27th July 2024
Share

TUMAKURU:SHAKTHIPEETA FOUNDATION

ತುಮಕೂರು ನಗರದ, ಜಯನಗರ ಪೂರ್ವದ, ಒಂದನೇ ಮುಖ್ಯ ರಸ್ತೆಯ, ಪಾರ್ವತಿ ನಿಲಯದಲ್ಲಿ, ಉದ್ದೇಶಿತ ಶಕ್ತಿಪೀಠ ಮ್ಯೂಸಿಯಂ ಕಟ್ಟಡದ ವಾಸ್ತು ಹೇಗಿರಬೇಕು, ಹೇಗಿದೆ ಎಂಬ ಮೌಲ್ಯಮಾಪನ ದಿನಾಂಕ:08.06.2023 ರಿಂದ ಆರಂಭವಾಗಲಿದೆ.

ಅಸ್ಸಾಂ ರಾಜ್ಯದ ರಾಜಧಾನಿ, ಗೌಹಾತಿ ನಗರದಲ್ಲಿ ಇರುವ ಕಾಮಾಕ್ಯ ಶಕ್ತಿಪೀಠದಿಂದ ತಂದ ವಸ್ತುಗಳನ್ನು ಬ್ರಹ್ಮ ಸ್ಥಾನದಲ್ಲಿ ಇಟ್ಟು ಪೂಜಿಸುವ ಮೂಲಕ, ಶಕ್ತಿಪೀಠ ಮ್ಯೂಸಿಯಂನ ಎರಡನೇ ಹಂತ ಆರಂಭವಾಗಿದೆ. ಇಂದೇ ಬಾಗಿಲು ಇಡುವ ಪೂಜೆಯೂ ನಡೆಯಲಿದೆ. ಮೊದಲನೇ ಹಂತ ಭೂಮಿ ಪೂಜೆ ಮಾಡಿದ್ದು. ಮೂರನೇ ಹಂತ ಗ್ರಹಪ್ರವೇಶ ಎಂಬುದು ನನ್ನ ಪರಿಕಲ್ಪನೆ.

ಜ್ಯೋತಿಷಿಗಳು, ವಾಸ್ತು ಪರಿಣಿತರು, ವಿವಿಧ ಧಾರ್ಮಿಕ ಮುಖಂಡರು, ಆಸಕ್ತರು ಏನು ಹೇಳುತ್ತಾರೋ ಅದನ್ನು ಡಿಜಿಟಲ್ ದಾಖಲೆ ಮಾಡುವುದೇ ಈ ಕಟ್ಟಡದ ಮೌಲ್ಯಮಾಪನ.

ಈ ನಿವೇಶನದಲ್ಲಿ ಹಿಂದೆ ಇದ್ದ ಅಭಿವೃದ್ಧಿ ರೆವೂಲ್ಯೂಷನ್ ಫೋರಂ ಕಟ್ಟಡದ ಕಚೇರಿಯಲ್ಲಿ, ನಾವು ವಾಸವಿದ್ದು, ಈ ಕಟ್ಟಡದಲ್ಲಿ ದೇವರ ಮನೆ ಇರದಿದ್ದರೂ, ದಿನಾಂಕ:20.08.2004 ರಿಂದ ದಿನಾಂಕ:05.10.2022 ರಂದು ಮನೆ ಖಾಲಿ ಮಾಡುವವರೆಗೂ, ಇಲ್ಲಿ ಭಕ್ತಿ ಪ್ರಧಾನವಾದ, ದೇವಿ ಪುಸ್ತಕ ಪಾರಾಯಣ, ಪ್ರತಿದಿವಸವೂ ದೇವಿ ಮಂತ್ರಪಠಣಗಳು, ನವರಾತ್ರಿ ವಿಶೇಷ ಪೂಜೆಯೊಂದಿಗೆ ಈ ನಿವೇಶನವೇ/ಕಟ್ಡಡವೇ ಒಂದು  ಪುಣ್ಯ ಸ್ಥಳವಾಗಿದೆ ಎಂಬುದು ನನ್ನ ನಂಬಿಕೆ.

