುವುದು.

ಆಸಕ್ತರು ಸೂಕ್ತ ಸಲಹೆ, ಮಾರ್ಗದರ್ಶನ ನೀಡಲು ಬಹಿರಂಗ ಮನವಿ.