12th September 2024
Share

TUMAKURU:SHAKTHIPEETA FOUNDATION

ಹಿರಿಯ ರಾಜಕಾರಣಿ, ತುಮಕೂರು ಲೋಕಸಭಾ ಸದಸ್ಯರಾದ ಶ್ರೀ ಜಿ.ಎಸ್.ಬಸವರಾಜ್ ರವರ ಅಭಿನಂದನಾ ಗ್ರಂಥವನ್ನು  ವಿದ್ಯಾವಾಚಸ್ಪತಿ ಡಾ, ಶ್ರೀ ಕವಿತಾಕೃಷ್ಣರವರು ಮತ್ತು ಅವರ ತಂಡ ರಚಿಸುತ್ತಿದೆ.

ಜೊತೆಗೆ ಬಸವರಾಜ್ ರವರ ಸ್ನೇಹಿತರ ಕುಟುಂಬದವರಾದ  ಮಂಗಳೂರಿನ ಶ್ರೀ ಸುದರ್ಶನ್ ರವರು ಮತ್ತು ಶ್ರೀಮತಿ ವಾರಿಜಸುದರ್ಶನ್ ರವರು ಡಾಕ್ಯುಮೆಂಟ್ರಿ ಮಾಡಲು ಮುಂದೆ ಬಂದಿದ್ದಾರೆ.

ಕಳೆದ 33 ವರ್ಷಗಳ ಶ್ರೀ ಜಿ.ಎಸ್.ಬಸವರಾಜ್ ರವರ ಜೊತೆಯ ಒಡನಾಟದ ನನ್ನ ಅವರ ಸಂಬಂದಗಳ ಅಭಿವೃದ್ಧಿ ಯೋಜನೆಗಳ ಮಜಲನ್ನು, ಕಳೆದ 20 ವರ್ಷಗಳಿಂದ ನಮ್ಮ ಒಡನಾಟದಲ್ಲಿರುವ ಶ್ರೀ ಟಿ.ಆರ್.ರಘೋತ್ತಮರಾವ್ ರವರು ದಾಖಲಿಸುತ್ತಿದ್ದಾರೆ.

ಇಂಡಿಯಾ @ 100 ಅಂಗವಾಗಿ, ಇನ್ನೂ ಮುಂದೆ 2047 ರವರೆಗೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ, ಇನ್ನೂ ಏನೇನು ಯೋಜನೆ ಆಗಬೇಕು ಎಂಬ ಪರಿಕಲ್ಪನಾ ವರದಿಯನ್ನು ನನ್ನ ಜೊತೆ ಸುಮಾರು 20 ವರ್ಷಗಳಿಂದ ಅಭಿವೃದ್ಧಿ ಯೋಜನೆಗಳಲ್ಲಿ ಭಾಗಿಯಾಗಿರುವ ಶ್ರೀ.ಕೆ.ಆರ್.ಸೋಹನ್ ಸಿದ್ಧಪಡಿಸುತ್ತಿದ್ದಾರೆ.

ಬಸವರಾಜ್ ರವರಿಗೆ ಎಲ್ಲಾ ಪಕ್ಷದವರು ಸ್ನೇಹಿತರಿದ್ದಾರೆ, ಎಲ್ಲಾ ಜಾತಿಯವರು ಸ್ನೇಹಿತರಿದ್ದಾರೆ, ಸಾಕಷ್ಟು ಜನ ಅಭಿಮಾನಿಗಳು ದೇಶ-ವಿದೇಶಗಳಲ್ಲೂ ಇದ್ದಾರೆ.

ನನಗೂ ಸಹ ಅವರೆಲ್ಲರ ಬಹುತೇಕ ಪರಿಚಯವಿದೆ, ಸಾಕಷ್ಟು ಜನರ ಪರಿಚಯವೂ ನನಗೆ ಇಲ್ಲ.ನನಗೆ ಪರಿಚಯವಿಲ್ಲದವರು ನಮ್ಮ ತಂಡದ ಜೊತೆಗೂಡುವುದು ಸೂಕ್ತವಾಗಿದೆ. ಪರಿಚಯ ಇÀರುವವರು ಸುಮ್ಮನೆ ಇರಬಾರದು, ತಾವು ಸಹ ಯೋಜನೆಗಳವಾರು/ವಿಷಯವಾರು ನಿಮ್ಮ ಮತ್ತು ಬಸವರಾಜ್ ರವರ ಒಡನಾಟದ ಮಾಹಿತಿಗಳನ್ನು   ಹಂಚಿಕೊಳ್ಳಲು ಬಹಿರಂಗ ಮನವಿ.

ನಮ್ಮ ಗುರಿ 1000 ಕ್ಕೂ ಹೆಚ್ಚು ಜನರೊಂದಿಗೆ/ತಂಡದೊಂದಿಗೆ ಎಪಿಸೋಡ್ ಸಿದ್ಧಪಡಿಸುವುದಾಗಿದೆ. ಇದಕ್ಕೋಸ್ಕರ ಒಂದು ತಂಡವನ್ನೇ ಕಟ್ಟಲಾಗಿದೆ. ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಬಾಷೆಗಳ ಬಾಷಾಂತರ ತಂಡವೂ ಇದೆ.

ಯಾವುದೇ ಕಾರಣಕ್ಕೂ ಒಂದು ತಂಡ, ವ್ಯಕ್ತಿ, ಕುಟುಂಬ, ಒಂದು ಯೋಜನೆಯ ಅಥವಾ ಅವರೊಂದಿಗಿನ ಒಡನಾಟದ ಘಟನೆಗಳ ಬಗ್ಗೆ ಸಿದ್ಧವಾಗುವುದು ಒಳಿತು.

ಇದು ಯಾರ ಮನೆಯ ಕೆಲಸವಲ್ಲ, ನಿಮ್ಮ ನಾಯಕನ ಜ್ಞಾನಭಂಡಾರದ ಡಿಜಿಟಲ್ ದಾಖಲೆ’ ಅದ್ದರಿಂದ ಸ್ವಯಂ ಮುಂದೆ ಬರುವುದು ಒಳ್ಳೆಯ ಬೆಳವಣಿಗೆ.

ಶ್ರೀ ಸುದರ್ಶನ್ ಕುಟುಂಬದೊಂದಿಗೆ ನಮ್ಮ ಕುಟುಂಬ