21st May 2024
Share

TUMKURU:SHAKTHIPEETA FOUNDATION

ಕಳೆದ 2019 ರಿಂದ ಈವರೆಗೂ, ನಾನು ಬರೆದ ಇ-ಪೇಪರ್ ನಲ್ಲಿ ಒಂದೇ ಒಂದು ಬರಹ ಬೇರೆಯವರಿಗೆ ನೋವು ತಂದಾಗ, ನಾನು ಬದಲಾವಣೆ ಅಥವಾ ಡೀಲೀಟ್ ಮಾಡಿದ ಉದಾಹರಣೆ ಇಲ್ಲ.ನನಗೆ ಸ್ವತಃ ಬೇಡ ಎನಿಸಿದಾಗ ಅಥವಾ ತುಮಕೂರು ನಗರದ ಶಾಸಕರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ರವರು ಹೇಳಿದ ಕೆಲವು ಪದಗಳನ್ನು ಬದಲಾವಣೆ ಮಾಡಿದ್ದೇನೆ.

ಹಾಗೇಯೇ ಕೆಲವು ಬರಹಗಳನ್ನು ಎಷ್ಟೇ ಜನ ಹೇಳಿದರೂ ಬದಲಾವಣೆ ಮಾಡಿಲ್ಲ.

ದಿನಾಂಕ:21.06.2023 ರಂದು ಬರೆದ ಎರಡು ವಿಚಾರಗಳನ್ನು ಡಿಲೀಟ್ ಮಾಡಬೇಕಾಯಿತು. ನನ್ನ ಸ್ನೇಹಿತನೊಬ್ಬ ಮುಖ್ಯಮಂತ್ರಿಯವರಾದ ಶ್ರೀ ಸಿದ್ಧರಾಮಯ್ಯನವರ ಭಕ್ತ, ಹಾಗೆಯೇ  ಪ್ರಧಾನಿಯವರಾದ ಶ್ರೀ ನರೇಂದ್ರಮೋದಿಯವರ ಪರಮಭಕ್ತ,

ನಿನ್ನೆಯ ಒಂದು ಬರಹದಲ್ಲಿ ಸಿದ್ದು ಬುದ್ಧಿವಂತರು ಎಂಬ ಹೆಗ್ಗಳಿಕೆಯ ಭರದಲ್ಲಿ ನಾನೇನು ಕುರುಬನಲ್ಲ ಎಂದು ಬರೆದ  ಗ್ರಾಮೀಣ ಮಾತು ಕ್ಯಾತಸಂದ್ರದ ಶ್ರೀ ರಾಮಕೃಷ್ಣಯ್ಯನವರಿಗೆ ಬೇಸರ ತಂದಿತ್ತು.

ಅದೇ ರೀತಿ ಮೋದಿಯವರಿಗೆ ಕರ್ನಾಟಕದ ಬಿಜೆಪಿಯವರು ಅಪಮಾನ ಮಾಡಿದರು, ಸತ್ಯ ಹೇಳಲಿಲ್ಲ, ಎಂದು ಹೇಳುವಾಗ ಕರ್ನಾಟಕದ  ಬಿಜೆಪಿಯ ಕೆಲವು ಮೂರ್ಖರು ಎಂದು ಬರೆದ ಮಾತು ಸ್ವತಃ ನನಗೆ ಬೇಸರ ತಂದಿತು. ನಾನು ತಲೆತಗ್ಗಿಸಬೇಕಾಯಿತು,

ಅರೇ ನಿನ್ನ ಪೇಪರ್ ನೀನೇ ಬರೆದು ಹೀಗೆ ಹೇಳಿದರೆ ಹೇಗೆ ಎನ್ನಬಹುದು. ಹೌದು ಪೇಪರ್ ಬರೆದಿದ್ದು ನಾನೇ, ಆದರೇ ತಲೆ ಬರಹ ನೀಡಿದ್ದು ನಾನಲ್ಲ, ನನ್ನ ಸ್ನೇಹಿತ, ಅವರ ಪ್ರಕಾರ ತಲೆಬರಹ ವಿಚಿತ್ರವಾಗಿದ್ದರೆ, ಹೆಚ್ಚು ಜನ ಓದುತ್ತಾರಂತೆ.

ಕಳೆದ ಒಂದು ತಿಂಗಳಿನಿಂದ ಈ ಚರ್ಚೆ ನಮ್ಮಿಬ್ಬರ ಮಧ್ಯೆ ನಡೆಯುತ್ತಿತ್ತು. ನಾನು ಬರೆಯುವ ವಿಷಯಗಳಿಗೆ, ನನ್ನ ಸ್ನೇಹಿತ ಹೆಡ್ಡಿಂಗ್ ಬರೆಯುವ ಬಗ್ಗೆ, ನಮ್ಮಿಬ್ಬರ ಮಧ್ಯೆ ಒಡಂಬಡಿಕೆ ನಡೆದಿತ್ತು.

ನಿನ್ನೆ ಬರೆದ ಎರಡು ವಿಚಾರಗಳ ಮೊದಲ ದಿನದ ಹೆಡ್ಡಿಂಗ್ ನನ್ನ ತಲೆ ಬಿಸಿ ಮಾಡಿತು. ಇಂದೇ ಕೊನೆ ದಯವಿಟ್ಟು ಈ ಕೆಲಸ ಮಾತ್ರ ಮಾಡುವುದು ಬೇಡ ಎನಿಸಿತು. ಆತನಿಗೆ ನಾನು ಈ ಎರಡು ವಿಚಾರಗಳನ್ನು ಡೀಲೀಟ್ ಮಾಡುತ್ತೇನೆ ಎಂದಾಗ, ಆತ ಹೇಳಿದ ಮಾತು ನನ್ನ-ನಿನ್ನ ಸೇಹವನ್ನು ಡೀಲೀಟ್ ಮಾಡು ಎನ್ನುವುದಾಗಿತ್ತು.

ಈ ಹಠ ಬೇಡಪ್ಪ, ನನ್ನ ಪೇಪರ್ ಹೆಚ್ಚು ಜನ ಓದಲಿ ಎಂದು, ಈ ತರಹದ ಹೆಡ್ಡಿಂಗ್ ಕೊಡುವುದು ಬೇಡ, ವಸ್ತು ಸ್ಥಿತಿ ಬರಹ ಇರಲಿ, ಯಾರೇ ಕೂಗಾಡಿದರೂ, ಕೇಸ್ ಹಾಕಿದರೂ ಫೇಸ್ ಮಾಡಬಹುದು. ಆದರೇ ವಿವಾದವಾಗಬಾರದು. ನನಗೂ ಬೇಸರ ಆಗಬಾರದು ಎಂದಾಗ, ಆತನು ಹೇಳಿದ ಮಾತು, ನೀನು ಮಾತನಾಡುವಾಗ ಬಳಸುವ ಪದಕ್ಕೂ, ಬರೆಯುವ ಪದಕ್ಕೂ ಬಹಳ ವ್ಯತ್ಯಾಸವಿದೆ.

ಹೌದು ಮಾತೇ ಬೇರೆ, ಬರಹವೇ ಬೇರೆ ಎಂದಾಗ, ಆತನು ಸಮ್ಮತಿಸಿ ಎರಡು ವಿಚಾರಗಳ ಬರಹವನ್ನು ಡೀಲೀಟ್ ಮಾಡಿದ್ದೇನೆ.

ನಿನ್ನೆಯ ಬರಹದಿಂದ ಯಾರಿಗಾದರೂ ನೋವಾಗಿದ್ದರೆ ಬಹಿರಂಗ ಕ್ಷಮೆ ಇರಲಿ.