ಇದರ ಮುಂದೆ ಯಾವ ವಿಶೇಷ ಪೂಜೆಯೂ ಅಗತ್ಯವಿಲ್ಲ ಎಂಬುದು ನನ್ನ ವಾದವಾದರೂ, ನನ್ನ ಧರ್ಮಪತ್ನಿಯ ಅನಿಸಿಕೆಯಂತೆ ಎಲ್ಲ ಹಂತದಲ್ಲೂ ಪೂಜೆ ಮಾಡುವುದು ಅಗತ್ಯವಾಗಿದೆ.

ದಿನಾಂಕ:17.10.2022 ರಂದು ಕಟ್ಟಡ ಕೆಡವಿ ಹಾಕಲು ಮಾಡಿದ ಪೂಜೆ ಮತ್ತು ದಿನಾಂಕ:28.10.2022 ರಂದು ಮಾಡಿದ ಭೂಮಿ ಪೂಜೆ ನಂತರದ ಪೂಜೆ ಇದಾಗಿದೆ.

ಶಕ್ತಿಪೀಠ ಮ್ಯೂಸಿಯಂ ನಲ್ಲಿ ಸಂಗ್ರಹಿಸಲು ಉದ್ದೇಶಿರುವ, ವಿಶ್ವದ 7 ದೇಶಗಳ 108 ಶಕ್ತಿಪೀಠಗಳ ಸ್ಥಳದಿಂದ ತರುವ ವಿವಿಧ ಸಾಮಾಗ್ರಿಗಳಿಗೂ ವಿಶೇಷ ಪೂಜೆ ಮಾಡಿ ಒಳಗಡೆ ಇಡಬೇಕು. ನಂತರ ಮ್ಯೂಸಿಯಂ ನಲ್ಲಿ ಇಡುವ ಯಾವುದಕ್ಕೂ ಪೂಜೆ ಮಾಡಬಾರದು ಎಂಬ ಸಲಹೆಗಳು ಬಂದಿವೆ.

ಈ ಬಗ್ಗೆ ಹಲವಾರು ಸರಣಿ ಸಭೆಗಳನ್ನು ಆಯೋಜಿಸಿ, ಪರಿಣಿತರ ಸಲಹೆ ಪಡೆದು, ಒಂದು ನಿರ್ಧಾರಕ್ಕೆ ಬರಲು ಯೋಚಿಸಲಾಗಿದೆ.

  1. ಒಂದು ಕಟ್ಟಡದ ವಾಸ್ತು ಶೇ 75 ಇದ್ದರೆ ಅದೇ ಹೆಚ್ಚಂತೆ.
  2. ಒಂದು ನಿವೇಶನದ ವಾಸ್ತು ಶೇ 5 ಮಾತ್ರ ಲೆಕ್ಕಕ್ಕೆ ಬರುತ್ತದಂತೆ.
  3. ಕಟ್ಟಡದ ಒಳಭಾಗದ ಕೊಠಡಿಗಳ ಮತ್ತು ಇತರೆ ವಿಭಾಗಗಳ ವಾಸ್ತು ಶೇ 5 ಮಾತ್ರ ಲೆಕ್ಕಕ್ಕೆ ಬರುತ್ತದಂತೆ.
  4. 3 ನೇ ಅಂತಸ್ತು ನಂತರ ಮೇಲ್ಭಾಗದ ಅಂತಸ್ತುಗಳಿಗೆ ವಾಸ್ತು ಇಲ್ಲವಂತೆ.
  5. 1000 ಜನ ಸಂಖ್ಯೆ ವಾಸವಿರುವ ಸ್ಥಳಗಳ ಕಟ್ಟಡಗಳಿಗೆ ವಾಸ್ತು ಇಲ್ಲವಂತೆ.
  6. ಕಟ್ಟಡದ 9 ದಿಕ್ಕುಗಳ ಗುರುತು ಮಾಡಿ ಪೂಜೆ ಮಾಡಬೇಕಂತೆ.
  7. ಕಟ್ಟಡದ ಮಧ್ಯೆ ಭಾಗ ಬ್ರಹ್ಮ ಸ್ಥಾನವಂತೆ.
  8. ಒಂದೊಂದು ಕೊಠಡಿಯ/ ಮನೆಯ ಯಾವುದೇ ಭಾಗದ ವಿಭಾಗಗಳಿಗೂ ವಾಸ್ತು ಇದೆಯಂತೆ.
  9. ಒಂದು ಮನೆಗೆ ಎಷ್ಟು ಬಾಗಿಲುಗಳು ಇಡಬೇಕು, ಎಷ್ಟು ಕಿಟಕಿಗಳು ಇರಬೇಕು ಎನ್ನು ಲೆಕ್ಕ ಇದೆಯಂತೆ.
  10. ಕಟ್ಟಡದ ಸುತ್ತಲೂ ಬಿಡುವ ನಿವೆಸನದ ಭಾಗವೂ ವಾಸ್ತುವಂತೆ.
  11. ಕಟ್ಟಡದ ಒಳಗೆ ಬರುವ ಗಾಳಿ ಬೆಳಕು ವಾಸ್ತು ಲೆಕ್ಕವಂತೆ.
  12. ಕಟ್ಟಡದಲ್ಲಿ ಇಡುವ ಒಂದೊಂದು ಫರ್ನಿಚರ್ ಗಳಿಗೂ  ವಾಸ್ತು ಇದೆಯಂತೆ.
  13. ಎಲ್ಲಿ ಯಾರು ಮಲಗಬೇಕು, ಯಾರು ಎಲ್ಲಿ ಮಲಗಬಾರದು ಎಂಬ ಲಕ್ಕವೂ ವಾಸ್ತುವಂತೆ.
  14. ಎಲ್ಲಿ ಯಾರು ಕೂರಬೇಕು, ಎಲ್ಲಿ ಯಾರು ಊಟ ಮಾಡಬೇಕು ಎಂಬುದು ವಾಸ್ತುವಿನಲ್ಲಿ ಇದೆಯಂತೆ.
  15. ಈ ವಾಸ್ತು ಪುರುಷ ಎಂದರೆ ಯಾರು, ನಮ್ಮ ಕಟ್ಟಡದಲ್ಲಿ ಹೇಗೆ ಮಲಗಿದ್ದಾನೆ ಎಂಬುದೇ ವಾಸ್ತು ಲೆಕ್ಕವಂತೆ.
  16. ನಮ್ಮ ಕಟ್ಟಡದಲ್ಲಿ ವಿಶ್ವದ 108 ಶಕ್ತಿಪೀಠಗಳ ಮ್ಯೂಸಿಯಂ ಆರಂಭಿಸುತ್ತಿದ್ದು, ಸತಿ, ಕಾಮಾಕ್ಯ, ವೈಷ್ಣವಿ, ಚಂಡಿ, ಚಾಮುಂಡಿ, ಪಾರ್ವತಿ, ಶಾರದೆ, ಕನ್ಯಾಪರಮೇಶ್ವರಿ, ದಾಕ್ಷಯಾಣಿ, ಮಹಾಲಕ್ಷ್ಮಿ, ಜ್ವಾಲಾಮುಖಿ, ಮಹಾಕಾಳಿ, ಕೆಂಪಮ್ಮ, ಮಾರಮ್ಮ, ಕರಿಯಮ್ಮ, ಡೋಲಾಮಾತೆ ಈ ಎಲ್ಲ ದೇವತೆಗಳೂ ನವದುರ್ಗೆ, ಅಷ್ಟಾದಶ ಶಕ್ತಿಪೀಠ, ಶಕ್ತಿಪೀಠ, ಸಿದ್ಧಿಪೀಠಗಳಂತೆ. ಇವುಗಳ ಸಂಶೋಧನೆ, ಆರಾಧನೆ, ನಿಖರವಾದ ಡಾಟಾ ಪತ್ತೆ ಮಾಡುವುದೇ ನಮ್ಮ ಶಕ್ತಿಪೀಠ ಫೌಂಡೇಷನ್ ಪ್ರಮುಖ ಉದ್ದೇಶ.